ಪ್ರಚಲಿತ

ಮತ್ತೆ ಬೇಟೆಗೆ ನಿಂತ ಚಾಣಕ್ಯ.! ಕರ್ನಾಟಕದಲ್ಲಿ ಕೇಸರಿ ಪತಾಕೆ ಹಾರಿಸುವುದು ಖಚಿತ.!

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು‌ ಸಾಧಿಸಲು ಪಣ ತೊಟ್ಟಿರುವ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.‌ ಆಡಳಿತದಲ್ಲಿ ಇರುವ ಕಾಂಗ್ರೆಸ್ ಈ ಬಾರಿಯೂ ತಮ್ಮದೇ ಸರಕಾರ ರಚನೆ ಮಾಡಲು ಹರಸಾಹಸ ಪಡುತ್ತಿದ್ದರೆ, ಇತ್ತ ದೇಶಾದ್ಯಂತ ವಿಜಯೋತ್ಸವ ಆಚರಿಸಿ ಕಮಲ‌ ಅರಳಿಸಿರುವ ಬಿಜೆಪಿ ಕರ್ನಾಟಕವನ್ನೂ ತಮ್ಮ ಬತ್ತಳಿಕೆಗೆ ಸೇರಿಸಿಕೊಳ್ಳಲು ತಯಾರಿ ನಡೆಸಿದೆ. ಕಾಂಗ್ರೆಸ್ ನ ಜನವಿರೋಧಿ ನೀತಿಗೆ ಮತ್ತು ಹಿಂದೂ ವಿರೋಧಿ ನೀತಿಗೆ ಬೇಸತ್ತ ರಾಜ್ಯದ ಜನತೆ ಹೊಸ ಸರಕಾರಕ್ಕಾಗಿ ಕಾಯುತ್ತಿರುವುದು ಸತ್ಯ. ಅದೇ ಕಾರಣದಿಂದ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಇಡೀ ದೇಶದ ಜನರ ಗಮನ ಸೆಳೆದಿದೆ.!

ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳು ತಮ್ಮ ಗೆಲುವಿಗಾಗಿ ಪಣತೊಟ್ಟಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ , ರಾಜಕೀಯ ಚಾಣಕ್ಯ ಅಮಿತ್ ಷಾ ಕರ್ನಾಟಕದಲ್ಲಿ ತಮ್ಮ ರಾಜಕೀಯ ತಂತ್ರ ರೂಪಿಸಲು ಸಜ್ಜಾಗಿದ್ದು , ಈಗಾಗಲೇ ಕರ್ನಾಟಕದಲ್ಲಿ ಕೆಲವು ಸಮಾವೇಶಗಳನ್ನು ನಡೆಸಿ ಕಾಂಗ್ರೆಸ್ ಎದೆಯಲ್ಲಿ ನಡುಕ ಉಂಟಾಗುವಂತೆ ಮಾಡಿದ್ದಾರೆ. ‌ಯಾಕೆಂದರೆ ಅಮಿತ್ ಷಾ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಧೂಳಿಪಟವಾಗಿಬಿಟ್ಟಿದೆ. ಅದೇ ಕಾರಣಕ್ಕಾಗಿ ಕರ್ನಾಟಕದಲ್ಲೂ ಭಾರೀ ಪೈಪೋಟಿ ಆರಂಭವಾಗಿದೆ.

ಷಾ ಕರ್ನಾಟಕ ಭೇಟಿ..!

ಮೋದಿ-ಷಾ ಮೋಡಿಗೆ ಇಡೀ ದೇಶದಲ್ಲೇ ಕಾಂಗ್ರೆಸ್ ನೆಲಕಚ್ಚಿದೆ ಎಂದರೆ ತಪ್ಪಾಗದು. ಪ್ರಧಾನಿ ಮೋದಿ ಮತ್ತು ಬಿಜೆಪಿ ಚಾಣಕ್ಯ ಅಮಿತ್ ಷಾ ಈಗಾಗಲೇ ಕರ್ನಾಟಕದ ಮೇಲೆ ತಮ್ಮ ಹದ್ದಿನ‌ ಕಣ್ಣಿಟ್ಟಿದ್ದು, ಕರ್ನಾಟಕದಲ್ಲಿ ಕೇಸರಿ ಪತಾಕೆ ಹಾರಿಸುವುದು ಖಚಿತ ಎಂಬುದು ಸ್ವತಃ ಕಾಂಗ್ರೆಸಿಗರೇ ಒಪ್ಪಿಕೊಂಡಿದ್ದಾರೆ. ಇದೀಗ ಇಂದು ಮತ್ತೆ ಕರ್ನಾಟಕಕ್ಕೆ ಲಗ್ಗೆ ಇಟ್ಟ ಷಾ ಈ ಬಾರಿ ಯೋಜನೆ ರೂಪಿಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ ಮುಗಿಸುತ್ತಲೇ ಇತ್ತ ಎಂಟ್ರಿ ಕೊಟ್ಟ ಷಾ ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ಇಂದಿನಿಂದ ಎರಡು ದಿನಗಳ ಕಾಲ ಕರ್ನಾಟಕ
ಪ್ರವಾಸ ಕೈಗೊಂಡಿರುವ ಷಾ , ಚುನಾವಣೆಗೆ ಭಾರೀ ತಯಾರಿ ಆರಂಭಿಸಿದ್ದಾರೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಹಿಂದೂಗಳನ್ನು ಒಡೆಯುವ ಕೆಲಸ ಆರಂಭಿಸಿದ್ದು , ಚುನಾವಣೆಗೆ ಲಾಭ ಗಳಿಸುವ ಹುನ್ನಾರ ಹೂಡಿದ್ದಾರೆ. ಆದರೆ ಇದನ್ನೇ ಇದೀಗ ಬಾಣವಾಗಿ ಉಪಯೋಗಿಸುತ್ತಿರುವ ಬಿಜೆಪಿ ಚಾಣಕ್ಯ ಕರ್ನಾಟಕ ಭೇಟಿಯ ವೇಳೆ ಮುಖ್ಯವಾಗಿ ಲಿಂಗಾಯತ ಮತ್ತು ದಲಿತರೊಂದಿಗೆ ವಿಶೇಷ ಮಾತುಕತೆ ನಡೆಸಲಿದ್ದಾರೆ.

ನಡೆದಾಡುವ ದೇವರು ಎಂದೇ ಖ್ಯಾತಿ ಗಳಿಸಿರುವ ಸಿದ್ದಗಂಗಾ ಮಠದ ‌ಶ್ರೀಗಳ ಆಶೀರ್ವಾದ ಪಡೆದ ಅಮಿತ್ ಷಾ , ಮಠದ ಭೇಟಿಯ ಕುರಿತು ತಕ್ಷಣ ಟ್ವಿಟ್
ಮಾಡಿದ್ದಾರೆ. ಸಿದ್ದಗಂಗಾ ಶ್ರೀ ಗಳು ನಮಗೆಲ್ಲರಿಗೂ ಮಾದರಿ. ಅವರ ಆಶೀರ್ವಾದ ಪಡೆದು ಬಹಳ ಸಂತೋಷವಾಗಿದೆ. ಕರ್ನಾಟಕ ಇಂತಹ ಮಹಾನ್ ವ್ಯಕ್ತಿಗಳ ನಾಡು ಎಂಬುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.

ರೈತರು ಮತ್ತು ವರ್ತಕರೊಂದಿಗೆ ಷಾ ಮಾತುಕತೆ..!

ಇದೇ ವೇಳೆ ರಾಜ್ಯದ ರೈತರ ಮತ್ತು ವರ್ತಕರ ಕೊತೆಗೂ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಮಿತ್ ಷಾ ರೋಡ್ ಶೋ ಕೂಡಾ ನಡೆಸಲಿದ್ದಾರೆ.
ಬೆಳಿಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಷಾ ಮಧ್ಯಾಹ್ನದ ವೇಳೆಗೆ ತಿಪಟೂರಿನಲ್ಲಿ ತೆಂಗುಬೆಳೆಗಾರರ ಸಮಾವೇಶದಲ್ಲೂ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ತೀರ್ಥಹಳ್ಳಿ ಯಲ್ಲಿ ಅಡಿಕೆ ಬೆಳೆಗಾರರ ಜೊತೆ ಸಮಾವೇಶ ನಡೆಸಲಿದ್ದಾರೆ.

ಈಗಾಗಲೇ ದೇಶದ ರೈತರಿಗೆ ವಿಶೇಷ ಸವಲತ್ತುಗಳನ್ನು ಒದಗಿಸಿರುವ ಮೋದಿ ಸರಕಾರ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೊಂಡಿದ್ದಾರೆ. ‌ಆದರೆ ರಾಜ್ಯ ಸರಕಾರ ಕೇಂದ್ರದ ಯೋಜನೆಯನ್ನು ತಮ್ಮ ಯೋಜನೆ ಎಂದು ತಿರುಗಾಡುತ್ತಿದೆ. ಇದೇ ಕಾರಣಕ್ಕಾಗಿ ಕೇಂದ್ರದ ಯೋಜನೆಗಳನ್ನು ರಾಜ್ಯದ ಜನರಿಗೆ ಸರಿಯಾಗಿ ಮನದಟ್ಟು ಮಾಡಲು ಈ ಸಮಾವೇಶದಲ್ಲಿ ಷಾ ಮುಖ್ಯ ಪಾತ್ರ ವಹಿಸಲಿದ್ದಾರೆ.‌

ಏನೇ ಆದರೂ‌ ಕರ್ನಾಟಕದಲ್ಲೂ ಬಿಜೆಪಿ ವಿಜಯೋತ್ಸವ ಆಚರಿಸಿ ಕೇಸರಿ ಪತಾಕೆ ಹಾರಿಸುವುದು ಖಚಿತ ಎಂಬ ಮುನ್ಸೂಚನೆ ಈಗಾಗಲೇ ದೊರೆತಿದ್ದು, ಕಾಂಗ್ರೆಸ್ ಗೆ ಸೋಲಿನ‌ ಭೀತಿ‌ ಹೆಚ್ಚಾಗಿದೆ. ಅಮಿತ್ ಷಾ ಮುಂದಿನ ಬೇಟಯೇ ಕರ್ನಾಟಕ ಎಂಬುದು ಈ ಹಿಂದೆ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವಾಗಲೇ ಕರೆ ಕೊಟ್ಟಿದ್ದರು..!

—ಅರ್ಜುನ್

Tags

Related Articles

Close