ಪ್ರಚಲಿತ

ಸಿಎಂ ತವರಲ್ಲಿ ಅಮಿತ್ ಶಾ ಗುಡುಗಿಗೆ ಬೆಚ್ಚಿ ಬಿದ್ದ ಕಾಂಗ್ರೆಸ್… ಕಾಂಗ್ರೆಸ್ ತಂತ್ರಕ್ಕೆ ಮಣಿಯದೆ ಚಾಮುಂಡಿ ಬೆಟ್ಟಕ್ಕೆ ತೆರಳಿದ ಶಾ ಭಾಷಣದಲ್ಲಿ ಏನಂದ್ರು ಗೊತ್ತಾ..?!

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಮೈಸೂರಿಗೆ ಆಗಮಿಸಿದ್ದಾರೆ. ಕಾಂಗ್ರೆಸ್ ಪ್ರೇರಿತ ಕನ್ನಡ ಸಂಘಟನೆಗಳಿಂದ ಬಂದ್ ಘೋಷಣೆಯಾಗಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿದ್ದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಆಗಮಿಸಿ ಕಾಂಗ್ರೆಸ್‍ಗೆ ಸವಾಲೆಸೆದಿದ್ದಾರೆ. ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಬಾರದು ಎಂಬ ಕಾಂಗ್ರೆಸ್‍ನ ಕುತಂತ್ರಿ ನೀತಿಯನ್ನು ಮಣಿಸಿದ್ದ ರಾಜ್ಯ ಭಾರತೀಯ ಜನತಾ ಪಕ್ಷ ಇಂದು ಅಮಿತ್ ಶಾ ಕರ್ನಾಟಕ ಯಾತ್ರೆಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಾಡಿದ್ದಾರೆ.

ಚಾಮುಂಡಿ ದರ್ಶನ ಪಡೆದ ಚಾಣಾಕ್ಯ…

ಈ ಮಧ್ಯೆ ಹೇಗಾದರೂ ಸರಿ ಅಮಿತ್ ಶಾರನ್ನು ಚಾಮುಂಡಿ ಬೆಟ್ಟಕ್ಕೆ ಹತ್ತದ ಹಾಗೆ ನೋಡಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿತ್ತು ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ. ಹೇಳಿ ಕೇಳಿ ಮೈಸೂರು ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯರ ತವರು ಕ್ಷೇತ್ರ. ಅಲ್ಲಿ ಭಾರತೀಯ ಜನತಾ ಪಕ್ಷದ ಆಟ ನಡೆಯಬಾರದು ಎಂಬ ಹಠ ಹಠವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯರದ್ದು. ಆದರೆ ಇದನ್ನೆಲ್ಲಾ ಮೆಟ್ಟಿ ನಿಂತ ಭಾರತೀಯ ಜನತಾ ಪಕ್ಷ ಇಂದು ಬೃಹತ್ ಪರಿವರ್ತನಾ ಯಾತ್ರೆಯನ್ನು ನಡೆಸುತ್ತಿದೆ.

ಶತಾಯ ಗತಾಯ ಅಮಿತ್ ಶಾ ಚಾಮುಂಡಿ ಬೆಟ್ಟಕ್ಕೆ ತೆರಳಬಾರದು ಎಂದು ಕಾಂಗ್ರೆಸ್ಸಿಗರು ಅದೆಷ್ಟೇ ಹಠ ಹಿಡಿದಿದ್ದರೂ ಅಮಿತ್ ಶಾ ಅವರ ಕಾರ್ಯಕ್ರಮವನ್ನು ತಡೆಯಲು ಸ್ವತಃ ಕಾಂಗ್ರೆಸ್ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಮಧ್ಯಾಹ್ನದ ಹೊತ್ತಿಗೆ ಅಮಿತ್ ಶಾ ಅವರ ಚಾಮುಂಡಿ ದೇವಿಯ ದರ್ಶನ ಕಾರ್ಯಕ್ರಮ ರದ್ದು ಎಂಬ ಮಾಹಿತಿಗಳೇ ಇತ್ತು. ಆದರೆ ಅಮಿತ್ ಶಾ ಆ ಎಲ್ಲಾ ಊಹಾ ಪೋಹಗಳನ್ನು ಎದುರಿಸಿ, ತಾನು ಚಾಮುಂಡಿ ಬೆಟ್ಟಕ್ಕೆ ತೆರಳಿಯೇ ಸಿದ್ದ ಎಂದು ಕಂಕಣ ತೊಟ್ಟು ಬೆಟ್ಟಕ್ಕೆ ತೆರಳಿ ಚಾಮುಂಡಿ ದೇವಿಯ ದರ್ಶನವನ್ನು ಪಡೆದಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಚಾಣಾಕ್ಯ…

ಕಾಂಗ್ರೆಸ್ ನಡೆಸುತ್ತಿರುವ ಕುತಂತ್ರೀ ಬುದ್ಧಿಗಳನ್ನು ಧಿಕ್ಕರಿಸಿದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಮೈಸೂರಿನ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾಡಿದ ಭಾಷಣದಲ್ಲಿ ಅಬ್ಬರಿಸಿದ್ದರು. ಈ ಮೂಲಕ ನೀಚ ಬುದ್ಧಿ ಅನುಸರಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಚಾಣಾಕ್ಯ ತೀವ್ರ ಸವಾಲನ್ನೇ ಎದುರಿಸಿದ್ದಾರೆ.

ಶಾ ಹೇಳಿದ್ದು…

“ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ. ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷ ಬಹುಮತ ಪಡೆದು ಅಧಿಕಾರವನ್ನು ಹಿಡಿಯುತ್ತದೆ. ಇನ್ನು ಭಾರತೀಯ ಜನತಾ ಪಕ್ಷವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಂದ್ ಘೋಷಣೆ ಮಾಡಿ ಯಾತ್ರೆ ತಡೆಯುವುದು ಕಾಂಗ್ರೆಸ್ ಹುನ್ನಾರ. ಚಾಮುಂಡೇಶ್ವರಿ ದೇವಿ ಅಸುರರ ಸಂಹಾರದಲ್ಲಿ ತೊಡಗಿರುವಳು. ಅವಳು ರಾಕ್ಷಸರನ್ನು ಮಟ್ಟಹಾಕಿದವಳು. ಇಂದು ಅವಳ ಪುಣ್ಯ ಕೇತ್ರದಲ್ಲಿ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ಇದು ತಾಯಿ ಚಾಮುಂಡಿ ನೆಲೆಯಾಗಿರುವ ಪವಿತ್ರ ಮಣ್ಣು. ಇಲ್ಲಿಂದ ಭ್ರಷ್ಟಾಚಾರಿ ಹಾಗೂ ದುರಹಂಕಾರಿ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ. ಪರಿವರ್ತನಾ ಯಾತ್ರೆ ಬಿಎಸ್‍ವೈ ನೇತೃತ್ವದಲ್ಲಿ 8000 ಕಿಲೋ ಮೀಟರ್ ಸಾಗಿ ಇಂದು ಮೈಸೂರಿಗೆ ತಲುಪಿದೆ. ಈ ಯಾತ್ರೆ ಸರ್ಕಾರದ ಮುಖ್ಯಮಂತ್ರಿಯನ್ನು ಬದಲಾಯಿಸಲು ಅಲ್ಲ. ಬದಲಾಗಿ ರೈತರ ಸ್ಥಿತಿಯನ್ನು ಹಾಗೂ ಅಭಿವೃದ್ಧಿಯ ವೇಗವನ್ನು ಬದಲಾಯಿಸಲು ಈ ಯಾತ್ರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯಾತ್ರೆಯನ್ನು ವಿಫಲಗೊಳಿಸಲು ಹಲವಾರು ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ ಜನರೇ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ.

ಮುಖ್ಯಮಂತ್ರಿಯ ಯೋಚನೆಗಳನ್ನೇ ತಲೆಬುಡ ಮಾಡಿ ಅವರ ಯೋಜನೆಯನ್ನು ವಿಫಲಗೊಳಿಸಿದ್ದಾರೆ. ಯಾತ್ರೆ ಮೂಲಕ ಜನರನ್ನು ಸಂಪರ್ಕಿಸಲಾಗಿದೆ. ಶಾಸಕರನ್ನು ಬದಲಾಯಿಸಬೇಕಾಗಿದೆಯಲ್ಲವೇ… ಪರಿವರ್ತನೆ ಅಂದರೆ ಶಾಸಕ ಹಾಗೂ ಮುಖ್ಯಮಂತ್ರಿಯನ್ನು ಬದಲಾಯಿಸುವುದಲ್ಲವೇ..? ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಶಕ್ತಿಯನ್ನು ತಡೆಯಲು ಯಾರಿಂದಲೂ ಸಧ್ಯವಿಲ್ಲ. ಬಂದ್ ಹೊರತಾಗಿಯೂ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಆಗಮಿಸಿದ ಎಲ್ಲಾ ಕೆಚ್ಚೆದೆಯ ಕಾರ್ಯಕರ್ತರಿಗೂ ಧನ್ಯವಾದಗಳು. ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡೋದಿಲ್ಲ.

ರಾಜ್ಯದಲ್ಲಿ 20ಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆಯಾಗಿದೆ. ಎಸ್‍ಡಿಪಿಐ ಹಾಗೂ ಪಿಎಫ್‍ಐ ವಿರುದ್ಧದ ಕೇಸ್‍ನ್ನು ಕಾಂಗ್ರೆಸ್ ಸರ್ಕಾರದಿಂದ ವಾಪಾಸ್ ಪಡೆಯಲಾಗಿದೆ. ಇದರಿಂದಲೇ ನಮ್ಮ ಕಾರ್ಯಕರ್ತರನ್ನು ನಾವು ಕಳೆದುಕೊಂಡಿದ್ದೇವೆ. ಮುಂದಿನದ್ದು ನಮ್ಮ ಸರ್ಕಾರವಾಗಿರುತ್ತದೆ. ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಿದ ಹಂತಕರನ್ನು ಕಠಿಣ ಶಿಕ್ಷೆಗೆ ಒಳಪಡಿಸುತ್ತದೆ. ಅವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸುತ್ತೇವೆ. ನಾನು ಇಲ್ಲಿಗೆ ಸಿಎಂಗೆ ಸವಾಲೆಸೆಯಲು ಬಂದಿದ್ದೇನೆ. ಸಿದ್ದರಾಮಯ್ಯ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಸಿದ್ಧರಾಮಯ್ಯ. ನೂರಾರು ಹಗರಣಗಳನ್ನು ಮಾಡಿದ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯ. ವಾಚ್, ಅರ್ಕಾವತಿ, ಡಿನೋಟಿಫಿಕೇಶನ್,ಗಣಿ ಸಹಿತ ಅನೇಕ ಹಗರಣಗಳು ಸಿದ್ದರಾಮಯ್ಯ ನಡೆಸಿದ್ದಾರೆ. ಮೋದಿ ನೀಡುತ್ತಿರುವ ಅನ್ನಭಾಗ್ಯದ ಅಕ್ಕಿಯಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ” ಎಂದು ಶಾ ಆರ್ಭಟಿಸಿದರು.

ಜಾತಿಗಳನ್ನು ಎತ್ತಿಕಟ್ಟಿದ ಮುಖ್ಯಮಂತ್ರಿ…

“ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜಾತಿ ಜಾತಿಗಳನ್ನು ಎತ್ತಿ ಕಟ್ಟುತ್ತಿದೆ. ತಾನು ಹಿಂದುಳಿದ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಆದರೆ ಅದೇ ಹಿಂದುಳಿದ ವರ್ಗದ ಜನರನ್ನು ಅವರು ಕಡೆಗಣಿಸಿದ್ದಾರೆ. ಹಿಂದುಳಿದವರಿಗೆ ಬಲ ತುಂಬಲು ಬಿಜೆಪಿ ಸನ್ನದ್ಧವಾಗಿದೆ. ಮುಸ್ಲಿಮರ ಮಹಿಳೆಯರಿಗಾಗಿ ಮೋದಿ ತ್ರಿವಳಿ ತಲಾಖ್ ರದ್ದು ಮಾಡಿದ್ದರೆ ಕಾಂಗ್ರೆಸ್ ನಾಯಕರು ಅದನ್ನು ವಿರೋಧಿಸುತ್ತಾರೆ. ಕಾಂಗ್ರೆಸ್ ಎಷ್ಟು ವಿರೋಧಿಸಿದರೂ ತಿದ್ದುಪಡಿಯನ್ನು ಜಾರಿಗೊಳಿಸುವುದು ಖಚಿತ. ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರಕಿಸಲು ಬದ್ಧವಾಗಿದೆ. ಮುಖ್ಯಮಂತ್ರಿಗಳು ದೆಹಲಿಗೆ ಬಂದು ಪತ್ರಿಕಾಗೋಷ್ಟಿ ಮಾಡಿದ್ರು.

ರಾಜ್ಯಕ್ಕೆ ಮೋದಿ ಸರ್ಕಾರ ಏನು ನೀಡಿದೆ ಅಂತ ಕೇಳಿದ್ರು. ಅಣ್ಣಾ ಸಿದ್ದರಾಮಯ್ಯ ನಿಮ್ಮನ್ನು ಕೇಳೋಕ್ಕೆ ಇಷ್ಟ ಪಡುತ್ತೇನೆ. ಯುಪಿಎ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು 88,538 ಕೋಟಿಗಳಷ್ಟು, ಆದರೆ ಮೋದಿ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು 2,19,506 ಕೋಟಿ ರೂಪಾಯಿ. ಮಾತ್ರವಲ್ಲದೆ ಒಂದು ಲಕ್ಷ 30000 ಕೋಟಿಯ ಲೆಕ್ಕ ನೀವು ಕೊಡಬೇಕಾಗಿದೆ. ಕಾಂಗ್ರೆಸ್ 60 ವರ್ಷದಲ್ಲಿ ಕೊಡದಷ್ಟು ಹಣವನ್ನು ಮೋದಿ ಸರ್ಕಾರ ನೀಡಿದೆ. ಹಾಗಾದ್ರೆ ಆ ಹಣಗಳು ಎಲ್ಲಿ ಹೋಯಿತು. ಆ ಹಣಗಳು ಎಲ್ಲಿಗೆ ಹೋಯಿತು ಎಂದು ನಾನು ಹೇಳಲಾ. ಹಿಂದೆ ಶೀಟ್ ಹಾಕಿದ್ದ ಕಾಂಗ್ರೆಸ್ ಶಾಸಕರ ಮನೆಗಳು ಇಂದು 3-4 ಅಂತಸ್ಥಿನ ಮನೆಗಳಾಗಿವೆ. ಇದುವೇ ಕಾಂಗ್ರೆಸ್ ಮಾಡಿದ ಸಾಧನೆಯಾಗಿದೆ. ಸಿದ್ದರಾಮಯ್ಯನವರೇ ನಿಮ್ಮ ಹಳ್ಳಿ ಅಭಿವೃದ್ಧಿಯಾಗಿದೆಯಾ? ಹಾಗಾದ್ರೆ ನೀವು ಇಷ್ಟು ವರ್ಷ ಮಾಡಿದ್ದೇನು?” ಎಂದು ನೇರವಾಗಿ ಮುಖ್ಯಮಂತ್ರಿಗಳನ್ನೇ ಅಮಿತ್ ಶಾ ಪ್ರಶ್ನಿಸಿದರು.

ಯಡಿಯೂರಪ್ಪನವರನ್ನು ಹಾಡಿ ಹೊಗಳಿದ ಅಮಿತ್ ಶಾ…

ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪನವರನ್ನು ಅಮಿತ್ ಶಾ ಹಾಡಿ ಹೊಗಳಿದ್ದಾರೆ. ಆರಂಭದಲ್ಲಿ ಮುಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ಎಂದು ಸಂಭೋದಿಸಿ ತಮ್ಮ ಭಾಷಣವನ್ನು ಆರಂಭಿಸಿದ್ದಾರೆ. “ಬಿಎಸ್ ಯಡಿಯೂರಪ್ಪ ಅದ್ಭುತ ಕಾರ್ಯಕ್ರಮವನ್ನೇ ಮಾಡಿದ್ದಾರೆ. ಇದು ಈವರೆಗೆ ಎಲ್ಲೂ ಆಗಿಲ್ಲ. ಕಾಂಗ್ರೆಸ್‍ನ ಕುತಂತ್ರೀ ನೀತಿಯ ಹೊರತಾಗಿಯೂ ಬಿಎಸ್‍ವೈ ತಂಡ ಮಾಡಿದ ಸಾಧನೆ ಅಮೋಘ. ಈ ಸಾಧನೆಗಾಗಿ ನಾನು ಯಡಿಯೂರಪ್ಪನವರನ್ನು ಅಭಿನಂದಿಸುತ್ತೇನೆ” ಎಂದು ಬಣ್ಣಿಸಿದ್ದಾರೆ.

ಅಮಿತ್ ಶಾ ಅವರ ಇಂದಿನ ಸವಾಲಿನ ಯಾತ್ರೆಯು ಅದ್ಭುತವಾಗಿ ನಡೆದಿದ್ದು, ಈ ಯಾತ್ರೆಯ ವಿರುದ್ಧ ನಡೆದಿದ್ದ ಕರ್ನಾಟಕ ಬಂದ್ ಎಂಬ ನಾಟಕ ಬಿಜೆಪಿ ಯಾತ್ರೆಯ ಎದುರು ಠುಸ್ ಪಟಾಕಿಯಾಗಿದೆ. ಶಾ ಅಬ್ಬರದಿಂದ ನಲುಗಿರುವ ಕಾಂಗ್ರೆಸ್ ಪಕ್ಷ ಅಮಿತ್ ಶಾ ಹೇಳಿರುವ ಮಾತುಗಳ ವಿರುದ್ಧ ಮಾತನಾಡಲು ಪದಗಳನ್ನು ಜೋಡಿಸುತ್ತಿದೆ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಇಂದಿನ ಶಾ ಯಾತ್ರೆಯು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲಲಿದೆ ಎಂಬುವುದನ್ನು ಸಾರಿ ಸಾರಿ ಹೇಳುತ್ತಿತ್ತು.

-ಸುನಿಲ್ ಪಣಪಿಲ

Tags

Related Articles

Close