ಪ್ರಚಲಿತ

ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದ ಅಮೆರಿಕದ ಜೇಮಿ ಡಿಮೋನ್

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೆಂದರೆ ಕೇವಲ ಭಾರತೀಯರಿಗೆ ಮಾತ್ರ ಪ್ರಿಯರಲ್ಲ. ಬದಲಾಗಿ ವಿಶ್ವಕ್ಕೆ ಪ್ರಿಯರಾದ, ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಪ್ರಪಂಚಕ್ಕೆ ಮಾದರಿಯಾದ ವ್ಯಕ್ತಿ. ಅತ್ಯಂತ ಶುದ್ಧ ರಾಜಕಾರಣ ನಡೆಸುತ್ತಿರುವ ಅವರ ಕಾರ್ಯಗಳು, ಯೋಜನೆಗಳು ವಿಶ್ವದ ಹಲವು ರಾಷ್ಟ್ರಗಳಿಗೆ ಮಾರ್ಗದರ್ಶಿಯಾಗಿವೆ ಎಂದರೆ ತಪ್ಪಾಗಲಾರದೇನೋ.

ಅಮೆರಿಕದ ಬ್ಯಾಂಕಿಂಗ್ ಸಂಸ್ಥೆ ಜೆ ಪಿ ಮಾರ್ಗನ್ಸ್ ಚೇಸ್‌ನ ಸಿಇಒ ಜೇಮಿ ಡಿಮೋನ್ ಅವರು ಪ್ರಧಾನಿ ಮೋದಿ ಅವರ ಕಾರ್ಯ ವೈಖರಿಯನ್ನು ಮೆಚ್ಚಿ ನುಡಿದಿದ್ದು, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅದ್ವಿತೀಯ ಕೆಲಸಗಳನ್ನು ಮಾಡಿದ್ದಾರೆ. ಅಪೂರ್ವ ಎನಿಸುವ ಶಿಕ್ಷಣ ವ್ಯವಸ್ಥೆ, ಮೂಲಸೌಕರ್ಯಗಳನ್ನು ರೂಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಸಾಧನೆಗಳನ್ನು ಹೊಗಳಿರುವ ಅವರು ಭಾರತದ ಸುಮಾರು ನಲವತ್ತು ಕೋಟಿ ಜನರನ್ನು ಅವರು ಬಡತನ ರೇಖೆಯಿಂದ ಮೇಲೆತ್ತುವ ಕೆಲಸ ಮಾಡಿದ್ದಾರೆ. ನಲವತ್ತು ಕೋಟಿ ಜನರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಮೂಲಕ ಬಯಲು ಮುಕ್ತ ಶೌಚಕ್ಕೆ ಕೊಡುಗೆ ನೀಡಿದ್ದಾರೆ. ಭಾರತದ ಎಪ್ಪತ್ತು ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರಣದಿಂದ ಬ್ಯಾಂಕ್ ಅಕೌಂಟ್ ಆಗಿದೆ. ಪ್ರಧಾನಿ ಮೋದಿ ಅವರಂತಹ ಗಟ್ಟಿ ಜನ ಅಮೆರಿಕಕ್ಕೆ ಸ್ವಲ್ಪವಾದರೂ ಇರಬೇಕಿತ್ತು. ಆದರೂ ನಾವು ಭಾರತೀಯರಿಗೆ ಹಾಗೆ ಮಾಡಿ, ಹೀಗೆ ಮಾಡಿ ಎಂದು ಬೋಧಿಸಲು ಹೋಗುತ್ತಿದ್ದೇವೆ ಎಂದು ಆವರು ಹೇಳಿದ್ದಾರೆ.

ಒಂದು ದೇಶದ ನಾಯಕ ದೃಢವಾಗಿದ್ದರೆ ಆ ರಾಷ್ಟ್ರ ಬಲಿಷ್ಟವಾಗುವುದು ಸಾಧ್ಯವಾಗುತ್ತದೆ. ಭಾರತವನ್ನು ಕಳೆದ ಹತ್ತು ವರ್ಷಗಳ ಹಿಂದೆ ಸುಮಾರು ದಶಕಗಳ ಕಾಲ ಆಡಳಿತ ನಡೆಸಿದ ಹಳೆಯ ಆಡಳಿತಶಾಹಿ ವ್ಯವಸ್ಥೆಯನ್ನು ಮುರಿದು, ಬದಲಾವಣೆಯ ಗಾಳಿ ಬೀಸುವಂತೆ ಮಾಡುವ ಗಟ್ಟಿತನವನ್ನು ಪ್ರಧಾನಿ ಮೋದಿ ಅವರು ಪ್ರದರ್ಶಿಸಿದ್ದಾರೆ. ಇಂತಹ ಗಟ್ಟಿತನ ಅಮೆರಿಕಕ್ಕೂ ಬರಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಭಾರತದ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ವ್ಯವಸ್ಥೆಯನ್ನು ಕೊಂಡಾಡಿದ ಅವರು, ಪ್ರತಿಯೊಬ್ಬ ನಾಗರಿಕನನ್ನು ಕೈಯಿಂದಾಗಲಿ, ಕಣ್ಣಿಂದಾಗಲಿ ಅಥವಾ ಬೆರಳಿನಿಂದ ಗುರುತಿಸಲಾಗುತ್ತದೆ. ಎಪ್ಪತ್ತು ಕೋಟಿ ಜನರಿಗೆ ಬ್ಯಾಂಕ್ ಖಾತೆ ತೆರೆಯಲಾಗಿದೆ. ಅವರು ಆನ್‌ಲೈನ್ ಮೂಲಕ ಸುಲಭವಾಗಿ ಹಣಕಾಸು ವ್ಯವಹಾರ ಮುಗಿಸಬಲ್ಲರು ಎಂದೂ ಅವರು ಭಾರತವನ್ನು ಹೊಗಳಿದ್ದಾರೆ.

Tags

Related Articles

Close