ಪ್ರಚಲಿತ

2ಜಿ ಹಗರಣ ಸಿಐಜಿ ತನಿಖೆಯಲ್ಲಿ ಸಾಬೀತಾಗಿದ್ದರೂ ಸಿಬಿಐ ನ್ಯಾಯಾಲಯದಲ್ಲಿ ಹಗರಣ ಸಾಬೀತುಪಡಿಸಲು ವಿಫಲವಾಗಿರುವುದು ಯಾಕೆ?!

ದೇಶಕಂಡ ಅತ್ಯಂತ ದೊಡ್ಡ ಹಗರಣವೆಂದೇ ಸಾಬೀತಾಗಿದ್ದ 2ಜಿ ಹಗರಣದ ಅಲ್ಲಾ ಆರೋಪಿಗಳನ್ನೂ ಸಿಬಿಐ ವಿಶೇಷ ನ್ಯಾಯಾಲು ದೋಷಮುಕ್ತಗೊಳಿಸಿದೆ. ಸಿಐಜಿ ತನಿಖೆಯಲ್ಲಿ ನಡೆದಿರುವುದು ಸಾಬೀತಾಗಿದ್ದರೂ ಸಿಬಿಐ ತನಿಖೆಯಲ್ಲಿ ಆರೋಪ ಸಾಬೀತುಪಡಿಸಲು ವಿಫಲವಾಗಿರುವುದು ಯಾಕೆ ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತದೆ. ಒಂದು ಪ್ರಕರಣದಲ್ಲಿ ಆರೋಪ ಕೇಳಿ ಬಂದರೆ ಅದಕ್ಕೆ ಸೂಕ್ತ ದಾಖಲೆ, ಸಾಕ್ಷಿಯನ್ನು ಒದಗಿಸುವುದು ತನಿಖೆ ನಡೆಸುವ ಅಧಿಕಾರಿಗಳ ಕೆಲಸ. ಹಾಗಾದರೆ ಈ ಪ್ರಕರಣದಲ್ಲಿ ನಡೆದಿರುವುದಾದರೂ ಏನು?

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಹುಕೋಟಿ 2 ಜಿ ಸ್ಪೆಕ್ಟ್ರಂ ಹಗರಣದ ತೀರ್ಪು 6 ವರ್ಷಗಳ ನಂತರ ಪ್ರಕಟವಾಗಿದೆ. ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣದ ಪ್ರಮುಖ ಆರೋಪಿಗಳಾದ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಸೇರಿದಂತೆ ಎಲ್ಲಾ ಆರೋಪಿಗಳನ್ನು ಆರೋಪಮುಕ್ತಗೊಳಿಸಿ ಖುಲಾಸೆಗೊಳಿಸಿದೆ. ಸಿಬಿಐ ವಿಶೇಷ ಕೋರ್ಟ್‍ನ ನ್ಯಾಯಮೂರ್ತಿ ಒ.ಪಿ. ಸೈನಿ ಅವರು ಗುರುವಾರ ತೀರ್ಪು ಪ್ರಕಟಿಸಿದರು. ಈ ಸಂದರ್ಭದಲ್ಲಿ ಎ. ರಾಜಾ ಮತ್ತು ಕನಿಮೋಳಿ ಕೋರ್ಟ್‍ನಲ್ಲಿ ಹಾಜರಿದ್ದರು.

2007-08ನೇ ಸಾಲಿನಲ್ಲಿ 2 ಜಿ ತರಂಗಾಂತರ ಹಂಚಿಕೆ ಸಂದರ್ಭದಲ್ಲಿ ಈ ಹಗರಣ ನಡೆದಿತ್ತು. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ 1 ಲಕ್ಷದ 76 ಸಾವಿರ ಕೋಟಿ ನಷ್ಟವುಂಟಾಗಿತ್ತು ಎಂದು ಸಿಎಜಿ ತಮ್ಮ ವರದಿಯಲ್ಲಿ ತಿಳಿಸಿದ್ದರು. ಇದರ ಜಾಡು ಹಿಡಿದು ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು 2011ರಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಹಾಗೂ ಕನಿಮೊಳಿ ಸೇರಿದಂತೆ 19 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದರು. ಹಗರಣದ ಸಂಬಂಧ 3 ಪ್ರತ್ಯೇಕ ಕೇಸ್‍ಗಳ ಸುದೀರ್ಘ ವಿಚಾರಣೆಯನ್ನು ನ್ಯಾಯಾಲಯ ನಡೆಸಿದೆ. ತೀರ್ಪು ಹೊರಬೀಳುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ನೆರೆದಿದ್ದ ಎ. ರಾಜಾ ಮತ್ತು ಕನಿಮೋಳಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪ್ರಕರಣದ ಸಂಬಂಧ ಉದ್ಯಮಿ ಅನಿಲ್ ಅಂಬಾನಿ, ಟೀನಾ ಅಂಬಾನಿ ಸೇರಿದಂತೆ 154 ಜನರ ಸಾಕ್ಷಿಯನ್ನು ದಾಖಲಿಸಿಕೊಳ್ಳಲಾಗಿತ್ತು. ಆದರೆ ಕೊನೆಗೆ ಮಾತ್ರ ಆರೋಪ ಸಾಬೀತಾಗಿಲ್ಲ. ಆದರೆ 2ಜಿ ಹಗರಣ ನಡೆದಿರುವುದು ಗಾಳಿಯಷ್ಟೇ ಸತ್ಯ.

ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದ್ದ ಈ ಹಗರಣದಲ್ಲಿ ಟೆಲಿಫೋನ್ ಕಂಪೆನಿಗಳಿಗೆ ನಿಯ ಮೀರಿ 2ಜಿ ತರಂಗಗುಚ್ಚಗಳನ್ನು ಹೆಚ್ಚುವರಿ ನೀಡಿತ್ತು. ಆದರೆ ಈ ಹೆಚ್ಚುವರಿ ಹಣವನ್ನು ಪ್ರಕರಣದ ಆರೋಪಿಗಳು ದೋಚಿದ್ದು ಇದರ ಮೊತ್ತ ಬರೋಬ್ಬರಿ 1,76,645 ಕೋಟಿ ರೂ. ಎಂದು ತಿಳಿಸಲಾಗಿತ್ತು. ಇದರ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಐಜಿ ಸಾಬೀತುಪಡಿಸಿದ್ದಲ್ಲದೆ ಇದರ ತನಿಖೆಯನ್ನು ಇಡಿ ಹಾಗೂ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಆದರೆ ಇಲ್ಲಿ ಮಾತ್ರ ಆರೋಪ ಸಾಬೀತಾಗಿಲ್ಲ.

ಇನ್ನು ಮುಂದಿರುವ ದಾರಿ ಏನೆಂದರೆ ಸುಬ್ರಹ್ಮಣಿಯನ್ ಸ್ವಾಮಿ ಪ್ರಕಾರ ಈ ತೀರ್ಪಿನ ಕುರಿತು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಭಾರತ ಸರಕಾರ ಈ ಆರೋಪಗಳನ್ನು ಸಾಬೀತುಪಡಿಸಬೇಕು ಎಂದಿದ್ದಾರೆ. ಆದ್ದರಿಂದ ಇನ್ನಷ್ಟು ಸಾಕ್ಷಿಗಳನ್ನು ಪತ್ತೆಹಚ್ಚಿ ಪ್ರಕರಣದ ಆರೋಪಿಗಳನ್ನು ಜೈಲು ಸೇರಿಸಬೇಕೆನ್ನುವುದು ಸುಬ್ರಹ್ಮಣಿಯನ್ ಸ್ವಾಮಿ ಇವರ ವಾದ.

ಹಾಗಾದರೆ ಪ್ರಕರಣ ಸಾಬೀತಾಗದೇ ಇರಲು ಕಾರಣವೇನು?

2ಜಿ ಹಗರಣ ನಡೆದಿದ್ದು ನಿಜವೇ ಎನ್ನುವುದು ಈ ತೀರ್ಪಿನ ನಂತರ ಬೃಹದಾಕಾರದ ಪ್ರಶ್ನೆಯೊಂದು ಕಾಡಲಾರಂಭಿಸಿದೆ. ಹಾಗಾದರೆ ಹಗರಣ ನಡೆದಿದ್ದು ನಿಜವೇ ಆಗಿದ್ದರೆ ಲಕ್ಷಾಂತರ ಹಣವನ್ನು ಗುಳುಂ ಮಾಡಿದವರ್ಯಾರು. ಅದರಲ್ಲಿ ಬಂದ ಹಣ ಎಲ್ಲಿಗೆ ಹೋಯಿತು ಎನ್ನುವುದು ನಮ್ಮಲ್ಲಿ ಕಾಡುತ್ತಿರುವ ಪ್ರಶ್ನೆ. ಹಾಗಾದರೆ ನ್ಯಾಯಾಲಯ ಈ ರೀತಿ ಯಾಕೆ ತೀರ್ಪು ನೀಡಿತು ಎನ್ನುವುದೂ ನಮ್ಮನ್ನು ಕಾಡದೇ ಇರುವುದು ಸುಳ್ಳಲ್ಲ.

ಪ್ರಕರಣ ನಡೆದು ಬೆಳಕಿಗೆ ಬಂದ ನಂತರ ಎರಡು ವರ್ಷಗಳ ನಂತರ ಪಟಿಯಾಲಾ ಕೋರ್ಟಿನಿಂದ ತೀರ್ಪು ಪ್ರಕಟವಾಗಿದೆ. ಈ ತೀರ್ಪನ್ನು ಪ್ರಕಟಿಸಿದವರು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಒ.ಪಿ. ಸೈನಿ ಅವರು. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ ಸಿಬಿಐ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. ಅಂದರೆ ನ್ಯಾಯಾಲಯ ಈ ರೀತಿ ಹೇಳಿದೆ ಎಂದರೆ 2ಜಿ ಹಗರಣದ ಆರೋಪಿಗಳ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಸಿಬಿಐ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದೇ ಅರ್ಥ.

ಯಾಕೆಂದರೆ ಸಿಐಜಿ ತನಿಖೆಯಲ್ಲಿ 2ಜಿ ಹಗರಣ ನಡೆದಿರುವುದು ಸಾಬೀತಾಗಿದ್ದರೂ ಸಿಬಿಐ ಅದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ವಿಫಲವಾಗಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ದೇಶಾದ್ಯಂತ ಭ್ರಷ್ಟಾಚಾರ ವಿರೋಧಿ ಹೋರಾಟ ನಡೆಯಬೇಕಿದ್ದರೆ ಸಿಬಿಐ ಪೂರಕ ಸಾಕ್ಷಿಗಳನ್ನು ಒದಗಿಸಲು ಸಿಬಿಐ ವಿಫಲವಾಗಿರುವುದು ದೊಡ್ಡ ವೈಫಲ್ಯದಂತೆ ಕಂಡುಬರುತ್ತಿದೆ. ಆರೋಪಿಗಳು ಪ್ರಭಾವಿಗಳಾಗಿರುವುದರಿಂದ ಸಾಕ್ಷಿಗಳನ್ನು ನಾಶ ಮಾಡಿದ್ದಾರೆ ಎನ್ನುವ ಶಂಖೆಯೂ ವ್ಯಕ್ತವಾಗಿದೆ.

ಹಗರಣ ನಡೆದಿರುವುದು ನಿಜ: ಅರುಣ್ ಜೇಟ್ಲಿ

ಹಗರಣ ನಡೆದಿರುವುದು ಸತ್ಯ ಎನ್ನುವುದು ಇಡೀ ಭಾರತೀಯರಿಗೆ ಅರಿವಾಗಿದೆ. ಯಾಕೆಂದರೆ ಈ ಹಗರಣದ ಭಾದೆಯನ್ನು ಇಡೀ ಭಾರತೀಯರು ಅನುಭವಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿಯವರು, 2ಜಿ ತರಂಗಗುಚ್ಛ ಹಂಚಿಕೆ ಹಗರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಬಗ್ಗೆ ಕಾಂಗ್ರೆಸ್ ಖುಷಿ ಪಡಬೇಕಾಗಿಲ್ಲ. ಇಡೀ ಹಂಚಿಕೆ ನೀತಿಯೇ ಭ್ರಷ್ಟತನದಿಂದ ಕೂಡಿದೆ ಎಂದು ತಿಳಿಸಿದ್ದಾರೆ.

ತೀರ್ಪು ಪ್ರಕಟಗೊಂಡ ನಂತರ ಪ್ರತಿಕ್ರಿಯೆ ನೀಡಿರುವ ಅರುಣ್ ಜೇಟ್ಲಿ, ಈ ತೀರ್ಪನ್ನು ಕಾಂಗ್ರೆಸ್ ಗೌರವ ಯುತ ಬ್ಯಾಡ್ಜ್ ಎಂದುಕೊಳ್ಳಬೇಕಾಗಿಲ್ಲ. ಕೆಲವು ಕಾಂಗ್ರೆಸ್ ನಾಯಕರು ಈ ತೀರ್ಪಿನ ಬಗ್ಗೆ ಸಂತಸ ಪಡುತ್ತಿದ್ದಾರೆ. ಇದೊಂದು ಗೌರವಯುತ ಬ್ಯಾಡ್ಜ್ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಕಾಂಗ್ರೆಸ್ ಎಂದಿಗೂ ಪಾರದರ್ಶಕ ರೀತಿಯಲ್ಲಿ ಹಂಚಿಕೆ ಮಾಡಿಲ್ಲ. ಒಟ್ಟಾರೆಯಾಗಿ ಕಾಂಗ್ರೆಸ್ ಮಾಡಿದ ತರಂಗಗುಚ್ಛ ಹಂಚಿಕೆ ನೀತಿಯೇ ಭ್ರಷ್ಟಾಚಾರದಿಂದ ಕೂಡಿದ್ದಾಗಿದೆ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ಹಗರಣದ ಕುರಿತಾಗಿ ಸ್ಪಷ್ಟವಾದ ಸಾಕ್ಷಾಧಾರಗಳನ್ನು ಸಲ್ಲಿಸಲಾಗಿದ್ದರೂ ಕೋರ್ಟಿನಲ್ಲಿ ಆರೋಪ ಯಾಕೆ ಸಾಬೀತಾಗಿಲ್ಲ ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ ಎಂದು ಪ್ರಕರಣದ ತನಿಖೆ ನಡೆಸಿದ್ದ ಮಾಜಿ ಸಿಬಿಐ ಅಧಿಕಾರಿ ಎ.ಪಿ. ಸಿಂಗ್ ತಿಳಿಸಿದ್ದಾರೆ. ಇನ್ನೊಬ್ಬ ಅಧಿಕಾರಿ ಜೆ. ಗೋಪಾಲಕೃಷ್ಣ ಅವರು ಕೆಟ್ಟ ತೀರ್ಪು ಎಂದು ಬಣ್ಣಿಸಿದ್ದಾರೆ. ಎಸ್. ಗುರುಮೂರ್ತಿ ಎನ್ನುವ ಇನ್ನೊಬ್ಬ ಅಧಿಕಾರಿ ಈ ಬಗ್ಗೆ ಸುಪ್ರೀಂಕೋರ್ಟು ಮೊರೆ ಹೋಗಬಹುದು. ಇದು ವಿಶ್ವಾಸಾರ್ಹತೆಯನ್ನು ಹೊಂದಿರದ ತೀರ್ಪು ಆಗಿದೆ ಎಂದಿದ್ದಾರೆ.

ಈ ತೀರ್ಪಿನ ಬಗ್ಗೆ ಸುಬ್ರಹ್ಮಣಿಯನ್ ಸ್ವಾಮಿ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ಈ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟಿನ ಮೊರೆಹೋಗಬೇಕಾಗುತ್ತದೆ. ಯಾಕೆಂದರೆ ಹೈಕೋರ್ಟು, ಸಿಬಿಐ ವಿಶೇಷ ಕೋರ್ಟಿನಲ್ಲಿ ಸಾಬೀತಾಗದೆ ಉಳಿದಿರುವ ಪ್ರಕರಣಗಳು ಸುಪ್ರೀಂಕೋರ್ಟಿನಲ್ಲಿ ಸಾಬೀತಾದ ಎಷ್ಟೋ ಉದಾಹರಣೆಗಳಿವೆ. ಆದ್ದರಿಂದ ಈ ತೀರ್ಪಿನ ಬಗ್ಗೆ ಕಾಂಗ್ರೆಸಿಗರು ಬೀಗಬೇಕಾಗಿಲ್ಲ…

ಚೇಕಿತಾನ

Tags

Related Articles

Close