ಪ್ರಚಲಿತ

ಬಿಗ್ ಬ್ರೇಕಿಂಗ್: ವಿಧಾನ ಸೌಧಕ್ಕೆ ನುಗ್ಗಿದ ಹೊರರಾಜ್ಯದ ಅಪರಿಚಿತ ವ್ಯಕ್ತಿ..! ಉಗ್ರರಿಗೆ ಕೆಂಪು ಹಾಸಿನ ಹಾಸಿಗೆ ಹಾಕಿದರೇ ಸಿದ್ದರಾಮಯ್ಯ?

ರಾಜ್ಯದ ಶಕ್ತಿ ಕೇಂದ್ರ ವಿಧಾನ ಸೌಧಾಕ್ಕೆ ಗ್ರಹಣ ಬಡಿದಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದಲ್ಲಾ ಒಂದು ಕಾರಣದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿತ್ತು. ರಾಜ್ಯದಲ್ಲಿ ಕೋಮು ಗಲಭೆ ತಾರಕಕ್ಕೆ ಏರಿದ್ದು ಭಾರೀ ಅವಾಂತರವೇ ಸೃಷ್ಟಿಯಾಗಿತ್ತು. ಕಳ್ಳರ ಹಾವಳಿ, ಕಾಮುಕರ ಅಟ್ಟಹಾಸ, ಅತ್ಯಾಚಾರಿಗಳ ಆರ್ಭಟ, ಭ್ರಷ್ಟಾಚಾರಿ ಸಚಿವರುಗಳ ದರ್ಪ ಸಹಿತ ಅನೇಕ ಕಾರಣಗಳಿಂದ ರಾಜ್ಯದಲ್ಲಿ ಅಶಾಂತಿಯೇ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಆಗುತ್ತಿತ್ತು. ರಾಜ್ಯದ ಯಾವೊಂದು ಅಭಿವೃದ್ಧಿಯೂ ಜನರಿಗೆ ಮುಟ್ಟಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿತ್ತು.

ಶಕ್ತಿ ಕೇಂದ್ರಕ್ಕೇ ಶಕ್ತಿ ಇಲ್ಲವಾಗಿತ್ತಾ..?

ರಾಜ್ಯದ ಶಕ್ತಿಕೇಂದ್ರ ಯಾವುದು ಅಂತ ಕೇಳಿದರೆ ಅದು ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ಕಟ್ಟಿರುವ ಭವ್ಯವಾದ ವಿಧಾನಸೌಧ. ಈ ವಿಧಾನಸೌಧಾದಲ್ಲಿ ರಾಜ್ಯದ ಎಲ್ಲಾ ಸಾಧಕ ಬಾಧಕಗಳು ಚರ್ಚೆಯಾಗಿ, ರಾಜ್ಯದ ಜನತೆಗೆ ಆಶಾಕಿರಣವಾಗಬೇಕಾಗಿರುವ ಪ್ರಜಾ ಮಂದಿರ. ಆದರೆ ಈ ದೇಗುಲದಲ್ಲಿ ಕಳೆದ ಐದು ವರ್ಷಗಳಿಂದ ಅದೇನೇನೋ ಅಹಿತಕರ ಘಟನೆಗಳು ನಡೆಯುತ್ತಲೇ ಇರುತ್ತಿದೆ. ಒಂದಲ್ಲಾ ಒಂದು ಕಾರಣದಿಂದ ಈ ಶಕ್ತಿಕೇಂದ್ರ ತನ್ನ ಶಕ್ತಿಯನ್ನು ಕುಂದುವತ್ತ ಹೊರಡುತ್ತಿದೆ.

ವಿಧಾನ ಸೌಧಕ್ಕೆ ನುಗ್ಗಿದ ಆಗಂತುಕ..!!!

ಇಂದು ರಾಜ್ಯ ವಿಧಾನ ಸೌಧಾಕ್ಕೆ ಓರ್ವ ಅಪರಿಚಿತನ ಎಂಟ್ರಿಯಾಗಿದೆ. ವಿಧಾನ ಸೌಧಕ್ಕೆ ಲಗ್ಗೆಯಿಟ್ಟ ಈ ಮಹಾಶಯ ನೇರಾ ನೇರ ವಿಧಾನಸೌಧಕ್ಕೆ ಪ್ರವೇಶಿಸಿದ್ದಾನೆ. ರಾಜ್ಯದ ಶಕ್ತಿಕೇಂದ್ರಕ್ಕೆ ಈ ರೀತಿಯ ಭದ್ರೆತೆ ಇದ್ದಿದ್ದರೂ ಕೂಡಾ ಅಪರಿಚಿತ ವ್ಯಕ್ತಿಯ ಪ್ರವೇಶ ರಾಜ್ಯ ರಾಜಕಾರಣಿಗಳನ್ನು ಮಾತ್ರವಲ್ಲದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳೀಸಿದೆ. ರಾಜ್ಯದ ಶಕ್ತಿ ಕೇಂದ್ರಕ್ಕೆ ವಿಶೇಷ ಭದ್ರತೆಯನ್ನು ಒದಗಿಸಲಾಗಿದ್ದರೂ ಕೂಡಾ ಈ ರೀತಿಯಾಗಿ ಲಗ್ಗೆಯಿಟ್ಟಿದ್ದು ಭಾರೀ ಆತಂಕವನ್ನೇ ಸೃಷ್ಟಿಸಿದೆ.

 

3ನೇ ಮಹಡಿಯವರೆಗೂ ಏರಿದ್ದ ಅಪರಿಚಿತ..!

ಒಂದಲ್ಲಾ ಎರಡಲ್ಲಾ 3ನೇ ಮಹಡಿಯವರೆಗೂ ಆ ಅಪರಿಚಿತ ವ್ಯಕ್ತಿ ಲಗ್ಗೆ ಇಟ್ಟಿದ್ದಾನೆ. ಸಾಮಾನ್ಯವಾಗಿ ವಿಧಾನ ಸೌಧಕ್ಕೆ ಪ್ರವೇಶ ಮಾಡಬೇಕಾದರೆ ಅವರು ಆಗಾಗಲೇ ಪಾಸ್ ತೆಗೆದುಕೊಂಡು, ಅವರ ಗುರುತಿನ ಚೀಟಿಯನ್ನೆಲ್ಲಾ ನಮೂದಿಸಿಕೊಂಡು ನಂತರ ಪ್ರವೇಶಿಸಬೇಕಾಗಿರುತ್ತದೆ. ಆ ಚೀಟಿ ಪಡೆದರೂ ವಿಧಾನ ಸೌಧ ಪ್ರವೇಶಕ್ಕೂ ಮುನ್ನ ತೀವ್ರ ತಪಾಸನೆ ನಡೆಸಿ ನಂತರ ಅವರನ್ನು ಒಳಬಿಡಲಾಗುತ್ತದೆ. ಆದರೆ ಇಂದು ನಡೆದ ಈ ಘಟನೆ ಪೊಲೀಸರಿಗೆ ಸಹಿತ ಅನೇಕರಿಗೆ ಭಾರೀ ಆಶ್ಚರ್ಯವನ್ನೇ ಉಂಟು ಮಾಡಿದೆ. ನೇರಾ ನೇರ 3ನೇ ಮಹಡಿಯವರೆಗೂ ಲಗ್ಗೆಯಿಟ್ಟಿದ್ದ ಈ ವ್ಯಕ್ತಿಯ ನಡತೆಯಿಂದ ಪೊಲೀಸರೇ ತಬ್ಬಿಬ್ಬಾಗಿ ಹೋಗಿದ್ದಾರೆ.

ತಮಿಳುನಾಡು ಮೂಲದ ವ್ಯಕ್ತಿ..!

ಇದನ್ನು ಕಂಡ ವಿಧಾನ ಸೌಧದ ಪೊಲೀಸರು ಕೂಡಲೇ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ತಾನು ತಮಿಳುನಾಡಿನ ಭಾಸ್ಕರ ಎಂಬವನು ಎಂದು ಹೇಳಿಕೊಂಡಿದ್ದಾನೆ. ಆದರೆ ಆತನ ವಿಧಾನ ಸೌಧದ ಆಗಮನ ಮಾತ್ರ ಯಾಕೆ ಎಂಬ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

ಸುಳ್ಳು ಹೇಳಿ ಪ್ರವೇಶಿಸಿದ್ದ ಭಾಸ್ಕರ್..!

ತಾನು ವಿಧಾನ ಸೌಧದ ಸಿಬ್ಬಂದಿ ಎಂದು ಸುಳ್ಳು ಹೇಳಿ ರಾಜ್ಯದ ಶಕ್ತಿಕೇಂದ್ರ ಒಳಗೆ ಪ್ರವೇಶಿಸಿದ್ದಾನೆ. ತಾನು ವಿಧಾನ ಸೌಧದ ಸಿಬ್ಬಂದಿ ಎಂದು ಹೇಳಿಕೊಂಡು ಪ್ರವೇಶಿಸಿರುವ ಭಾಸ್ಕರ್ ನೇರವಾಗಿ ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಛೇರಿಯ ಬಳಿಗೆ ತೆರಳಿದ್ದಾನೆ. ಆದರೆ ಮುಖ್ಯಮಂತ್ರಿಗಳ ಕಛೇರಿ ಬಳಿ ತೆರಳಿದ ಈತನ ನಡೆ ಭಾರೀ ಸಂಶಯಾಸ್ಪದವಾಗಿ ತ್ತು. ವಿಧಾನಸೌಧದ ಸಿಬ್ಬಂಧಿ ತಾನೇ ಎಂದು ಗುತಿನ ಚೀಟಿಯನ್ನೂ ಕೇಳದೆ ಒಳ ಬಿಟ್ಟಿದ್ದರು ವಿಧಾನಸೌಧದ ಪೊಲೀಸರು. ಆದರೆ ಆತನ ನಡೆ ಭಾರೀ ಸಂಶಯಾಸ್ಪದವಾಗಿದ್ದ ಕಾರಣ ಆತನನ್ನು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಆತ ತಾನು ತಮಿಳುನಾಡು ಮೂಲದ ಭಾಸ್ಕರ್ ಎಂದು ಹೇಳಿಕೊಂಡಿದ್ದಾನೆ.

ಇದೇ ಮೊದಲಲ್ಲ…!!!

ವಿಧಾನ ಸೌಧದಲ್ಲಿ ಅವಘಡಗಳು ನಡೆಯುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿ ವಿಧಾನ ಸೌಧದಲ್ಲಿ ಅಹಿತಕರ ಘಟನೆಗಳು ನಡೆಯುತ್ತಲೇ ಇತ್ತು. ಅದೆಷ್ಟೋ ಬಾರಿ ವಿಷಸರ್ಪಗಳು ವಿಧಾನ ಸೌಧವನ್ನು ಬಪ್ರವೇಶಿಸಿ ರಾಜ್ಯವನ್ನೇ ಆಳುವ ಅರಸರ ಎದೆಯನ್ನೇ ಒಮ್ಮೆ ಝಲ್ ಎನಿಸುವಂತೆ ಮಾಡುತ್ತಿತ್ತು. ಹಾವು, ಚೇಲು ಸಹಿತ ಇತರೆ ಸರೀಸೃಪಗಳ ತಾಣವಾಗಿದೆ ರಾಜ್ಯ ವಿಧಾನ ಸೌಧ.

ಈ ಹಿಂದೆಯೂ ಓರ್ವ ಅಪರಿಚಿತ ವ್ಯಕ್ತಿ ವಿಧಾನ ಸೌಧಕ್ಕೆ ಎಂಟ್ರಿ ಕೊಟ್ಟಿದ್ದ. ಈ ರೀತಿಯ ಪ್ರವೇಶಿಸಿದ್ದ ವ್ಯಕ್ತಿ ತಾನು ಮನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಬಂದಿದ್ದೇನೆ ಎಂದಿದ್ದ. ಆದರೆ ಭದ್ರತೆಯ ನಡುವೆ ಕಣ್ತಪ್ಪಿಸಿ ಆತ ವಿಧಾನ ಸೌಧ ಪ್ರವೇಶ ಮಾಡಿದ್ದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಈ ರೀತಿಯ ಬೆಳವಣಿಗೆಗಳು ವಿಧಾನ ಸೌಧದಲ್ಲಿ ನಡೆಯುತ್ತಿರುವುದು ಭಾರೀ ಆತಂಕಕ್ಕೆ ಹಾಗೂ ಭೀತಿಗೆ ಕಾರಣವಾಗಿದೆ. ಮಾತ್ರವಲ್ಲದೆ ಇದು ಒಂದು ಸರ್ಕಾರದ ಭದ್ರತಾ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಸಹಿತ ಸಚಿವರುಗಳು ಉಳಿದೆಲ್ಲ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೆ. ಒಂದೊಮ್ಮೆ ಉಗ್ರರು ಈ ರೀತಿಯ ನುಸುಳುವಿಕೆಯ ಪ್ರಯತ್ನ ಮಾಡಿದ್ದರೂ ತಮ್ಮ ಕಾರ್ಯ ಸುಲಭವಾಗಿ ಮಾಡಿ ಮುಗಿಸಬಹುದಲ್ಲವೇ ಎಂಬ ಪ್ರಶ್ನೆಗಳೂ ಮೂಡುತ್ತಿವೆ.

–ಸುನಿಲ್ ಪಣಪಿಲ

 

Tags

Related Articles

Close