ಪ್ರಚಲಿತ

ರಾಜ್ಯ ಸಭಾದಲ್ಲಿ ಆರ್ಭಟಿಸಿದ ರಾಜಕೀಯ ಚಾಣಕ್ಯ! ಅಮಿತ್ ಷಾ ಮಾತಿಗೆ ಪತರುಗುಟ್ಟಿದ ಕಾಂಗ್ರೆಸ್ ನಾಯಕರು!!

ನಿಜಕ್ಕೂ ಈ ಕಾಂಗ್ರೆಸ್ ಪಕ್ಷದ ಯಾರನ್ನೇ ನೋಡಿದರೂ ಪಶ್ಚಾತ್ತಾಪವಾಗಿ ಹೋಗುತ್ತದೆ ಇತ್ತೀಚೆಗೆ! ಮೋದಿಯವರು ಪಕೋಡಾ ಮಾರಿ ಎಂದರು ಎಂದು ಸುಖಾಸುಮ್ಮನೆ ವಿವಾದ ಸೃಷ್ಟಿಸಿ, ಅದಕ್ಕಾದರೂ ಪಕೋಡಾ ಮಾರಿ ದುಡ್ಡು ಸಂಪಾದಿಸಿದ ಯುವಕರ ತಂಡ ಮನೆಯಲ್ಲಿ ಹೆತ್ತ ತಾಯಿ ಅಡ್ಡ ಬಿದ್ದರೂ ಬಹುಷಃ ಅಡಿಗೆ ಮನೆಗೆ ಕಾಲಿಟ್ಟಿರಲಿಕ್ಕಿಲ್ಲ! ಅಂತಹವರೆಲ್ಲ, ಪಕೋಡಿ ಪಕೋಡಿ ಎಂದು ಓಡಿದ್ದೇ ಓಡಿದ್ದು! ಅಷ್ಟೇ!! ಹೋ! ಎಂತಹ ಬೆಂಬಲ ಸಿಕ್ಕಿತೆಂದು ರಾಜ್ಯಸಭಾದಲ್ಲಿಯೂ ಸಹ ಕಾಂಗ್ರೆಸ್ ನಾಯಕರು ಪಕೋಡಾ ಎಂದಿದ್ದೇ ಎಂದಿದ್ದು!

ಆದರೆ, ರಾಜ್ಯಸಭಾದಲ್ಲಿ ಅಮಿತ್ ಷಾ ಪಕೋಡಾ ವಿಷಯದ ಬಗ್ಗೆ ಮಾತನಾಡುವುದಕ್ಕೆ ನಿಂತಾಗ, ಇಡೀ ಸಭೆ ಸ್ಥಬ್ಧವಾಗಿ ಹೋಗಿತ್ತು! “ನಿರುದ್ಯೋಗವಾದರೆ ಪಕೋಡಾವಾದರೂ ಮಾರಿ ಎಂದಿದ್ದನ್ನೇ ಹಿಡಿದು ಜಗ್ಗಾಡುವ ನೀವು ೫೫ ವರ್ಷಗಳಿಂದ ರಾಜ್ಯವಾಳುತ್ತಿದ್ದೀರಲ್ಲ, ಆಗಲೂ ನಿರುದ್ಯೋಗ ಇವತ್ತಿಗಿಂತ ಹೆಚ್ಚಿತ್ತಲ್ಲವೇ!? ಏನು ಮಾಡಿದ್ದೀರಿ ನಿರುದ್ಯೋಗ ನಿವಾರಣೆಗೆ?! ಯಾರದ್ದಿತ್ತು ತಪ್ಪು ಆಗ? ” ಎಂದು ಕೇಳಿದ್ದೇ ಕಾಂಗ್ರೆಸ್ ನಾಯಕರಿಗೆ ಕಪಾಳಕ್ಕೆ ಬಾರಿಸಿದಂತಾಗಿದೆ!

ಬಹುಷಃ ರಾಜ್ಯಸಭಾದಲ್ಲಿ ಅಮಿತ್ ಷಾ ಆಡಿರುವ ಮಾತುಗಳು ನಿಜಕ್ಕೂ ಅದ್ಭುತ!! ತೀರಾ ಎನ್ನುವಷ್ಟು ಹೀಯಾಳಿಸುವವರ ಬಾಯಿ ಮುಚ್ಚಿಸಲಿಕ್ಕೂ ಖಡಕ್ ನಡೆ ಬೇಕಾಗುತ್ತದೆ ಎಂಬುದು ಸತ್ಯ! ಮೋದಿ ಪಕೋಡಾ ಮಾರಿದರೂ ಉದ್ಯೋಗವೇ ಅಲ್ಲವೇ ಎಂದಿದ್ದನ್ನು ತಿರುಚಿ ,ಅಧಿಕಪ್ರಸಂಗಿತನದ ಹೇಳಿಕೆ ಕೊಟ್ಟಿದ್ದ ಪಿ.ಚಿದಂಬರಮ್ ಎಂದ ದೇಶ ಕಂಡ ಅತಿದೊಡ್ಡ ಭ್ರಷ್ಟಾಚಾರಿಗೆ ಅಮಿತ್ ಷಾ ತಿರುಗೇಟು ನೀಡಿದ್ದಾರೆ!

“ಪಕೋಡಾವನ್ನು ಮಾರಿ ಹಣ ಸಂಪಾದಿಸುವುದಲ್ಲಿ ಯಾವ ನಾಚಿಕೆಯೂ ಇಲ್ಲ! ಪಕೋಡಾ ಮಾರುವವನೂ ಕೂಡ ನಮ್ಮ ದೇಶಕ್ಕೆ ಮುಖ್ಯವಾದ ವ್ಯಕ್ತಿಯೇ! ಚಹಾ ಮಾರುವವರು ಪ್ರಸ್ತುತ ಪ್ರಧಾನಿಯಾಗಿಲ್ಲವೇ?!”

“ನನಗನ್ನಿಸುವ ಹಾಗೆ, ನಿರುದ್ಯೋಗಿಯಾಗಿ ಮನೆಯಲ್ಲಿರುವುದಕ್ಕಿಂತ, ಕೂಲಿಯಾಗಿ ಅಥವಾ ಪಕೋಡಾ ಮಾರಿಯಾದರೂ ಹಣ ಸಂಪಾದಿಸುವುದು ಉತ್ತಮವಲ್ಲವೇ?!” ಎಂದ ಅಮಿತ್ ಷಾ ರ ಮಾತು ಕೇಳಿ ಕಾಂಗ್ರೆಸ್ ನವರ ಹಾ ಹೂ ಎಂಬುದು ಬಿಟ್ಟು ಬೇರೇನೂ ಮಾಡಲೂ ಸಾಧ್ಯವಾಗಿಲ್ಲ!

ಸಂಸತ್ತಿನ ಸಭೆ ನಾಲ್ಕನೇ ದಿನವನ್ನೂ ಯಶಸ್ವಿಯಾಗಿ ಪೂರೈಸಿದೆ! ಅರುಣ್ ಜೇಟ್ಲಿಯವರು ೨೦೧೮ ರ ಬಜೆಟ್ ಮಂಡಿಸಿದ ಮೇಲೆ ಮೊದಲ ಬಾರಿಗೆ ಎರಡೂ ಮನೆಗಳ ಸಂಸತ್ತಿನ ಸದಸ್ಯರು ರಾಜ್ಯಸಭಾದಲ್ಲಿ ಚರ್ಚೆಗಿಳಿದಿದ್ದಾರೆ! ವಿಶೇಷವಾಗಿ, ಫೆಬ್ರುವರಿ ೩ ರಂದು ನಿಧನರಾದ ಬಿಜೆಪಿ ಸದಸ್ಯರಾಗಿದ್ದ ಹುಕುಂ ಸಿಂಗ್ ರವರಿಗೆ ನಮನ ಸಲ್ಲಿಸಿದ ನಂತರ, ರಾಜ್ಯಸಭೆಯಲ್ಲಿ ಕಲಾಪ ಶುರು ಮಾಡಲಾಗಿದೆ! ಆದರೆ, ವಿಪಕ್ಷಗಳ ಪ್ರತಿಭಟನೆ ಮಿತಿ ಮೀರಿದ ಕಾರಣ, ಕಲಾಪವನ್ನು ಎರಡು ಗಂಟೆಗಳ ಕಾಲ ಮುಂದೂಡುವಂತಹ ಪರಿಸ್ಥಿತಿಯಾಗಿತ್ತು! ಆದರೆ, ಈ ಸಲ ಕಾಂಗ್ರಸ್ ನವರಿಗೆ ಉರಿ ಬಿದ್ದಿರುವುದಂತೂ ಸತ್ಯ!

ಕಾಂಗಿಗಳು ಮೋದಿಯವರ ಹೇಳಿಕೆಗೆ ಅತಿರೇಕವೆನ್ನುವಷ್ಟು ಮಾತನಾಡಿದ್ದಲ್ಲದೇ, ಪ್ರತಿಭಟಿಸುವ ಅಬ್ಬರದಲ್ಲಿ ಕಾರ್ಮಿಕರನ್ನು ಪರೋಕ್ಷವಾಗಿಯೇ ಅವಮಾನಿಸಿರುವ ಕಾಂಗಿಗಳಿಗೆ ಅಮಿತ್ ಷಾ ಕೊಟ್ಟ ಉತ್ತರ ಮಾತ್ರ ಭರ್ಜರಿಯಾಗಿತ್ತು ಬಿಡಿ!!

” ಅಕಸ್ಮಾತ್, ಒಬ್ಬ ವ್ಯಕ್ತಿ ಪಕೋಡಾವನ್ನು ಮಾರಿ ದಿನಕ್ಕೆ ೨೦೦ ರೂ ಲಾಭವನ್ನು ಸಂಪಾದಿಸಿದರೆ ಅದು ಉದ್ಯೋಗವಲ್ಲವೇ!? ಯಾವುದು ಉದ್ಯೋಗ ಹಾಗಾದರೆ?! ೨೦೦ ರೂ ಗಳಿಕೆ ದುಡಿಮೆಯಲ್ಲವೇ?! ಪಕೋಡಾ ಮಾರಿ ಎಂದಿದ್ದನ್ನೇ ನೀವು ಪ್ರತಿಭಟಿಸುತ್ತೀರಿ ಎಂದಾದರೆ, ಇನ್ನು ಮಾರುವವನಿಗೆ ಬೆಲೆ ಕೊಡುವಿರಾ?! ,ಭಿಕ್ಷೆ ಬೇಡುವುದೂ ಸಹ ಒಂದು ವೃತ್ತಿಯೇ ಆಗಿರುವಾಗ, ಪಕೋಡಾ ಮಾರುವುದು ಉದ್ಯೋಗವಲ್ಲವೇ?!” ಎಂದು ಪ್ರಶ್ನಿಸಿದ್ದಾರೆ!

ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ನಾಯಕರಾದ ಪಿ. ಚಿದಂಬರಮ್ ” ಕೇಂದ್ರದಿಂದ ಇನ್ನೂ ನಿಜವಾದ ಉದ್ಯೋಗ ಕೊಡುವ ಯೋಜನೆ ಪ್ರಾರಂಭವಾಗಿಲ್ಲ! ನಿರುದ್ಯೋಗ ನಿವಾರಣೆಗೆ ಬಿಜೆಪಿ ಏನೂ ಮಾಡುತ್ತಿಲ್ಲ! ಈ ಹಿಂದೆ, ಕಾಂಗ್ರೆನ ಆಡಳಿತದಲ್ಲಿ ಹೀಗಿರಲಿಲ್ಲ” ಎಂದೆಲ್ಲ ಹೊಸ ವಿವಾದ ಸೃಷ್ಟಿಸಿದ ಪಿ.ಚಿದಂಬರಮ್ ಗೆ ಈಗ ಯಾಕಾದರೂ ಪ್ರಶ್ನೆ ಕೇಳಿದೆನೋ ಎನ್ನುವ ಹಾಗಾಗಿದೆ!

ಅದಲ್ಲದೇ, “ಹಿಂದೆ ಯುಪಿಎ ಸರಕಾರದಲ್ಲಿ ಅದೆಷ್ಟೋ ಕುಟುಂಬಗಳು ಬ್ಯಾಂಕಿನಲ್ಲಿ ಖಾತೆಯನ್ನೇ ಹೊಂದಿರಲಿಲ್ಲ! ಮೋದಿಯವರ ಜನಧನ ಯೋಜನೆ ಯಿಂದ ಅದೆಷ್ಟೋ ಕುಟುಂಬಗಳು ಬ್ಯಾಂಕ್ ಖಾತೆ ತೆರೆದಿದೆ! ಅದು ಯೋಜನೆಯ ಬಹುದೊಡ್ಡ ಯಶಸ್ಸು!! ಈಗ, ಕಾಂಗ್ರೆಸ್ ಆ ಯೋಜನೆ ತನ್ನದೆಂದು ಹೇಳುತ್ತಿದೆ! ಯೋಜನೆಯನ್ನು ಘೋಷಿಸಿದರೆ ಮಾತ್ರವಲ್ಲ, ಯೋಜನೆಯ ಅನುಷ್ಟಾನವೂ ಆಗಬೇಕಿದೆ! ಅದನ್ನು ಕಾಂಗ್ರೆಸ್ ಯಾವತ್ತು ಮಾಡಲೇ ಇಲ್ಲ! ಕೆಲವರು ಯೋಜನೆಯನ್ನು ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಿಸಿದ್ದಾರೆ!!,” ಎಂದು ಅಮಿತ್ ಷಾ ಕಿಡಿ ಕಾರಿದ್ದೇ ಕಾಂಗ್ರೆಸ್ ನಾಯಕರು ಬೆಪ್ಪಾಗಿ ಹೋಗಿದ್ದಾರೆ!

Image result for AMIT SHAH ROARING IN RAJYA SABHA

ಅದಲ್ಲದೇ, ಕೇಂದ್ರದವ ಜಿಎಸ್ ಟಿಯನ್ನೂ ಸಮರ್ಥಿಸಿಕೊಂಡ ಅಮಿತ್ ಷಾ, ಪ್ರಾರಂಭದಲ್ಲಿ ಏಳು ಬೀಳುಗಳಾದರೂ ಸಹ, ಮುಂದೆ ದೇಶಕ್ಕೆ ತೆರಿಗೆ ವ್ಯವಸ್ಥೆ ಅನುಕೂಲವಾಗಲಿದೆ ಎಂದಿದ್ದಾರೆ! ಅದಲ್ಲದೇ, ಕಾಶ್ಮೀರದ ವಿಚಾರವನ್ನು ಕೈಗೆತ್ತಿಕೊಂಡ ಅಮಿತ್ ಷಾರವರು, ಕಾಶ್ಮೀರದ ವಿವಾದವನ್ನು ನಿರ್ಣಾಯಕ ನಿರ್ಧಾರಗಳಿಂದ ಪರಿಹರಿಸುತ್ತಿರುವುದು ಕೇಂದ್ರ ಸರಕಾರವಾದ್ದರಿಂದ, ಅದಷ್ಟೂ ಕ್ರೆಡಿಟ್ಟು ಮೋದಿ ತಂಡದವರಿಗೆ ಸಲ್ಲಬೇಕು ಎಂದ ಅಮಿತ್ ಷಾ, ಜೊತೆ ಜೊತೆಗೆ, ಏಕಕಾಲದ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಯನ್ನೂ ಅಂಗೀಕರಿಸಿದ್ದಾರೆ! ಸರಕಾರದಿಂದ, ಜನರಿಗೆ ವಿದ್ಯುತರ ಸರಬರಾಜು, ಶೌಚಾಲಯಗಳ ವ್ಯವಸ್ಥೆ, ಗ್ಯಾಸ್ ವ್ಯವಸ್ಥೆ, ಉದ್ಯೋಗ ಮತ್ತು ಆರೋಗ್ಯ ಸೌಲಭ್ಯಗಳವರೆಗೂ ಸಹಕರಿಸುತ್ತಿದೆ! ಎಂದ ಅಮಿತ್ ಷಾ ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ!!

” ಸರ್ಜಿಕಲ್ ಸ್ಟ್ರೈಕ್ ಎನ್ನುವುದು ಐತಿಹಾಸಿಕ ಕ್ಷಣ! ಸರ್ಜಿಕಲ್ ಸ್ಟ್ರೈಕ್ ನಡೆದ ನಂತರ, ಇಡೀ ಜಗತ್ತಿನ ರಾಷ್ಟ್ರಗಳು ಭಾರತವನ್ನು ಬೇರೆಯದೇ ಆದ ವಿಶೇಷ ಭಾವದಿಂದ ಆದರಿಸಿ, ಗೌರವಿಸಲು ಪ್ರಾರಂಭಿಸಿದ್ದಾರೆ! ಅಮೇರಿಕಾ ಮತ್ತು ಇಸ್ರೇಲ್ ಬಿಟ್ಟರೆ, ತಮ್ಮ ದೇಶದ ಸೈನಿಕರನ್ನು ರಕ್ಷಿಸುವ ಮತ್ತು ಸಾವಿಗೆ ನ್ಯಾಯ ಕೊಡುವುದು ಭಾರತ ಮಾತ್ರ ಎಂಬುದು ಅರಿವಾಗಿದೆ” ಎಂದ ಅಮಿತ್ ಷಾ ಕಾಂಗಿಗಳ ಬಾಯಿ ಮುಚ್ಚಿಸಿದ್ದಾರಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close