ಪ್ರಚಲಿತ

ಇತ್ತ ಸಿದ್ದು ಅತ್ತ ಅರವಿಂದ್ ಕೇಜ್ರಿವಾಲ್… ಆಪ್ ಶಾಸಕನಿಂದ ಸರ್ಕಾರದ ಕಾರ್ಯದರ್ಶಿಗೆ ಥಳಿತ!!

ಶಾಸಕ ಹ್ಯಾರಿಸ್ ಪುತ್ರ ಶನಿವಾರದಂದು ವಿದ್ವತ್ ಮೇಲೆ ನಡೆಸಿದ ಹಲ್ಲೆಯಿಂದ ವಿದ್ವತ್‍ನ ಪರಿಸ್ಥಿತಿ ಯಾವ ರೀತಿ ಗಂಭೀರವಾಗಿದೆ.. ಅಪರಾಧಿಯನ್ನು ಬಂದಿಸುವಲ್ಲಿ ಯಾವ ರೀತಿ ಕಾಂಗ್ರೆಸ್ ಸರಕಾರ ನಾಟಕವಾಡಿದೆ ಎಂಬುವುದು ತಿಳಿದೇ ಇದೆ.. ಮೊಹಮ್ಮದ್ ನಲಪಾಡ್ ಮಾಡಿದ ಗೂಂಡಾಗಿರಿ ಮತ್ತು ಆತನ ಬೆಂಬಲಿಗರ ಗೂಂಡಾಗಿರಿ ಕಣ್ಣಮುಂದಿರುವ ಹಾಗೆಯೇ ದೆಹಲಿಯಲ್ಲಿ ಅರವಿಂದ್ ಕೇಜ್ರೀವಾಲ್‍ನ ಆಪ್ತ ಹಾಗೂ ಆಮ್ ಆದ್ಮಿ ಪಕ್ಷದ ಶಾಸಕನ ಮತ್ತೊಂದು ಗೂಂಡಾಗಿರಿ ನಡೆದಿದೆ..

ಈ ಅರವಿಂದ್ ಕೇಜ್ರಿವಾಲ್ ಅನ್ನುವ ವ್ಯಕ್ತಿ ಯಾರೆಂದು ಯಾರಿಗೂ ಗೊತ್ತೇ ಇರಲಿಲ್ಲ. ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಒಂದೊಂದಾಗಿಯೇ ಬಯಲಿಗೆಳೆದ ಅಣ್ಣಾ ಹಜಾರೆಯವರ ಹೋರಾಟದಲ್ಲಿ ಕರೆಯದೆಯೇ ಬಂದ ಅತಿಥಿಯಾಗಿ ಆ ಹೋರಾಟಕ್ಕೆ ಕೈಜೋಡಿಸಿ, ಮೈಕ್ ಹಿಡಿದು ಭಾಷಣ ಬಿಗಿದು, ಕೊನೆಗೆ ತಾನೊಬ್ಬ ಸೂಪರ್ ಸ್ಟಾರ್ ಆಗಿ ಮಿಂಚಿ, ಅದೇ ಅಣ್ಣಾ ಹಜಾರೆಯವರ ವಿರೋಧದ ನಡುವೆಯೂ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿ ಗುರುವಿಗೇ ಟಾಂಗ್ ಕೊಟ್ಟಿದ್ದರು.

ನಂತರ ನಡೆದದ್ದೇ ಇತಿಹಾಸ! ಯಾವ ಪಕ್ಷದ ವಿರುದ್ಧ ತೊಡೆ ತಟ್ಟಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರೋ , ಅದೇ ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ದೆಹಲಿಯಲ್ಲಿ ಸರ್ಕಾರವನ್ನು ರಚಿಸಿದರು ಕೇಜ್ರಿವಾಲ್! ಮೇಲಿಂದ ಮೇಲೆ ಸೋಲಾದರೂ ಅದೇಗೋ ಮತ್ತೆ ಬಂದ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದರು!! ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರಕಾರದಂತೆ ಇವರ ಪಕ್ಷದಲ್ಲೂ ಗೂಂಡಾಗಿರಿ ಪ್ರದರ್ಶನವಾಗಿದೆ.. ಅರವಿಂದ್ ಕೇಜ್ರೀವಾಲ್‍ನ ಆಪ್ತ ಹಾಗೂ ಆಮ್ ಆದ್ಮಿ ಪಕ್ಷದ ಶಾಸಕನೊಬ್ಬ ದೆಹಲಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ…

ಕರ್ನಾಟಕದಲ್ಲಿ ಯಾವ ರೀತಿ ಸಿದ್ದರಾಮಯ್ಯ ಸರಕಾರ ಧೋರಣೆ ನಡೆಸುತ್ತಿದೆಯೋ ಅದೇ ರೀತಿ ದೆಹಲಿಯಲ್ಲೂ ಅದೇ ರೀತಿಯ ಧೋರಣೆ ನಡೆಯುತ್ತಿದೆ… ಇಂತವರ ಮಧ್ಯದಲ್ಲಿ ಸಾಮಾನ್ಯ ಜನರು ಯಾವ ರೀತಿ ಜೀವನವನ್ನು ನಡೆಸಬೇಕೋ ತಿಳಿಯುತ್ತಿಲ್ಲ… ಎಲ್ಲಿ ಅಪರಾಧವಾಗುತ್ತದೋ ಅದಕ್ಕೆ ಪರೋಕ್ಷವಾಗಿಯೇ  ಸಹಕರಿಸುತ್ತಿದ್ದಾರೆ.

ದೆಹಲಿಯ ಮುಖ್ಯ ಕಾರ್ಯದರ್ಶಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕನೊಬ್ಬ ಕಪಾಳ ಮೋಕ್ಷ ಮಾಡಿದ್ದಾರೆ.. ಕಾಂಗ್ರೆಸ್ ಶಾಸಕನ ಗೂಂಡಾ ಮಗನ ನಂತರ ಆಮ್ ಆದ್ಮಿ ಪಕ್ಷದಲ್ಲೂ ಇದೇ ರೀತಿಯ ಘಟನೆ ನಡೆದಿದೆ….

ಹೌದು ಈಗ ಕಾಂಗ್ರೆಸ್ ಪಕ್ಷದ ಹಾದಿಯನ್ನೇ ಅನುಸರಿಸುತ್ತಿದೆ ಆಮ್ ಆದ್ಮಿ ಪಕ್ಷ!! ದೆಹಲಿ ಮುಖ್ಯ ಕಾರ್ಯದರ್ಶಿ ಆಮ್ ಆದ್ಮಿ ಪಕ್ಷ ಮುಂದಕ್ಕೆ ಹೋಗಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ.  ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ದೆಹಲಿ ಮುಖ್ಯ ಕಾರ್ಯದರ್ಶಿ ಅನ್ಸು ಪ್ರಕಾಶ್ ಅವರು ಒಟ್ಟಿಗೆ ಸೇರಿ ಮಧ್ಯರಾತ್ರಿಯ ಸಮಯದಲ್ಲಿ ಸಭೆ ನಡೆಸಿದ್ದರು.. ಆ ಸಮಯದಲ್ಲಿ ಮುಖ್ಯ ಕಾರ್ಯದರ್ಶಿ ಈ ಪಕ್ಷದ ಎಲ್ಲಾ ವಿಷಯದ ಬಗ್ಗೆ ಒಂದೊಂದಾಗಿ ಪ್ರಶ್ನೆಯನ್ನು ಮಾಡುತ್ತಾರೆ.. ಆ ಸಮಯದಲ್ಲಿ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಅರವಿಂದ್ ಕೇಜ್ರೀವಾಲ್ ಗೆಳೆಯ ಹಾಗೂ ಆಮ್ ಆದ್ಮಿ ಪಕ್ಷದ ಶಾಸಕ ಮುಖ್ಯ ಕಾರ್ಯದರ್ಶಿಯ ಕಪಾಳ ಮೋಕ್ಷ ಮಾಡುತ್ತಾರೆ.. ಆ ಸಮಯದಲ್ಲಿ ಕೂಡಾ ಅರವಿಂದ್ ಕೇಜ್ರೀವಾಲ್ ಉಪಸ್ಥಿತರಿದ್ದರು…

ಮುಖ್ಯ ಕಾರ್ಯದರ್ಶಿಗೆ ದಾಳಿ ನಡೆಸಿದಾಗ ಒಟ್ಟು 9 ಆಮ್ ಆದ್ಮಿ ಪಕ್ಷದ ಶಾಸಕರು ಸೇರಿ ಮುಖ್ಯಮಂತ್ರಿ ನಿವಾಸದಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ, ದೆಹಲಿಯ ಮುಖ್ಯ ಕಾರ್ಯದರ್ಶಿ ಆಮ್ ಆದ್ಮಿ ಪಕ್ಷದ ಸರಕಾರದ ಹೆಚ್ಚುವರಿ ಖರ್ಚು ಜಾಹೀರಾತುಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ವ್ಯಕ್ತಪಡಿಸಿದ್ದರು. ಇದು ಕೇಜ್ರಿವಾಲ್ ಮತ್ತು ಅವರ ಸಹಚರರನ್ನು ಕೆರಳಿಸಿತು. ಈ ಸಭೆಯಲ್ಲಿ ಭೌತಿಕ ಆಕ್ರಮಣ ನಡೆಯಿತು. ಮೂಲಗಳು ತಿಳಿಸಿರುವ ಪ್ರಕಾರ ಅಮಾನತುಲ್ಲಾ ಕಪಾಳ ಮೋಕ್ಷ ಮಾಡಿದ್ದಾರೆ ಮತ್ತು ದೆಹಲಿ ಮುಖ್ಯ ಕಾರ್ಯದರ್ಶಿಯನ್ನು ಸಚಿವಾಲಯದಲ್ಲಿ ಮುಂದೂಡಿದರು ಎಂದು ವರದಿ ಮಾಡಿದೆ. ಅರವಿಂದ್ ಕೇಜ್ರಿವಾಲ್ ಸ್ವತಃ ಪ್ರಕಾಶ್ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ!!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಎಂಎಲ್‍ಎ ಅಮಾನತುಲ್ಲಾ ಅವರು ದೆಹಲಿ ಮುಖ್ಯ ಕಾರ್ಯದರ್ಶಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಆಂಶ್ ಪ್ರಕಾಶ್ ಅವರು ಎಲ್-ಜಿ ಅನಿಲ್ ಬೈಜಾಲ್ ಅವರನ್ನು ಭೇಟಿ ಮಾಡಿದ್ದಾರೆ. ಈ ಆರೋಪವನ್ನು ದೆಹಲಿ ಸರ್ಕಾರ ನಿರಾಕರಿಸಿದರೂ, ಐಎಎಸ್ ಅಧಿಕಾರಿಗಳು ಪ್ರತಿಭಟನೆಯಲ್ಲಿ ತುರ್ತು ಸುದ್ದಿ ಸಮಾವೇಶವನ್ನು ನಡೆಸಲು ನಿರ್ಧರಿಸಿದ್ದಾರೆ.

ಈ ಆರೋಪವನ್ನು ದೆಹಲಿ ಸರ್ಕಾರ ನಿರಾಕರಿಸಿದರೂ, ಐಎಎಸ್ ಅಧಿಕಾರಿಗಳು ಪ್ರತಿಭಟನೆಯಲ್ಲಿ ತುರ್ತು ಸುದ್ದಿ ಸಮಾವೇಶವನ್ನು ನಡೆಸಲು ನಿರ್ಧರಿಸಿದ್ದಾರೆ. ಆಮ್ ಆದ್ಮಿ ಪಕ್ಷನಾಚಿಕೆಯಿಲ್ಲದೆ ಈ ರೀತಿ ವರ್ತಿಸುತ್ತಿದೆ… ತಾವು ಈ ರೀತಿಯಾಗಿ ವರ್ತಿಸಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲ!!

ಸರ್ಕಾರಿ ನೌಕರರು ಕೂಡಾ ಇದನ್ನು ಖಂಡಿಸಿ ಮುಷ್ಕರ ಮಾಡುತ್ತಿದ್ದಾರೆ. ಶಾಸಕ ಕ್ಷಮೆಯಾಚಿಸುವವರೆಗೂ ಕೆಲಸ ಮಾಡುವುದಿಲ್ಲ ಎಂಬ ಹಟ ಹಿಡಿದು ಮುಶ್ಕರಕ್ಕಿಳಿದಿದ್ದಾರೆ.. ದೆಹಲಿಯನ್ನು ಮೂರು ವರ್ಷಗಳಲ್ಲಿ ನಾಶಪಡಿಸಿದ ದೇಶದ್ರೋಹಿಗಳಿಂದ ಏನು ನಿರೀಕ್ಷಿಸಬಹುದು. ಅವರು ಕೇವಲ ಸಾರಿಗೆ ಇಲಾಖೆಯ ಬಗ್ಗೆ ಸುಳ್ಳು ಭರವಸೆಗಳನ್ನು ನೀಡಿದ್ದಾರೆ.. ಪಾರ್ಕಿಂಗ್ ಸಮಸ್ಯೆಗಳು ಇನ್ನೂ ಅಸ್ತಿತ್ವದಲ್ಲಿವೆ; ದೆಹಲಿಯಲ್ಲಿ ಮಾಲಿನ್ಯದಿಂದ ಉಸಿರಾಡಲೂ ಸಾಧ್ಯವಿಲ್ಲ!! ಆಮ್‍ಆದ್ಮಿ ಸರಕಾರದ ಬಗ್ಗೆ ಎಲ್ಲರಿಗೂ ತಿಳಿದ ವಿಷಯ ಸಿದ್ದರಾಮಯ್ಯ ಸರಕಾರದಂತೆ ಇದೂ ಒಂದು ಸರಕಾರ ದೆಹಲಿಯಲ್ಲಿ ಅಸ್ತಿತ್ವದಲ್ಲಿದೆ… ಸಿದ್ದರಾಮಯ್ಯ ಸರಕಾರ ಕೈ ಚಿಹ್ನೆ ಹಿಡಿದು ದರ್ಪ ತೋರಿಸಿದgರಿತ್ತ ಅರವಿಂದ್ ಕೇಜ್ರೀವಾಲ್ ಸರಕಾರ ಪೊರಕೆ ಚಿಹ್ನೆ ಹಿಡಿದು ಸಾಮಾನ್ಯ ಜನರ ಮೇಲೆ ದರ್ಪ ತೋರಿಸುತ್ತಿದ್ದಾರೆ..

ಪವಿತ್ರ

Tags

Related Articles

Close