ಪ್ರಚಲಿತ

ವಿಶೇಷ ಸುದ್ದಿ! ಮತ್ತೆ ಶುರುವಾಯ್ತು ಭಾಷಾ ರಾಜಕೀಯ! ಮೆಟ್ರೋದಲ್ಲಿ ಹಿಂದಿ ಹೇರಿಕೆಯಾಗುತ್ತಿದೆ ಎಂದಿದ್ದ ಸಿದ್ಧರಾಮಯ್ಯನ ಹೊಸ ಹಿಂದಿ ಕಾರ್ಯಕ್ರಮ!

ಕೇಳ್ರಪ್ಪೋ ಕೇಳಿ! ನಮ್ಮ ಸಿದ್ದರಾಮಯ್ಯ ಸರಕಾರ ಹಿಂದಿ ನಾಮಫಲಕಗಳ ವಿರುದ್ದ ಹೋರಾಟ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ… ಆದರೆ,
ವಿಧಾನನಸಭಾ ಚುನಾಚಣೆ ಹತ್ತಿರವಾಗುತ್ತಿದ್ದಂತೆಯೇ ಹಿಂದಿ ಹೆಸರಿನ ಕಾರ್ಯಕ್ರಮ ನಡೆಸಲು ಮುಂದಾಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ!! ಹಾಗಾದರೆ ನಮ್ಮ ಮುಖ್ಯಮಂತ್ರಿಗಳು ಹೊರತಂದಿರುವ ನೂತನ ಕಾರ್ಯಕ್ರಮವಾದರೂ ಯಾವುದು ಗೊತ್ತೆ?? ಅದಕ್ಕಾಗಿ ವ್ಯಯಿಸಲಿರುವ ಮೊತ್ತವಾದರು ಎಷ್ಟು?? ಕೇಂದ್ರಸರಕಾರದ ಜನಪ್ರಿಯ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಅವರು ನಕಲಿ ಮಾಡಲು ಹೊರಟಿದ್ದಲ್ಲದೇ, ಇಂದು ಕ್ವಾಫಿ ಕ್ಯಾಟ್ ಸಿದ್ದರಾಮಯ್ಯ ಅಗಿರುವುದಂತೂ ಖಂಡಿತ!

ಹೌದು… ರಾಜ್ಯ ಸರಕಾರ ಹಿಂದಿ ಭಾಷೆಯ ವಿರುದ್ದವಾಗಿ ಹೋರಾಡಿದ್ದಲ್ಲದೇ, ಕೇಂದ್ರ ಸರಕಾರವು ದಕ್ಷಿಣ ಭಾರತೀಯರ ಮೇಲೆ ಹಿಂದಿಯನ್ನು ಹೇರಲು
ಹೊರಟಿರುವುದು ಅಕ್ಷಮ್ಯ ಎಂದಿತ್ತು. ಅಷ್ಟೇ ಅಲ್ಲದೇ, ಹಿಂದಿ ದಬ್ಬಾಳಿಕೆಯನ್ನು ಸಹಿಸಲು ಅಸಾಧ್ಯ. ಎಲ್ಲ ಭಾಷೆಗಳನ್ನು ಪೆÇೀಷಿಸುವ ಶಕ್ತಿ ಕನ್ನಡಕ್ಕಿದೆ. ಆದರೆ,
ಹಿಂದಿಯನ್ನು ಕಲಿಯಲೇಬೇಕು ಎಂದು ದಬ್ಬಾಳಿಕೆ ಮಾಡಿದರೆ ಕನ್ನಡಕ್ಕೆ ಧಕ್ಕೆಯಾಗುತ್ತದೆ. ಅಂತಹ ಪರಿಸ್ಥಿತಿ ಬಂದಲ್ಲಿ ಗೋಕಾಕ್ ಚಳವಳಿ ಮಾದರಿಯಲ್ಲಿ ಮತ್ತೊಂದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದಿದ್ದು ನಾವು ಇಂದೂ ಮರೆತಿಲ್ಲ!!

ವಿಪರ್ಯಾಸ ಎಂದರೆ, ಇದೀಗ ನಮ್ಮ ಮುಖ್ಯಮಂತ್ರಿಗಳು ಹಿಂದಿ ಹೆಸರಿನ ಕಾರ್ಯಕ್ರಮವನ್ನು ರಾಜ್ಯದಲ್ಲಿ ಮಾಡುತ್ತಿರುವುದು ಮಾತ್ರ ಸೋಜಿಗದ ಸಂಗತಿ!!
ಯಾಕೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ “ಮನ್ ಕಿ ಬಾತ್” ಕಾರ್ಯಕ್ರಮಕ್ಕೆ ಟಾಂಗ್ ನೀಡಲು ಸಜ್ಜಾಗಿದ್ದು, ಅಂತೂ ಹಿಂದಿ ವಿಚಾರವಾಗಿ ಹೋರಾಡಿದ ಸಿ.ಎಂ ಸಿದ್ದರಾಮಯ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ರಾಜ್ಯದ ಜನತೆಯೊಂದಿಗೆ “ಕಾಮ್ ಕಿ ಬಾತ್” ಆರಂಭಿಸಲು ಸಜ್ಜಾಗಿದ್ದಾರೆ!!!

ಏನಿದು “ಕಾಮ್ ಕಿ ಬಾತ್” ?

ಚುನಾವಣಾ ಪ್ರಚಾರಕ್ಕೆ ಸರಕಾರದಿಂದ ಲಭ್ಯವಾಗುವ ಎಲ್ಲ ಆಡಳಿತ ಯಂತ್ರ ಬಳಸಲು ಸನ್ನದ್ಧವಾಗಿರುವ ಮುಖ್ಯಮಂತ್ರಿಗಳು, ಈಗ ವಾರಕ್ಕೊಮ್ಮೆ ನೇರವಾಗಿ
ಮತದಾರರ ಬಳಿ ಮಾತನಾಡಲು ನಿರ್ಧರಿಸಿದ್ದಾರೆ! ಆದರೆ ಪ್ರಧಾನಿ ರೀತಿಯಲ್ಲಿ ಆಕಾಶವಾಣಿ ಅಥವಾ ದೂರದರ್ಶನ ಮೂಲಕ ಸಂವಹನ ನಡೆಸದೆ ತಾಲೂಕು
ಕೇಂದ್ರಗಳಲ್ಲಿನ ಡಿಜಿಟಲ್ ಪರದೆ ಮೇಲೆ ಕಾಮ್ ಕಿ ಬಾತ್ ನಡೆಯಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಬರೋಬ್ಬರಿ 17 ಕೋಟಿ ರೂಪಾಯಿ ಮೀಸಲಿಟ್ಟಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ!!

ಈ ಹಿಂದೆ ರಾಜ್ಯ ಸರಕಾರ ಹಾಗೂ ಕನ್ನಡ ಪರ ಹೋರಾಟಗಾರರು ಹಿಂದಿ ನಾಮಫಲಕಗಳ ವಿಚಾರವಾಗಿ ಹೋರಾಟವನ್ನು ನಡೆಸಿತ್ತು. ಅಷ್ಟೇ ಅಲ್ಲದೇ,
ರಾಜಧಾನಿಯಲ್ಲಿ ನಡೆದ ಹೋರಾಟ ಹಾಗೂ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹಿಂದಿ ಫಲಕಗಳ ವಿರುದ್ಧ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿಯೇ ಬೆಂಬಲ ಸೂಚಿಸಿದ್ದರು. ಹೀಗಿರಬೇಕಾದರೆ ಮುಖ್ಯಮಂತ್ರಿಗಳೇ ಹಿಂದಿ ಹೆಸರಿನ ಕಾರ್ಯಕ್ರಮವನ್ನು ಶುರು ಮಾಡಲಿರುವುದು ಮಾತ್ರ ಆಶ್ಚರ್ಯಕರ ಸಂಗತಿ!!

“ಕಾಮ್ ಕಿ ಬಾತ್” ಕಾರ್ಯಕ್ರಮಕ್ಕಾಗಿಯೇ ರಾಜ್ಯದ ಎಲ್ಲ 175 ತಾಲೂಕು ಕೇಂದ್ರಗಳಲ್ಲೂ ಡಿಜಿಟಲ್ ಸ್ಕ್ರೀನ್ ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿರುವ ವರುಣ ಸ್ಟುಡಿಯೋ ಮೂಲಕ ಈ ಮಾತುಕತೆ ನಡೆಯಲಿದ್ದು, ಈ ಭಾಷಣದಲ್ಲಿ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನು ಖುದ್ದು ಮುಖ್ಯಮಂತ್ರಿ ಮಾಡಲಿದ್ದಾರೆ.

ಆದರೆ, ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸತತವಾಗಿ 36 ತಿಂಗಳುಗಳ ಕಾಲ “ಮನ್ ಕಿ ಬಾತ್” ನಡೆಸಿಕೊಂಡು ಬಂದಿದ್ದಾರೆ. ಆಕಾಶವಾಣಿ ನೀಡಿದ ಮಾಹಿತಿ ಪ್ರಕಾರವೇ ಶೂನ್ಯ ಬಂಡವಾಳದಿಂದ ಆಕಾಶವಾಣಿಯ “ಮನ್ ಕಿ ಬಾತ್” ಮೂಲಕ 9.97 ಕೋಟಿ ರೂ.ಗಳನ್ನು ಜಾಹೀರಾತಿನಿಂದಲೇ ಪಡೆಯುತ್ತಿದೆ!! ಅಷ್ಟೇ ಅಲ್ಲದೇ, ಸ್ಕ್ರೀನ್ ಅಳವಡಿಕೆ ಅಥವಾ ಇನ್ಯಾವುದೇಕಾರಣಕ್ಕಾಗಿ ಪ್ರಧಾನಿ ಕಾರ್ಯಾಲಯದಿಂದ ಹಣ ಹೂಡಿಕೆ ಮಾಡಿರಲಿಲ್ಲ. ಹಾಗೆಯೇ ದೇಶದ ಜನತೆಯೊಂದಿಗೆ ಸಂವಹನ ನಡೆಸಲು ಮೋದಿ ಅಧಿಕಾರ ಹಿಡಿದ ತಕ್ಷಣ ಮಾಡಿದ ಕೆಲಸವೇ ಮನ್ ಕಿ ಬಾತ್ ಆಗಿತ್ತು. ಅಲ್ಲದೇ, ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಅಭಿಪ್ರಾಯ ಪಡೆದು ಅದನ್ನು ತಮ್ಮ ಮಾತಿನಲ್ಲೂ ಪ್ರಸ್ತಾಪಿಸುತ್ತಾರೆ ನಮ್ಮ ಪ್ರಧಾನಿ. ಹಾಗೆಯೇ 36 ತಿಂಗಳಲ್ಲಿ ಒಮ್ಮೆಯೂ “ಮನ್ ಕಿ ಬಾತ್” ಕಾರ್ಯಕ್ರಮವನ್ನು ರಾಜಕೀಯ ಕಾರಣಕ್ಕೆ ಅದನ್ನು ಬಳಸಿಕೊಂಡಿಲ್ಲ ಎನ್ನುವುದು ವಿಶೇಷವಾಗಿತ್ತು. ಆದರೆ ಸಿದ್ದರಾಮಯ್ಯ ಅವರು ರಾಜಕೀಯ ವಿಚಾರವಾಗಿ ಬಳಸಿದ್ದು ಮಾಥ್ರವಲ್ಲದೇ ಇದಕ್ಕಾಗಿ ಕೋಟಿಗಟ್ಟಲೆ ಹಣ ವ್ಯಯಿಸಿರುವುದು ಮಾತ್ರ ವಿಪರ್ಯಾಸ!!

ಆದರೆ ಹಿಂದಿ ವಿರೋಧಿಯಾಗಿದ್ದ ಇವರು ರಾಜ್ಯದಲ್ಲಿ ಉರ್ದುಭಾಷೆಗೆ ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ ಹಿಂದಿಯನ್ನು ರಾಜ್ಯದಲ್ಲಿ ವಿರೋಧಿಸಿದ್ದ
ಇವರು ಚುನಾವಣೆ ವರ್ಷದಲ್ಲಿ ರಾಜ್ಯ ಸರ್ಕಾರ ಇಂತಹ ಸಾಕಷ್ಟು ಯೋಜನೆ ಅನುಷ್ಠಾನ ಮಾಡುತ್ತಿದೆ. ಅಲ್ಲದೇ, 14.50 ಕೋಟಿ ರೂಗಳಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಮಾಹಿತಿ ಉತ್ಸವ ಆಚರಿಸುತ್ತಿದೆ. ಈಗಾಗಲೇ ಸರ್ಕಾರದ ದುಡ್ಡಿನಲ್ಲೇ ಸಾಧನಾ ಸಮಾವೇಶ ನಡೆಸಲಾಗಿದ್ದು, ಸರಕಾರಿ ಕಾರ್ಯಕ್ರಮಗಳ ಪ್ರಚಾರಕ್ಕೆ ಹೊಸ ಚಾನೆಲ್ ಆರಂಭಿಸುವ ಪ್ರಸ್ತಾಪ ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಿದೆ!!

ರಾಜ್ಯದಲ್ಲಿ ಹಿಂದಿ ನಾಮಫಲಕವನ್ನು ವಿರೋಧಿಸಿರುವ ಮುಖ್ಯಮಂತ್ರಿಗಳು ಪ್ರಧಾನಿಯವರ “ಮನ್ ಕಿ ಬಾತ್” ಕಾರ್ಯಕ್ರಮಕ್ಕೆ ರಾಜಕೀಯವಾಗಿ ಟಾಂಗ್ ನೀಡಲು “ಕಾಮ್ ಕಿ ಬಾತ್” ಎನ್ನುವ ಹೆಸರಿನ ಹಿಂದಿ ಹೆಸರನ್ನು ಇಟ್ಟಿರುವುದು ವಿಪರ್ಯಾಸ!! ಅಷ್ಟೇ ಅಲ್ಲದೇ, ರಾಜ್ಯದಲ್ಲಿ ಹಿಂದಿ ಹೆಸರಿನ ಕಾರ್ಯಕ್ರಮವನ್ನು ಆರಂಭಿಸಲು ಹೊರಟಿರುವ ರಾಜ್ಯಸರಕಾರದ ಮೇಲೆ ಕನ್ನಡ ಪರ ಹೋರಾಟಗಾರರ ವಿರೋಧ ಎದುರಾಗುವುದಿಲ್ಲವೇ ಎನ್ನುವ ಪ್ರಶ್ನೆಯು ಮೂಡುವುದು ಸಹಜ.. ಅಷ್ಟೇ ಅಲ್ಲದೇ ಇದಕ್ಕಾಗಿ ಗೋಕಾಕ್ ಚಳುವಳಿಯನ್ನು ನಡೆಸುತ್ತಾರೋ ಏನೋ ಅನ್ನೋದನ್ನು ಕಾದು ನೋಡಬೇಕಾಗಿದೆ

ಮೂಲ:Politics – Vijayavani

– ಅಲೋಖಾ

Tags

Related Articles

Close