ಪ್ರಚಲಿತ

ಸರಕಾರಿ ಬಸ್‍ಗಳ ಮೇಲೆ ಬರೆದಿರುವ ಬರ ಪರಿಹಾರದ ಹಣ ಕೇಂದ್ರ ಸರಕಾರದ್ದು! ನಮ್ಮಿಂದ ತಪ್ಪಾಗಿದೆ! : ಕಾಗೋಡು ತಿಮ್ಮಪ್ಪ!!!

ಕೂತಾಗ ನಿಂತಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಬಯ್ಯುವ ಸಿದ್ದರಾಮಯ್ಯ ಸರಕಾರಕ್ಕೆ ನಿಜವಾಗಿಯೂ ಮಾನ, ಮರ್ಯಾದೆ ಎಂಬುವುದು ಸ್ವಲ್ಪವಾದರೂ ಇದೆಯಾ ಎಂಬುವುದನ್ನು ಕರ್ನಾಟಕದ ಜನತೆ ಪ್ರಶ್ನೆ ಮಾಡಬೇಕಾದ ಕಾಲ ಒದಗಿ ಬಂದಿದೆ. `ಬಡವರ, ಹಿಂದುಳಿದವರ, ದಲಿತರ ಕೆಲಸ ಮಾಡಲು 56 ಇಂಚಿನ ಎದೆ ಬೇಕಾಗಿಲ್ಲ, ಮಾನವೀಯ ಹೃದಯವಿದ್ದರೆ ಸಾಕು…’ ಎಂದು ಮೈಯ್ಯಲ್ಲಿ ದೆವ್ವ ಬಂದಂತೆ ಮಾತಾಡಿದ ಸಿದ್ದರಾಮಯ್ಯ ರೈತರಿಗೆ ಬರ ಪರಿಹಾರ ನೀಡಿರುವುದು ಯಾರ ಹಣ ಎಂಬುವುದರ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ.

ಅಯ್ಯೋ ಸಿದ್ದರಾಮಯ್ಯ…. ಕೇಂದ್ರ ಸರಕಾರದ ಹಣದಿಂದ ರೈತರಿಗೆ ಬರ ಪರಿಹಾರ ನೀಡಿ, ತನ್ನ ಕಿಸೆಯಿಂದ ತೆಗೆದುಕೊಟ್ಟಂತೆ ಮಾತಾಡ್ತೀರಲ್ವಾ… ನಿಮಗೆ
ಖಂಡಿತವಾಗಿಯೂ ನಾಚಿಕೆಯಾಗುವುದಿಲ್ವಾ..? ಸಿದ್ದರಾಮಯ್ಯನಿಗೆ ಮೋದಿ ಬಗ್ಗೆ ಮಾತಾಡಲು ಯಾವ ಹಕ್ಕಿದೆ… ಮೋದಿ ಸರಕಾರ ನೀಡಿದ ಹಣದಿಂದ ರೈತರಿಗೆ ಪರಿಹಾರ ನೀಡಿ ತನ್ನದೇ ಹಣ ಎಂದು ಬಿಂಬಿಸಿ ಮುಂದಿನ ಬಾರಿ ಎಲೆಕ್ಷನ್ ಗೆಲ್ಲಲು ತಯಾರಿ ನಡೆಸುತ್ತಿರುವ ಸಿದ್ದರಾಮಯ್ಯನಿಗೆ ರಾಜ್ಯ ಸರಕಾರದಿಂದ ರೈತರಿಗೆ ನಯಾಪೈಸೆ ಕೊಡಲಾಗಲಿಲ್ಲ. ಯಾರದ್ದೋ ದೊಡ್ಡು ಎಲ್ಲಮ್ಮನ ಜಾತ್ರೆ ಅಂದ್ರೆ ಅದಕ್ಕೆ ಸಿದ್ದುನ ತುಘಲಕ್ ಸರಕಾರ ಸರಿಯಾಗಿ ಹೊಂದುತ್ತೆ…

ಸಿದ್ದರಾಮಯ್ಯ ನಿನ್ನ ಬಂಡವಾಳವನ್ನು ಕೊನೆಗೂ ಬಯಲು ಮಾಡಿದ್ದು ಯಾರು ಗೊತ್ತಾ ನಿನ್ನದೇ ಸರಕಾರದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ. ಕೇಂದ್ರದ
ಹಣದಿಂದ ರೈತರ ಬರ ಪರಿಹಾರ ನೀಡಿದ ಕರ್ನಾಟಕದ ಕಾಂಗ್ರೆಸಿಗರೇ ಬಸ್ಸಲ್ಲಿ, ಪೇಪರಲ್ಲಿ, ಟಿವಿಯಲ್ಲಿ ತನ್ನದೇ ಕಿಸೆಯಿಂದ ಹಣ ಕೊಟ್ಟಂತೆ ಜಾಹೀರಾತು
ನೀಡ್ತೀರಲ್ವಾ ಯಾರಪ್ಪನ ಹಣದಿಂದ…? ಇಂಥ ಸರಕಾರ ಯಾವಾಗ ತೊಲಗುತ್ತೋ ಎಂದು ಜನರು ದೇವರಲ್ಲಿ ಮೊರೆ ಇಡುವ ಕಾಲ ಬಂದಿದೆ…

ಕಾಗೋಡು ತಿಮ್ಮಪ್ಪ ತನ್ನ ಸರಕಾರದ ಬಂಡವಾಳ ಬಯಲು ಮಾಡಿದ್ದು ಹೀಗೆ….!!!

ಕಳೆದ ವರ್ಷ ಬರ ಪರಿಹಾರ ಸಂಬಂಧ ರಾಜ್ಯ ಸರಕಾರ ಹಣ ನೀಡಿಲ್ಲ, ಬದಲಾಗಿ ಕೇಂದ್ರ ಸರಕಾರ ನೀಡಿದ್ದ ಅನುದಾನದಲ್ಲಿ ಹೊಂದಿಸಿಕೊಂಡು ಪರಿಹಾರ
ನೀಡಲಾಗಿದೆ ಎಂದು ಖುದ್ದಾಗಿ ಕಾಗೋಡು ತಿಮ್ಮಪ್ಪ ತಪ್ಪೊಪ್ಪಿಕೊಂಡಿದ್ದಾರೆ…

ಕೊನೆಗೂ ಸತ್ಯ ಒಪ್ಪಿಕೊಂಡ ಕಾಗೋಡು ತಿಮ್ಮಪ್ಪನಿಗೆ ಒಂದು ಧನ್ಯವಾದ ಹೇಳಲೇ ಬೇಕು. ಯಾಕೆಂದರೆ ಈ ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲಿ ಸುಳ್ಳು ಹೇಳುತ್ತಾ ಮೋದಿಗೆ ವೈಯಕ್ತಿಕವಾಗಿ ನಿಂದಿಸಿದ್ದು ಮಾತ್ರ… ಮೋದಿಯ ಮನ್ ಕೀ ಬಾತ್‍ನಿಂದ 10 ಕೋಟಿ ಲಾಭ ಬಂದರೆ, ಸಿದ್ದರಾಮಯ್ಯನ ಕಾಮ್‍ಕೀ ಬಾತ್‍ನಿಂದ ರಾಜ್ಯ ಸರಕಾರಕ್ಕೆ 17 ಕೋಟಿ ನಷ್ಟ… ಇದೂ ಕೂಡಾ ಕೇಂದ್ರ ಸರಕಾರದ್ದೇ ಹಣದ ದುರುಪಯೋಗ ಆಗಿರಲೂಬಹುದು…

ಕಾಗೋಡು ತಿಮ್ಮಪ್ಪ ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿ, ಕಳೆದ ವರ್ಷ ಮುಂಗಾರಿನ ಬೆಳೆ ನಷ್ಟಕ್ಕೆ ಸಂಬಂಧಿಸಿ ಕೇಂದ್ರದಿಂದ 1700 ಕೋಟಿ ರೂ. ನೆರವಿನಲ್ಲಿ 1635 ಕೋಟಿ ರೂ. ಹಣವನ್ನು 23.31 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ… ಹಿಂಗಾರು ಬೆಳೆ ನಷ್ಟಕ್ಕೆ 700 ಕೋಟಿ ರೂ. ಕೇಂದ್ರದ ನೆರವಿನಲ್ಲಿ 639 ಕೋಟಿ ರೂ.ಗಳನ್ನು 8.98 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಹಣ ನಿಜವಾಗಿಯೂ ರೈತರಿಗೆ ಸಿಕ್ಕಿದೆಯೋ ಅಥವಾ ಎಷ್ಟು ಹಣ ಕಾಂಗ್ರೆಸಿಗರ ಹೊಟ್ಟೆ ಸೇರಿದೆಯೋ ಆ ದೇವರಿಗೇ ಗೊತ್ತು.

ಕೇಂದ್ರದ ಪೂರ್ತಿ ಹಣವನ್ನೂ ಖರ್ಚು ಮಾಡಲಾಗದ ಸಿದ್ದರಾಮಯ್ಯ ಸರಕಾರಕ್ಕೆ ರೈತರ ಪರವಾಗಿ ಮಾತಾಡಲು ನಾಚಿಕೆಯಾಗುವುದಿಲ್ಲವೇ.. ಫಲಾನುಭವಿಗಳು ನೀಡಿದ ಮಾಹಿತಿಯಲ್ಲಿನ ಕೊರತೆಯಿಂದ ಒಂದಷ್ಟು ಪ್ರಮಾಣದ ಹಣ ಉಳಿದಿದ್ದು ಅದನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಕಾಗೋಡು ಹೇಳಿದ್ದಾರೆ. ಅಲ್ಲಿ ರೈತರು ಸಾಯ್ತಾ ಇರುವಾಗ ಅವರನ್ನು ಗುರುತಿಸಿ ಪರಿಹಾರ ನೀಡಲಾಗದ ಸಿದ್ದು ಸರಕಾರಕ್ಕೆ ಎಷ್ಟು ಕಠಿಣ ಪದಗಳಿಂದ ಬೈಯ್ದರೂ ಕಮ್ಮಿಯೇ…

ಬರಗಾಲಕ್ಕೆ ರಾಜ್ಯ ಸರಕಾರ ವ್ಯಯಿಸಿದ್ದ ಹಣವನ್ನು ಕೇಂದ್ರದಿಂದ ಬಂದ ಹಣದಲ್ಲಿ ವಾಪಸು ಪಡೆಯಲಾಗಿದ್ದು ರಾಜ್ಯ ಸರಕಾರದಿಂದ ನಯಾಪೈಸೆಯನ್ನೂ ನೀಡಿಲ್ಲ ಎಂದು ಕಾಗೋಡು ಸತ್ಯ ಒಪ್ಪಿಕೊಂಡಿರುವುದರಿಂದ ಸಿದ್ದರಾಮಯ್ಯ ಸರಕಾರದ ಬಂಡವಾಳ ಬಯಾಲಾಗಿದೆ.

ಪ್ರತೀ ರಾಜ್ಯ ಸರಕಾರಗಳೂ ರೈತರ ಕಾಳಜಿಯನ್ನು ವಹಿಸುತ್ತವೆ. ರಾಜ್ಯ ಸರಕಾರದ ಸಿಂಹಪಾಲನ್ನು ಇಟ್ಟು ಅದಕ್ಕೆ ಕೇಂದ್ರದ ಹಣವನ್ನೂ ಸೇರಿಸಿ ರೈತರಿಗೆ
ಕೊಡುವುದು ಇದುವರೆಗೆ ಬಂದ ವಾಡಿಕೆ. ಆದರೆ ಸಿದ್ದು ಮಾತ್ರ ಯಾವುದೇ ಹಣವನ್ನು ನೀಡದೆ ರೈತರ ಎದುರು ಮೊಸಳೆ ಕಣ್ಣೀರು ಸುರಿಸುತ್ತಾರೆ. ಇಲ್ಲಿ ಮೊತ್ತೊಂದು ವಿಚಾರವನ್ನು ತಿಮ್ಮಪ್ಪ ಹೇಳಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿ, ಅನಾವೃಷ್ಟಿ ಆಗಿದ್ದು, ಮುಂದಿನ ಉಪಸಮಿತಿ ಸಭೆಯಲ್ಲಿ ಈ ಕುರಿತು ಮಾಹಿತಿ ತರಿಸಿ ಅಗತ್ಯಬಿದ್ದರೆ ಕೇಂದ್ರದಿಂದ ಹೆಚ್ಚಿನ ನೆರವು ಕೇಳಲಾಗುವುದು ಎಂದಿದ್ದಾರೆ. ರಾಜ್ಯ ಸರಕಾರ ವತಿಯಿಂದ ನಯಾಪೈಸೆಯನ್ನೂ ಕೊಡುವ ಅಂದಾಜಿಲ್ಲ. ನಾವು ಕಟ್ಟುವ ತೆರಿಗೆ ಹಣ ಎಲ್ಲಿಗೆ ಹೋಗುತ್ತದೆ ಎಂದು ಜನತೆ ಪ್ರಶ್ನೆ ಕೇಳುವ ಕಾಲ ಬಂದಿದೆ.

ಕಾಗೋಡು ತಿಮ್ಮಪ್ಪ ಪ್ರಕಾರ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲವಂತೆ… ಈ ಬಾರಿ ಭಾರೀ ಮಳೆ ಬಂದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ
ಇಲ್ಲವಂತೆ.. ಈ ಹೇಳಿಕೆಯನ್ನು ಜನರು ಗಂಭೀರವಾಗಿ ಸ್ವೀಕರಿಸಿ ರಾಜ್ಯದ ಯಾವ ಭಾಗದಲ್ಲಿ ನೀರಿನ ಸಮಸ್ಯೆ ಇದೆಯೋ ಆ ಭಾಗದ ಜನರು ಸರಕಾರವನ್ನು
ನೇರವಾಗಿ ಪ್ರಶ್ನಿಸಿ ಸರಕಾರದ ಚಳಿ ಬಿಡಿಸಬೇಕು…

ಇದುವರೆಗೆ ಮೋದೀಜಿ ರಾಜ್ಯ ಸರಕಾರಕ್ಕೆ ಕೊಟ್ಟ ಬರ ಪರಿಹಾರ ನಿಧಿಯನ್ನು ರಾಜ್ಯ ಸರಕಾರ ವಿನಿಯೋಗ ಮಾಡಿಕೊಂಡಿದ್ದು ಬಿಟ್ರೆ ಸಿದ್ದರಾಮಯ್ಯ ಸರಕಾರ ತನ್ನ ಬೊಕ್ಕಸದಿಂದ ನಯಾಪೈಸೆಯನ್ನೂ ರಾಜ್ಯದ ಜನತೆಯ ಕಲ್ಯಾಣಕ್ಕೆ ಬಿಚ್ಚಿಲ್ಲ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಹಾಗಾದರೆ ತೆರಿಗೆ ಹಣ ಎಲ್ಲಿಗೆ ಹೋಗುತ್ತದೆ?

ಮೋದಿ ಸರಕಾರ ರಾಜ್ಯಕ್ಕೆ ಏನೂ ಕೊಟ್ಟಿಲ್ಲ ಎಂದು ಸಿಕ್ಕಸಿಕ್ಕಲ್ಲಿ ಮೋದೀಜಿಯನ್ನು ಬೈಯ್ಯುತ್ತಾ ಅವರ ತೇಜೋವಧೆ ಮಾಡುತ್ತಿರುವ ಸಿದ್ದರಾಮಯ್ಯ
ಮಾಡುತ್ತಿರುವುದೇನು? ಇಷ್ಟೆಲ್ಲಾ ಆದ ಮೇಲೂ ಯಾವ ಮುಖ ಹೊತ್ತು ಜನರಲ್ಲಿ ಓಟು ಕೇಳುತ್ತದೆ.

ಇತ್ತೀಚೆಗೆ ಸಿದ್ದರಾಮಯ್ಯ ಹೇಳಿಕೆಯೊಂದನ್ನು ನೀಡುತ್ತಾ ಕೇಂದ್ರ ರೈತರ ಬರ ಪರಿಹಾರಕ್ಕಾಗಿ ನಯಾಪೈಸೆ ನೀಡಿಲ್ಲ ರಾಜ್ಯ ಸರಕಾರದ ವತಿಯಿಂದ 300 ಕೋಟಿ ಹಣವನ್ನು ಬರ ಪರಿಹಾರ ವಿತರಿಸಲಾಗಿದೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದರು.

ಛೇ ಎಂಥಾ ಕಾಲ ಬಂತಪ್ಪಾ…. ಮುಂದಿನ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರಕಾರವನ್ನು ಮಕಾಡೆ ಮಲಗಿಸದಿದ್ದರೆ ಇಡೀ ರಾಜ್ಯದ ಜನತೆಗೆ ಖಂಡಿತಾ
ಉಳಿಗಾಲವಿಲ್ಲ..!

-ಚೇಕಿತಾನ

Tags

Related Articles

Close