ಪ್ರಚಲಿತ

ಲೈಗಿಂಕ ಅಪರಾಧಗಳ ವಿರುದ್ದ ವಿಶ್ವದ ಹಲವಾರು ದೇಶಗಳು ಮಾಡಿಕೊಂಡ ಕಾನೂನುಗಳು ಅತ್ಯಾಚಾರಿಯ ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ

ಒಂದೆಡೆ ಭಾರತದ ಮಹಿಳೆಯರು ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಆಟಗಳಲ್ಲಿ ಅಜೇಯರಾಗಿ ಸ್ವರ್ಣ ಪದಕ ಗಳಿಸಿ ನಾವು ಎದೆಯುಬ್ಬಿಸಿ ತಲೆ ಎತ್ತಿಕೊಂಡು ನಡೆದಾಡುವಂತಾದರೆ, ಇನ್ನೊಂದೆಡೆ ಮಾನವೀಯತಯೇ ತಲೆ ತಗ್ಗಿಸುವಂತಹ ಘಟನೆಗಳು ದೇಶದಲ್ಲಿ ನಡೆಯುತ್ತಿವೆ. ಕಾಶ್ಮೀರದಲ್ಲಿ ಪುಟ್ಟ ಬಾಲೆಯೊಬ್ಬಳ ಮೇಲೆ ಹದ್ದುಗಳು ಎರಗಿದಂತೆರಗಿ ಆಕೆಯನ್ನು ಕಿತ್ತು ತಿಂದ ಘಟನೆ ಮನುಷ್ಯ ಮಾತ್ರರಾದ ನಮಗೆ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ. ಅದಕ್ಕಿಂತಲೂ ರೇಜಿಗೆ ಹುಟ್ಟಿಸುವ ವಿಚಾರ ಇಂತಹ ಘೋರ ಅಪರಾಧಗಳಲ್ಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಕಚಡಾ ರಾಜಕಾರಣಿಗಳು ಮತ್ತು ಬೆಂಕಿಗೆ ತುಪ್ಪ ಸುರಿದು ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಮಾಧ್ಯಮಗಳ ವರ್ತನೆ.

ಮಹಿಳೆಯ ಬಲಾತ್ಕಾರದಂತಹ ಸಂವೇದನಾತ್ಮಕ ವಿಚಾರದಲ್ಲೂ ಜಾತಿ, ಪಕ್ಷ, ಅಧಿಕಾರ, ವಯಸ್ಸು ನೋಡುತ್ತಾ, ಮಹಿಳೆಯ ಮೇಲಾದ ಅತ್ಯಾಚಾರಕ್ಕೆ ಆಕೆಯನ್ನೇ ದೂರುತ್ತಾ ಕಾಲ ಕಳೆಯುವವರ ಕಪಾಳಕ್ಕೆ ಬಾರಿಸಬೇಕು ಎಂದೆನಿಸುತ್ತದೆ. ದೇಶದಲ್ಲಿ ಲೈಂಗಿಕ ಅಪರಾಧಗಳ ವಿರುದ್ದ ಕಠಿಣ ಕಾನೂನು ತರುವುದು ಬಿಟ್ಟು, ಡಿಬೇಟ್-ಡಿಸ್ಕಶನ್ ಮಾಡುತ್ತಾ ಕಾಲ ಹರಣ ಮಾಡುವವರನ್ನು ಕಂಡರೆ ಸುಡುವಷ್ಟು ಕೋಪ ಉಕ್ಕೇರುತ್ತದೆ. ಉಳಿದೆಲ್ಲ ವಿಚಾರದಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ನಾವು ಲೈಂಗಿಕ ಅಪರಾಧಗಳ ವಿಷಯದಲ್ಲಿ ಉಳಿದ ದೇಶಗಳು ಅನುಸರಿಸುವ ವಿಧಾನವನ್ನು ಅಳವಡಿಸಿಕೊಳ್ಳುವುದಿಲ್ಲ. ವಿಶ್ವದ ಹಲವಾರು ದೇಶಗಳು ಬಲಾತ್ಕಾರಿಗೆ ಕೊಡುವ ಶಿಕ್ಷೆ ಹೇಗಿದೆ ಗೊತ್ತೆ?

ಚೀನಾ: ಚೀನಾದಲ್ಲಿ ಅತ್ಯಾಚಾರಿಯನ್ನು ನೇರವಾಗಿ ಮರಣದಂಡನೆ ಶಿಕ್ಷೆಗೆ ಒಳಪಡಿಸುವ ಕಾನೂನು ಇದೆ. ವಿಶೇಷ ಸನ್ನಿವೇಶಗಳಲ್ಲಿ, ಅತ್ಯಾಚಾರಿಗಳ ಜನನಾಂಗವನ್ನೇ ಊನಗೊಳಿಸುವ ಶಿಕ್ಷೆ ನೀಡಲಾಗುತ್ತದೆ.

ಇರಾನ್: ಕಟ್ಟರ್ ಇಸ್ಲಾಮಿಕ್ ನಾಡಾದ ಇರಾನಿನಲ್ಲಿ ಅತ್ಯಾಚಾರಿಗಳಿಗೆ ಸಾರ್ವಜನಿಕ ಗಲ್ಲು ಶಿಕ್ಷೆ ಅಥವಾ ಗುಂಡು ಹೊಡೆದು ಸಾಯಿಸುವ ಶಿಕ್ಷೆ ನೀಡಲಾಗುತ್ತದೆ. ಅತ್ಯಾಚಾರಕ್ಕೊಳಗಾದವರ ಒಪ್ಪಿಗೆ ಇದ್ದರೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಅಥವಾ ನೂರು ಛಾಟಿ ಏಟಿಗೆ ಬದಲಾಯಿಸಿ ಕೊಳ್ಳಬಹುದಾಗಿದೆ ಆದರೆ ಸಾಧ್ಯತೆಗಳು ಕಡಿಮೆ.

ನೆದರ್ಲ್ಯಾಂಡ್: ಇಲ್ಲಿ ಯಾವುದೇ ರೀತಿಯ ಲೈಂಗಿಕ ಶೋಷಣೆ, ಅಂದರೆ ಮಹಿಳೆಯ ಒಪ್ಪಿಗೆ ಇಲ್ಲದೆ ಆಕೆಯ ಮೈ ಮುಟ್ಟುವುದೂ ಸಹ ಅಪರಾಧ ಇದಕ್ಕೆ ನಾಲ್ಕು ವರ್ಷಗಳ ಕಠಿಣ ಸಜೆ ನೀಡಲಾಗುತ್ತದೆ. ವೇಶ್ಯಾವೃತಿಯಲ್ಲಿ ನಿರತರಾದ ಮಹಿಳೆಯರನ್ನೂ ಇಲ್ಲಿ ಅವರ ಒಪ್ಪಿಗೆ ಇಲ್ಲದೆ ಮುಟ್ಟುವಂತಿಲ್ಲ. ಕಾನೂನು ಮುರಿದವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ.

ಫ್ರಾನ್ಸ್: ಫ್ರಾನ್ಸಿನಲ್ಲಿ ಅತ್ಯಾಚಾರಿಗೆ ಹದಿನೈದರಿಂದ ಮೂವತ್ತು ವರ್ಷಗಳವರೆಗಿನ ಜೈಲು ಶಿಕ್ಷೆ ನೀಡಲಾಗುತ್ತದೆ. ಶಿಕ್ಷೆಯ ಪ್ರಮಾಣ ಅವರ ಅಪರಾಧದ ಗಂಭೀರತೆಯ ಮೇಲೆ ನಿರ್ಧಾರವಾಗಿರುತ್ತದೆ. ಜೈಲುವಾಸದಲ್ಲಿರುವಷ್ಟು ಸಮಯವೂ ಅವರಿಗೆ ಚಿತ್ರಹಿಂಸೆ ನೀಡಲಾಗುತ್ತದೆ.

ಉತ್ತರ ಕೊರಿಯಾ: ಈ ವಿಷಯದಲ್ಲಿ ನಮಗಿಂತ ಮತಾಂಧ ಸರ್ವಾಧಿಕಾರಿ ಕಿಮ್ ವಾಸಿ. ಅತ್ಯಾಚಾರದಂತಹ ಅಪರಾಧಕ್ಕೆ ಅವನ ನಾಡಲ್ಲಿ ಕರುಣೆಯೇ ತೋರಿಸಲಾಗುವುದಿಲ್ಲ. ಇಲ್ಲಿಯ ಪೋಲೀಸ್ ಸ್ಕಾಡ್ ಅತ್ಯಾಚಾರಿಯ ತಲೆಗೆ ಆ ಕೂಡಲೇ ಗುಂಡಿಟ್ಟು ಬಲಿಪಶುವಿಗೆ ತ್ವರಿತ ನ್ಯಾಯ ದೊರಕಿಸಿ ಕೊಡುತ್ತದೆ.

ಅಫ್ಘಾನಿಸ್ತಾನ: ಕೇವಲ ನಾಲ್ಕೇ ದಿನಗಳ ಒಳಗೆ ತನಿಖೆ ನಡೆದು ಅತ್ಯಾಚಾರಿಯ ತಲೆಗೆ ಗುಂಡಿಟ್ಟು ಕೊಲ್ಲಲಾಗುತ್ತದೆ.

ಸೌದಿ ಅರೇಬಿಯಾ: ಇಲ್ಲಿಯೂ ಅಷ್ಟೆ ಬಲಾತ್ಕಾರ ನಡೆದ ಕೆಲವೇ ದಿನಗಳ ಒಳಗೆ ಅಪರಾಧದ ತನಿಖೆ ನಡೆಯುತ್ತದೆ. ಅಪರಾಧ ಸಾಬೀತಾದ ಕೂಡಲೇ ವ್ಯಕ್ತಿಯನ್ನು ಸಾರ್ವಜನಿಕರ ಮಧ್ಯ ನಿಲ್ಲಿಸಿ ಗುಂಡಿಟ್ಟು ಕೊಲ್ಲಲಾಗುತ್ತದೆ.

ಯುಎಇ: ಅತ್ಯಾಚಾರ ಮಾಡಿದ ಏಳೇ ದಿನಗಳ ಒಳಗೆ ಅತ್ಯಾಚಾರಿಯನ್ನು ಗಲ್ಲಿಗೇರಿಸಲಾಗುತ್ತದೆ.

ಇದಲ್ಲದೆ, ಅಮೇರಿಕಾ, ರಷ್ಯಾ, ಗ್ರೀಸ್ ಆಸ್ಟ್ರೇಲಿಯಾದಂತಹ ದೇಶಗಳೂ ಕೂಡಾ ಅತ್ಯಾಚಾರಕ್ಕೆ ಕಠೋರ ಶಿಕ್ಷೆ ನೀಡುತ್ತವೆ. ಭಾರತದಲ್ಲಿ ಅತ್ಯಾಚಾರವೆಂಬುದು ದಿನ ನಿತ್ಯದ ವಿಚಾರವೆಂಬತಾಗಿದೆ. ವಿಶ್ವದ ಇತರ ದೇಶಗಳಲ್ಲಿರುವಂತೆಯೇ ಭಾರತದಲ್ಲಿಯೂ ಅತ್ಯಾಚಾರಿಗಳಿಗೆ ನಡುಕ ಹುಟ್ಟಿಸುವಂತಹ ಕಠೋರ ಶಿಕ್ಷೆ ವಿಧಿಸಿದಾಗ ಮಾತ್ರ ಮಹಿಳೆಯರು ಸಮ್ಮಾನದಿಂದ ಬದುಕುವಂತಾಗುವುದು. ಜನರೇ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮೊದಲು ಸರಕಾರ ಎಚ್ಚೆತ್ತುಕೊಂಡು ಕಾನೂನು ತರಲೇಬೇಕು.

ಮೂಲ:https://www.wittyfeed.me/story/23050/cruel-punishment-for-rape

-ಶಾರ್ವರಿ

Tags

Related Articles

Close