ಪ್ರಚಲಿತ

ಬ್ರೇಕಿಂಗ್!! ಗೂಂಡಾ ನಲಪಾಡ್ ಬೇಟೆಗೆ ನಿಂತ ಬಿಜೆಪಿ ಚಾಣಕ್ಯ! ಶಾಂತಿನಗರದಲ್ಲಿ ಮಣ್ಣು ಮುಕ್ಕಲಿದೆಯಾ ಕಾಂಗ್ರೆಸ್?

ಕಾಂಗ್ರೆಸ್‍ಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಂದರೆ ಎಲ್ಲಿಲ್ಲದ ಭಯ ಅನ್ನೋದು ಹೆಚ್ಚು ಉದಾಹರಣೆ ನೀಡುವ ಮೂಲಕ
ಹೇಳಬೇಕೆಂದೇನಿಲ್ಲ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷನ ಸ್ಥಾನವನ್ನು ಅಲಂಕರಿಸಿದ ನಂತರ ಬರೋಬ್ಬರಿ 15 ರಾಜ್ಯಗಳಲ್ಲಿ ಕೇಸರಿ ಪತಾಕೆಯನ್ನು ಹಾರಿಸಿ ಒಟ್ಟು 22 ರಾಜ್ಯಗಳನ್ನು ಆಳುತ್ತಿದ್ದಾರೆ. ಸೋಲು ಅನ್ನೋದು ಚಾಣಾಕ್ಯನಿಗೆ ಗೊತ್ತೇ ಇಲ್ಲ. 22 ರಾಜ್ಯಗಳಲ್ಲಿ ತನ್ನ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿ, ಕಾಂಗ್ರೆಸ್ ಮುಕ್ತ ಭಾರತದ ಕನಸನ್ನು ನನಸು ಮಾಡಲು ಈಗ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ ಬಿಜೆಪಿ ಚಾಣಾಕ್ಯ ಅಮಿತ್ ಶಾ…

ಶಾಂತಿನಗರವನ್ನು ಅಶಾಂತಿ ಮಾಡಿದ್ದ ಕಾಂಗ್ರೆಸ್ ಗೂಂಡಾಗಳು…!

ಕಳೆದ ಕೆಲ ದಿನಗಳಿಂದ ಹಿಂದೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ನಲಪಾಡ್‍ನ ಪ್ರಕರಣ ಭಾರೀ ಸುದ್ಧಿ ಮಾಡುತ್ತಿದೆ. ಘರ್ಜಿ ಕೆಫೆಯಲ್ಲಿ ವಿದ್ವತ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಪಾಲಾಗಿರುವ ನಲಪಾಡ್‍ಗೆ ಇಂದಿಗೂ ಬಿಡುಗಡೆ ಭಾಗ್ಯ ಸಿಗಲೇ ಇಲ್ಲ. ಓರ್ವ ಅಮಾಯಕನೆಂದು ತಿಳಿದು, ರೆಸ್ಟೋರೆಂಟ್‍ನಲ್ಲಿದ್ದ ಹುಡುಗಿಯರ ಎದುರು ಹೀರೋ ಆಗಲು ಹೊರಟ ಈ ಗೂಂಡಾ ನಲಪಾಡ್ ಹಾಗೂ ಆತನ ಸ್ನೇಹಿತರು ಸೇರಿ ಭಾರೀ ಹಲ್ಲೆ ಮಾಡಿದ್ದರು. ಆದರೆ ನಂತರ ಡಾ.ರಾಜ್‍ಕುಮಾರ್ ಅವರ ಕುಟುಂಬ ವಿದ್ವತ್‍ಗೆ ಸಂಪೂರ್ಣ ಬೆಂಬಲ ನೀಡಿ ತನಿಖೆಗೆ ಪಟ್ಟು ಬಹಿಡಿದಿದ್ದರಿಂದ ಪ್ರಕರಣ ತೀವ್ರ ಸ್ವರೂಪವನ್ನೇ ಪಡೆದುಕೊಂಡಿತ್ತು. 63ನೇ ಸೆಷನ್ ನ್ಯಾಯಾಲಯದಲ್ಲಿ ಜಾಮೀನು ಸಿಗದೆ ನಂತರ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅಲ್ಲಿಯೂ ಜಾಮೀನು ತಿರಸ್ಕರಿಸಿ ನಂತರ ಈಗ ಸುಪ್ರೀಂ ಕೋರ್ಟ್‍ನ ಮೊರೆ ಹೋಗಲು ಯತ್ನಿಸಿದ್ದಾರೆ. ಆದರೆ ಸಿಸಿಟಿವಿ ಸಹಿತ ಸಾಕ್ಷ್ಯಗಳು ಬಲವಾಗಿರುವುದರಿಂದ ನಲಪಾಡ್‍ಗೆ ಬಿಡುಗಡೆ ಭಾಗ್ಯ ತುಂಬಾನೆ ಕಷ್ಟ ಎಂದೂ ಹೇಳಲಾಗುತ್ತಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಮಲ ಪಡೆ..!

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರನ ಈ ರಂಪಾಟ ಹಾಗೂ ಅದಕ್ಕೆ ಸಹಕರಿಸಿದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪ್ರಕರಣವನ್ನು ಭಾರತೀಯ ಜನತಾ ಪಕ್ಷ
ಗಂಭೀರವಾಗಿ ಪರಿಗಣಿಸಿದೆ. ಮೂಲತಃ ಕೇರಳದವರಾಗಿರುವ ಕಾಂಗ್ರೆಸ್ ಶಾಸಕ ಹ್ಯಾರಿಸ್ ಹಾಗೂ ನಲಪಾಡ್‍ನ ವಿರುದ್ಧ ಭಾರತೀಯ ಜನತಾ ಪಕ್ಷ ಸಿಡಿದೇಳಿತ್ತು. ಶಾಂತಿನಗರದಲ್ಲಿ ಅಶಾಂತಿಯನ್ನು ಸೃಷ್ಟಿಸಿರುವ ಈ ಕಾಂಗ್ರೆಸ್ ನಾಯಕರು ಗೂಂಡಾಗಿರಿಯ ಪ್ರವೃತ್ತಿಯನ್ನೇ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಈಗಾಗಲೇ ಗೂಂಡಾ ಸಂಸ್ಕøತಿಯ ಒಂದು ವಿಕೆಟ್ ಪತನವಾಗಿದ್ದು, ಇನ್ನೂ ಹಲವಾರು ವಿಕೆಟ್‍ಗಳು ಬಾಕಿ ಉಳಿದಿವೆ. ಇದನ್ನು ಕಿತ್ತೆಸೆಯಲು ಈಗ ಅಮಿತ್ ಶಾ ಟೀಂ ಶಾಂತಿನಗರಕ್ಕೆ ಬಂದಿಳಿದಿದೆ.

ಶಾಂತಿ ನಗರಕ್ಕೆ ಎಂಟ್ರಿಯಾದ ಅಮಿತ್ ಶಾ ಟೀಂ…!

ಗೂಂಡಾಗಿರಿಗೆ ತುತ್ತಾದ ಬೆಂಗಳೂರಿನ ಶಾಂತಿನಗರದ ವಿಧಾನ ಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತಂಡ ಬಂದಿಳಿದಿದೆ. ಶತಾಯ ಗತಾಯ ಶಾಂತಿನಗರವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಮಲವನ್ನು ಅರಳಿಸುವುದೆ ಈ ತಂಡದ ಪ್ಲಾನ್. ಗೂಂಡಾಗಿರಿಯಿಂದಲೇ ಹೆಸರಾಗಿರುವ ಈ ಶಾಂತಿನಗರ ವಿಧಾನ ಸಭಾ ಕ್ಷೇತ್ರವನ್ನು ವಿಶೇಷವಾಗಿ ಪರಿಗಣಿಸಿದ ಅಮಿತ್ ಶಾ ಹಾಗೂ ಅವರ ತಂಡ ಈಗಾಗಲೇ ಹಲವಾರು ಸುತ್ತಿನ ಚರ್ಚೆ ಹಾಗೂ ಸಮೀಕ್ಷೆಗಳನ್ನು ನಡೆಸಿ ಈಗ ಅಂತಿಮ ಹಂತವಾಗಿ ತನ್ನ ತಂಡವೇ ಅಲ್ಲಿ ನೆಲೆಯಾಗುವ ಮೂಲಕ ಕಾಂಗ್ರೆಸ್ ಶಾಸಕ ಹ್ಯಾರಿಸ್‍ಗೆ ನಡುಕವನ್ನುಂಟು ಮಾಡಿದೆ. ಈಗಾಗಲೇ ತನ್ನ ಮಗನ ರಂಪಾಟ ಹಾಗೂ ಕಾಂಗ್ರೆಸ್ ಗೂಂಡಾಗಳ ಹಲ್ಲೆಗಳಿಂದ ಕಂಗೆಟ್ಟು ಹೋಗಿರುವ ಹ್ಯಾರಿಸ್‍ಗೆ ಇದು ಭಾರೀ ನಡುಕವನ್ನೇ ಉಂಟುಮಾಡಿದೆ.

ಅಖಾಡಕ್ಕೆ ಇಳಿದಿದ್ದಾರೆ ರಾಷ್ಟ್ರೀಯ ಉಪಾಧ್ಯಕ್ಷ…

ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ವಿರುದ್ಧ ರಣತಂತ್ರ ಹೆಣೆಯಲು ಅಮಿತ್ ಶಾ ಟೀಂ ಸಜ್ಜಾಗಿದೆ. ಇದಕ್ಕಾಗಿ ವಿಶೇಷ ತಂಡಗಳೇ ಶಾಂತಿನಗರದ ವಿಧಾನ ಸಭಾ ಕ್ಷೇತ್ರವನ್ನು ಸುತ್ತುವರೆದಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಲಾ ಗಣೇಶನ್ ನೇತೃತ್ವದಲ್ಲಿರುವ ತಂಡವು ಶಾಂತಿನಗರದಲ್ಲಿ ಬೀಡು ಬಿಟ್ಟಿದ್ದು ಶತಾಯ ಗತಾಯ ಈ ಬಾರಿ ಕಾಂಗ್ರೆಸ್ ಶಾಸಕ ಹ್ಯಾರಿಸ್‍ಗೆ ಮಣ್ಣು ಮುಕ್ಕಿಸಲು ಸಕಲ ವ್ಯವಸ್ಥೆಯನ್ನೂ ಮಾಡುತ್ತಿದೆ. ಇನ್ನೇನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಖಾಡಕ್ಕೆ ಸಿದ್ದವಾಗಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಲು ಎಲ್ಲಾ ತಂತ್ರಗಳನ್ನೂ ಶಾ ಆಂಡ್ ಟೀಂ ಮಾಡುತ್ತಿದೆ.

ಒಟ್ಟಾರೆ ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯ ಧಿಕ್ಕನ್ನೇ ಬದಲಾಯಿಸುವಂತಹಾ ಚಾಣಾಕ್ಷತೆಯನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಅವರ ತಂಡ ಹೊಂದಿದ್ದು, ಕಾಂಗ್ರೆಸ್ ಶಾಸಕ ಹ್ಯಾರಿಸ್ ಹಾಗೂ ಆತನ ಪುತ್ರ ಗೂಂಡಾ ನಲಪಾಡ್‍ನ ಗೂಂಡಾಗಿರಿಗೆ ಮುಕ್ತಿ ಹಾಡಲಿದ್ದಾರೆ. ಮುಂದಿನ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಶಾಂತಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಶಾಂತಿಯನ್ನು ನೆಲೆಸಿಕೊಡುವುದರಲ್ಲಿ ಅಮಿತ್ ಶಾ ಟೀಂ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದೂ ಹೇಳಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close