ಪ್ರಚಲಿತ

ಸ್ಫೋಟಕ ಸುದ್ದಿ! 2008 ರ ಮಾಲೇಗಾಂವ್ ಸ್ಫೋಟದ ಪ್ರಕರಣದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರನ್ನು ಸಿಲುಕಿಸಲು ಪ್ರಯತ್ನ ನಡೆದಿತ್ತೇ?!

2008ರ ಮಾಲೇಗಾಂವ್ ಸ್ಫೋಟದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಹಿಂದೂ ಮುಖಂಡರನ್ನು ಸಿಲುಕಿಸಲು ಪ್ರಯತ್ತಿಸುತ್ತಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.!!! ಮಾಲೇಗಾಂವ್ ಸ್ಫೋಟದ ಆರೋಪಿಗಳಲ್ಲೊಬ್ಬರಾದ ಸುದಾಕರ್ ಚತುರ್ವೇದಿ ಅವರೇ ಈ ವಿಚಾರವನ್ನು ಬಾಯಿಬಿಟ್ಟಿದ್ದಾರೆ.!!

ಕೇಸರಿ ಭಯೋತ್ಪಾದನೆಯ ಕಥೆ ಹುಟ್ಟುಹಾಕಲು ಹೊರಟಿದ್ದ ಮುಂಬಯಿ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ
ಆದಿತ್ಯನಾಥ ಹಾಗೂ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೆಸರನ್ನು ವಿದ್ವಂಸಕ ಕೃತ್ಯದೊಂದಿಗೆ ನಂಟು ಹಾಕಲು ನೋಡಿತ್ತು ಎಂದು 2008ರ
ಮಾಲೇಂಗಾವ್ ಬಾಂಬ್ ಸ್ಫೋಟದ ರುವಾರಿ ಸುಧಾಕರ್ ಚತುರ್ವೇದಿ ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಹಾಗು ಅವರ ಹಿಂದೂ ಯುವ ವಾಹಿನಿ ಕರಿತು ಸಾಕಷ್ಟು ಪ್ರಶ್ನೆ ಕೇಳಿದ ತನಿಖಾದಾರರ ಟಾರ್ಗೆಟ್ ಯೋಗಿಯೇ ಆಗಿದ್ದರು. ಪ್ರಕರಣದಲ್ಲಿ ಕೇಸರಿ ಪಡೆಯ ಪ್ರಮುಖನಾಯಕರೊಬ್ಬರನ್ನು ಸಿಲುಕಿಸುವುದು ತನಿಖಾದಾರರ ಉದ್ದೇಶವಾಗಿತ್ತು ಎಂದು ಚತುರ್ವೇದಿ ತಿಳಿಸಿದ್ದಾರೆ.

ಇದೇ ವೇಳೆ ಆರ್‍ಎಸ್‍ಎಸ್‍ನೊ0ದಿಗೆ ಚತುರ್ವೇದಿ ಹೊಂದಿದ್ದ ಸಂಪರ್ಕದ ಕುರಿತು ತಿಳಿದುಕೊಳ್ಳಲು ಎಟಿಎಸ್ ಪ್ರಯತ್ನಿಸಿತ್ತು. ಪೊಲೀಸ್ ಬಂಧನದಲ್ಲಿ ತಮ್ಮ ಮೇಲೆ ಮೂರನೇ ದರ್ಜೆಗಿಂತಲೂ ಕಳಪೆ ನೀಡಲಾಗಿತ್ತು ಎಂದು ಚತುರ್ವೇದಿ ಹಾಗೂ ಮತ್ತೊಬ್ಬ ಆಪಾದಿತ ಹೇಳಿದ್ದಾರೆ. ಸ್ವಾದ್ವಿ ಪ್ರಾಗ್ಯಾರನ್ನು ಅಕ್ರಮವಾಗಿ
ಕಸ್ಟಡಿಯಲ್ಲಿಟ್ಟುಕೊಂಡ ಬಳಿಕ ಅಕ್ಟೋಬರ್ 23 2008ರಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಚತುರ್ವೇದಿ ಆರೋಪಿಸಿದ್ದರು. ನಾಸಿಕ್ ಬಳಿಯ ದವೋಲಾಲಿಯಲ್ಲಿ ಅಪಹರಣ ಮಾಡಿದ ಪೋಲಿಸರು ಮಾರನೇ ದಿನ ಮುಂಬಯಿಗೆ ಕರೆತಂದು ಚಿತ್ರಹಿಂಸೆ ನೀಡಿದ ಬಳಿಕ ಏಳು ಆಸನಗಳ ವಿಮಾನದಲ್ಲಿ ಭೋಪಾಲ್‍ಗೆ ಕರೆದೊಯ್ದರು ಎಂದು ಚತುರ್ವೇದಿ ಹೇಳಿದ್ದಾರೆ

ಈ ಸಂಬಂಧ ವಿಮಾನಯಾನ ದಾಖಲೆಗಳನ್ನು ತನ್ನ ಹೆಸರನ್ನು ಸಂಗ್ರಾಮ್ ಸಿಂಗ್ ಎಂದು ಬದಲಿಸಿ ಆತನ ದೂರವಾಣಿಯಿಂದಲೇ ಸಹಚರ ಸಮೀರ್
ಕುಲಕರ್ಣಿಯನ್ನು ಸಂಪರ್ಕಿಸಲಾಯಿತು ಎಂದ ಚತುರ್ವೇದಿ ತಮ್ಮ ಮನೆಯ ಕೀಗಳನ್ನು ಕಿತ್ತುಕೊಂಡು ಪೊಲೀಸ್ ಅಧಿಕಾರಿಯೊಬ್ಬರು ಆರ್‍ಡಿಎಕ್ಸ್ ಇಟ್ಟಿದ್ದಾಗಿ
ಆರೋಪಿಸಿದ್ದಾರೆ. ಅಕ್ರಮವಾಗಿ ಬಂಧಿಸಿದ್ದಲ್ಲದೆ ತನ್ನ ಬಳಿ ಪಿಸ್ತೂಲ್ ಇದೆ ಎಂಬ ಕಥೆ ಕಟ್ಟಿ ಶಸ್ತ್ರದೊಂದಿಗೆ ತನ್ನನ್ನು ಬಂಧಿಸಲಾಗಿದೆ ಎಂದು ಮಾತುಂಗಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಸಿದ್ಧಪಡಿಸಲಾಗಿತ್ತಲ್ಲದೇ ಪ್ರಕರಣದಲ್ಲಿ ತನ್ನನ್ನು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೂ ಗುರಿ ಮಾಡಲಾಗಿತ್ತು ಎಂದು ಚತುರ್ವೇದಿ ಹೇಳಿದ್ದಾರೆ.

ಬಳಿಕ ಮುಂಬೈ ಎಟಿಎಸ್‍ನಿಂದ ಪ್ರಕರಣದ ತನಿಖೆ ಕೈಗೆತ್ತುಕೊಂಡ ರಾಷ್ಟ್ರೀಯ ತನಿಕಾ ದಳ (ಎನ್‍ಐಎ)ಆರ್‍ಡಿಎಕ್ಸ್ ಅನ್ನು ಎಟಿಎಸ್ ಇಟ್ಟಿತ್ತೆಂದ ಚಾರ್ಜ್‍ಶೀಟ್‍ನಲ್ಲಿ ನಮೂದಿಸಿತ್ತು. ಆದರೆ ಖಾಸಗಿ ವಿಮಾನಕ್ಕೆ ನೆರವು ನೀಡಿದವರು ಹಾಗೂ ಅಕ್ರಮ ಪಿಸ್ತೂಲ್, ಆರ್‍ಡಿಎಕ್ಸ್‍ನ ಮೂಲಗಳ ಕುರಿತು ಎನ್‍ಐಎ ಏನನ್ನೂ ಹೇಳಿಲ್ಲ ಎಂದು ಚತುರ್ವೇದಿ ಹೇಳಿದ್ದಾರೆ.ನಮ್ಮನ್ನು ಬಂಧಿಸಿದಾಗ ಸಾಕಷ್ಟು ಬೊಬ್ಬಿರಿಯಲಾಗಿತ್ತು. ಆದರೆ ಇಕ್ಬಾಲ್ ಕಸ್ಕರ್‍ನ ಬಂಧನವಾದ ಕುರಿತು ಒಂದೇ ಒಂದು ಮಾತಿಲ್ಲ ಎಂದು ಹೇಳಿದ ಚತುರ್ವೇದಿ ಕಸ್ಕರ್‍ನನ್ನು ರಕ್ಷಿಸುವ ಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ದೇಶಾದ್ಯಂತ ಸುದ್ದಿ ಮಾಡಿದ ಬಾಂಬ್ ಸ್ಫೋಟ ಪ್ರಕರಣ 2008 ಸೆಪ್ಟೆಂಬರ್ 29 ರಂದು ಮಹಾರಾಷ್ಟ್ರದ ಪ್ರಮುಖ ಬಟ್ಟೆ ತಯಾರಿಕಾ ಕೇಂದ್ರ ಮಾಲೇಗಾಂವ್‍ನಲ್ಲಿ ಬೈಕ್‍ನಲ್ಲಿ ಅಳವಡಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದರು. ಬಳಿಕ ಅಕ್ಟೋಬರ್‍ನಲ್ಲಿ ವಿಶ್ವಹಿಂದೂ ಪರಿಷತ್‍ನ ನಾಯಕಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಬಂಧಿಸಲಾಗಿತ್ತು. ಹಿಂದೂ ಪರ ಧೋರಣೆ ಹೊಂದಿರುವ ಅಭಿನವ್ ಭಾರತ್ ಸಂಘಟನೆ ಭಾಗವಾಗಿ ಇಬ್ಬರೂ ಸ್ಫೋಟಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿತ್ತು ಎಂದು ಹೇಳಲಾಗಿತ್ತು. ಜೊತೆಗೆ ಮಾಲೇಗಾಂವ್ ಸ್ಪೋಟಕ್ಕೆ ಪ್ಲಾನ್ ಮಾಡಿದ್ದಾಗಿ ಆರೋಪಿಸಲಾಗಿತ್ತು. ಪ್ರಕರಣದಲ್ಲಿ ಕಳೆದ ಎಪ್ರಿಲ್‍ನಲ್ಲಿ ಸಾಧ್ವಿ ಪ್ರಗ್ಯಾಗೆ ಹೈಕೋರ್ಟ್ ಜಾಮೀನು ಮಂಜೂರು ಕೂಡಾ ಮಾಡಿತ್ತು.

ಸದ್ಯ ಜಾಮೀನಿನ ಮೇಲೆ ಹೊರಬಂದಿರುವ ಸುದಾಕರ್ ಚತುರ್ವೇದಿ ಅವರು ಮಹರಾಷ್ಟ್ರದ ಅಂದಿನ ಕಾಂಗ್ರೆಸ್-ಎನ್‍ಸಿಪಿ ಸರಕಾರ ಮುಸ್ಲಿಮರ ಓಲೈಕೆಗಾಗಿ
ಮಾಲೇಗಾಂವ್ ಸ್ಪೋಟದ ತನಿಖೆಯನ್ನು ದುರುಪಯೋಗ ಮಾಡಿಕೊಂಡಿತ್ತು. ಹಲವಾರು ಹಿಂದೂ ಮುಖಂಡರನ್ನು ಇದರಲ್ಲಿ ಆರೋಪಿಗಳನ್ನಾಗಿ ಬಿಂಬಿಸಲು
ಪ್ರಯತ್ನಿಸಿತು ಎಂದು ಅವರು ಹೇಳಿದ್ದಾರೆ. ನನ್ನನ್ನು ವಿಚಾರಣೆಗೊಳಪಡಿಸಿದ ವೇಳೆ ಯೋಗಿ ಆದಿತ್ಯನಾಥ್ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಲಾಯಿತು. ನನ್ನ ಮೂಲಕ ಅವರ ಮೇಲೂ ಆರೋಪ ಹೊರಿಸಸುವ ಪ್ರಯತ್ನ ನಡೆಸಲಾಗಿತ್ತು ಎಂದಿದ್ದಾರೆ.

ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕೋಮು ಸೂಕ್ಷ್ಮ ಜವಳಿ ಪಟ್ಟಣ ಮಲೇಗಾಂವ್‍ನಲ್ಲಿ 2008 ಸಪ್ಟೆಂಬರ್ 29ರಂದು ಸಂಭವಿಸಿದ ಬಾಂಬ್ ಸ್ಪೋಟದಲ್ಲಿ 7 ಮಂದಿ ಮೃತಪಟ್ಟಿದ್ದರು. ಪ್ರಕರಣದ ಆರೋಪಿಗಳಾಗಳಾದ ಸಾಧ್ವಿ ಪ್ರಜ್ಞಾ ಠಾಗೂರ್, ಪುರೋಹಿತ್ ಹಾಗೂ ಇತರ 9 ಜನರ ವಿರುದ್ಧ ಟಟಿಎಸ್ ಮಹಾರಾಷ್ಟ್ರದ
ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅನ್ವಯಿಸಿದೆ ಎಂದು ಈ ಹಿಂದೆ ಎಂಸಿಒಸಿಎ ವಿಶೇಷ ನ್ಯಾಯಾಲಯ ಹೇಳಿತ್ತು. ಮಲೆಗಾಂವ್ ಸ್ಪೋಟ ಪ್ರಕರಣಕ್ಕೆ
ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸೇರಿದಂತೆ ಕೆಲವು ಹಿಂದೂ ಪರ ಸಂಘಟನೆಗಳ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ತನಿಖಾ ಅಧಿಕಾರಿಗಳು ಯತ್ನಿಸಿದ್ದರು ಎಂದು ಚತುರ್ವೇದಿ ಹೇಳಿದ್ದಾರೆ. ಅಂದಿನ ಕಾಂಗ್ರೆಸ್- ಎನ್‍ಸಿಪಿ ಸರಕಾರ ಕೇಸರಿ ಭಯೋತ್ಪಾದನೆಯನ್ನು ಸಾಬೀತು ಪಡಿಸುವುದಕ್ಕಾಗಿ ಮತ್ತು ಅಲ್ಪಸಂಖ್ಯಾತರ ಓಲೈಕೆಗಾಗಿ ಕೆಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು ಎಂದು ಚತುರ್ವೇದಿ ಹೇಳಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮಾಲೆಗಾಂವ್ ಸ್ಪೋಟ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವ ಮುನ್ನ ಮಹಾರಾಷ್ಟ್ರದ ಎಟಿಎಸ್ ತನಿಖೆ ನಡೆಸುತ್ತಿತ್ತು.
ಸಪ್ಟೆಂಬರ್ 29, 2008ರಲ್ಲಿ ಮಾಲೆಗಾಂವ್‍ನಲ್ಲಿ ಇಸ್ಲಾಮಿಕ್ ಜಿಹಾದಿಗಳು ನಡೆಸಿದ ಬೀಕರ ಬಾಂಬ್ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಅಲ್ಲದೆ 100
ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆದರೆ ಆ ಪ್ರಕರಣವನ್ನು ಅಲ್ಪ ಸಂಖ್ಯಾತರ ಓಲೈಕೆಗಾಗಿ ಇಸ್ಲಾಮಿಕ್ ಜಿಹಾದಿನಿಂದ ಭಯೋತ್ಪಾದನೆಗೆ ತಿರುಗಿಸಿತ್ತು ಹಿಂದೂ ವಿರೋಧಿ ಕಾಂಗ್ರೆಸ್. ಸರಿಯಾಗಿ ತನಿಖೆ ಮಾಡಿ ಮೊದಲು ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷೆ ಕೊಡಬೇಕು ಸುಖಾ ಸುಮ್ಮನೆ ಯೋಗಿ ಆದಿತ್ಯನಾಥರನ್ನು ಆರೋಪಿಸಬಾರದು.

-ಶೃಜನ್ಯಾ

Tags

Related Articles

Close