ಪ್ರಚಲಿತ

ಭಯೋತ್ಪಾದಕರೇ! ತಾಕತ್ತಿದ್ದರೆ ಭಾರತದೊಳ ಬನ್ನಿ ಎಂದು ಬಿಪಿನ್ ರಾವತ್ ಹೇಳಿದ್ಯಾಕೆ ಗೊತ್ತೇ?

ದೇಶಕ್ಕೆ ಎದುರಾಗುವ ಆಂತರಿಕ ಅಥವಾ ಬಾಹ್ಯ ಯಾವುದೇ ರೀತಿಯ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಯಾವಾಗಲೂ ಸಿದ್ದ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಷ್ಟೇ ಅಲ್ಲದೇ, ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಸರ್ಜಿಕಲ್ ಸ್ಟ್ರೈಕ್ ಬಹಳ ವಿಶೇಷವಾಗಿ ಕಾರ್ಯನಿರ್ವಹಿಸುತ್ತದೆ ಕೂಡ!!ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಮುಕುಟವೆಂದು ಕರೆಯಲಾಗುತ್ತಿರುವ ಕಾಶ್ಮೀರ ಉಗ್ರ ಅಟ್ಟಹಾಸಕ್ಕೆ ಬಲಿಯಾಗುತ್ತಿದೆ!! ಹಾಗಾಗಿ, ಕಾಶ್ಮೀರ ಗಡಿಯಾದ್ಯಂತ ನೆಲೆಸಿರುವ ಉಗ್ರರ ನಿರ್ಮೂಲನೆಗಾಗಿ ಮತ್ತೆ ನಿರ್ದಿಷ್ಟ ದಾಳಿ ನಡೆಸಬೇಕಾಗಬಹುದು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ!!

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿದ್ದು, ಇದು ಕಂಡು ಬಂದರೆ ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ. ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಒಂದು ಸಂದೇಶವಷ್ಟೇ. ಅಗತ್ಯ ಬಿದ್ದರೆ ಭಾರತ ದೊಡ್ಡ ಪ್ರಮಾಣದ ದಾಳಿಯನ್ನೇ ನಡೆಸಲು ಸಿದ್ದವಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ!! ಅಷ್ಟೇ ಅಲ್ಲದೇ ಕಾಶ್ಮೀರ ಗಡಿಯಾದ್ಯಂತ ನೆಲೆಸಿರುವ ಉಗ್ರರ ನಿರ್ಮೂಲನೆಗಾಗಿ ಮತ್ತೆ ನಿರ್ದಿಷ್ಟ ದಾಳಿ ನಡೆಸಬೇಕಾಗಬಹುದು. ನುಸುಳುಕೋರರನ್ನು ಸಮಾಧಿಗೆ ಕಳುಹಿಸಲು ನಮ್ಮ ಯೋಧರು ಸಿದ್ಧರಾಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.

“ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿ ಪಾಕಿಸ್ತಾನಕ್ಕೆ ಒಂದು ಸಂದೇಶ ಮಾತ್ರ ಆಗಿದೆ. ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ
ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದರೆ ಮತ್ತೆ ಅಂತಹ ದಾಳಿಗಳನ್ನು ನಡೆಸಲು ಭಾರತ ಹಿಂದೇಟು ಹಾಕುವುದಿಲ್ಲ. ಅಗತ್ಯ ಬಿದ್ದರೆ ಭಾರತೀಯ ಸೇನೆ ನಿಯಂತ್ರಣ ರೇಖೆಯಾಚೆ ಮತ್ತೆ ಸರ್ಜಿಕಲ್ ದಾಳಿಗಳನ್ನು ನಡೆಸಲು ಸಿದ್ದವಿದೆ. ಹಾಗಾಗಿ ಒಳನುಸುಳುಕೋರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರೆ ತಪ್ಪಾಗಲಾರದು!!

ಹೌದು… ಭಾರತೀಯ ಸೇನೆ ಈಗಾಗಲೇ ನಡೆಸಿರುವ ಸಾಕಷ್ಟು ಸರ್ಜಿಕಲ್ ಸ್ಟ್ರೈಕ್‍ಗಳಲ್ಲಿ ಯಶಸ್ವಿಯನ್ನು ಕಂಡಿರುವುದು ತಿಳಿದ ವಿಚಾರ ಉಗ್ರರನ್ನು ಮಟ್ಟ ಹಾಕಿ
ದೇಶವನ್ನು ಕಾಯುವ ಯೋಧರು ಅದೆಷ್ಟೋ ಕಷ್ಟಕರ ಜೀವನವನ್ನು ಎದುರಿಸುತ್ತಿದ್ದಾರೆ. ಪ್ರಪಂಚದಲ್ಲಿರುವ ಪ್ರತೀಯೊಂದು ದೇಶದ ಸೇನೆಯೂ 30:40:30
ಅನುಪಾತವನ್ನು ಪಾಲಿಸುತ್ತಿದೆ. ನಮ್ಮ ದೇಶ ಕಲೆ ತಂತ್ರಜ್ಞಾನದ ದೇಶವಾಗಿದ್ದು, ಶೇ.30 ರಷ್ಟು ಸಲಕರಣೆಗಳಿವೆ!! ಅಷ್ಟೇ ಅಲ್ಲದೇ, ಶೇ.40ರಷ್ಟು ಆಧುನೀಕರಣವನ್ನು ಅನುಸರಿಸಲಾಗುತ್ತಿದೆ. ಇನ್ನುಳಿದ ಶೇ.30 ರಷ್ಟು ಎಂದಿನಂತೆ ಕಾರ್ಯಗಳು ಮುಂದುವರೆಯುತ್ತಿವೆ !! ಹೀಗಾಗಿ ಉಗ್ರರನ್ನು ಮಟ್ಟ ಹಾಕಲು ಭಾರತೀಯ ಸೇನೆ ವಿವಿಧ ರೀತಿ ತಯಾರಿಯಲ್ಲಿ ನಡೆಸುತ್ತಿರುವುದು ಖಂಡಿತಾ!!!

ಇಂಡಿಯಾ ಮೋಸ್ಟ್ ಫಿಯರ್‍ಲೆಸ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತಾನಾಡಿದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಈಗಾಗಲೇ ಭಯೋತ್ಪಾದನೆಗೆ ಪ್ರಚೋದನೆ ನೀಡುವ ಕಾರ್ಯವನ್ನು ಪಾಕಿಸ್ತಾನ ಮಾಡುತ್ತಿದೆ. ದುಷ್ಟ ವರ್ತನೆಯನ್ನು ಪಾಕ್ ಬದಲಿಸಿಕೊಳ್ಳಬೇಕು. ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಕೆಲಸ ಹೀಗೆಯೇ ಮುಂದುವರಿದರೆ ಭಾರತ ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಸಲಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳು, ಚಟುವಟಿಕೆಗಳು ಅಸ್ತಿತ್ವದಲ್ಲಿವೆ. ಗಡಿಯೊಳಗೆ ಉಗ್ರರು ನುಸುಳಿ ಬರುವುದು, ಭಾರತೀಯ ಸೇನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ನಾವು ಭಯೋತ್ಪಾದಕರನ್ನು ಬರಮಾಡಿಕೊಳ್ಳುತ್ತೇವೆ. ಅವರನ್ನು ಭೂಮಿಯಡಿ ಎರಡೂವರೆ ಅಡಿ ಆಳಕ್ಕೆ ಅವರನ್ನು ಕಳುಹಿಸುತ್ತೇವೆ ಎಂದು ಬಿಪಿನ್ ರಾವತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗಡಿ ನಿಯಂತ್ರಣ ರೇಖೆಯಾದ್ಯಂತ ಉಗ್ರರ ಶಿಬಿರಗಳಿದ್ದು, ಭಯೋತ್ಪಾದಕರು ಬರುತ್ತಲೇ ಇರುತ್ತಾರೆ. ಅದಕ್ಕಾಗಿ ನಾವೆಲ್ಲ ಸಿದ್ಧರಾಗಿದ್ದೇವೆ!! ನುಸುಳುಕೋರರನ್ನು ಬರಮಾಡಿಕೊಂಡು ಮಣ್ಣಿನಡಿ ರವಾನಿಸುತ್ತೇವೆ ಎಂದು ರಾವತ್ ತಿಳಿಸಿದ್ದಲ್ಲದೇ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಭಾರತೀಯ ಯೋಧರು ಗಡಿನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ದಿಷ್ಟ ದಾಳಿ ನಡೆಸಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದ್ದರು. ಉರಿಯಲ್ಲಿ ಸೇನಾ ನೆಲೆ ಮೇಲೆ ನಡೆದ ಉಗ್ರ ದಾಳಿಯಲ್ಲಿ 19 ಯೋಧರು ಮೃತಪಟ್ಟ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆಸಲಾಗಿತ್ತು. ‘ನಾವು ಏನು ಎಂಬುದನ್ನು ನಿರೂಪಿಸಲು ಮತ್ತು ಉಗ್ರರಿಗೆ ಕಠಿಣ ಸಂದೇಶ ನೀಡಲು ಈ ಕ್ರಮ ಕೈಗೊಳ್ಳಲಾಗಿತ್ತು’ ಎಂದು ರಾವತ್ ಹೇಳಿದ್ದಾರೆ.

ಭಾರತದ ಶಿರವನ್ನು ಕಾಪಾಡಿಕೊಳ್ಳುವಲ್ಲಿ ಭಾರತೀಯ ಸೇನೆ ಹರಸಾಹಸವನ್ನು ಪಡುತ್ತಿರುವುದು ಗೊತ್ತಿರುವ ವಿಚಾರ! ಆದರೆ ಉಗ್ರರು ದಿನೇ ದಿನೇ ಹೆಚ್ಚುತ್ತಿದ್ದು,
ಉಗ್ರರ ಉಪಟಳದಿಂದ ಅದೆಷ್ಟೊ ಅಮಾಯಾಕರು ಬಲಿಯಾಗುತ್ತಿದ್ದಾರೆ. ಒಳನುಸುಳುಕೋರರ ಅಟ್ಟಹಾಸವನ್ನು ನಿಲ್ಲಿಸಲು ಭಾರತೀಯ ಸೇನೆ ಸೆಟೆದು ನಿಂತಿದ್ದು, ಪಾಕಿಸ್ತಾನಕ್ಕೆ ಬಿಸಿತುಪ್ಪದಂತೆ ಪರಿಣಮಿಸಲಿದೆ!!

– ಅಲೋಖಾ

Tags

Related Articles

Close