ಪ್ರಚಲಿತ

ರಾಹುಲ್ ಗಾಂಧಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನವರಿಂದಲೇ ನಕಾರ!!

130 ವರ್ಷಗಳಷ್ಟು ಹಳೆಯ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಆಯ್ಕೆ ಮಾಡಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎ.ಕೆ.ಆಂಟೊನಿ ಸೇರಿದಂತೆ ಹಿರಿಯ ಮುಖಂಡರು ಈ ಹಿಂದಿನ ಸಭೆಗಳಲ್ಲಿ ಒಲವು ತೋರಿದ್ದರು ಎನ್ನುವುದು ಗೊತ್ತಿರುವ ವಿಚಾರ!! ಆದರೆ ರಾಹುಲ್ ಗಾಂಧಿ ಆಯ್ಕೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರೇ ವಿರೋಧಿಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ!!

ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣಾ ಪ್ರಚಾರ ಬರದಿಂದಲೇ ಸಾಗುತ್ತಿದ್ದು, ರಾಹುಲ್ ಗಾಂಧಿ ಹಿಂದೂಗಳ ಮನವೊಲೈಕೆಗಾಗಿ ದೇವಾಲಯಗಳನ್ನು ಬೇಟಿ ನೀಡಿದ್ದಾಯಿತು!! ಅಷ್ಟೇ ಅಲ್ಲದೇ ಐತಿಹಾಸಿಕ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಪೂಜೆ ಸಲ್ಲಿಸುವುದಕ್ಕೂ ಮುನ್ನ ದೇಗುಲದ ನೋಂದಣಿ ಪುಸ್ತಕದಲ್ಲಿ ರಾಹುಲ್ ಹಿಂದುಯೇತರ ವ್ಯಕ್ತಿ ಎಂದು ನಮೂದಿಸಿದ್ದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ!! ಆದರೆ ಇದೀಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದು ಚುನಾವಣೆಯಾಗಿಲ್ಲ ಅದು ಕೇವಲ ಆಯ್ಕೆಯಷ್ಟೇ ಆಗಿದೆ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರೇ ವಿರೋಧಿಸಿದ್ದಾರೆ.

ಹೌದು…. ಎಐಎಸಿಸಿ ಅಧ್ಯಕ್ಷ ಚುನಾವಣೆ ಸಂಪೂರ್ಣವಾಗಿ ರಾಹುಲ್ ಗಾಂಧಿ ಅವರನ್ನೇ ಅಧ್ಯಕರನ್ನಾಗಿ ಆಯ್ಕೆ ಮಾಡಬೇಕು ಎನ್ನುವಂತೆ ನಡೆಯುತ್ತಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ಕಾಂಗ್ರೆಸ್ಸಿನ ಅಧ್ಯಕ್ಷರಾಗುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ ತೀವ್ರವಾಗಿ ವಿರೋಧಿಸಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಕಾಂಗ್ರೆಸ್ ಮುಖಂಡ ಶೆಹಜಾದ್ ಪೂನಾವಾಲ, ಅವರು ವಿರೋಧ ವ್ಯಕ್ತಪಡಿಸಿದ್ದು, ಎಐಎಸಿಸಿಯಲ್ಲಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರ ಆಯ್ಕೆಯಷ್ಟೇ.. ಆದರೆ ಅದು ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕ ಹಾಗೂ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಶೆಹಜಾದ್ ಪೂನವಾಲಾ, ಪಕ್ಷದ ಅಧ್ಯಕ್ಷ ಹುದ್ದೆ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದು, ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆಯು ದೋಷಪೂರಿತವಾಗಿದ್ದು, ರಾಹುಲ್ ಗಾಂಧಿ ತಕ್ಷಣ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳು ಪಾರದರ್ಶಕವಾಗಿ ನಡೆದರೆ ತಾನು ಕೂಡಾ ಸ್ಪರ್ಧಿಸುವುದಾಗಿ ಪೂನವಾಲ ಹೇಳಿದ್ದಾರೆ. ಈಗ ನಡೆಯುತ್ತಿರುವುದು ಎಲೆಕ್ಷನ್ (ಚುನಾವಣೆ) ಅಲ್ಲ, ಬದಲಾಗಿ ಸೆಲೆಕ್ಷನ್ (ನೇಮಕ)ವಾಗಿದೆ ಎಂದು ಪೂನವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಮತದಾರರನ್ನು ಪಕ್ಷದ ಸಂವಿಧಾನದ ನಿಯಮಗಳಿಗನುಸಾರವಾಗಿ ಆಯ್ಕೆ ಮಾಡಲಾಗಿಲ್ಲ, ಬದಲಾಗಿ ತಮಗೆ ಬೇಕಾದ ಕೆಲವರನ್ನು ಆಯ್ಕೆಮಾಡಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಆದುದರಿಂದ, ನಾನು ಕೂಡಾ ನನ್ನ ಹುದ್ದಗೆ ರಾಜೀನಾಮೆ ನೀಡುತ್ತೇನೆ, ರಾಹುಲ್ ಗಾಂಧಿ ಕೂಡಾ ಪಕ್ಷದ ಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು, ಎಂದು ಪೂನವಾಲಾ ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಎಐಎಸಿಸಿ ಅಧ್ಯಕ್ಷ ಚುನಾವಣೆ ಸಂಪೂರ್ಣವಾಗಿ ರಾಹುಲ್ ಗಾಂಧಿ ಅವರನ್ನೇ ಅಧ್ಯಕರಾಗಿ ಆಯ್ಕೆ ಮಾಡಬೇಕು ಎನ್ನುವಂತೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇಡೀ ಚುನಾವಣಾ ಪ್ರಕ್ರಿಯೆ ರಾಹುಲ್ ಗಾಂಧಿಯವರ ಪರವಾಗಿದ್ದು, ಅವರು ಗಾಂಧಿ ಕುಟುಂಬದ ಕುಡಿ ಎಂಬುದೇ ಇದಕ್ಕೆ ಕಾರಣ ಎಂದೂ ಅವರು ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಪೂನಾವಾಲ, ರಾಹುಲ್ ಗಾಂಧಿ ಆಯ್ಕೆ ಮತ್ತು ಏಕಪಕ್ಷೀಯ ಚುನಾವಣಾ ಪ್ರಕ್ರಿಯೆ ಕುರಿತು ಮಾತನಾಡಿದರೆ ತಮ್ಮ ಪರವಾಗಿ ಯಾರೂ ನಿಲ್ಲುತ್ತಿಲ್ಲ. ಎಲ್ಲರೂ ಶತಾಯಗತಾಯ ರಾಹುಲ್ ಗಾಂಧಿ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವ ಧಾಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಒಂದು ವೇಳೆ ರಾಹುಲ್ ವಿರುದ್ಧ ಬೇರೆ ಯಾರೇ ಸ್ಪರ್ಧಿಸಿದರೂ ರಾಹುಲ್ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಪೂನಾವಾಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು… ಕುಟುಂಬ ರಾಜಕಾರಣದಲ್ಲಿ ಬೇರಾರಿಗೂ ಎಂಟ್ರಿನೇ ಇಲ್ಲ ಎನ್ನುವುದು ಕಾಂಗ್ರೆಸ್ಸಿಗರಿಗೆ ಇದೀಗ ಅರ್ಥವಾಗುತ್ತಿದೆ ಎಂದೆನಿಸುತ್ತೆ!! ಯಾಕೆಂದರೆ ಕಾಂಗ್ರೆಸ್ಸಿನ ಅಧ್ಯಕ್ಷರಾಗಲು ನೆಹರೂ ಕುಟುಂಬಕ್ಕೆ ಮಾತ್ರ ಸೀಮಿತ. ಅಲ್ಲದೇ ಪೂನಾವಾಲ ಹೇಳಿರುವುಂತೆ ರಾಹುಲ್ ವಿರುದ್ಧ ಬೇರೆ ಯಾರೇ ಸ್ಪರ್ಧಿಸಿದರೂ ಕೂಡ, ಅದರಲ್ಲಿ ಬಹುಮತ ಗಳಿಸಿದರೂ ಕೂಡ ರಾಹುಲ್ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದಿರುವುದೇ ನಿಜಾಂಶ!!

ಶೆಹಜಾದ್ ಪೂನಾವಾಲ ಹೇಳಿಕೆಗೆ ಇತರ ಮುಖಂಡರ ವಿರೋಧ!!!

ಹೌದು… ಟ್ವಿಟರ್ ನಲ್ಲಿ ಕಾಂಗ್ರೆಸ್ ಮುಖಂಡ ಶೆಹಜಾದ್ ಪೂನಾವಾಲ, ರಾಹುಲ್ ಗಾಂಧಿ ವಿರುದ್ದ ಕಿಡಿಕಾರಿರುವ ಬಗ್ಗೆ ಕಾಂಗ್ರೆಸ್ಸಿನ ಕೆಲ ಮುಖಂಡರುಗಳು ವಿರೋಧ ವ್ಯಕ್ತಪಡಿಸಿದ್ದು ರಾಹುಲ್ ಗಾಂಧಿಯನ್ನು ಕೊಂಡಾಡಿದ್ದಾರೆ!! ಶೆಹಜಾದ್ ಪೂನಾವಾಲ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಇತರೆ ನಾಯಕರು ಕಿಡಿಕಾರಿದ್ದು, ಶೆಹಜಾದ್ ಪೂನಾವಾಲ ಅವರು ಬೆನ್ನಿಗೆ ತೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಪೂನಾವಾಲಾ ಹೇಳಿಕೆ ನಿಜಕ್ಕೂ ಆಘಾತ ತಂದಿದೆ. ನಾವೆಲ್ಲರೂ ಒಗ್ಗೂಡಿ ಬಿಜೆಪಿಯನ್ನು ಮಣಿಸಬೇಕಿದೆ. ಇಂತಹ ಹೊತ್ತಿನಲ್ಲಿ ರಾಹುಲ್ ರಂತಹ ಸಮರ್ಥ ನಾಯಕತ್ವದ ಅಗತ್ಯವಿದೆ. ಇಂತಹ ಹೊತ್ತಿನಲ್ಲಿ ರಾಹುಲ್ ಕುರಿತ ಶೆಹಜಾದ್ ಪೂನಾವಾಲ ಹೇಳಿಕೆ ಆಘಾತ ತಂದಿದೆ. ಇಂದಿನಿಂದ ನನ್ನ ಮತ್ತು ಶೆಹಜಾದ್ ಪೂನಾವಾಲ ಸಂಪರ್ಕ ಕಡಿತಗೊಳಿಸುತ್ತೇನೆ ಎಂದು ಶೆಹಜಾದ್ ಸಹೋದರ ತೆಹ್ಸೀನ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಪಕ್ಷದ ನಾಯಕರು ಭಿನ್ನಾಭಿಪ್ರಾಯ, ವೈಮನಸ್ಸು ಮರೆತು ಒಗ್ಗಟ್ಟಾಗಿ ಹೆಜ್ಜೆ ಹಾಕಿದಲ್ಲಿ ಮಾತ್ರ ಅಧಿಕಾರದ ಗದ್ದುಗೆ ಏರಲು ಸಾಧ್ಯ. ಆಂತರಿಕ ಕಚ್ಚಾಟ ಮುಂದುವರಿಸಿದಲ್ಲಿ ವಿರೋಧ ಪಕ್ಷವಾಗಿಯೇ ಕುಳಿತಿರಬೇಕಾಗುತ್ತದೆ ಎಂದು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದು ಇದೀಗ ರಾಹುಲ್ ಗಾಂಧಿಯನ್ನೇ ಸಮರ್ಥ ನಾಯಕ ಅಲ್ಲ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಿರುವುದು ಮಾತ್ರ ವಿಪರ್ಯಾಸ!!

– ಅಲೋಖಾ

Tags

Related Articles

Close