ಪ್ರಚಲಿತ

ಹಿಂದೂಸ್ಥಾನ ಹಿಂದೂಗಳಿಗೆ ಸೇರಿದ್ದು! ಅದರಲ್ಲಿ ವಿದೇಶಿಯರಿಗೆ ಹೆಜ್ಜೆಯೂರಲೂ ಬಿಡಬಾರದು ಎಂದು ಗಂಡಸರಿಗೆ ಯುದ್ಧ ಕಲಿಸಿ ಸೈನ್ಯ ಕಟ್ಟಿದ ಮೊದಲ ರಜಪೂತ ಮಹಿಳೆಯ ಬಗ್ಗೆ ಗೊತ್ತೇ?!

ಅದೆಷ್ಟೋ ವೀರಾಧಿ ವೀರರು, ವೀರೆಯರು ಇತಿಹಾಸದ ಪುಟಗಳಲ್ಲಿ ಅಚ್ಚಲಿಯದ ನೆನಪಾಗಿ ಉಳಿಯದೇ, ಈ ಮಹಾನ್ ವೀರರು ದೇಶಕ್ಕೋಸ್ಕರ, ಹಿಂದೂ ಜನ್ಮಭೂಮಿಗೋಸ್ಕರ ಹೋರಾಡಿದ್ದಾರೋ ಗೊತ್ತಿಲ್ಲ!! ಆದರೆ… ” ಹಿಂದುಸ್ತಾನ ಇರುವುದು ಹಿಂದುಗಳಾದ ನಮಗಾಗಿ. ವಿದೇಶಿಯರಿಗೆ ಹಾಗು ಗೋ ವಧೆ ಮಾಡುವ ಯವನರಿಗೆ ಈ ಪುಣ್ಯ ಭೂಮಿಯಲ್ಲಿ ಹೆಜ್ಜೆಯಿಡಲು ಅವಕಾಶ ನೀಡಬಾರದು, ಅಂಥವರನ್ನು ಇಲ್ಲಿಂದ ಹೊರಗಟ್ಟುವುದೇ ನಾವು ಮಾಡುವ ಪುಣ್ಯಕಾರ್ಯವಾಗಿರುತ್ತದೆ” ಎಂದು ರಜಪೂತ ಸೈನಿಕರಿಗೆ ಬೋಧಿಸುತ್ತಿದ್ದ, ಉತ್ತೇಜನ ನೀಡುತ್ತಿದ್ದ ವೀರಾಂಗನೆಯ ಬಗ್ಗೆ ತಿಳಿದರೆ, ನಮ್ಮ ರಾಷ್ಟ್ರದಲ್ಲಿ ಹಿಂದೂ ಧರ್ಮಕ್ಕೋಸ್ಕರ ಹೋರಾಡಿದ ನಾರಿಯರ ಬಗ್ಗೆ ಗೌರವ ಮೂಡುವುದಂತೂ ಖಂಡಿತಾ!!

ಇತಿಹಾಸದ ಪುಟಗಳಲ್ಲಿ ಮರೆಯಾಗಿ ಇಂದಿಗೂ ನೆನಪಾಗಿಯೇ ಉಳಿದ ಈ ವೀರಾಂಗನೆಯ ಪರಾಕ್ರಮವನ್ನು ಬಣ್ಣಿಸಲಸಾಧ್ಯ!!! ಮೊಘಲ್ ರಾಜನಾದ ಔರಂಗಜೇಬನ ಸೈನಿಕರ ಹುಟ್ಟಡಗಿಸಿದ ಈಕೆಯ ಯುದ್ಧತಂತ್ರ ಈಡೀ ಮೊಘಲ್ ಸಾಮ್ರಾಜ್ಯಕ್ಕೆ ಭಯ ಹುಟ್ಟಿಸಿದ್ದಂತೂ ನಿಜ!! ರಾಜನೀತಿ ಪಾರಂಗತೆಯಾಗಿದ್ದ ಈಕೆ ಮೊಘಲರ ಆಡಳಿತವನ್ನು ರಾಜಸ್ಥಾನದ ನೆಲೆಯಿಂದಲೇ ನಿರ್ಮೂಲನೆ ಮಾಡಲು ರಜಪೂತ ಸೈನ್ಯವೊಂದನ್ನೇ ನಿರ್ಮಿಸಿದಂತಹ ಗಟ್ಟಿಗಿತ್ತಿ!! ಹಾಗಾದರೆ ಯಾರೀಕೆ ಗೊತ್ತೇ??

ಮೊಘಲರ ಸೈನ್ಯವನ್ನು ಹುಟ್ಟಡಗಿಸಲು ತನ್ನ ರಾಜತಾಂತ್ರಿಕೆಯಿಂದಲೇ ಮೆಚ್ಚುಗೆ ಪಡೆದಾಕೆ ಬೇರಾರು ಅಲ್ಲ!! ಜೋಧಪುರದ ರಾಜನಾಗಿದ್ದ ಯಶವಂತ ಸಿಂಹನ ಪಟ್ಟದರಸಿ, ಉತ್ತಮ ವೀರಾಂಗನೆಯೆಂದೇ ಪ್ರಖ್ಯಾತಿ ಪಡೆದಿದ್ದಾಕೆ…. ರಾಣಿ ಸುಜನಾವತಿ!! ಪ್ರತಿಜ್ಞಾ ಬದ್ಧ ಸಂಕಲ್ಪ ಸಿದ್ಧಿಯ ಗೌರವಾನ್ವಿತ ಪ್ರತಿಮೂರ್ತಿಯಾಗಿದ್ದ ಈಕೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹೋರಾಡಿದಾಕೆ!!

ಮಾತೃ ಧರ್ಮ ಹಾಗು ಮಾತೃ ಭೂಮಿಯ ರಕ್ಷಣೆಗಾಗಿ ಈಕೆಯು ನಡೆಸಿದ ಕಾರ್ಯವನ್ನು ನೆನೆದರೆ ಈಕೆಯ ಬಗ್ಗೆ ಇನ್ನಷ್ಟು ಗೌರವ ಹೆಚ್ಚುತ್ತೆ!! ಅದೇನೆಂದರೆ, ಪ್ರಜಾಹಿತ ರಕ್ಷಕ, ಹಿಂದುತ್ವ ರಕ್ಷಕ, ಸ್ವರಾಜ್ಯ ಸಂಸ್ಥಾಪಕ ಎಂದು ಕರೆಯುವ ಛತ್ರಪತಿ ಶಿವಾಜಿ ಮಹಾರಾಜರನ್ನು ಹಾಗು ರಜಪೂತ ಸರದಾರರು ಒಂದುಗೂಡಿಸಲು ಪ್ರಯತ್ನಗಳನ್ನು ನಡೆಸಿದ್ದು!! ಆದರೆ ಇದು ತತ್­ಕ್ಷಣಕ್ಕೆ ಪ್ರತಿಫಲ ನೀಡಲಿಲ್ಲವಾದರೂ, ನಂತರದ ವರ್ಷಗಳಲ್ಲಿ ಉತ್ತಮ ಫಲ ನೀಡಲು ಪ್ರಾರಂಭವಾಗಿದ್ದಂತೂ ಅಕ್ಷರಶಃ ನಿಜ.

ಜೋಧಪುರದ ರಾಜನಾಗಿದ್ದ ಯಶವಂತ ಸಿಂಹನ ಪಟ್ಟಮಹಿಷಿ ಸುಜನಾವತಿಯು ರಾಜ್ಯದ ರಾಣಿಯು ಆಗಿದ್ದಳು. ಅಷ್ಟೇ ಅಲ್ಲದೆ, ಪ್ರತಿಜ್ಞಾಬದ್ಧ ಸಂಕಲ್ಪ ಸಿದ್ಧಿಯ ಗೌರವಾನ್ವಿತ ಪ್ರತಿಮೂರ್ತಿಯಾಗಿದ್ದ ಈಕೆಯ ಬಗ್ಗೆ ಫ್ರೆಂಚ್ ಪ್ರವಾಸಿ ವರ್ನಿಯರ್ ಈಕೆಯ ರಾಜನೀತಿ ತಜ್ಞತೆ, ಸಾಹಸ ಮತ್ತು ಸತೀತ್ವದ ಹಿರಿಮೆಗಳನ್ನು ತುಂಬಾ ಅದ್ಭುತ ರೀತಿಯಲ್ಲಿ ತನ್ನ ಗ್ರಂಥ “ಭರತ ಯಾತ್ರ”ದಲ್ಲಿ ಅದ್ಭುತವಾಗಿ ವರ್ಣಿಸಿದ್ದಾನೆ!!

ತನ್ನ ಪತಿಯೊಡನೆ ರಾಜ್ಯದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ರಾಣಿ ಸುಜನಾವತಿ ರಾಜನೀತಿ ಪಾರಂಗತೆಯಾಗಿದ್ದಳು. ಅಷ್ಟೇ ಅಲ್ಲದೇ, ಈಕೆ ರಾಜ್ಯದ ಜನರ ಸಮಸ್ಯೆಗಳನ್ನು ಅತ್ಯಂತ ಸರಳ ಹಾಗು ಸಮಾಧಾನದಿಂದ ಪರಿಹರಿಸುತ್ತಿದ್ದಳು. ತನ್ನ ರಾಜ್ಯದ ಅನೇಕ ಯುವಕನ್ನು ಕರೆಸಿ ಸೈನಿಕರಾಗುವಂತೆ ಪೆÇ್ರೀತ್ಸಾಹಿಸಿ ಅವರಿಗೆ ಕತ್ತಿವರಸೆ, ಕುದುರೆ ಓಡಿಸುವುದು, ಯುದ್ಧನೀತಿ ಹಾಗು ಅದರ ಜೊತೆಗೆ ಭಗವದ್ಗೀತೆಯನ್ನು ಹೇಳಿಕೊಡುತ್ತಿದ್ದಂತಹ ಸಕಲಕಲಾ ವಲ್ಲಭೆಯಾಗಿದ್ದಳು ಈ ಸುಜನಾವತಿ!!

ಒಮ್ಮೆ ಮೊಘಲ್ ರಾಜನಾದ ಔರಂಗಜೇಬನು ತನ್ನ ಸುಸಜ್ಜಿತವಾದ ಸೈನ್ಯದೊಂದಿಗೆ ಜೋಧ್ ­ಪುರದ ಮೇಲೆ ದಾಳಿಯಿಟ್ಟ ಸಂದರ್ಭದಲ್ಲಿ ರಾಜ ಯಶವಂತ ಸಿಂಹನು ತನ್ನ ವಿಶಾಲವಾದ ಸೈನ್ಯದೊಡನೆ ಹೊರಟು ಔರಂಗಜೇಬನ ಮೇಲೆ ದಾಳಿ ಮಾಡಿದನು. ಈ ದಾಳಿಯು ಸುಮಾರು 50 ದಿನಗಳಿಗಿಂತಲೂ ಹೆಚ್ಚು ದಿನಗಳವರೆಗೂ ಯುದ್ಧವು ಮುಂದುವರೆಯಿತು. ಇತ್ತ ಯುದ್ಧ ನಡೆಯುತ್ತಿದ್ದರೆ ಅತ್ತ ರಾಣಿ ಸುಜನಾವತಿಯು ತನ್ನ ರಾಜ್ಯವನ್ನು, ರಾಜ್ಯದ ಪ್ರಜೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದಳು!! ಆದರೆ 50 ದಿನಗಳಿಗಿಂತಲೂ ಹೆಚ್ಚು ದಿನಗಳವರೆಗೆ ನಡೆದ ಈ ಯುದ್ಧದಲ್ಲಿ ರಾಜ ಯಶವಂತ ಸಿಂಹನು ಹತನಾದನು.

ಇತ್ತ ತನ್ನ ಪತಿ ರಾಜ ಯಶವಂತ ಸಿಂಹನು ವೀರ ಮರಣವನ್ನಪ್ಪಿದಾಗ ಈಡೀ ಜೋಧ್ ಪುರವೇ ಮೌನವನ್ನು ತಾಳಿದರೆ, ಈ ಘಟನೆಯ ನಂತರ ವಿಧವೆಯಾದಳು ರಾಣಿ ಸುಜನಾವತಿ!! ಆದರೆ ಧೈರ್ಯಗೆಡದ ರಾಣಿ ಸುಜನಾವತಿಯು ಮೊಘಲ ಹುಟ್ಟಡಗಿಸಲು ಅನೇಕ ಆಶ್ಚರ್ಯಕರ ಕಾರ್ಯಗಳನ್ನು ನಿರ್ವಹಿಸಿದಳು. ತದನಂತರದಲ್ಲಿ ಈಕೆಯು ಮೆವಾಡದ ರಾಣಾ ನೇತೃತ್ವದಲ್ಲಿ ವಿದೇಶಿ ಹಾಗು ಮೊಘಲರ ಆಡಳಿತವನ್ನು ರಾಜಸ್ಥಾನದ ನೆಲೆಯಿಂದಲೇ ನಿರ್ಮೂಲನೆ ಮಾಡಲು ರಜಪೂತ ಸೈನ್ಯವೊಂದನ್ನೇ ನಿರ್ಮಿಸಿದಳು!!

ರಾಜ್ಯವನ್ನು ಮತ್ತು ತನ್ನ ಮಗನಾದ ಅಜೇಯಸಿಂಹನ ರಕ್ಷಣಾ ಭಾರವನ್ನು ಆಕೆಯ ಅಣ್ಣನಾದ ರಾಣಾ ರಾಜಸಿಂಹನ ಜವಾಬ್ದಾರಿಗೆ ವಹಿಸಿ ನಿಶ್ಚಿಂತಳಾದಳು. ಆದರೆ ಜೀವನಪರ್ಯಂತ ಅವಳು ಮೊಘಲರ ವಿನಾಶದ ಯೋಜನೆಗಳನ್ನು ಕಾರ್ಯಗತಗೊಳಿಸುವ ಕಾರ್ಯದಲ್ಲಿ ನಿರತಳಾಗಿದ್ದಳು. ಮೊಘಲರನ್ನು ಹಿಂದೂಸ್ತಾನದಿಂದಲೇ ಹೊಡೆದೊಡಿಸುವ ಗುರಿಯನ್ನು ಹೊತ್ತಿರುವ ಈಕೆ “ಈ ಹಿಂದುಸ್ತಾನ ಇರುವುದು ಹಿಂದುಗಳಾದ ನಮಗಾಗಿ. ವಿದೇಶಿಯರಿಗೆ ಹಾಗು ಗೋ ವಧೆ ಮಾಡುವ ಯವನರಿಗೆ ಈ ಪುಣ್ಯ ಭೂಮಿಯಲ್ಲಿ ಹೆಜ್ಜೆಯಿಡಲು ಅವಕಾಶ ನೀಡಬಾರದು, ಅಂಥವರನ್ನು ಇಲ್ಲಿಂದ ಹೊರಗಟ್ಟುವುದೇ ನಾವು ಮಾಡುವ ಪುಣ್ಯಕಾರ್ಯವಾಗಿರುತ್ತದೆ” ಎಂದು ಅವಳು ರಜಪೂತ ಸೈನಿಕರಿಗೆ ಈ ರೀತಿ ಬೋಧಿಸುತ್ತಾ ಅವರಲ್ಲಿ ಉತ್ತೇಜನವನ್ನು ತುಂಬುತ್ತಿದ್ದಂತ ಹಿಂದೂಸ್ತಾನದ ವೀರೆ!!

ರಾಜಸ್ಥಾನದ ಹಿಂದೂ ಪುನರುತ್ಥಾನದ ಬೀಜಾಂಕುರವಾಗಿತ್ತು ಈಕೆಯ ವೀರೋತ್ಸಾಹ!! ಅದೇ ಸಂದರ್ಭದಲ್ಲಿ ಔರಂಗಜೇಬನ ಅಶಿಷ್ಟ ಹಾಗು ಅಮಾನುಷ
ವ್ಯವಹಾರಗಳಿಂದ ಬೇಸತ್ತ ಅದೆಷ್ಟೋ ಹಿಂದುಗಳು ಹೆಚ್ಚು ಹೆಚ್ಚು ಸಂಘಟಿತರಾಗತೊಡಗಿದರು. ಅಲ್ಲದೇ, ರಜಪೂತರು ಶಕ್ತಿ ಹಾಗು ವೀರತ್ವಗಳ ಮುಖಾಂತರ ಸೈನ್ಯ ಸಂಚಯ ಮಾಡಲು ಪ್ರಾರಂಭಿಸಿದರು. ಇದು ಮೊಘಲರ ಅವನತಿಯ ಪ್ರಾರಂಭದ ಪರ್ವ ಕಾಲವಾಗಿತ್ತು!! ಆದರೆ ವಿಧಿಯ ಆಟವೇ ಬೇರೆಯದಾಗಿತ್ತು!!

ಈ ರಾಣಿಯು ಇನ್ನು ಕೆಲವು ವರ್ಷಗಳ ಕಾಲ ಜೀವಂತವಾಗಿ ಇದ್ದಿದ್ದರೆ ಮೊಘಲರ ಸಿಂಹಾಸನವು ನಿಗದಿತ ಸಮಯಕ್ಕಿಂತ ಇನ್ನು ಮುಂಚಿತವಾಗಿಯೇ ಉರುಳಿ ಹೋಗಿ ನಮ್ಮ ನಾಡಿನ ಇತಿಹಾಸವನ್ನೇ ಬದಲಿಸಬಹುದಾಗಿತ್ತು. ಆದರೆ ಶ್ರೇಷ್ಠ ಮನೋಭಾವದ ಬುನಾದಿ ಹಾಕಿದ ಯಶವಂತಸಿಂಹನು, ರಾಣಿ ಸುಜನಾವತಿಯು ಕೀರ್ತಿಸ್ಮರಣೀಯಳಾದಳು. ವಿಪರ್ಯಾಸವೆಂದರೆ ಅದಾವ ಕಾರಣಕ್ಕಾಗಿ ಈಕೆ ಮರಣವನ್ನಪ್ಪಿದಳೋ ಎನ್ನುವುದು ಮಾತ್ರ ತಿಳಿದಿಲ್ಲ!!

ಮೊಘಲರ ಆಡಳಿತವನ್ನು ರಾಜಸ್ಥಾನದ ನೆಲೆಯಿಂದಲೇ ನಿರ್ಮೂಲನೆ ಮಾಡಲು ರಜಪೂತ ಸೈನ್ಯವೊಂದನ್ನೇ ನಿರ್ಮಿಸಿದಂತಹ ಹಿಂದೂಸ್ತಾನದ ವೀರನಾರಿಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಅಷ್ಟೇ ಅಲ್ಲದೇ, ಮೊಘಲ್ ಸಾಮ್ರಾಜ್ಯಕ್ಕೆ ನಡುಕ ಹುಟ್ಟಿಸಿದಂತಹ ಈಕೆಯನ್ನು ಪಡೆದ ಈ ರಾಷ್ಟ್ರವೇ ಧನ್ಯ!!!

– ಅಲೋಖಾ

Tags

Related Articles

Close