ಪ್ರಚಲಿತ

ಮೋದಿಗೆ ಪ್ರಧಾನಿಯಾಗುವ ಅರ್ಹತೆ ಇಲ್ಲ ಎಂದ ಪ್ರಕಾಶ್ ರೈಗೆ ಬಹಿರಂಗ ಪತ್ರ… ಇನ್ನಾರು ಪ್ರಧಾನಿಯಾದರೆ ಒಳಿತು..?!

ನಮಸ್ತೇ ಪ್ರಕಾಶ್ ರೈ (ರಾಜ್?) ಅವರೇ. ನಾನು ನಿಮ್ಮ ಕೆಲ ತಿಂಗಳುಗಳವರೆಗೆ ಇದ್ದಂತಹ ಅಭಿಮಾನಿ. ನಿಮ್ಮ ಚಿತ್ರವನ್ನು ಕಂಡು ಉತ್ತಮ ನಟ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಓರ್ವ ಅಭಿಮಾನಿ. ಹಿಂದಿನಿಂದಲೂ ನಾನು ನಿಮ್ಮ ಸಿನಿಮಾವನ್ನು ನೋಡುತ್ತಲೇ ಇದ್ದೆ. ಚಿಕ್ಕಂದಿನಲ್ಲಿ ನಿಮ್ಮ ಆ ಖಳ ನಾಯಕನ ಪಾತ್ರ ನನ್ನ ಸಿಟ್ಟನ್ನು ನೆತ್ತಿಗೇರಿಸಿತ್ತು. ಆದರೆ ಬರಬರುತ್ತಾ ನಿಮ್ಮ ಪಾತ್ರಗಳನ್ನು ಬದಲಾವಣೆ ಮಾಡಿ ಹೊಸ ರೂಪ ನೀಡಿದ್ದೀರಿ.

“ನಾನೂ ನನ್ನ ಕನಸು ಕನಸು” ಎಂಬ ಚಿತ್ರ ನೋಡಿದ ನಂತರವಂತೂ ನಿಮ್ಮ ಮೇಲಿದ್ದ ಆ ಖಳ ನಾಯಕನ ಕಪ್ಪು ಮುಖವನ್ನು ನಾನು ತನ್ನಂತಾನೇ ಬದಲಾವಣೆ ಮಾಡಿಕೊಂಡಿದ್ದೆ. ಆದರೆ ಈಗ ಮತ್ತೆ ನಿಮ್ಮ ಮುಖವನ್ನು ಕಂಡರೆ ಪಿತ್ತ ನೆತ್ತಿಗೇರುವಂತೆ ಕೋಪ ಬರೋ ಹಾಗೆ ಮಾಡಿದ್ದೀರಿ. ಹಾಗಂತ ಈಗ ನೀವು ಖಳ ನಾಯಕನ ಪಾತ್ರ ಮಾಡುತ್ತಿದ್ದೀರಿ ಎಂದಲ್ಲ. ಬದಲಾಗಿ ಯಾವುದೋ ಒಂದು ಪಕ್ಷದ ಓಲೈಕೆಗಾಗಿ, ಅವರು ನೀಡುವ ಪ್ರಶಸ್ತಿ ಹಾಗೂ ಸೈಟಿನ ಆಸೆಗಾಗಿ ನೀವು ನಮ್ಮ ಭಾರತವನ್ನು ತೆಗಳುತ್ತಿದ್ದೀರಿ. ಅದಕ್ಕಾಗಿ ಈಗ ನೀವು ನನ್ನಂತಹ ಕೋಟ್ಯಾಂತರ ಅಭಿಮಾನಿಗಳ ದೃಷ್ಟಿಯಲ್ಲಿ ಖಳನಾಯಕನಾಗಿದ್ದೀರಿ.

ಪ್ರಕಾಶ್ ರೈ ಅವರೇ… ಅದ್ಯಾಕೋ ಗೊತ್ತಿಲ್ಲ. “ಬರಬರುತ್ತಾ ರಾಯರ ಕುದುರೆ ಕತ್ತೆ ಆಯಿತು” ಅಂತಾರಲ್ಲ ಹಾಗೆ ಮಾಡುತ್ತಿದ್ದೀರಿ ಅನ್ನಿಸುತ್ತೆ. ಇತ್ತೀಚೆಗೆ ನಿಮ್ಮ ತಲೆಯಲ್ಲಿರುವ ಕೂದಲುಗಳೂ ಬಿಳಿಯಾಗಿದ್ದನ್ನು ನಾನು ಕಂಡಿದ್ದೇನೆ. ಅದರೊಂದಿಗೆ ನಿಮ್ಮ ಬುದ್ಧಿಯೂ ಮಂದವಾಗುವುದನ್ನೂ ಕಾಣುತ್ತಿದ್ದೇನೆ. ವಯಸ್ಸಾದ ಹಾಗೆ ಹೀಗಾಗಿದೆಯೋ ಅಥವಾ ಮತ್ತೆ ಯಾವುದಕ್ಕಾದರೂ ಗಾಳ ಹಾಕಿದ್ದೀರೋ ಅನ್ನೋದು ತಿಳಿದಿಲ್ಲ ಬಿಡಿ.

ಚಿತ್ರ ರಂಗದ ನಟ ಹಾಗೂ ನಿಜಜೀವನದ ಖಳನಟನಾಗಿರುವ ಪ್ರಕಾಶ್ ರೈ ಅವರೇ. ನೀವು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದೀರಿ. ಪ್ರಧಾನಿ ನರೇಂದ್ರ ಮೋದಿಗೆ ದೇಶ ಆಳುವ ಅರ್ಹತೆ ಇಲ್ಲ ಎಂದು ಹೇಳಿದ್ದೀರಿ. ಯಾಕೋ ನಿಮಗೆ ವಯಸ್ಸಾಗುತ್ತಲೇ ಬುದ್ಧಿ ಮಟ್ಟ ಕಡಿಮೆ ಆಗಿದೆಯೆಂದು ಅನ್ನಿಸುತ್ತಿದೆ.

* ಪ್ರಕಾಶ್ ರೈಯವರೇ ನೀವು ಪ್ರಧಾನಿ ಮೋದಿಯವರಿಗೆ ದೇಶ ಆಳಲು ಅರ್ಹತೆ ಇಲ್ಲ ಎಂದು ಹೇಳಿದ್ದೀರಲ್ವಾ, ನಿಮಗೆ ಅವರ ಬಗ್ಗೆ ಮಾತನಾಡಲು ನಯಾ ಪೈಸೆಯ ಅರ್ಹತೆಯಾದರೂ ಇದೆಯಾ..?

* ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿಯಾಗಿ, ಬಾಲ್ಯದಿಂದಲೇ ಕಷ್ಟದ ಜೀವನವನ್ನು ನಡೆಸಿ, ರೈಲ್ವೇ ನಿಲ್ದಾಣದಲ್ಲಿ ಚಾಹಾ ಮಾರಿ ವಿಧ್ಯಾಭ್ಯಾಸ ಮಾಡಿ, ಹಂತ ಹಂತವಾಗಿ ಸಂಘದ ಹಿರಿಯರು ನೀಡಿದ ಜವಬ್ಧಾರಿಗಳನ್ನು ಸಮರ್ಥವಾಗಿ ನೀಡಿದ ವ್ಯಕ್ತಿಗೆ ಪ್ರಧಾನಿಯಾಗುವ ಅರ್ಹತೆ ಇಲ್ವಾ?

* ಲೌಖಿಕ ಜೀವನವನ್ನು ತ್ಯಜಿಸಿ, ಮನೆ ಮಠ ಬಿಟ್ಟು, ಹಿಮಾಲಯಕ್ಕೆ ತೆರಳಿ ಸನ್ಯಾಸ ಜೀವನವನ್ನು ಅಪ್ಪಿಕೊಂಡು ಎಲ್ಲವನ್ನೂ ದೇಶಕ್ಕೆ ಹಾಗೂ ಧರ್ಮಕ್ಕೆ ಅರ್ಪಿಸಿದ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಲು ಅರ್ಹರಿಲ್ವಾ..?

* ಭಾರತೀಯ ಜನತಾ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ಒಂದೊಂದೇ ಪದವಿಯನ್ನು ಸ್ವೀಕರಿಸಿ, 4 ಬಾರಿ ಗುಜರಾತ್‍ನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ, ಅದ್ಭುತ ಆಡಳಿತವನ್ನು ಮಾಡಿ, ಸೈ ಎನಿಸಿಕೊಂಡಿದ್ದಾರೆ. ಮೋದಿಯವರನ್ನು ಇಂದಿಗೂ ಗುಜರಾತ್‍ನ ಜನತೆ ಸೋಲಲು ಬಿಟ್ಟಿಲ್ಲ. ಹೀಗಾಗಿ ಅವರಿಗೆ ಈ ದೇಶದ ಪ್ರಧಾನಿಯಾಗಲು ಅರ್ಹತೆ ಇಲ್ವಾ..?

* ಸತತ ಬಾರಿ ಮುಖ್ಯಮಂತ್ರಿಯಾಗಿ, ನಂತರ ಅವರ ಆಡಳಿತವನ್ನು ನೋಡಿ ದೇಶದ ಜನತೆಯೇ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಹೋರಾಡಿದ್ದರು. ಇದನ್ನು ಮನಗಂಡು ಭಾರತೀಯ ಜನತಾ ಪಕ್ಷ ಮೋದಿಯವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದರು. ಆ ಚುನಾವಣೆಯಲ್ಲಿ ಮೋದಿಯವರು ಭಾರೀ ಜಯದ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದರು. ಭಾರತದ ಜನತೆ ಅವರನ್ನು ಮುಕ್ತ ಕಂಠದಿಂದ ಅಧಿಕಾರದ ಚುಕ್ಕಾಣಿಗೆ ಏರಿಸಿದ್ದರು. ಈ ಕಾರಣಕ್ಕಾಗಿ ಅವರಿಗೆ ದೇಶವನ್ನು ಆಳಲು ಅರ್ಹತೆ ಇಲ್ವಾ..?

* ಮೋದಿಯವರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡೋವಾಗ ನರೇಂದ್ರ ಮೋದಿಯವರು ಸಂಸತ್ ಬಾಗಿಲಿಗೆ ಅಡ್ಡ ಬಿದ್ದು, ಅದೂ ಒಂದು ದೇವಸ್ಥಾನ ಎಂದು ತಿಳಿದು ಪ್ರವೇಶ ಮಾಡಿ, ದೇಶದ ಜನತೆಗೂ ಹಾಗೂ ಇತರೆ ರಾಜಕಾರಣಿಗಳಿಗೂ ಜಾಗೃತಿಯನ್ನು ಮೂಡಿಸಿದ್ದರು. ಹೀಗಾಗಿ ಅವರಿಗೆ ದೇಶವನ್ನು ಆಳಲು ಅರ್ಹತೆ ಇಲ್ಲ ಅಲ್ವಾ..?

* ಪ್ರಧಾನಿಯಾದ ಆರಂಭದಲ್ಲಿಯೇ ಜನ ಮೆಚ್ಚುವಂತಹಾ ಯೋಜನೆಗಳನ್ನು ಜಾರಿಗೊಳಿಸಿ, ಮನಮೆಚ್ಚಿಸಲು ಹೋಗದೆ, ದೂರ ದೃಷ್ಟಿಯ ಯೋಜನೆಗಳನ್ನೇ ಜಾರಿಗೊಳಿಸಿ ಬೇಶ್ ಅನ್ನಿಸಿಕೊಂಡಿದ್ದರಲ್ಲಾ ಈ ಕಾರಣಕ್ಕಾಗಿ ಅವರು ಪ್ರಧಾನಿಯಾಗುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಅಲ್ವಾ..?

* ಇಡೀ ಭಾರತವೇ ಸ್ವಚ್ಛತೆಯ ಕೊರತೆಯಿಂದ ಬಳಲುತ್ತಿದ್ದಾಗ, ಸ್ವಚ್ಛ ಭಾರತಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿ, ದೇಶದ ಎಲ್ಲಾ ಜನತೆಯೂ ಪೊರಕೆ ಹಿಡಿದುಕೊಂಡು ಬೀದಿಗಿಳಿಯುವಂತೆ ಮಾಡಿದ್ದರು ಪ್ರಧಾನಿ ನರೇಂದ್ರ ಮೋದಿ. ಈ ಕಾರಣಕ್ಕಾಗಿ ಅವರು ಪ್ರಧಾನಿಯಾಗುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಅಲ್ವಾ..?

* ದೇಶದಲ್ಲಿ ಭ್ರಷ್ಟ ರಾಜಕಾರಣಿಗಳು ತುಂಬಿದ್ದಾಗ, ರಾಜಕಾರಣಿಗಳು, ಉಧ್ಯಮಿಗಳು ಎನ್ನದೆ ಎಲ್ಲರನ್ನೂ ಒಂದೇ ಸಮನೆ ಸದೆ ಬಡಿದು, ನೋಟ್ ಬ್ಯಾನ್ ಅಸ್ತ್ರವನ್ನು ಉಪಯೋಗಿಸಿ, ಒಂದೇ ಒಂದು ದಿನದಲ್ಲಿ ಬಡವರು ಶ್ರೀಮಂತರು ಎನ್ನದೆ ಎಲ್ಲರೂ ಸಮಾನರೇ ಎಂಬುವುದನ್ನು ಸಾಭೀತು ಪಡಿಸಿ ಎಲ್ಲರನ್ನೂ ಬ್ಯಾಂಕ್ ಮುಂದೆ ನಿಲ್ಲುವಂತೆ ಮಾಡಿದ್ದರು. ಈ ಕಾರಣಕ್ಕಾಗಿ ಅವರು ಪ್ರಧಾನಿಯಾಗುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಅಲ್ವಾ..?

* ಮುಸ್ಲಿಂ ವಿರೋಧಿ ಎಂದು ಪಟ್ಟ ಕಟ್ಟುತ್ತಿದ್ದವರು, ಮೋದಿಯವರ ಮುಸ್ಲಿಂ ಭಾಂದವ್ಯಕ್ಕೆ ಮನಸೋತು ಅದೇ ಮುಸ್ಲಿಂ ಜನಾಂಗದವರು ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು ಅಲ್ವಾ? ಮುಸ್ಲಿಂ ಮಹಿಳೆಯರಿಗೆ ತೊಡಕಾಗಿದ್ದ ತ್ರಿವಳಿ ತಲಾಖ್ ಪದ್ದತಿಯನ್ನು ನಿಷೇಧಗೊಳಿಸಿ ಇಂದು ಮುಸ್ಲಿಂ ಮಹಿಳೆಯರೂ ಸಾಮಾನ್ಯಾರಂತೆ ಬದುಕುವಂತೆ ಅವಕಾಶ ಮಾಡಿಕೊಟ್ಟಿದ್ದಾರೆ ಅಲ್ವಾ. ಈ ಕಾರಣಕ್ಕಾಗಿ ಅವರು ಪ್ರಧಾನಿಯಾಗುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಅಲ್ವಾ..?

ಹೇಳಲು ತುಂಬಾ ಇದೆ ಪ್ರಕಾಶ್ ರೈ ಸಾರ್… ಆದರೆ ನೀವು ಅರ್ಥ ಮಾಡಿಕೊಳ್ಳಿ ಎಂದು ಇಷ್ಟನ್ನು ಹೇಳಿದೆ. ಸಮಯ ಸಿಕ್ಕಿದರೆ ಮೋದಿ ಸಾಧನೆಯನ್ನು ಅಧ್ಯಯನ ಮಾಡಿ. ಬಿಡಿ… ಈಗ ಯಾರಿಗೆ ಅರ್ಹತೆ ಇದೆ ಎಂದು ನೋಡೋಣ…

* ಪ್ರಶಸ್ತಿಗಾಗಿ, ಸೈಟಿನ ಆಸೆಗಾಗಿ ಕಾಂಗ್ರೆಸ್ ಹಿಂದೆ ಓಡುತ್ತಿದ್ದೀರಲ್ಲಾ, ಆ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುತ್ತಾರಲ್ಲಾ ರಾಹುಲ್ ಗಾಂಧಿ ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ಅಮೇರಿಕಾದಲ್ಲಿ ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದು, ಮಾದಕ ವ್ಯಸನಿಯಾಗಿ ಭಾರತದ ಮಾನ ಮರ್ಯಾದೆಯನ್ನು ವಿದೇಶದಲ್ಲಿ ಮೂರು ಕಾಸಿಗೆ ಹರಾಜು ಹಾಕಿದ್ದಾರಲ್ಲ ಆ ನಿಮ್ಮ ರಾಹುಲ್ ಗಾಂಧಿ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ತಡಕಾಡಿ, ನಂತರ ಅಲ್ಲಿಂದ ಎದ್ದುಕೊಂಡು ಓಡಿ ಹೋಗುವ ಪುಕ್ಕಲು ನಾಯಕ ನಿಮ್ಮ ರಾಹುಲ್ ಗಾಂಧಿ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ಸಾರ್ವಜನಿಕ ಭಾಷಣದಲ್ಲಿ ಅತ್ಯಾಚಾರ ಯಾವುದು, ಭ್ರಷ್ಟಾಚಾರ ಯಾವುದು ಎಂಬ ಕನಿಷ್ಟ ಜ್ನಾನವೂ ಇಲ್ಲದೆ ಜವಬ್ಧಾರಿ ಇಲ್ಲದೆ ಮಾತನಾಡುತ್ತಾರಲ್ಲಾ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಟ ವ್ಯಕ್ತಿಗಳನ್ನು ದೂರವಿಟ್ಟು ಕೇವಲ ನೆಹರೂ ಪರಿವಾರಕ್ಕೆ ಮಾತ್ರವೇ ಮಾನ್ಯತೆ ನೀಡಿ, ಈಗಲೂ ರಾಹುಲ್ ಗಾಂಧಿಯವರಿಗೇ ಕಾಂಗ್ರೆಸ್ ಅಧ್ಯಕ್ಷನ ಪಟ್ಟ ಕಟ್ಟಿದ್ದಾರಲ್ಲಾ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ಚುನಾವಣೆಯಲ್ಲಿ ಸೋತರೆ ವಿದೇಶಕ್ಕೆ ತೆರಳಿ ಅಲ್ಲಿನ ಲಲನೆಯರೊಂದಿಗೆ ಚೆಲ್ಲಾಟವಾಡಿ, ಐಶಾರಾಮಿ ಬಂಗಲೆಯಲ್ಲಿ ಬಿಂದಾಸ್ ಆಗಿ ಜೀವನ ನಡೆಸುತ್ತಾರಲ್ಲಾ ನಿಮ್ಮ ರಾಹುಲ್ ಗಾಂಧಿ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ರಾಹುಲ್ ಗಾಂಧಿ ಈವರೆಗೆ ಜವಬ್ಧಾರಿ ವಹಿಸಿದ ಎಲ್ಲಾ ಚುನಾವಣೆಗಳಲ್ಲೂ ಸೋತು ಮಖಾಡೆ ಮಲಗಿದ್ದಾರೆ. ಅವರು ಬರುತ್ತಾರೆ ಎಂದರೆ ಬೆರಳಂಕಿಯ ಜನರು ಮಾತ್ರವೇ ಸೇರಲು ಶಕ್ತರಾಗುತ್ತಾರೆ. ಇಂತಹ ಜನವಿರೋಧಿ ನಾಯಕ ನಿಮ್ಮ ರಾಹುಲ್ ಗಾಂಧಿ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ತಾನು ಅಲ್ಪ ಸಂಖ್ಯಾತರ ಪರ ಎಂದು ಬೊಬ್ಬೆ ಬಿಟ್ಟು, ಹಿಂದೂಗಳು ಆಕ್ರೋಷಿತರಾದಂತೆ ಮೆಲ್ಲಗೆ ಜನಿವಾರವನ್ನು ಹೊರತೆರೆದು ತಾನೂ ಹಿಂದೂ ಎಂದು ಪೋಸು ಕೊಡುವ ಸೋಗಲಾಡಿ ನಾಯಕ ನಿಮ್ಮ ರಾಹುಲ್ ಗಾಂಧಿ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ಹೋದಲ್ಲಿ ಬಂದಲ್ಲಿ ಪ್ರಾಣೇಶ್‍ರವರ ಹಾಸ್ಯವನ್ನೇ ಮೀರಿಸಿ, ಪಪ್ಪು ಎಂದು ನಾಮಾಂಕಿತವನ್ನು ಪಡೆದಿರುವ ನಿಮ್ಮ ರಾಹುಲ್ ಗಾಂಧಿ ಇದ್ದಾರಲ್ಲಾ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ಓಟಿಗಾಗಿ, ಅಥವಾ ಎದುರಾಳಿಯನ್ನು ಸೋಲಿಸಲಿಕ್ಕಾಗಿ ಪಾಕಿಸ್ಥಾನದ ಉಗ್ರರೊಂದಿಗೆ, ಕಾಂಗ್ರೆಸ್‍ನ ಹಿರಿಯ ನಾಯಕರ ಜೊತೆಗೆ ಒಪ್ಪಂಧ ನಡೆಸಿದ್ದಾರಲ್ಲ ನಿಮ್ಮ ದೇಶದ್ರೋಹಿ ರಾಹುಲ್ ಗಾಂಧಿ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ದೇಶವನ್ನು ತುಂಡು ತುಂಡು ಮಾಡುತ್ತೇನೆ ಎಂದು ಘೋಷಣೆ ಕೂಗಿ, ಪಾಕಿಸ್ಥಾನದ ಪರವಾಗಿ ಮಾತನಾಡಿದ್ದಾರಲ್ಲ ಆ ನಿಮ್ಮ ನಾಸ್ತಿಕ ಸಂತಾನದ ಕುಡಿಗಳಾದ ಕನ್ಹಯ್ಯಾ ಕುಮಾರ್,ಜಿಗ್ನೇಶ್ ಮೇವಾನಿ, ಹಾರ್ಧಿಕ್ ಪಟೇಲ್‍ರಂತಹ ದೇಶದ್ರೋಹಿಗಳು ಇದ್ದಾರಲ್ಲ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ಹಿಂದೂಗಳ ಮಾರಣ ಹೋಮವನ್ನೇ ನಡೆಸಿ, ಬರೋಬ್ಬರಿ 26 ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಗೆ ಕಾರಣರಾಗಿರುವ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದರಲ್ಲಾ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ನೀವು ಕಾಂಗ್ರೆಸ್‍ನ ಅಡಿಯಾಳಾಗಿ ಕೆಲಸ ಮಾಡಿದಂತೆ, ಕೆಲಸ ಮಾಡಿ ಹಲವು ಬುದ್ಧಿಜೀವಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ, ಸೈಟ್ ಕೊಟ್ಟು ಸಾಮಾನ್ಯ ಜನತೆಗೆ ದ್ರೋಹ ಮೆರೆದರಲ್ಲಾ ನಿಮ್ಮ ಸಿದ್ರಾಮಣ್ಣ… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ದೇಶದಲ್ಲಿ ದೇಶಪ್ರೇಮವನ್ನು ಮರೆತು, ಚೀನಾದ ಪಕ್ಷವನ್ನು ನೆಚ್ಚಿಕೊಂಡು ದೇಶವನ್ನು ನುಂಗಿ ನೀರು ಕುಡಿಯಲು ಹೋಗಿದ್ದಾರಲ್ಲ ಆ ನಿಮ್ಮ ಕಮ್ಯುನಿಸ್ಟ್ ಸಂತಾನದ ನಾಸ್ತಿಕರು… ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದಿಯಾ..?

* ಎಲ್ಲಾ ಬಿಡಿ, ಮೊದಲನೆಯ ಹೆಂಡತಿಗೆ ಕೈಕೊಟ್ಟು, ಆಕೆಯ ಮಗ ಇಹಲೋಕ ತ್ಯಜಿಸುವ ಸಮಯದಲ್ಲಿ, ನಿಮ್ಮ ಮತ್ತೊಬ್ಬ ಲಲನೆಯೊಂದಿಗೆ ಮಜಾ ಮಾಡುತ್ತಿದ್ದಿರಲ್ಲಾ ಪ್ರಕಾಶ್ ರೈ ಅವರೇ ನಿಮಗೆ ಪ್ರಧಾನಿ ಆಗುವುದು ಬಿಡಿ, ಕನಿಷ್ಟ ಗ್ರಾಮ ಪಂಚಾಯತ್ ಸದಸ್ಯನಾಗುವ ಯೋಗ್ಯತೆನಾದರೂ ಇದಿಯಾ ಎಂದು ತಿಳಿದುಕೊಳ್ಳಿ.

ಹೋದಲ್ಲಿ ಬಂದಲ್ಲಿ ದೇಶದ ಪ್ರಧಾನಿಯವರ ಬಗ್ಗೆ ವಾಚಾಮಗೋಚರವಾಗಿ ನಿಂದಿಸುವ ನಿಮ್ಮ ದುಶ್ಚಟವನ್ನು ಬದಿಗೆ ಸರಿಸಿ. ಕೇವಲ ಕಾಂಗ್ರೆಸ್ ಪಕ್ಷ ನೀಡುವ ಆ ಪ್ರಶಸ್ತಿ ಹಾಗೂ ಸೈಟಿನ ಆಸೆಗೋಸ್ಕರ ಆ ಪಕ್ಷವನ್ನು ಮೆಚ್ಚಿಸಲು ಹೊಗಳುತ್ತೀರಲ್ಲಾ, ಈ ಮೂಲಕ ದೇಶದ್ರೋಹ ಮೆರೆಯುತ್ತೀರಲ್ಲಾ… ಇದು ನಿಮಗೆ ಶೋಭೆ ತರುತ್ತೆಯೇ? ಪ್ರಧಾನಿ ಮೋದಿಯವರಿಗೆ ನಿಮ್ಮ ಸರ್ಟಿಫಿಕೇಟ್‍ನ ಅವಶ್ಯಕತೆ ಇಲ್ಲ ಸ್ವಾಮೀ. ಅವರಿಗೆ ವಿಶ್ವದ ದಿಗ್ಗಜರೇ ಸರ್ಟಿಫಿಕೇಟ್ ನೀಡಿದ್ದಾರೆ. ಮೊದಲು ನಿಮ್ಮ ನಾಲಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ. ನಂತರ ಯಾರು ಅರ್ಹರು ಹಾಗೂ ಯಾರು ಅನರ್ಹರು ಎಂಬುವುದು ನಿಮಗೇ ತಿಳಿಯುತ್ತದೆ.

ಇದು ನನ್ನ ಮಾತ್ರವಲ್ಲ. ನಿಮ್ಮನ್ನು ಅಭಿಮಾನದಿಂದ ನೋಡಿ ನಂತರ ನಿಮ್ಮ ಕರಾಳ ಖಳ ಮುಖವನ್ನು ನೋಡಿ ಬೇಸರಕ್ಕೊಳಗಾದ ಅದೆಷ್ಟೋ ಜನರ ಭಾವನೆ. ನನ್ನ ಮೂಲಕ ಹರಿಯ ಬಿಟ್ಟಿದ್ದೇನೆ ಅಷ್ಟೇ… ನಾನು ಯಾವ ಪಕ್ಷದ ಕಾರ್ಯಕರ್ತನೂ ಅಲ್ಲ. ಆದರೆ ದೇಶವನ್ನು ವಿಶ್ವ ಎಂಬ ಶಿಖರದ ತುತ್ತ ತುದಿಯಲ್ಲಿ ನಿಲ್ಲಿಸಿದ ನರೇಂದ್ರ ಮೋದಿವರನ್ನು ನಿಂದಿಸಿದರೆ ನಾನಂತೂ ಸುಮ್ಮನಿರೋಲ್ಲ. ಎಚ್ಚರಿಕೆ…

-ಸುನಿಲ್ ಪಣಪಿಲ

Tags

Related Articles

Close