ಪ್ರಚಲಿತ

ಶತ್ರು ದೇಶವಾದ ಚೀನಾ ಕೂಡಾ ಯಾಕೆ ಗುಜರಾತಿನಲ್ಲಿ ಬಿಜೆಪಿಯೇ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದೆ ಗೊತ್ತೇ?!

ಚೀನಾಕೂ ಬೇಕಿದೆ ಮೋದಿ!

ಬಹುಷಃ ಭಾರತವೊಂದೇ ಅಲ್ಲ, ಬದಲಿಗೆ ನೆರೆ ಹೊರೆಯ ರಾಷ್ಟ್ರಗಳೂ ಕೂಡ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರತದ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಂಡಿದೆಯಷ್ಟೇ! ಅಕಸ್ಮಾತ್ ಪ್ರಧಾನಿ ನರೇಂದ್ರ ಮೋದಿಯ ಮಾತುಗಳೇನಾದರೂ ನಿಜವೇ ಆಗಿದ್ದಲ್ಲಿ, ಕಾಂಗ‌್ರೆಸ್ ಪಕ್ಷ ಭಾರತೀಯ ಜನತಾ ಪಕ್ಷದ ಪ್ರಧಾನಿ ಮೋದಿಯನ್ನು ಸೋಲಿಸಲು ಅನುವು ಮಾಡಿಕೊಡಿ ಎಂದು ಪಾಕಿಸ್ಥಾನಕ್ಕೆ ಸುಪಾರಿ ಕೊಟ್ಟಿದ್ದು ನಿಜವೇ! ಈ ಒಂದು ವಿಚಾರಕ್ಕೆ ಬಲ ನೀಡಿದ್ದು, ಮನಮೋಹನ್ ಸಿಂಗ್ ರವರ ಹೇಳಿಕೆ! ಕಾಂಗ‌್ರೆಸ್ ನಾಯಕರು ರಹಸ್ಯವಾಗಿ ಪಾಕಿಸ್ಥಾನದ ಸರಕಾರವನ್ನು ಭೇಟಿ ಮಾಡಿದ್ದನ್ನು ಬಹಿರಂಗಗೊಳಿಸಿದ್ದರು!

ಆದರೆ, ಈಗ ಮತ್ತೊಂದು ರಾಷ್ಟ್ರ ಕೂಡ ಗುಜರಾತ್ ನ ಚುನಾವಣೆಯ ವಿಚಾರದಲ್ಲಿ ಪ್ರವೇಶ ಮಾಡಿದೆ! ಇದು ಬೇರಾವ ರಾಷ್ಟ್ರವೂ ಅಲ್ಲ, ಬದಲಿಗೆ ಮೋದಿಯವರು ದೋಕ್ಲಾಂ ವಿಚಾರದಲ್ಲಿ ಹೆಡೆ ಮುರಿ ಕಟ್ಟಿದ್ದ ರಾಷ್ಟ್ರ ಚೀನಾ!!! ಅಕಸ್ಮಾತ್ ಮೋದಿ ಸೋತರೆ, ಬರೀ ಭಾರತದ ಅಭಿವೃದ್ಧಿ ಕುಂಠಿತಗೊಳ್ಳುವುದು ಮಾತ್ರವಲ್ಲ, ಬದಲಾಗಿ ಚೀನಾಕೂ ಸಮಸ್ಯೆಯಾಗಲಿದೆ ಎಂಬುದು ಸ್ವತಃ ಚೀನಾವೇ ಅಭಿಪ್ರಾಯಪಟ್ಟಿದೆ!

ಇದನ್ನು, ಚೀನಾದ ಪ್ರಸಿದ್ಧ ಟಾಬ್ಲಾಯ್ಡ್ ನ್ಯೂಸ್ ಪೇಪರ್ ಆದ ‘The Global Times’ ಬಹಿರಂಗಪಡಿಸಿದೆ! ಭಾರತದ ಪ್ರಧಾನಿಯನ್ನು ಹೊಗಳಿದ ಈ ಪತ್ರಿಕೆ, GST ಯೆಂಬುದು ಭಾರತದ ಆರ್ಥಿಕತೆಯನ್ನು ಬಲಪಡಿಸಿದೆ ಎಂಬ ಅಭಿಪ್ರಾಯವನ್ನೂ ನೀಡಿದೆ!

ಪತ್ರಿಕೆ ಪ್ರಕಟಿಸಿದ ಮುಖ್ಯ ಅಂಶಗಳೇನು ಗೊತ್ತೇ?!

1. ಅಕಸ್ಮಾತ್ ಭಾರತೀಯ ಜನತಾ ಪಕ್ಷ ಗುಜರಾತಿನ ಚುನಾವಣೆಯಲ್ಲಿ ಗೆದ್ದರೆ, ಮೋದಿಯ ಸರಕಾರ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಪ್ರಾಶಸ್ತ್ಯ ಕೊಡುವುದರಿಂದ ಭಾರತದ ಆರ್ಥಿಕತೆ ಸಧೃಢವಾಗುವುದರ ಜೊತೆ, ಚೀನಾದ ಕಂಪೆನಿಗಳು ಚೀನಾ ಮತ್ತು ಭಾರತದ ವ್ಯಾಪಾರ ವಹಿವಾಟುಗಳನ್ನೂ ಸಹ ಸಧೃಢಗೊಳಿಸಬಹುದು!

2. ಚೈನಾದ ಪ್ರಾಡಕ್ಟ್ ಗಳು ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಹೆಚ್ಚಾಗಿ ಬೆಲೆ ಗಳಿಸುತ್ತಿರುವುದಲ್ಲದೇ, ಕ್ಸಿಯೋಮಿ ಮತ್ತು ಒಪ್ಪೋ ಕಂಪೆನಿಗಳ ಪ್ರಾಡಕ್ಟ್ ಗಳು ಅದೆಷ್ಟೋ ಲಾಭವನ್ನೂ ಚೀನಾಕೆ ಮಾಡಿಕೊಟ್ಟವು! ಆದ್ದರಿಂದ, ಭಾರತದ ಆರ್ಥಿಕತೆ ಸಧೃಢವಾದರೆ, ಚೀನಾಕೆ ಭಾರತದಲ್ಲಿ ಹೂಡಿಕೆ ಮಾಡುವ ಅವಕಾಶವಾಗಬಹುದಾಗಿದೆ.

3. ಅಕಸ್ಮಾತ್., ಗುಜರಾತಿನಲ್ಲಿ ಬಿಜೆಪಿ ಸೋತರೆ, ಉಳಿದೆಲ್ಲ ರಾಜ್ಯ ವಿಧಾನಸಭಾ ಚುನಾವಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ತದನಂತರ, ಮತ್ತೆ ಮೋದಿಯ ಸರಕಾರ ಬರದೇ ಹೋದರೆ, ದೇಶದ ಆರ್ಥಿಕ ಪ್ರಗತಿಗೆ ತಡೆಯಾಗುವುದಲ್ಲದೇ, ಭಾರತದಲ್ಲಿರುವ ಚೀನಾದ ಪ್ರಸ್ತುತ ಕಂಪೆನಿಗಳು ದಿವಾಳಿ ಏಳಲಿದೆ!

4. ಮೋದಿಯ ಅಭಿವೃದ್ಧಿ ಮಂತ್ರ ಒಂದಷ್ಟು ಮಂದಿಗೆ ಮಾರಕವಾದರೂ ಸಹ, ದೇಶದ ಪ್ರಗತಿಗೆ ಸಹಾಯ ವಾಗಬಲ್ಲಂತಹ ಕಾರ್ಯಸೂಚಿಗಳನ್ನು ಹೊಂದಿದೆ!

5. ಚುನಾವಣೆಯ ಫಲಿತಾಂಶ ಏನೇ ಆದರೂ ಕೂಡ, ಸಾರ್ವಜನಿಕರ ಹಿತಾಸಕ್ತಿಗೆ ದೊಡ್ಡ ಪರಿಣಾಮ ಬೀರಲಿದೆ!

6. ಚುನಾವಣೆಯಲ್ಲಿ ಮೋದಿಯ ಸರಕಾರ ಗೆದ್ದರೆ, ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ಕೈಗಾರಿಕೆಗಳಲ್ಲೂ ಸಹ ಉತ್ತಮವಾದ ಅಭಿವೃದ್ಧಿ ಕಂಡುಬರಲಿವುದಾದರೂ ಸಹ, ಮೋದಿಯ ಸರಕಾರ ಸಾರ್ವಜನಿಕರ ಅಭಿಪ್ರಾಯವನ್ನಾಲಿಸಲಿದೆ.

7. ಚೀನಾ ಇವತ್ತು ನಿಜಕ್ಕೂ ಭಾರತದ ಚುನಾವಣೆಗಳ ಮೇಲೆ ಗಮನ ಹರಿಸಬೇಕಿದೆ! ತದನಂತರ, ಅನುಗುಣವಾಗಿ, ತನ್ನ ಹೂಡಿಕೆಯನ್ನು ವಿಸ್ತರಿಸುವುದೋ ಬೇಡವೋ ಎಂಬ ಆಲೋಚನೆಯನ್ನೂ ಮಾಡಬೇಕಿದೆ. ಅಲ್ಲದೇ, ಧೀರ್ಘಾವಧಿ ಹೂಡಿಕೆಯಿಂದ ಚೀನಾದ ಲಾಭವೂ ಹೆಚ್ಚಾಗಲಿದೆ!

ಈ ಕಾರಣದಿಂದಾಗಿ, ಚೀನಾ ಕೂಡ ಗುಜರಾತ್ ಚುನಾವಣೆಯನ್ನು ತೀರಾ ಕೂಲಂಕಷವಾಗಿ ಪರೀಕ್ಷಿಸುತ್ತಲಿದೆ! ಗಮನಿಸುತ್ತಿದೆ! ಅಲ್ಲದೇ, ಫಲಿತಾಂಶಕ್ಕು ಮುನ್ನವೇ, ಗುಜರಾತ್ ಚುನಾವಣೆಯ ಬಗ್ಗೆ ಅಭಿಪ್ರಾಯ ಪಟ್ಟಿರುವ ಚೀನಾ, ‘ಗುಜರಾತ್ ನಲ್ಲಿ 1998 ರಿಂದ ಬಿಜೆಪಿಯೇ ಇದೆ! ಗುಜರಾತ್ ಭಾರತದ
ಪ್ರಧಾನಿಯ ತವರು ಕೂಡ! 12 ವರ್ಷಗಳ ಕಾಲ, ಮೋದಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು’ ಎಂದಿರುವ ಚೀನಾದ ಪತ್ರಿಕೆ ‘ಮೋದಿ’ ಎಂಬುದನ್ನೇ
ವಿಷಯವಸ್ತುವಾಗಿ ತೆಗೆದುಕೊಂಡಿರುವುದು ನಿಜಕ್ಕೂ ಅಚ್ಚರಿಯೇ!

– ಪೃಥು ಅಗ್ನಿಹೋತ್ರಿ

Tags

Related Articles

Close