ಪ್ರಚಲಿತ

ಆರ್ ಎಸ್ ಎಸ್ ಸ್ವಯಂ ಸೇಕವರಾಗಲು ಮುಗಿ ಬಿದ್ದ ಜನ!! ಮಾಜಿ ರಾಷ್ಟ್ರಪತಿ ಸಂಘವನ್ನುದ್ದೇಶಿಸಿ ಮಾತನಾಡಿದಂದಿನಿಂದ ಸಂಘಕ್ಕೆ ದಾಖಲಾತಿ ಬಯಸುವ ಆಕಾಂಕ್ಷಿಗಳಲ್ಲಿ ನಾಲ್ಕು ಪಟ್ಟು ಹೆಚ್ಚಳ!!

ತನ್ನ ಕಾಂಗ್ರೆಸ್ ಪಕ್ಷದ ಘನ ಘೋರ ವಿರೋಧದ ನಡುವೆಯೂ ನಾಗಪುರದಲ್ಲಿ ನಡೆದ ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗಿಯಾದಾಗಿನಿಂದ ಸಂಘಕ್ಕೆ ಸೇರಲು ಬಯಸುವ ಜನರಲ್ಲಿ ನಾಲ್ಕು ಪಟ್ಟು ಹೆಚ್ಚಳ ದಾಖಲಾಗಿದೆ ಎಂದು ವರದಿಯಾಗಿದೆ! ಪ್ರಣಬ್ ದಾ ಜೂನ್ 7 ರಂದು ಸಂಘ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಳಿಕ ಸಂಘಕ್ಕೆ ಸೇರಲು ಜನರು ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಘ ದಾದಾಗೆ ಪತ್ರವೊಂದನ್ನು ಕಳುಹಿಸಿದ್ದು, ಅದರಲ್ಲಿ “ತನ್ನ ಜನರಿಂದ ವಿರೋಧ ವ್ಯಕ್ತವಾದ ನಡುವೆಯೂ” ಅವರ ಭೇಟಿ ಮತ್ತು ಭಾಷಣಕ್ಕಾಗಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಸಂಘದ ಸಹ ಸರ್ಕಾರಿವಾಹ್ ಮನಮೋಹನ್ ವೈದ್ಯ, ಅವರ ಪತ್ರದಲ್ಲಿ “ಒಂದು ಭಾರತ” ಮತ್ತು “ಭಾರತೀಯ ಸಂಸ್ಕೃತಿ” ಬಗ್ಗೆ ಮುಖರ್ಜಿಯ ಅಭಿಪ್ರಾಯವನ್ನು ಶ್ಲಾಘಿಸಿದ್ದಾರೆ. ಸೋಮವಾರ ಮಾಜಿ ರಾಷ್ಟ್ರಪತಿಯ ನಿವಾಸಕ್ಕೆ ಈ ಪತ್ರವನ್ನು ಕಳುಹಿಸಲಾಯಿತು. ಇರುವ ಸಂಘವನ್ನೇ ಮುಗಿಸಬಿಡಬೇಕೆಂದು ಕಾಯುತ್ತಿರುವಾಗ, ಸಂಘ ಸೇರಲು ಜನ ಮುಗಿ ಬೀಳುತ್ತಿದ್ದಾರೆ ಎನ್ನುವುದನ್ನು ತಿಳಿದು ವಿರೋಧಿಗಳು ಕೋಮಾಕ್ಕೆ ಹೋಗಲಿದ್ದಾರೆ ಖಂಡಿತ. ಸಂಘವನ್ನು ಜರಿದರೂ, ಕೊಲೆಗಡುಕನೆಂದು ಆರೋಪ ಹೊರಿಸಿದರೂ, ಆತಂಕವಾದಿಗಳೆಂದು ಹಣೆ ಪಟ್ಟಿ ಕಟ್ಟಿದರೂ ಸಂಘದ ಬಗ್ಗೆ ಜನರಲ್ಲಿ ಗೌರವ ಕಡಿಮೆ ಆಗಿಲ್ಲ ಬದಲಾಗಿ ಸಂಘವನ್ನು ಸೇರಿ ದೇಶ ಸೇವೆ ಮಾಡುವ ಹುಮ್ಮಸ್ಸು ಇನ್ನೂ ಹೆಚ್ಚಾಗಿದೆ ಎಂದರೆ ಸಂಘದ ಬಗ್ಗೆ ಹೆಮ್ಮೆ ಮೂಡುತ್ತದೆ.

ಮನಮೋಹನ್ ವೈದ್ಯ, ಬಂಗಾಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರನ್ನುದ್ದೇಶಿ ಮಾತನಾಡುತ್ತಾ, ಪ್ರಣಬ್ ದಾ ಗೆ ಬರೆದ ಪತ್ರವನ್ನು ಉಲ್ಲೇಖಿಸಿದರು. ತಮ್ಮ ಮಗಳ ವಿರೋಧದ ನಡುವೆಯೂ ಅವರು ಸಂಘ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಕ್ಕಾಗಿ ಪ್ರಣಬ್ ಬಾಬುಗೆ ಧನ್ಯವಾದ ಅರ್ಪಿಸಿದರು. ದಾದಾನ ಸರಳತೆ ಪ್ರತಿಯೊಬ್ಬರಿಗೂ ಮುಟ್ಟಿತು ಎಂದಿರುವ ವೈದ್ಯ, ದಾದಾ ಮತ್ತು ಮೋಹನ್ ಭಾಗವತ್ ಅವರ ದೃಷ್ಟಿಕೋನವು ಒಂದೇ ರೀತಿ ಇದೆ ಎಂದು ತಿಳಿಸಿದರು.

ವೈದ್ಯ ಅವರ ಪ್ರಕಾರ ಇದುವರೆಗೂ ಸಂಘದ ವೆಬ್ ಸೈಟಿನಲ್ಲಿ ಜೂನ್ 1-6ರ ನಡುವೆ ದಿನಕ್ಕೆ ಸರಾಸರಿ 378 ಅರ್ಜಿಗಳು ಬರುತ್ತಿದ್ದವು. ಆದರೆ ಈ ವರ್ಷ ಜೂನ್ 7ರಂದು 1,779 ಅರ್ಜಿಗಳು ಬಂದಿವೆ. ಅದರಲ್ಲೂ ಬಂಗಾಳದಿಂದ ಅತಿ ಹೆಚ್ಚು ಜನರು ಸಂಘವನ್ನು ಸೇರಲು ಬಯಸಿದ್ದಾರೆ ಎಂದು ವೈದ್ಯ ಅವರು ತಿಳಿಸಿದ್ದಾರೆ. 7ರಂದು ಪ್ರಣಬ್ ದಾ ಅವರ ಭಾಷಣವು ದೇಶಾದ್ಯಂತ ನೇರ ಪ್ರಸಾರ ಕಂಡಿತ್ತು ಮತ್ತು ಆರ್.ಎಸ್.ಎಸ್ ಬಗ್ಗೆ ಜನರು ಕುತೂಹಲ ಹೊಂದುವಂತೆ ಮಾಡಿತ್ತು. ಸಂಘದ ಧ್ಯೇಯೋದ್ದೇಶಗಳನ್ನು ಕಣ್ಣಾರೆ ಕಂಡ ಜನರು ಈಗ ಸಂಘ ಸೇರಲು ಹಾತೊರೆಯುತ್ತಿದ್ದಾರೆ. ಪಶ್ಚಿಮ ಬಂಗಾಳದಿಂದ ಅತಿ ಹೆಚ್ಚು ಜನರು ಸಂಘವನ್ನು ಸೇರಲು ಬಯಸುತ್ತಿರುವುದು ಬಂಗಾಳವೂ ಭಗವಾ ರಾಜ್ಯವಾಗಲು ಹೊರಟಿದೆ ಎನ್ನುವ ಮುನ್ಸೂಚನೆ ಅಲ್ಲದೆ ಬೇರೇನೂ ಅಲ್ಲ.

ಸಂಘದ ವೆಬ್ ಸೈಟ್:http://rss.org/pages/joinrss.aspx

ಇವತ್ತು ಹೆಡ್ಗೆವಾರ್ ಆತ್ಮ ಸಂತೃಪ್ತಿಯಿಂದ ನಸು ನಗುತ್ತಿರಬಹುದು. ತಾನು ಕಂಡ ಅಖಂಡ ಭಾರತದ ಕನಸು ನನಸಾಗುತ್ತಿದೆ ಎಂದು ಅವರ ಆತ್ಮ ಸಂತೋಷ ಪಡುತ್ತಿರಬಹುದು. ಸಂಘ ಮುಕ್ತ ಭಾರತದ ಕನಸು ಕಾಣುತ್ತಿದ್ದ ಕಾಂಗ್ರೆಸ್-ಕಮ್ಯೂನಿಷ್ಟ್ ಗಳೇ ಮುಗಿದು ಹೋದರು ಆದರೆ ಸಂಘ ಮಾತ್ರ ಬೆಳೆಯುತ್ತಲೆ ಇದೆ. ಸಂಘವನ್ನು ಮುಗಿಸುವವರು ತಾವೇ ಅಳಿದು ಹೋದರು ಆದರೆ ಸಂಘ ತನ್ನ ಭದ್ರ ಬೇರುಗಳನ್ನು ಮತ್ತು ವಿಶಾಲ ಶಾಖೆಗಳನ್ನು ಹೊರಚಾಚುತ್ತ ಬೆಳೆಯುತ್ತಿದೆ. ಭಾರತ ಎಂದೂ ಸಂಘ ಮುಕ್ತವಾಗುವುದಿಲ್ಲ, ಆದರೆ ಕಾಂಗ್ರೆಸ್-ಕಮ್ಯೂನಿಷ್ಟ್-ದೇಶದ್ರೋಹಿ ಮುಕ್ತ ಭಾರತ ಖಂಡಿತ ಆಗುತ್ತದೆ. ಕಲಿಯುಗದ ಮಹಾನ್ ಶಕ್ತಿಯಾಗಿ ಸಂಘ ಬೆಳೆಯುತ್ತಿದೆ ಮತ್ತು ಹಿಂದೂ ರಾಷ್ಟ್ರದ ಕನಸು ನನಸಾಗುವ ಶುಭ ಘಳಿಗೆ ಹತ್ತಿರ ಬರುತ್ತಿದೆ…

-ಶಾರ್ವರಿ

Tags

Related Articles

Close