ಅಂಕಣಪ್ರಚಲಿತ

ಸ್ಫೋಟಕ ಸುದ್ದಿ!! ಉತ್ತರ ಪ್ರದೇಶದಲ್ಲಿ ಅಕ್ರಮ 2682 ಮದರಸಾಗಳ ಮಾನ್ಯತೆ ರದ್ದು! ಐತಿಹಾಸಿಕ ನಿರ್ಧಾರಕ್ಕೆ ಸಾಕ್ಷಿಯಾದ ಯೋಗಿ ಆದಿತ್ಯನಾಥ್ ಸರಕಾರ!!

ಉತ್ತರ ಪ್ರದೇಶದಲ್ಲಿ ತಿಂಗಳ ಹಿಂದಷ್ಟೇ ಮದರಸಾಗಳ ದಾಖಲೆಗಳನ್ನು ನೀಡುವಂತೆ ಯೋಗಿ ಆದಿತ್ಯನಾಥ್ ಹೇಳಿದ್ದರಷ್ಟೇ! ಇವತ್ತು, ಯೋಗಿ ಆದಿತ್ಯನಾಥ್ ಸರಕಾರ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದೆ!

ಅಕ್ರಮ ಮದರಸಾಗಳ ನಿರ್ನಾಮ!!!

ಹೌದು! ಇವತ್ತು, ಉತ್ತರ ಪ್ರದೇಶದ ಸರಕಾರ ಬರೋಬ್ಬರಿ 2,682 ಅಕ್ರಮ ಮದರಸಾಗಳ ಮಾನ್ಯತೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ! ಈ ಎಲ್ಲಾ ಮದರಸಾಗಳಿಗೂ ಸಹ, ತಮ್ಮ ಮದರಸಾಗಳ ದಾಖಲೆಯನ್ನು ನೀಡುವಂತೆ ಎರಡು ತಿಂಗಳ ಗಡುವು ನೀಡಿತ್ತು. ಆದರೆ, ಯಾವ ಯಾವ ಮದರಸಾಗಳು ದಾಖಲೆಯನ್ನು ನೀಡಲಿಲ್ಲವೋ, ಮದರಸಾಗಳ ಸುಪರ್ದಿಗೆ ಬರುವಂತಹ ಜಾಗಗಳ ಮಾಹಿತಿಯನ್ನೂ ನೀಡಲಿಲ್ಲವೋ, ಉತ್ತರ ಪ್ರದೇಶ ಸರಕಾರ ಅಂತಹ ಮದರಸಾಗಳ ಮಾನ್ಯತೆಯನ್ನು ರದ್ದು ಪಡಿಸಲು ತೀರ್ಮಾನಿಸಿದೆ!

ನೋಂದಣಿಯೂ ಇಲ್ಲದ ಅಕ್ರಮ ಮದರಸಾಗಳ ಬೇಟೆ!

ಮಾಹಿತಿಗಳ ಪ್ರಕಾರ, ಆಗಸ್ಟ್ ತಿಂಗಳಿನಲ್ಲಿ ಎಲ್ಲಾ ಮದರಸಾಗಳಿಗೂ ಉತ್ತರ ಪ್ರದೇಶದ ಸರಕಾರ, ಮದರಸಾಗಳನ್ನು ಸಂಬಂಧಪಟ್ಟ ಸರಕಾರೀ ಕಛೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ತಿಂಗಳ ಗಡುವನ್ನೂ ನೀಡಿತ್ತು. ಆದರೆ, ಬರೋಬ್ಬರಿ 19,000 ಮದರಸಾಗಳ ಪೈಕಿ, 2682 ಮದರಸಾಗಳು ನೋಂದಣಿ ಮಾಡಿರಲಿಲ್ಲವೆಂದು ತಿಳಿದಿ ಬಂದಿದೆ.

ಸೆಪ್ಪೆಂಬರ್ 15 ರ ಒಳಗಾಗಿ ಪ್ರತಿ ಮದರಸಾಗಳಲ್ಲಿರುವ ಉಪನ್ಯಾಸಕರು, ವಿದ್ಯಾರ್ಥಿಗಳು, ಆಡಳಿತ ವರ್ಗ, ವಿಳಾಸಗಳ ಮಾಹಿತಿಗಳನ್ನು ತೆಗೆಯಲು ಈ ನಿರ್ಧಾರವನ್ನು ತೆಗೆದುಕೊಂಡಿತ್ತು!

ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಬಂದ ಮೇಲೆ ರಾಜ್ಯದ ಮದರಸಾಗಳ ಮೇಲೆ, ಮಸೀದಿಯ ಮೇಲೆ, ಹಾಗೂ ಮುಸಲ್ಮಾನ ಮಾರುಕಟ್ಟೆಗಳ ಮೇಲೆ ನಿಗಾ ಇಟ್ಟಿತ್ತಾದರೂ, ಕೆಲವು ಮದರಸಾಗಳ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೇ, ಈ ಹಿಂದೆ ಮದರಸಾಗಳಲ್ಲಿಯೂ ಸಹ ರಾಷ್ಟ್ರಗೀತೆ ಹಾಡುವಂತೆ ಆಜ್ಞೆ ಹೊರಡಿಸಿದ್ದ ಉತ್ತರ ಪ್ರದೇಶ ಸರಕಾರ ಹಾಡಿದ್ದನ್ನು ವೀಡಿಯೋ ಟೇಪ್ ಮೂಲಕ ಸಾಕ್ಷೀಕರಿಸುವಂತೆ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

ಆದರೆ, ಮದರಸಾಗಳು ಅಲಹಾಬಾದ್ ಹೈ ಕೋರ್ಟ್ ನಲ್ಲಿ ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಬೇಕೆಂದ ಉತ್ತರಪ್ರದೇಶದ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿನೀಡಿತ್ತಾದರೂ ಸಹ, ಅಲಹಾಬಾದ್ ಹೈ ಕೋರ್ಟ್ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು! ಆದರೆ, ಮುಸಲ್ಮಾನರ ದೇಶಭಕ್ತಿಯೊಂದು ಯಾವ ದೇಶದ ಬಗೆಗಿದೆ ಎನ್ನುವ ಸತ್ಯವೊಂದು ಭಾರತದಾದ್ಯಂತ ಅರಿವಾಗಿತ್ತು!!!,

ಅಲಹಾಬಾದ್ ಉಚ್ಛ ನ್ಯಾಯಾಲಯ, ಪ್ರತಿಯೊಬ್ಬರೂ ಸಹ ಆ ದೇಶದ ರಾಷ್ಟ್ರಗೀತೆಯನ್ನು ಹಾಗೂ ಧ್ವಜವನ್ನು ಗೌರವಿಸುವುದು ಕರ್ತವ್ಯವಾಗಿರುವುದರಿಂದ ಉತ್ತರ ಪ್ರದೇಶ ಸರಕಾರದ ನಿರ್ಧಾರ ಸರಿಯಾಗಿದೆ ಎಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತ್ತು.

ಈಗೇನಾಗಬಹುದು?!

ಬಹುಷಃ ಅಕ್ರಮ ಮದರಸಾಗಳಲ್ಲಿನ ಭಯೋತ್ಪಾದನೆಯ ಪಾಠವೊಂದು ಸ್ಥಗಿತವೊಂದು ದೇಶಕಾರ್ಯಕ್ಕೆ ಹುರಿದುಂಬಿಸುವ ವ್ಯಕ್ತಿ ನಿರ್ಮಾಣ ಮಾಡುವ ಮೊದಲ ಹೆಜ್ಜೆಯನ್ನು ಉತ್ತರ ಪ್ರದೇಶದ ಸರಕಾರ ಇಟ್ಟಿದೆಯೆಂದರೆ ತಪ್ಪಾಗಲಾರದು!

ಆದರೆ, ಒಂದಂತೂ ಸತ್ಯ! ಇಷ್ಟು ವರ್ಷದ ನಂತರ, ಯೋಗಿ ಆದಿತ್ಯನಾಥ್ ಅಕ್ರಮ ಮದರಸಾಗಳನ್ನು ರದ್ದು ಮಾಡುವ ಐತಿಹಾಸಿಕ ನಿರ್ಧಾರವನ್ನು ತೆಗದುಕೊಂಡದ್ದು ಬಹುಷಃ ಅಕ್ರಮ ಮುಸಲ್ಮಾನ ಚಟುವಟಿಕೆಗಳನ್ನೂ ನಿಲ್ಲಿಸಬಹುದೇನೋ!

ಉತ್ತರ ಪ್ರದೇಶವಾಗುತ್ತಿದೆ ಉತ್ತಮ ಸರಕಾರ!

ಹೌದು! ಯೋಗಿ ಆದಿತ್ಯನಾಥ್ ಸರಕಾರದ ಕಾರ್ಯವೈಖರಿಯೇ ಹಾಗಿದೆ! ಬಿಜೆಪಿ ಸರಕಾರ ಬಂದ ಮೇಲೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಅದೆಷ್ಟೋ ಅಕ್ರಮ ಚಟುವಟಿಕೆಗಳು ಹೇಳ ಹೆಸರಿಲ್ಲದಂತೆ ಜಾಗ ಖಾಲಿ ಮಾಡುತ್ತಿವೆ! ಮುಂಚೆ ಇದ್ದ ಅದೆಷ್ಟೋ ಭ್ರಷ್ಟಾಚಾರಗಳೆಲ್ಲ ಮಕಾಡೆ ಮಲಗಿದೆ! ಯೋಗಿ ನಡೆದದ್ದೇ ಹಾದಿ ಎನ್ನುವವರು ಯೋಗಿ ಸರಕಾರದ ಬಗ್ಗರ ಇಲ್ಲಸಲ್ಲದ ಅಪವಾದ ಮಾಡಿದರೂ ಸಹ, ಕಳೆದ ಇಪ್ಪತ್ತೈದು ವರ್ಷಗಳಿಂದ ಸೋಲಿಲ್ಲದ ಸರದಾರನಾಗಿರುವ ಯೋಗಿ ತಮ್ಮ ಕೆಲಸದಲ್ಲಿಯೇ ಸದುದ‌್ದೇಶವನ್ನು ಸಾಬೀತು ಪಡಿಸುತ್ತಾ ಬಂದಿದ್ದಾರೆ ಯೋಗಿ ಎಂಬ ರಾಜಕೀಯ ಸಂತ!

– ಪೃಥ ಅಗ್ನಿಹೋತ್ರಿ

Tags

Related Articles

Close