ಪ್ರಚಲಿತ

45ನೇ ಮನ್ ಕೀ ಬಾತ್!! ವಸುಧೈವ ಕುಟುಂಬಕಂ ನೀತಿಯಂತೆ ನಮ್ಮ ದೇಶದ ಯೋಗ!!

ಪ್ರಧಾನಿ ನರೇಂದ್ರ ಮೋದಿಯವರ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವು ಈಗಾಗಲೇ 150 ದೇಶಗಳಲ್ಲಿ ಪ್ರಸಾರವಾಗುತ್ತಿದ್ದು ಎಲ್ಲ ದೇಶಗಳಲ್ಲೂ ಭಾರತೀಯ ಮೂಲದವರಿಂದ ಅದ್ಭುತ ಪ್ರತಿಕ್ರಿಯೆ ಬಂದಿರುವ ಬಗ್ಗೆ ಆಲ್ ಇಂಡಿಯಾ ರೇಡಿಯೊ(ಎಐಆರ್) ಈಗಾಗಲೇ ಹೇಳಿದೆ. ಇದರ ಬೆನ್ನಲ್ಲೇ 45ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಮತ್ತೊಮ್ಮೆ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.

ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿ, ಒಂದು ದೇಶ, ಒಂದು ತೆರಿಗೆ ಎಂಬುದು ಪ್ರತಿ ಭಾರತೀಯನ ಕನಸಾಗಿತ್ತು. ಅದರಲ್ಲೂ ನಾವು ಜಿ ಎಸ್ ಟಿ ಜಾರಿಗೆ ತರಲು ಹೊರಟಾಗಿ ಪ್ರತಿ ರಾಜ್ಯಗಳು ಸಹಕಾರ ನೀಡಿವೆ. ಹಾಗಾಗಿ ಈ ಜಿ ಎಸ್ ಟಿ ಯಶಸ್ಸಿನ ಹೆಗ್ಗಳಿಕೆ ಈ ರಾಜ್ಯಕ್ಕೂ ಸಲ್ಲಬೇಕು. ಇದು ಪ್ರಜಾಪ್ರಭುತ್ವದ ಸೌಂದರ್ಯವಾಗಿದೆ, ನಿಷ್ಠೆಗೆ ಸಂದ ಜಯವಾಗಿದೆ ಎಂದು ವರ್ಣಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಆಯೋಜಿಸಿದ್ದ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆ ಸ್ಮರಿಸಿದ್ದಾರೆ!!

Related image

ಯೋಗದಿಂದ ಆರೋಗ್ಯ ಕ್ರಾಂತಿ!!

ಹೌದು… ಪ್ರಧಾನಿ ಮೋದಿ ತಮ್ಮ 45ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಯೋಗ ದಿನದ ಮಹತ್ವದ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಿದ್ದಲ್ಲದೇ, ಆಕಾಶದಲ್ಲಿ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದ ವಾಯುಸೇನೆಯ ಸ್ಕೈ ಡೈವರ್ ಗಳನ್ನು ಹಾಡಿ ಹೊಗಳಿದ್ದಾರೆ!! “ಆಕಾಶದ ಮಧ್ಯದಲ್ಲಿ ಭೂಮಿಯಿಂದ ಸುಮಾರು 15,000 ಅಡಿ ಎತ್ತರದಲ್ಲಿ ಯೋಗಾಸನವನ್ನು ಪ್ರದರ್ಶಿಸುವ ಮೂಲಕ ಎಲ್ಲರಿಗೂ ದಿಗ್ಭ್ರಮೆ ಮೂಡಿಸಿದರು,. ಅದ್ಭುತ ಏನೆಂದರೆ ಅವರು ಇಷ್ಟು ಎತ್ತರದಲ್ಲಿ ಇದನ್ನು ವಿಮಾನದ ಒಳಗೆ ಪ್ರದರ್ಶನ ಮಾಡಲಿಲ್ಲ, ಬದಲಿಗೆ ಗಾಳಿಯಲ್ಲಿ ತೇಲುತ್ತಾ ಯೋಗದ ಭಂಗಿಗಳನ್ನು ಪ್ರದರ್ಶಿಸಿದರು” ಎಂಬುದಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು.

ಅಷ್ಟೇ ಅಲ್ಲದೇ, ಇತ್ತೀಚೆಗಷ್ಟೇ ಮುಗಿದ ಯೋಗ ದಿನದ ಕಾರ್ಯಕ್ರಮವು ಯಶಸ್ವಿಯಾಗಿದ್ದು, ಆರೋಗ್ಯ ಕ್ರಾಂತಿಯಾಗುತ್ತಿದೆ ಎಂದು ಮೋದಿ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದರು. ಜೂನ್ 21ರಂದು ವಿಶ್ವ ಯೋಗ ದಿನದಂದು ಇಡೀ ವಿಶ್ವವೇ ಒಂದಾಗಿತ್ತಲ್ಲದೇ, ವಿಶ್ವದಾದ್ಯಂತ ಜನತೆ ಉತ್ಸಾಹ ಮತ್ತು ಶಕ್ತಿಯಿಂದ ಯೋಗಾಭ್ಯಾಸ ಮಾಡಿದರು. ವಿಶ್ವ ಸಂಸ್ಥೆಯ ಹೆದ್ದಾರಿ ಕಚೇರಿಯಿಂದ ಹಿಡಿದು ಸೌದಿ ಅರೇಬಿಯಾದಲ್ಲೂ ಯೋಗ ದಿನಾಚರಣೆ ನಡೆದಿದ್ದು, ಮಹಿಳೆಯರು ಸಹ ಯೋಗ ಪ್ರದರ್ಶನ ನಡೆಸಿದರು. ಹಾಗಾಗಿ, ವಸುಧೈವ ಕುಟುಂಬಂ ನೀತಿಯಂತೆ ನಮ್ಮ ದೇಶದ ಯೋಗ ಕಾರ್ಯಕ್ರಮ” ಎಂದು ಬಾನುಲಿ ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದಾರೆ.

ಬೌಲರ್ ರಶೀದ್ ಖಾನ್, ಸ್ಕೈಡೈವರ್ ಗಳಿಗೆ ಪ್ರಧಾನಿ ಮೆಚ್ಚುಗೆ!!!

ತಮ್ಮ ಪಾಕ್ಷಿಕ ಬಾನುಲಿ ಭಾಷಣ ‘ಮನ್ ಕೀ ಬಾತ್’ನ 45ನೇ ಕಾರ್ಯಕ್ರಮದಲ್ಲಿ ಮಾತಾನಾಡಿರುವ ಪ್ರಧಾನಿ ನರೇಂದ್ರ ಮೋದಿ , ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್ ಮತ್ತು ಆಕಾಶದಲ್ಲಿ ಯೋಗ ಮಾಡಿದ ಐಎಎಫ್ ಸ್ಕೈಡೈವರ್ ಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ!! ಹೌದು… “ಬೌಲರ್ ರಶೀದ್ ಖಾನ್ ಈ ವರ್ಷದ ಆರಂಭದಲ್ಲಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರು,” ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿಯವರ ಟ್ಟೀಟನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

Image result for ಬೌಲರ್ ರಶೀದ್ ಖಾನ್

ಅಫ್ಘಾನಿಸ್ತಾನಿಯರು ತಮ್ಮ ಹೀರೋ ರಶೀದ್ ಖಾನ್ ಬಗ್ಗೆ ತುಂಬಾ ಹೆಮ್ಮೆ ಹೊಂದಿದ್ದಾರೆ ಎಂದು ಹೇಳಿರುವ ಮೋದಿ ಅಫ್ಘಾನಿಸ್ತಾನ ಬೆಂಗಳೂರಿನಲ್ಲಿ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡಿದ್ದನ್ನೂ ಪ್ರಧಾನಿ ಇದೇ ವೇಳೆ ಸ್ಮರಿಸಿದರು. ಟ್ರೋಫಿ ಸ್ವೀಕರಿಸುವ ವೇಳೆ ಅಫ್ಘಾನಿಸ್ತಾನದ ಆಟಗಾರರನ್ನೂ ಫೋಟೋಗೆ ಕರೆಯುವ ಮೂಲಕ ಭಾರತದ ತಂಡ ಇಡೀ ಜಗತ್ತಿಗೆ ಮಾದರಿ ಕೆಲಸ ಮಾಡಿದೆ ಎಂದು ಪ್ರಧಾನಿ ಶ್ಲಾಘಿಸಿದರು. “ಈ ಘಟನೆಯು ಕ್ರೀಡೆಗಳ ಉತ್ಸಾಹವನ್ನು ವಿವರಿಸುತ್ತದೆ. ಸಮಾಜವನ್ನು ಒಟ್ಟುಗೂಡಿಸಲು ಮತ್ತು ನಮ್ಮ ಯೌವನದ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ಕ್ರೀಡೆಗಳು ಅತ್ಯುತ್ತಮ ಮಾರ್ಗವಾಗಿದೆ. ಭವಿಷ್ಯದಲ್ಲಿ ಕೂಡಾ ನಾವು ಅತ್ಯುತ್ತಮ ಕ್ರೀಡಾ ಸ್ಪೂರ್ಥಿಯೊಂದಿಗೆ ಪರಸ್ಪರ ಆಡುತ್ತೇವೆ ಮತ್ತು ಒಟ್ಟಿಗೆ ಸಾಧನೆ ಮಾಡುತ್ತೇವೆ ಎಂದು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ,” ಎಂದು ಪ್ರಧಾನಿ ಹೇಳಿದ್ದಾರೆ.

ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ಪ್ರಸ್ತಾಪ!!

ಇನ್ನು, ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆಯೂ ಪ್ರಸ್ತಾಪಿಸಿದ್ದು, ಹಿಂಸೆ ಮತ್ತು ಕ್ರೌರ್ಯದಿಂದ ಯಾವುದೇ ಸಮಸ್ಯೆಗಳು ಈಡೇರುವುದಿಲ್ಲ ಎಂದು ಹೇಳಿದ್ದಾರೆ. 2019ಕ್ಕೆ ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ಆಗಿ 100 ವರ್ಷ ಆಗಲಿದೆ ಎಂದು ಸ್ಮರಿಸಿದರು. ಜತೆಗೆ, ಜೂನ್ 23ಕ್ಕೆ ಶ್ಯಾಂ ಪ್ರಸಾದ್ ಮುಖರ್ಜಿಯವರ ಪುಣ್ಯ ಸ್ಮರಣೆಯನ್ನು ಸ್ಮರಿಸಿಕೊಂಡ ಪ್ರಧಾನಿ, ಶಿಕ್ಷಣ ಹಾಗೂ ಹಲವು ಕ್ಷೇತ್ರಗಳಿಗೆ ಅವರ ಕೊಡುಗೆಯನ್ನು ನೆನೆದರು.

ಅಷ್ಟೇ ಅಲ್ಲದೇ, “ಶ್ಯಾಂ ಪ್ರಸಾದ್ ಮುಖರ್ಜಿಯವರು ಶಿಕ್ಷಣ ಪ್ರೇಮಿಯಾಗಿದ್ದರು. ಅವರು ಕೋಲ್ಕತ್ತಾ ವಿಶ್ವವಿದ್ಯಾಲಯದ ಅತಿ ಕಿರಿಯ ವಯಸ್ಸಿನ ಉಪಕುಲಪತಿಯಾಗಿದ್ದರು. ಮುಖರ್ಜಿಯವರ ಆಹ್ವಾನದ ಮೇರೆಗೆ ರವೀಂದ್ರ ನಾಥ ಟ್ಯಾಗೋರ್ ಅವರು ವಿವಿಯಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಮಾತನಾಡಿರುವ ಬಗೆಗೆ ಮೋದಿ ತಮ್ಮ 45ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸ್ಮರಿಸಿದ್ದಾರೆ.

ಮೂಲ:
https://timesofindia.indiatimes.com/india/yoga-ushering-a-wellness-revolution-says-pm-modi-on-mann-ki-baat-top-quotes/articleshow/64718232.cms

https://www.firstpost.com/india/on-mann-ki-baat-narendra-modi-says-yoga-ushering-in-wellness-revolution-credits-states-for-success-of-gst-4581691.html

– ಅಲೋಖಾ

Tags

Related Articles

Close