ಪ್ರಚಲಿತ

ಪಾಕಿಗಳು ಹೇಡಿಗಳು, ಪ್ರತಿಕಾರ ತೀರಿಸಲು ಸೇನೆಗೆ ಸೇರಲು ಸಿದ್ಧ ಎಂದ ಯೋಧ ಔರಂಗಜೇಬ್ ನ ತಂದೆ, ಸಹೋದರ!!

ಪಾಕಿಸ್ತಾನಿ ಭಯೋತ್ಪಾದಕರು ಅಪಹರಿಸಿ ಹತ್ಯೆ ಮಾಡಿದ್ದ ಯೋಧ ಔರಂಗಜೇಬ್ ನ ಕುರಿತಂತೆ ಆತನ ತಂದೆ ಮೊಹಮದ್ ಹನೀಫ್ ಕೇಂದ್ರ ಹಾಗೂ ಜಮ್ಮು ಕಾಶ್ಮೀರ ರಾಜ್ಯ ಸರ್ಕಾರಗಳಿಗೆ ಭಾವನಾತ್ಮಕ ಮನವಿಯನ್ನು ಸಲ್ಲಿಸಿದ್ದು ಜಮ್ಮು ಕಾಶ್ಮೀರದಿಂದ ಉಗ್ರವಾದವನ್ನು ತೊಡೆದು ಹಾಕಬೇಕು ಎಂದಿರುವ ಬೆನ್ನಲ್ಲೇ ಇದೀಗ ಭಾರತೀಯ ಸೇನೆಯನ್ನು ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಕಾಶ್ಮೀರದ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ ಹತ್ಯೆಗೈದಿದ್ದ ಉಗ್ರರ ಕುರಿತಂತೆ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದ್ದು, ಔರಂಗಜೇಬ್ ಹತ್ಯೆಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೇ, ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐ ಎಸ್ ಐ, ತಾನು ಸಾಕುತ್ತಿರುವ ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರೆ ತಯ್ಬಾ ಹಾಗೂ ಜೈಷೆ ಮೊಹಮ್ಮದ್ ಸಂಘಟನೆಗಳ ಮೂಲಕ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ, ಹತ್ಯೆಮಾಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹಾಗಾಗಿ ಔರಂಗಜೇಬ್ ಹತ್ಯೆಯ ಬಳಿಕ ಪಾಕಿಸ್ತಾನ ಜಮ್ಮು-ಕಾಶ್ಮೀರದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಷ್ಟೇ ಅಲ್ಲದೇ, ಕಣಿವೆ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆ, ಯೋಧನ ಹತ್ಯೆಗೆ ಭಾರತ ಪ್ರತಿಯಾಗಿ ಮಾಡಿರುವ ತಂತ್ರ ಸೇರಿ ರಾಜ್ಯದ ಪ್ರತಿ ನಡೆಯ ಮೇಲೂ ಪಾಕಿಸ್ತಾನ ಒಂದು   ಕಣ್ಣಿಟ್ಟಿದೆ ಎಂದು ಗುಪ್ತಚರ ಸಂಸ್ಥೆ ವಿವರಿಸಿದೆ. ಈ ಸುದ್ದಿ ಕೇಳಿ ಬಂದಿರುವ ಬೆನ್ನಲ್ಲೇ ಯೋಧ ಔರಂಗಜೇಬ್ ಅವರ ತಂದೆ ಮತ್ತು ಸಹೋದರ ಭಾರತೀಯ ಸೇನೆಯನ್ನು ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

Image result for aurangzeb ARMY

ಹೌದು… ಈಗಾಗಲೇ ಔರಂಗಜೇಬ್ ಅವರು 44 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ನಲ್ಲಿ ನಿಯೋಜಿಸಲ್ಪಟ್ಟ ರೈಫಲ್ ಮ್ಯಾನ್ ಆಗಿದ್ದರು. ಎಪ್ರಿಲ್ ನಲ್ಲಿ ಹತ್ಯೆಯಾದ ಹಿಜ್ಪುಲ್ ಮುಜಾಹಿದ್ದೀನ್ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಡೆಸಿದ್ದ ಸೇನಾಧಿಕಾರಿ ಮೇಜರ್ ರೋಹಿತ್ ಶುಕ್ಲಾ ಅವರಿಗೆ ಇವರು ಆತ್ಮೀಯರಾಗಿದ್ದರು. ಈ ಆತ್ಮೀಯತೆಯೇ ಅವರನ್ನು ಉಗ್ರರು ಹತ್ಯೆ ಮಾಡಲು ಕಾರಣವಾಗಿದೆ. ಹತ್ಯೆಗೂ ಮುನ್ನ ಇವರನ್ನು ವಿಚಾರಣೆ ನಡೆಸಿದ್ದ ಉಗ್ರರು ಅದರ ವಿಡಿಯೋವನ್ನು ಬಹಿರಂಗ ಪಡಿಸಿದ್ದಾರೆ. ಈ ವಿಡಿಯೋದಲ್ಲಿ ಔರಂಗಜೇಬ್ ಅವರು ತಾನು ಶುಕ್ಲಾ ಆಪ್ತ, ಅವರಿಗೆ ಹಲವು ವಿಷಯಗಳಲ್ಲಿ ಸಹಾಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ!!

ಇತ್ತೀಚೆಗಷ್ಟೇ ಔರಂಗಜೇಬ್ ಕುರಿತಾದಂತೆ ಅವರ ತಂದೆ ಮಾಜಿ ಸೈನಿಕ ಮುಹಮ್ಮದ್ ಹನೀಫ್ ಮಾತನಾಡಿ, “ನನ್ನ ಮಗ ಮೃತಪಟ್ಟಿದ್ದಾನೆ, ಆತ ಕೊಲ್ಲಲ್ಪಟ್ಟ ಎಂದು ಎಲ್ಲರೂ ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸುವುದು ನಿಲ್ಲಿಸಿದರೆ ದೇಶವನ್ನು ಕಾಪಾಡುವವರು ಯಾರು? ಎಲ್ಲರೂ ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸಬೇಕು. ಸಾವು ಎಲ್ಲರಿಗೂ ಒಂದಲ್ಲ ಒಂದು ದಿನ ಬಂದು ತಲುಪುತ್ತದೆ. ದೇಶ ಸೇವೆ ಮಾಡಲೆಂದು ಹೊರಟ ಮೇಲೆ ಶತ್ರುವನ್ನು ಕೊಲ್ಲುವುದು ಅಥವಾ ಶತ್ರುವಿನಿಂದ ಸಾವನ್ನಪ್ಪುವುದು ಖಚಿತವಾಗಿದೆ. ನನ್ನ ಮಗನನ್ನು ನಾನು ದೇಶಸೇವೆ ಮಾಡಲೆಂದೇ ಕಳಿಸಿದ್ದೆ” ಎಂದು ತಮ್ಮ ದುಃಖವನ್ನು ಅದುಮಿಟ್ಟುಕೊಂಡು ಮುಹಮ್ಮದ್ ಹನೀಫ್ ಮಾಧ್ಯಮಗಳೊಂದಿಗೆ ಮಾತನಾಡಿದ್ದರು!!

ಆದರೆ ಇದೀಗ ಮಗನ ಸಾವಿನ ಬಳಿಕ ತೀವ್ರ ದುಃಖಕ್ಕೀಡಾಗಿರುವ ಔರಂಗಜೇಬ್ ತಂದೆ ಮತ್ತು ಸಹೋದರ ತಾವೂ ಸೇನೆ ಸೇರಲು ಸಿದ್ದವಿರುವುದಾಗಿ ತಿಳಿಸಿರುವ ಮೂಲಕ ತಮ್ಮ ದೇಶಾಭಿಮಾನ ಎಂತಹದ್ದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ!! ಈಗಾಗಲೇ ರಂಜಾನ್ ಪವಿತ್ರ ಮಾಸದಲ್ಲಿಯೂ ನರಿ ಬುದ್ದಿಯನ್ನು ತೋರಿಸಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸ್ವತಃ ಔರಂಗಜೇಬ್ ನ ತಂದೆ ಹಾಗೂ ಸಹೋದರ ಮುಂದಾಗಿದ್ದಾರೆ ಎಂದರೆ ಇದಲ್ಲವೇ ನಿಜವಾದ ದೇಶಪ್ರೇಮ!!

Image result for aurangzeb ARMY death

“ಕಾಶ್ಮೀರ ನಮ್ಮದು ಅಲ್ಲೇಕೆ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ? ಕಾಶ್ಮೀರದ ಮೂಲೆ ಮೂಲೆಯಲ್ಲೂ ಭಾರತದ ತ್ರಿವರ್ಣ ಧ್ವಜ ಹಾರಾಡಬೇಕು” ಎಂದು ಮೊಹಮ್ಮದ್ ಹನೀಫ್ ಹೇಳಿದ್ದಲ್ಲದೇ ನಿಶಸ್ತ್ರನಾದ ತನ್ನ ಮಗನ ಮೇಲೆ ಗುಂಡು ಹಾರಿಸಿ ಕೊಂದ ಪಾಕಿಗಳು ಹೇಡಿಗಳು ಎಂದು ಪಾಕಿಸ್ತಾನದ ಮೇಲೆ ಕಿಡಿಕಾರಿದ್ದಾರೆ!!

ಈಗಾಗಲೇ ಕಣಿವೆಯಲ್ಲಿ ಭಯೋತ್ಪಾದಕರ, ಪ್ರತ್ಯೇಕವಾದಿಗಳ, ಪಾಕಿ ಉಗ್ರ ಸೈನಿಕರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ದೃಢ ನಿರ್ಧಾರ ಕೈಗೊಂಡಿರುವ ವಿಚಾರ ಗೊತ್ತೇ ಇದೆ!! ಕೇವಲ ಒಂದು ತಿಂಗಳು ಸೇನೆ ಕಾರ್ಯಾಚರಣೆ ಸ್ಥಗಿತಗೊಳಿಸಿದಕ್ಕೆ ಆಟಾಟೋಪ ನಡೆಸಿದವರ ವಿರುದ್ಧ ಇದೀಗ ರಕ್ಷಣಾ ಪಡೆಗಳು ತಿರುಗಿ ಬೀಳಲಿದ್ದು, ಆಪರೇಷನ್ ಆಲ್ ಔಟ್ ಆರಂಭಿಸುವ ಚಿಂತನೆ ಕೇಂದ್ರ ಸರ್ಕಾರ ನಡೆಸಿದೆ. ಇದರ ಬೆನ್ನಲ್ಲೇ ಔರಂಗಜೇಬ್ ನ ತಂದೆ ಹಾಗೂ ಸಹೋದರ ಸೇನೆ ಸೇರಲು ಸಿದ್ಧವಿರುವ ಇಂಗಿತ ವ್ಯಕ್ತ ಪಡಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ!!

ಮೂಲ:
http://news13.in/archives/104308

– ಅಲೋಖಾ

 

Tags

Related Articles

Close