ಪ್ರಚಲಿತ

ವಿಶೇಷ ಸುದ್ದಿ! ಏರ್ ಟೆಲ್ ಕಂಪೆನಿಯೊಂದು ಹಿಂದೂ ಹಬ್ಬಗಳ ವಿರುದ್ಧ ಅಪಪ್ರಚಾರ ಮಾಡಿದಾಗ ಹಿಂದೂ ಗ್ರಾಹಕರು ಮೈ ಚಳಿ ಬಿಡಿಸಿದ್ದು ಹೇಗೆ ಗೊತ್ತೇ?!

ದೀಪಾವಳಿ ಲಕ್ಷಾಂತರ ಹಿಂದೂಗಳಿಗೆ ಒಂದು ವಿಶೇಷವಾದ ಹಬ್ಬವಾಗಿದ್ದು, ಇದರ ಸಂಭ್ರಮವೇ ಎಲ್ಲರಿಗೂ ಮುದ ನೀಡುವಂತಹದ್ದು!! ಯಾಕೆಂದರೆ ದೀಪಗಳ
ಹಬ್ಬವೆಂದೆನಿಸಿದ ದೀಪಾವಳಿ ಬೆಳಕಿನ ಹಬ್ಬವಾಗಿದೆ. ಅಷ್ಟೇ ಅಲ್ಲದೇ, ಬಹಳ ವರ್ಷಗಳಿಂದ ಪಟಾಕಿ ಸಿಡಿಸಿ ಸಂಭ್ರಮವನ್ನು ಪಡುವುದೇ ಈ ಹಬ್ಬದ ವಿಶೇಷ
ಭಾಗವಾಗಿದೆ!! ಆದರೆ ಇತ್ತೀಚೆಗೆ ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧವನ್ನು ಹೇರಲಾಗಿರುವುದು ಮಾತ್ರ ಬೇಸರದ ಸಂಗತಿ!! ಯಾಕೆಂದರೆ ದೆಹಲಿಯಲ್ಲಿನ ಗಾಳಿ ವರ್ಷಪೂರ್ತಿ ಕೆಟ್ಟದಾಗಿದ್ದು, ಅಲ್ಲಿ ಬೆಳೆಯುವ ಫಸಲು ಕೂಡ ನಾಶವಾಗುತ್ತಿದೆ ಹಾಗಾಗಿ, ದೆಹಲಿ ವಾಯುಮಾಲಿನ್ಯದಿಂದ ತುಂಬಿರುವ ಒಂದು ಕೊಠಡಿ ಎಂದರೆ ತಪ್ಪಾಗಲಾರದು!! ಹಾಗಾದರೆ 4 ದಿನಗಳಲ್ಲಿ ನಡೆಯುವ ಹಬ್ಬದ ಸಂಭ್ರಮದಲ್ಲಿ ಸಿಡಿಸುವ ಪಟಾಕಿಯಿಂದಾಗಿಯೇ, ಈಡೀ ದೆಹಲಿ ವಾಯುಮಾಲಿನ್ಯದಿಂದ ಕೂಡಿರಲು ಸಾಧ್ಯವೇ??…

ದೀಪಾವಳಿ ಸಮಯದಲ್ಲಿ ನವದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‍ಸಿಆರ್)ಗಳಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ
ಹೊರಡಿಸಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ ಹಿನ್ನೆಲೆಯಲ್ಲಿ ಅಕ್ಟೋಬರ್ 31ರ ವರೆಗೆ ಪಟಾಕಿ ಸಿಡಿಸುವುದು ಹಾಗೂ ಮಾರಾಟ ಮಾಡುವುದನ್ನು
ನಿಷೇಧಿಸಲಾಗಿದೆ!! ಆದರೆ ಹಿಂದೂ ಹಬ್ಬವಾದ ದೀಪಾವಳಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವುದರ ಬಗ್ಗೆ ಕೆಲ ಸಂಸ್ಥೆಗಳು ನಿಷೇಧಮಾಡುವಂತೆ ಪ್ರಚಾರ
ಮಾಡುತ್ತಿವೆ!!

ಯಾವ ಗಾಳಿಯಿಂದಾಗಿ ದೆಹಲಿಯ ಪರಿಸರ ಮಾಲಿನ್ಯವಾಗುತ್ತಿದೆ:

1. ರಸ್ತೆಯಲ್ಲಿರುವ ಧೂಳು: 50% (ಪರಿಹಾರ: ಫುಟ್‍ಪಾತ್‍ನಲ್ಲಿ ಹುಲ್ಲನ್ನು ಬೆಳೆಸುವುದು)
2. ಕೈಗಾರಿಕೆಗಳಿಂದ: 23% (ಪರಿಹಾರ: ಕೈಗಾರಿಕೆಗಳನ್ನು ನಿಯಂತ್ರಿಸುವುದು )
3. ಸ್ಥಳಿಯ ಪ್ರದೇಶದಲ್ಲಿ ಧೂಳಿನ ಉತ್ಪಾದನೆ: 20% (ಪರಿಹಾರ ಹೆಚ್ಚು ಗಿಡ ಮರಗಳನ್ನು ಬೆಳೆಸುವುದು)
4. ವಾಹನಗಳಿಂದ: 7% (ಪರಿಹಾರ: ಸಾರ್ವಜನಿಕ ಸಾರಿಗೆವ್ಯವಸ್ಥೆಗಳ ಸುಧಾರಣೆ)

ಆದರೆ ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಪ್ರಾಯೋಗಿಕವಾಗಿರಬಹುದು, ಆದರೆ ಇದು ಪರಿಹಾರವಲ್ಲ!! ಸಣ್ಣ ಸಣ್ಣ
ವಿಷಯಗಳ ಬಗ್ಗೆ ತಲೆಕೆಡಿಸಿ ಪಟಾಕಿಯನ್ನು ನಿಷೇಧಿಸಿ, ಇದು ಪರಿಹಾರ ಕ್ರಮ ಎಂದರೆ ಇದನ್ನು ಯಾರಾದರೂ ಒಪ್ಪುತ್ತಾರೆಯೇ??!! ಯಾಕೆಂದರೆ ನಿಜವಾದ
ಸಮಸ್ಯೆಯೆಂದು ಕಾಡುತ್ತಿರುವ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡು ಅದಕ್ಕೆ ಪರಿಹಾರ ಕಂಡುಕೊಂಡರೆ ಅದಕ್ಕೆ ಒಂದು ನ್ಯಾಯಯುತವಾದ ಬೆಂಬಲವೂ ಇರುತ್ತೆ
ಹಾಗೆಯೇ ಉತ್ತಮ ಪರಿಹಾರ ಸಿಕ್ಕಿದ ಹಾಗಾಗುತ್ತೆ!! ಆದರೆ ಪಟಾಕಿಯನ್ನು ನಿಷೇಧಿಸುವಂತೆ ಹೇಳುವುದು ಎಷ್ಟರ ಮಟ್ಟಿಗೆ ಸರಿ!!

ಆದರೆ, ಈ ಎಲ್ಲಾ ಗೊಂದಲ ಹಾಗೂ ಚರ್ಚೆಗಳ ಮಧ್ಯೆ ಕೆಲ ಸಂಸ್ಥೆಗಳು, ಕೆಲ ಕಾರ್ಪೋರೇಟ್‍ಗಳು ಈ ಸಮಯದಲ್ಲಿ ಪಟಾಕಿ ನಿಷೇಧದ ಕುರಿತು ಪ್ರಚಾರ
ಆರಂಭಿಸಿದೆ.!!! ಹೌದು.. ಹಿಂದೂ ಹಬ್ಬವಾದ ದೀಪಾವಳಿಯ ಸಂಭ್ರಮದಲ್ಲಿರುವ ಹಿಂದೂಗಳಿಗೆ ಪಟಾಕಿ ನಿಷೇಧಿಸುವಂತೆ ಪ್ರಚಾರ ಮಾಡುತ್ತಿರುವ ಸಂಸ್ಥೆಗಳಲ್ಲಿ,
ಪ್ರಚಾರದ ಮುಂಚೂಣಿಯನ್ನು ಏರ್‍ಟೆಲ್ ಹೊತ್ತಿದ್ದು, ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ!!

ಪಟಾಕಿ ವಾಯು ಮಾಲಿನ್ಯವನ್ನು ಸೃಷ್ಟಿಮಾಡುತ್ತೆ ಎಂದು, ಪಟಾಕಿ ನಿಷೇಧದ ಕುರಿತು ಪ್ರಚಾರಲ್ಲಿ ತೊಡಗಿರುವ ಏರ್‍ಟೆಲ್, ತನ್ನ ಬೂಟಾಕಿಯ ಪ್ರದರ್ಶನ
ನೀಡುತ್ತಿರುವುದು ಮಾತ್ರ ಹಾಸ್ಯಸ್ಪದ ಎನಿಸುತ್ತದೆ!! ಯಾಕೆಂದರೆ, ಈಗಾಗಲೇ ಏರ್‍ಟೆಲ್ ಮತ್ತು ಇತರ ದೊಡ್ಡ ಸಂಸ್ಥೆಗಳು ವಾಯು ಮಾಲಿನ್ಯಕಾರಕಗಳಾಗಿರುವ ವಿಚಾರ ಎಲ್ಲರಿಗೂ ತಿಳಿದಿದ್ದು, ವಾಯುಮಾಲಿನ್ಯದ ವಿರುದ್ದ ಹೋರಾಡುವ ಈ ಸಂಸ್ಥೆಗೆ ಏನೆನ್ನಬೇಕು?? ಎಕಾನೊಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, ಏರ್‍ಟೆಲ್ ಮತ್ತು ವೊಡಾಫೋನ್ ಕಂಪೆನಿಗಳು ವಾಯುಮಾಲಿನ್ಯ ಸೃಷ್ಟಿಸುವ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿವೆ. ಅಷ್ಟೇ ಅಲ್ಲದೇ ಟೆಲಿಕಾಂ ಇಲಾಖೆ ನಡೆಸಿದ ಲೆಕ್ಕಪರಿಶೋಧನೆಯಲ್ಲಿ ವಿಕಿರಣ ನಿಯಮಾವಳಿಗಳನ್ನು ಉಲ್ಲಂಘಿಸಿದ ಮೊಬೈಲ್ ಟವರ್‍ಗಳು ಎಂದು ಹೆಸರುಪಡೆದುಕೊಂಡಿರುವ ಸಂಸ್ಥೆಯಾಗಿದೆ!! ಹೀಗಿರಬೇಕಾದರೆ ಯಾವ ಮುಖಹೊತ್ತು ಪಟಾಕಿಯು ವಾಯುಮಾಲಿನ್ಯವನ್ನು ಸೃಷ್ಟಿ ಮಾಡುತ್ತೆ ಎಂದು ಹೇಳುತ್ತಾರೋ ನಾಕಾಣೆ!!

ಇದೀಗ, ಅನೇಕ ಗ್ರಾಹಕರು, ಹಿಂದೂ ಆಚರಣೆಯ ಮುಖ್ಯ ಭಾಗವೆನಿಸಿದ ಪಟಾಕಿಯನ್ನು ನಿಷೇಧದ ವಿಚಾರವಾಗಿ ಪ್ರಚಾರ ಮಾಡಿ ಬೂಟಾಟಿಕೆಯ ಮಾಹಿತಿಯನ್ನು ತೋರಿಸುತ್ತಿರುವ ಏರ್‍ಟೆಲ್ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಅದೆಷ್ಟೋ ಜನರು ಏರ್‍ಟೆಲ್ ನಿಂದ ಹೊರಗುಳಿಯುವ ಮೂಲಕ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ!!

ಅನೇಕ ಗ್ರಾಹಕರನ್ನು ಕಳೆದುಕೊಂಡ ನಂತರವೂ ಏರ್‍ಟೆಲ್ ಧರ್ಮಾಂಧತೆಗಳಿಂದ ಹಿಂದೆ ಸರಿಯಲು ನಿರಾಕರಿಸಿದ್ದು, ಆಕ್ರಮಣಕಾರಿಯಾದ ಕ್ರಮವನ್ನು
ಕೈಗೆತ್ತಿಕೊಂಡಿದೆ!! ಅಷ್ಟೇ ಅಲ್ಲದೇ, ಆಕ್ಷೇಪಾರ್ಹ ಟ್ವೀಟ್‍ಗಳನ್ನು ಏರ್‍ಟೆಲ್ ಪಿನ್ ಮಾಡಿ ಅದನ್ನು ಗೌರವಾರ್ಥ ಬ್ಯಾಡ್ಜ್ ಎಂದು ಧರಿಸಿಕೊಂಡು ತನ್ನ ದರ್ಪವನ್ನು ತೋರಿಸಿದೆ!!

ಇವೆಲ್ಲವೂ ಕೂಡ ಹಿಂದೂಗಳನ್ನು ಮತ್ತಷ್ಟು ಕೆರಳಿಸಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ!! ಆದರೆ, ಪ್ಯಾನಾಸಾನಿಕ್, ಟಾಟಾಪವರ್ ಹಾಗೂ ಇತರ ಸಂಸ್ಥೆಗಳು
ಹಿಂದೂಗಳಿಗೆ ಅವಮಾನವಾಗುತ್ತಿದೆ ಎಂದು ತಿಳಿದ ನಂತರ ತಮ್ಮ ಟ್ವೀಟ್‍ಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಏರ್‍ಟೆಲ್ ಮಾತ್ರ ಟ್ವೀಟ್‍ಗಳನ್ನು ಗೌರವದ ಸಂಕೇತ ಎಂದು ತಿಳಿದು, ಅದನ್ನು ಬ್ಯಾಡ್ಜ್ ಗಳಾಗಿ ಧರಿಸಿರುವುದು ಮಾತ್ರ ವಿಪರ್ಯಾಸ!!!

https://twitter.com/IAbhi_s/status/920717806022225920

ಮೂಲ:http://rightactions.in/2017/10/19/airtel-steps-up-offensive-against-hindus-loses-thousands-of-customers/

– ಅಲೋಖಾ

Tags

Related Articles

Close