ಪ್ರಚಲಿತ

ಬಿಗ್ ಬ್ರೇಕಿಂಗ್! ನಶೆ ಏರಿದ್ದ ರಮ್ಯಾ ವಿರುದ್ಧ ಕೇಸ್! ತಗಲಾಕಿಕೊಂಡ ಪದ್ಮಾವತಿ!!

ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕಿಯಾಗಬೇಕೆಂಬ ಛಪಲ ಹೊಂದಿರುವ ರಮ್ಯಾ ಸದಾ ವಿವಾದಾತ್ಮಕವಾಗಿ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.ಸಾಮಾಜಿಕ ಜಾಲತಾಣದ ಮೂಲಕ ಪದೇ ಪದೇ ಬಿಜೆಪಿ ನಾಯಕರನ್ನು ಪ್ರಶ್ನಿಸುವ ಅಥವಾ ಟೀಕಿಸುವ ಕೆಲಸ ಮಾಡುತ್ತಿರುವ  ರಮ್ಯಾ ಸದ್ಯ ಕಾಂಗ್ರೆಸ್ ಗೆ ತಲೆ ನೋವಾಗಿದ್ದಾರೆ.

ಕಾಂಗ್ರೆಸ್ ಮಹಾರಾಜ ರಾಹುಲ್ ಗಾಂಧಿಯ ಯ ಕ್ರಪಾಕಟಾಕ್ಷದಿಂದ ಪಕ್ಷದ ಸಾಮಾಜಿಕ ಜಾಲತಾಣದ ಜವಾಬ್ದಾರಿ ಹೊಂದಿರುವ ರಮ್ಯಾ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೀಳಾಗಿ ಮಾತನಾಡಿ ದೇಶದ ಜನತೆಯ ಕೆಂಗಣ್ಣಿಗೆ ಕಾರಣರಾಗಿದ್ದರು.ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸಿ ಬಿಜೆಪಿಯ ಸಮಾವೇಶದಲ್ಲಿ ಭಾಗವಹಿಸಿದ್ದರು.ಸಮಾವೇಶಕ್ಕೆ ಸೇರಿದ ಕಾರ್ಯಕರ್ತರನ್ನು ನೋಡಿ ಕಾಂಗ್ರೆಸ್ ಬೆಚ್ಚಿಬಿದ್ದಿತ್ತು. ಇದರಿಂದಾಗಿಯೇ ಸ್ಪರ್ಧೆ ಗೆ ಇಳಿದವರಂತೆ ವರ್ತಿಸುತ್ತಿರುವ ಕಾಂಗ್ರೆಸ್ ನಾಯಕರು ಸಾಲು ಸಾಲಾಗಿ ನರೇಂದ್ರ ಮೋದಿಯವರ ವಿರುದ್ಧ ಮಾತನಾಡಲು
ಪ್ರಾರಂಭಿಸಿದ್ದರು.ಆದರೆ ಎಲ್ಲರಿಗಿಂತ ಭಿನ್ನ ಎನಿಸಿಕೊಳ್ಳುವ ಸಲುವಾಗಿ ರಮ್ಯಾ ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ಮೋದಿಯವರು ಅಮಲು ಪದಾರ್ಥ ಸೇವಿಸಿ ಮಾತನಾಡಿದ್ದಾರೆ,ಇನ್ನೂ ನಶೆಯಲ್ಲಿಯೇ ಇದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು.ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಲೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರಮ್ಯಾಳ ಈ ಹೇಳಿಕೆ ಸರಿಯಾದ ಸಂಸ್ಕಾರವಲ್ಲ,ದೇಶದ ಪ್ರಧಾನಿಯ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ರಮ್ಯಾಳ ಹೇಳಿಕೆಗೆ ಕಿಡಿಕಾರಿದ್ದರು.ಆದರೂ ಕಾಂಗ್ರೆಸ್ ಮಹಾರಾಜ ನ ಜೊತೆ ನೇರವಾಗಿ ಸಂಪರ್ಕ ಇರುವುದರಿಂದ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಳು..!

ಇದೀಗ ಫೇಸ್‌ಬುಕ್‌ ಮತ್ತು ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್ ತೆರೆದು ಕಾಂಗ್ರೆಸ್ ನ ಪರ ಪ್ರಚಾರ ಮಾಡಿ ಎಂದು ತನ್ನ ಗ್ರೂಪ್ ನ ಸದಸ್ಯರಿಗೆ ಉಪದೇಶ ಮಾಡಿದ್ದಾರೆ.ಸೈಬರ್ ಕ್ರೈಂ ಖಾಯಿದೆಯ ಪ್ರಕಾರ ಯಾವುದೇ ವ್ಯಕ್ತಿ ತನ್ನ ವೈಯಕ್ತಿಕ ಖಾತೆ ಬಿಟ್ಟು ಬೇರೆಯವರ
ಹೆಸರಿನಲ್ಲಿ ನಕಲಿ ಖಾತೆ ಸ್ರಷ್ಟಿಸುವುದು ಕಾನೂನು ರೀತಿಯಲ್ಲಿ ಅಪರಾಧವಾಗುತ್ತದೆ.ಇವೆಲ್ಲದರ ಬಗ್ಗೆ ಅರಿವಿದ್ದರೂ ರಮ್ಯಾ ತಾನು ೩-೪ ನಕಲಿ ಖಾತೆ
ಹೊಂದಿರುವುದಾಗಿಯೂ ಸಭೆಯಲ್ಲಿ ಹೇಳಿಕೊಂಡಿದ್ದರು.ಕಾನೂನು ಪ್ರಕಾರ ಈ ರೀತಿಯಾದ ನಕಲಿ ಖಾತೆ ಹೊಂದಿದವರ ವಿರುದ್ಧ ಸೈಬರ್ ಕ್ರೈಂ ಅಡಿಯಲ್ಲಿ ಕೇಸ್ ದಾಖಲಿಸಬಹುದಾಗಿದೆ..!

ಈಗ ಇದೇ ರೀತಿಯಲ್ಲಿ ರಮ್ಯಾಳ ವಿರುದ್ಧ ನರೇಂದ್ರ ಮೋದಿ ವಿಚಾರ್ ಮಂಚ್ ನ ರಾಜ್ಯ ಕಾರ್ಯದರ್ಶಿ ಸಿಟಿ ಮಂಜುನಾಥ್ ಸೈಬರ್ ಕ್ರೈಂ ಗೆ
ದೂರು ದಾಖಲಿಸಿದ್ದಾರೆ.ಫೇಸ್‌ಬುಕ್‌ ನಲ್ಲಿ ನಕಲಿ ಖಾತೆ ತೆರಿಯಿರಿ ಎಂದು ರಮ್ಯಾ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದ್ದರು.ಈ ಹಿನ್ನೆಲೆಯಲ್ಲಿ ರಮ್ಯಾಳ ವಿರುದ್ಧ ದೂರ ದಾಖಲಿಸಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದಾರೆ.ಈಗಾಗಲೇ ಫೇಸ್‌ಬುಕ್‌ ನಲ್ಲಿ ನಕಲಿ ಖಾತೆ ತೆರೆದು ಮೋಸ ,ಜೀವ ಬೆದರಿಕೆಗಳಂತಹ ಘಟನೆಗಳು ನಡೆಯುತ್ತಲೇ ಇದೆ,ಸಾಕಷ್ಟು ಯಡವಟ್ಟುಗಳಾಗುತ್ತಿದೆ.ಇದೆಲ್ಲದರ ಬಗ್ಗೆ ಅರಿವಿದ್ದರೂ ರಮ್ಯಾ ಸ್ವತಃ ತಾವೇ ನಕಲಿ ಖಾತೆ ತೆರೆದಿದ್ದು ಪಕ್ಷದ ಪ್ರಚಾರಕ್ಕಾಗಿ ನೀವೂ ನಕಲಿ ಖಾತೆ ತೆರೆಯಿರಿ ಕಾಂಗ್ರೆಸ್ ನ ಐಟಿ ಸೆಲ್ ಕಾರ್ಯಕರ್ತರಿಗೆ ರಮ್ಯಾ ಸೂಚನೆ ನೀಡಿದ್ದಾರೆ.ಈ ಬಗ್ಗೆ ಐಟಿ ಸೆಲ್ ಕಾರ್ಯಕರ್ತನೇ ವೀಡಿಯೋ ಮಾಡಿ ರಮ್ಯಾಳ ನಕಲಿ ಖಾತೆಯ ಉಪಾಯವನ್ನು ಬಹಿರಂಗಗೊಳಿಸಿದ್ದರು.

ಇದೀಗ ರಮ್ಯಾಳ ವಿರುದ್ಧ ದೂರು ದಾಖಲಾಗಿದ್ದು ಬಂಧನದ ಭೀತಿಯಲ್ಲಿ ರಮ್ಯಾ ಭಯಭೀತಗೊಂಡಿದ್ದಾರೆ ಎಂಬ ಮಾಹಿತಿಯೂ ಬಹಿರಂಗಗೊಂಡಿದೆ. ರಮ್ಯಾಳ ಮೂರ್ಖತನದ ನಡವಳಿಕೆಯಿಂದ ಈಗಾಗಲೇ ಕಾಂಗ್ರೆಸ್ ಹಲವಾರು ಬಾರಿ ಪೇಚೆಗೆ ಸಿಲುಕಿತ್ತು.ಆದರೆ ಇದೀಗ ರಮ್ಯಾಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನರೇಂದ್ರ ಮೋದಿ ವಿಚಾರ ಮಂಚ್ ದೂರು ದಾಖಲಿಸಿದೆ‌.ಇದರಿಂದಾಗಿ ಸ್ವತಃ ಕಾಂಗ್ರೆಸ್ ನಾಯಕರೇ ರಮ್ಯಾಳ ವಿರುದ್ಧ
ಕೆಂಡಕಾರಿದ್ದಾರೆ ಎನ್ನಲಾಗಿದೆ…!!

-ಅರ್ಜುನ್

Tags

Related Articles

Close