ಪ್ರಚಲಿತ

ಕಾಂಗ್ರೆಸ್ ಗೆ ಬಿತ್ತು ತಪರಾಕಿ! ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಕ್ರಮವಾಗಿ ವಶಪಡಿಸಿಕೊಂಡಿದ್ದ 1.0360 ಹೆಕ್ಟೇರು ಭೂಮಿಯನ್ನು ಬಿಟ್ಟು ತೊಲಗಲು ಖಡಕ್ ಎಚ್ಚರಿಕೆ ನೀಡಿದ ಯೋಗಿ ಸರಕಾರ!

ಕಾಂಗ್ರೆಸ್ ಎಂಬ ಪಕ್ಷದ ಯೋಗ್ಯತೆಯೇ ಅಷ್ಡು!! ತನ್ನ ರಾಜಕೀಯ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ತನ್ನ ಸ್ವಂತ ದೇಶ ವಾಸಿಗಳನ್ನೂ ಕೂಡ ಬಲಿ ಕೊಡ ಬಲ್ಲಂತಹ ಪಕ್ಷವೇನಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ!! ಅದರಲ್ಲೂ, ಈ ರಾಜಕೀಯದಲ್ಲಿ ಹಗೆತನ ಸಾಧಿಸುತ್ತಲೇ ದೇಶವನ್ನು ಇಬ್ಭಾಗ ಮಾಡುವಷ್ಟು ಮಾನಸಿಕ ಸ್ಥಿಮಿತವನ್ನೂ ಈ ಕಾಂಗ್ರೆಸ್ ಕಳೆದು ಕೊಂಡಿದೆಯೆಂದರೆ ತಪ್ಪಾಗಲಾರದೇನೋ! ಅದಕ್ಕೇ ನೋಡಿ! ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ, ಮತ್ತು ಅಮಿತ್ ಷಾ ರಂತಹ ರಾಜಕೀಯ ಮುತ್ಸದ್ದಿಗಳು ಕಾಂಗ್ರೆಸ್ಸಿನ ವಿರುದ್ಧ ತಿರುಗಿ ಬಿದ್ದಿರುವುದು!

ಕಾಂಗ್ರೆಸ್ ರಾಜಕೀಯದಲ್ಲಿ ಏನೇನು ಮಾಡಲಿಲ್ಲ ಹೇಳಿ?! ಅದರಲ್ಲೂ, ಸರಕಾರೀ ಆಸ್ತಿಗಳಿಗೂ ಸಹ ತಮ್ಮ ಮನೆತನದ ಹೆಸರು ಹಾಕಿ ಮುದ್ರೆ ಯೊತ್ತಿಸಿ ಕೊಂಡಿತು! ನೋಡಿ ನೋಡಿ ಸಾಕಾದ ಮೋದಿ ಸರಕಾರ, ತಿಂಗಳ ಹಿಂದಷ್ಟೇ, ಕಾಂಗ್ರೆಸ್ ವಶ ಪಡಿಸಿಕೊಂಡಿದ್ದ ಕೆಲವು ಬಂಗಲೆಗಳನ್ನು ಮರು ವಶ ಮಾಡಿ ಕೊಂಡಿತ್ತು! ಅದಕ್ಕೀಗ ಹೊಸ ಸೇರ್ಪಡೆಯೆಂದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರವು ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಗೆ ತಕ್ಷಣವೇ ಜೈಸ್ನ ರೋಖಾ ಗ್ರಾಮದಲ್ಲಿರುವ 1.0360 ಹೆಕ್ಟೇರ್ ಭೂಮಿಯನ್ನು ಖಾಲಿ ಮಾಡಿ ತೊಲಗಿ ಎಂದು ಖಡಕ್ ಎಚ್ಚರಿಕೆ ನೀಡಿ ಕಳುಹಿಸಿದೆ!

ಅಮೇಥಿಯ ಆಡಳಿತಾಧಿಕಾರಿ ಸಂಬಂಧ ಪಟ್ಟ ಪ್ರಕರಣದ ಬಗ್ಗೆ , “ಈ ಭೂಮಿಯನ್ನು ಆರಂಭದಲ್ಲಿ ಔದ್ಯೋಗಿಕ ತರಬೇತಿ ಕೇಂದ್ರದ ಹೆಸರಿನಲ್ಲಿ ನೋಂದಾಯಿಸಲಾಗಿದೆ” ಎಂದು ಹೇಳಿದ್ದಾರೆ !! ಆದರೆ, ದುರಾದೃಷ್ಟವೋ! ಅಥವಾ, ಕಾಂಗ್ರೆಸ್ಸಿನ ದುರಾಸೆಯ ಫಲವೋ! ಕಾಲಕ್ರಮೇಣ, ಇದನ್ನು ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ವಶಪಡಿಸಿಕೊಂಡಿದೆ!!

ಮುಂಚೆ ಇದ್ದ ಯುಪಿಎ ಸರಕಾರಗಳು ಈ ಕಾನೂನುಬಾಹಿರ ಕ್ರಮವನ್ನು ಹೇಗೆ ಸ್ವಾಗತಿಸುತ್ತಿತ್ತು ಎಂಬುದು ನೋಡಿ!! ಸರಕಾರೀ ಆಸ್ತಿಗಳನ್ನೂ ಸಹ ಸ್ವಂತ ಉದ್ಯಮಕ್ಕಾಗಿ ಬಳಸಿ ಕೊಳ್ಳುವ ಕಲೆ ಗೊತ್ತಿರುವುದು ಬಹುಷಃ ಯುಪಿಎ ಸರಕಾರಗಳಿಗೇ!! ೪೭ ವರ್ಷದ ಯುವಕ ರಾಹುಲ್ ಗಾಂಧಿಯವರ ವಿರುದ್ಧ ಅಮೇಥಿಯಲ್ಲಿ 2014 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ಈ ಸಮಸ್ಯೆಯನ್ನು ಮೊದಲು ಸ್ಮೃತಿ ಇರಾನಿ ಎತ್ತಿ ಹಿಡಿದಿದ್ದರಷ್ಟೇ!! ಆದರೆ, ರಾಹುಲ್ ಗಾಂಧಿಯೊಂದಿಗೆ ಅಖಿಲೇಶ್ ಯಾದವ್ ಕೈ ಜೋಡಿಸಿದ್ದರು!! ರಾಜ್ಯ ಚುನಾವಣೆಗಳಲ್ಲಿ ಸೋತ ಪರಿಣಾಮ, ಸ್ಮೃತಿ ಇರಾನಿಯವರ ಕೂಗು ಕೇಳಿರಲೇ ಇಲ್ಲ!! ಇನ್ನೂ ಒಂದಷ್ಟು ವರ್ಷ ಅದ್ಭುತವಾದ ಅಕ್ರಮಗಳಲ್ಲಿ ತೊಡಗಿ ಕೊಂಡಿತು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ!!

ಆಮೇಲೆ ಬಂದರು ನೋಡಿ! ಯೋಗಿ ಆದಿತ್ಯನಾಥ್!! ಯಾವಾಗ, ಯೋಗಿ ಭ್ರಷ್ಟಾಚಾರವನ್ನೂ ಉಳಿಸುವುದಿಲ್ಲ ಮತ್ತು ಭ್ರಷ್ಟಾಚಾರಿಯನ್ನೂ ಬಿಡುವುದಿಲ್ಲ ಎಂದು ಭರವಸೆ ನೀಡಿದರೋ, ಸುಸ್ತಾಗಿದ್ದ ಉತ್ತರ ಪ್ರದೇಶದ ಜನಕ್ಕೆ ಜೀವಕಳೆ ಬಂದಿತು! ಇತ್ತ ಸಮಾಜವಾದಿ ಪಕ್ಷದಡಿಯಲ್ಲಿ ಅದೆಷ್ಟೋ ಸರಕಾರೀ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು! ಕೇವಲ ದಕ್ಷ ಅಧಿಕಾರಿಗಳಿಗೆ ಸಾಕಷ್ಟು ಹಿಂಸೆಯನ್ನೇ ಕೊಟ್ಟಿದ್ದ ಸಮಾಜವಾದಿ ಪಕ್ಷವನ್ನು ವಿರೋಧಿಸಿ, ಯೋಗಿಯ ದಕ್ಷ ಮತ್ತು ಪ್ರಾಮಾಣಿಕ ಸರಕಾರವನ್ನು ಬೆಂಬಲಿಸಲು ನಿರ್ಧರಿಸಿದರು ಅಧಿಕಾರಿಗಳು! ಅಷ್ಟೇ!! ಪರಿಣಾಮವಾಗಿ, ಜಿಲ್ಲೆಯ ಆಡಳಿತವು ಸ್ಮೃತಿ
ಇರಾನಿ ಯವರ ಆರೋಪದ ಪತ್ರವನ್ನು ತೆಗೆದುಕೊಂಡು ಕಾರ್ಯ ತಂತ್ರ ಪ್ರಾರಂಭಿಸಿದವು!

ಅಮೇಥಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಯೋಗೇಶ್ ಕುಮಾರ್ ಅವರ ಆದೇಶದ ಮೇರೆಗೆ ತಿಲೋಯಿ ಉಪವಿಭಾಗದ ಮ್ಯಾಜಿಸ್ಟ್ರೇಟ್ ಅಶೋಕ್ ಕುಮಾರ್ ಈ ಪ್ರಕರಣಕ್ಕೆ ವಿಶೇಷ ಗಮನ ಹರಿಸಿದ್ದಲ್ಲದೇ, ಎಲ್ಲೂ ಸಹ ಲೋಪ ದೋಷವಿಲ್ಲದಂತೆ, ದಾಖಲೆ ತಯಾರಿಸಲಾಗಿತ್ತು! ಲಭ್ಯವಿದ್ದ ಪ್ರತೀ ಸಾಕ್ಷ್ಯಗಳನ್ನೂ ಸಹ ದಾಖಲಿಸಿ, ಕೊನೆಗೂ ರಾಜೀವ್ ಗಾಂಧಿ ಚಾರಿಟೇಬಲ್ (ಹೆಸರಿಗಷ್ಟೇ) ಟ್ರಸ್ಟ್ ರವರಿಗೆ ತಪರಾಕಿ ಬಾರಿಸಿದೆ ಯೋಗಿ ಸರಕಾರ!

ನಿರೀಕ್ಷೆಯಂತೆ ಜಿಲ್ಲೆಯ ಕಾಂಗ್ರೆಸ್ ಮುಖ್ಯಸ್ಥ ಯೋಗೇಂದ್ರ ಮಿಶ್ರಾ ಅವರು, “ನಮ್ಮ ಜನಪ್ರಿಯ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಸಂಸತ್ತಿನ ಚುನಾವಣೆ ಕಳೆದುಕೊಂಡಿದ್ದ ಇರಾನಿಯವರ ದ್ವೇಷ ಸಾಧನೆ ಮತ್ತು ಅಹಿತಕರವಾದ ಉದ್ದೇಶದಿಂದಾಗಿ ಪ್ರಸ್ತುತ ಸನ್ನಿವೇಶವು ಬಂದೊದಗಿದೆ ಹೊರತು
ಬೇರೇನೂ ಅಲ್ಲ!” ಎಂಬ ಸಮರ್ಥನೆ ನೀಡಿದ್ದಕ್ಕೂ ಅಧಿಕಾರಿಗಳು ದಾಖಲೆಗಳನ್ನು ಮುಖಕ್ಕೆ ಹಿಡಿದ ಪರಿಣಾಮ ಕಾಂಗಿಗಳು ಬಾಯಿ ಮುಚ್ಚಿ ಕೊಂಡಿದ್ದಾರೆ! ಇದು ಬೇರೇನನ್ನೂ ಸಾಬೀತು ಪಡಿಸುವುದಿಲ್ಲ! ಬದಲಾಗಿ, ವಂಚನೆಗಳನ್ನು ಬಹಿರಂಗಪಡಿಸಿದರೆ ಅದು ಕಾಂಗಿಗಳಿಗೆ ಕೆಟ್ಟ ಉದ್ದೇಶವಷ್ಟೇ!!

“The current scenario is nothing but a result of the ill intentions of Irani, who lost the parliamentary poll against our popular leader Rahul Gandhi” – Yogendra Mishra, district Congress chief

ಹಿಂದೆ, ಜಿಲ್ಲೆಯ ಅಭಿವೃದ್ಧಿ ಅಧಿಕಾರಿ (ಡಿಡಿಓ) ಒಪಿ ಪಾಂಡೆ ಅವರ ಗಮನಕ್ಕೆ ನೋಟಿಸ್ ಕಳುಹಿಸಲಾಗಿದೆ ಮತ್ತು ಅಗತ್ಯವಿರುವ ದಾಖಲೆಗಳನ್ನು ನಿರ್ಮಿಸಲು ಟ್ರಸ್ಟ್ ಗೆ ಕೇಳಲಾಗಿದೆ!! ಆದರೆ ಒದಗಿಸಲ್ಪಟ್ಟ ದಾಖಲೆಗಳು ಸ್ಪಷ್ಟವಾಗಿರಲಿಲ್ಲ ಅಥವಾ ತೃಪ್ತಿಕರವಾಗಿರಲಿಲ್ಲ! ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಮತ್ತೊಮ್ಮೆ ಅಗತ್ಯವಿರುವ ದಾಖಲೆಗಳನ್ನು ತಯಾರಿಸಲು ಕೇಳಿ ಕೊಂಡರು!! ಆದರೆ ಟ್ರಸ್ಟ್ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾದ ಕಾರಣ ಟೆಲೋಯಿ ತಹಸೀಲ್ದಾರ್ ಅವರು ಭೂಮಿಯನ್ನು ಬಿಟ್ಟು ತೊಲಗುವಂತೆ ಟ್ರಸ್ಟ್ ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ!!

Source :https://www.hindustantimes.com/india-news/rajiv-gandhi-charitable-trust-asked-to-vacate-land-in-amethi-over-ownership-issue/story-y5pUUVy3WBMlUVQWt65FdP.html


ಪೃಥು ಅಗ್ನಿಹೋತ್ರಿ

Tags

Related Articles

Close