ಪ್ರಚಲಿತ

ಬ್ರೇಕಿಂಗ್ : ಬಿಜೆಪಿ ಮುಖಂಡನ ಮೇಲೆ ಉಗ್ರರಿಂದ ಗುಂಡಿನ ದಾಳಿ .! ಉಗ್ರರ ಮತ್ತು ಸೈನಿಕರ ಮಧ್ಯೆ ಗುಂಡಿನ ಚಕಮಕಿ.!

ದೇಶದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾದಂತೆ ದೇಶದ ಭದ್ರತೆ ಸರಕಾರಕ್ಕೆ ಸವಾಲಾಗಿದೆ. ಯಾಕೆಂದರೆ ಗಡಿ ಭಾಗದಲ್ಲಿ ಸೈನಿಕರು ತಮ್ಮ ಜೀವ ಪಣಕ್ಕಿಟ್ಟು ದೇಶ ಕಾಯುತ್ತಾರೆ, ಆದರೂ ತಮ್ಮ ಕೈಚಳಕ ತೋರುವ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಲೇ ಇದ್ದಾರೆ. ದೇಶಪ್ರೇಮಿಗಳನ್ನೇ ಟಾರ್ಗೆಟ್ ಮಾಡುವ ಉಗ್ರರು , ಭಾರತದ ಮೇಲೆ ಪದೇ ಪದೇ ದಾಳಿ ನಡೆಸಿ ತಮ್ಮ ದುಷ್ಕ್ರತ್ಯ ಮೆರೆಯುತ್ತಿದ್ದಾರೆ.!

ಇಂದು ಭಾರತ ಮತ್ತು ಪಾಕಿಸ್ತಾನದ ಮುಖ್ಯ ಗಡಿಭಾಗವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮುಖಂಡನ ಮೇಲೆ ದಾಳಿ ನಡೆಸಿದ ಉಗ್ರರು ಭಾರೀ ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಸೈನಿಕರು ನಿಯೋಜನೆಗೊಂಡಿದ್ದರೂ ಉಗ್ರರು ತಮ್ಮ ಕೃತ್ಯ ನಡೆಸುತ್ತಲೇ ಇದ್ದಾರೆ. ಸ್ವಾತಂತ್ರ್ಯ ದೊರೆತು ನಂತರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಉಗ್ರರನ್ನು ಪೋಷಿಸಿಕೊಂಡು ಬಂದಿರುವುದರಿಂದಲೇ ಉಗ್ರರನ್ನು ಸಂಪೂರ್ಣವಾಗಿ ಇಂದಿಗೂ ನಿಗ್ರಹಿಸಲಾಗಲಿಲ್ಲ. ಆದರೆ ಮೋದಿ ಸರಕಾರ ಆಡಳಿತ ಪ್ರಾರಂಭವಾದ ದಿನದಿಂದಲೇ ಉಗ್ರರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುತ್ತಾ ಬಂದಿದ್ದಾರೆ. ಇದರಿಂದ ಕಂಗಾಲಾದ ಉಗ್ರರು ಸಿಕ್ಕಸಿಕ್ಕಲ್ಲಿ ತಮ್ಮ ಚಟುವಟಿಕೆ ಮುಂದುವರಿಸಿದ್ದಾರೆ.

ಬಿಜೆಪಿ ಮುಖಂಡನ ಮೇಲೆ ದಾಳಿ..!

ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ಅನ್ವರ್ ಖಾನ್ ಮೇಲೆ ಏಕಾಏಕಿ ದಾಳಿ ನಡೆಸಿದ ಉಗ್ರರು ಗುಂಡಿನ ಸುರಿಮಳೆಯನ್ನೇ ಸುರಿಸಿದ್ದಾರೆ. ಮೋದಿ ಸರಕಾರದ ಉಗ್ರ ದಮನ ನೀತಿಯಿಂದಾಗಿ ಕೈಕಟ್ಟಿದಂತಾಗಿರುವ ಉಗ್ರರಿಗೆ ಬಿಜೆಪಿಯೇ ಟಾರ್ಗೆಟ್ ಆಗಿದೆ. ಆದ್ದರಿಂದಲೇ ಬಿಜೆಪಿ ಮುಖಂಡನ ಮೇಲೆ ದಾಳಿ ನಡೆಸಲಾಗಿದೆ, ಆದರೆ ದಾಳಿಯಲ್ಲಿ ಅನ್ವರ್ ಖಾನ್ ಗೆ ಯಾವುದೇ ಪ್ರಾಣಾಪಾಯವಾಗಲಿಲ್ಲ. ದಾಳಿಯಲ್ಲಿ ಅನ್ವರ್ ಖಾನ್ ಜೊತೆಗಿದ್ದ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ.

ಉಗ್ರರ ಮೇಲೆ ಪ್ರತಿದಾಳಿ..!

ಬಿಜೆಪಿ ಮುಖಂಡ ಅನ್ವರ್ ಖಾನ್ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಂತೆ ಕಾರ್ಯಪ್ರವ್ರತ್ತರಾದ ಭದ್ರತಾ ಸಿಬ್ಬಂದಿ ಉಗ್ರರ ಮೇಲೂ ಪ್ರತಿದಾಳಿ ನಡೆಸಿದ್ದಾರೆ. ಉಗ್ರರಿಂದ ಅನ್ವರ್ ಖಾನ್ ನನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿ , ಉಗ್ರರ ವಿರುದ್ಧ ಹೋರಾಡಿದ್ದಾರೆ. ಈ ವೇಳೆ ಓರ್ವ ಸಿಬ್ಬಂದಿಗೆ ಗಾಯವಾಗಿದೆ. ಗಡಿಯಲ್ಲಿ ಸೈನಿಕರ ಕಣ್ತಪ್ಪಿಸಿ ದೇಶದೊಳಗೆ ನುಸುಳುವ ಉಗ್ರರು , ಬಿಜೆಪಿ ಮುಖಂಡರನ್ನೇ ಟಾರ್ಗೆಟ್ ಮಾಡಿದೆ ಎಂಬೂದು ಈ ಹಿಂದೆಯೇ ಗುಪ್ತಚರ ಇಲಾಖೆಯ ಅಧಿಕಾರಿಗಳಿಂದ ಬಹಿರಂಗಗೊಂಡಿತ್ತು. ಇದೀಗ ಇದೇ ರೀತಿ ನಡೆದಿದ್ದು , ದೇಶದೊಳಗಿನ ಕೆಲ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂಬ ಅನುಮಾನ ಹೆಚ್ಚಾಗಿದೆ.!

ಕರ್ನಾಟಕ , ಕೇರಳ ಸೇರಿದಂತೆ ಅನೇಕ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಹಲ್ಲೆ ಕೊಲೆಗಳು ನಡೆಯುತ್ತಿದೆ. ಇದೇ ರೀತಿ ಉಗ್ರರು ಕೂಡಾ ಬಿಜೆಪಿ ಮುಖಂಡರ ಮೇಲೆ ದಾಳಿ ನಡೆಸುತ್ತಿದ್ದು , ದೇಶವಿರೋಧಿಗಳು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡಲು ನರೇಂದ್ರ ಮೋದಿಯವರು ತೆಗೆದುಕೊಂಡಿರುವ ನಿರ್ಧಾರಗಳಿಂದ ಈಗಾಗಲೇ ಭಯೋತ್ಪಾದಕರು ಮತ್ತು ದೇಶವಿರೋಧಿಗಳು ಕಂಗೆಟ್ಟಿದ್ದು, ಇದರ ವಿರುದ್ಧವೇ ತಿರುಗಿಬಿದ್ದಿದ್ದಾರೆ.!

–ಅರ್ಜುನ್ ಭಾರದ್ವಾಜ್

 

Tags

Related Articles

Close