ಪ್ರಚಲಿತ

ಬಿಗ್ ಬ್ರೇಕಿಂಗ್: ಸಿಎಂ ಕಾರಿಗೆ ಮುತ್ತಿಗೆ!! ಬಜೆಟ್ ಮಂಡಿಸಿ ಹಿಂದಿರುಗುತ್ತಲೇ ಪ್ರತಿಭಟನೆ ಎದುರಿಸಿದ ಸಿದ್ದರಾಮಯ್ಯ!! ಉದಾಸೀನ ತೋರಿಸಿದ ಕಾಂಗ್ರೆಸ್ ಶಾಸಕರು!!

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ಕಡೇಯ ಬಜೆಟ್‍ನ್ನು ಇಂದು ವಿಧಾನಸೌಧಾದಲ್ಲಿ ಮಂಡಿಸಿದ್ದಾರೆ. ಆದರೆ ಈ ಬಜೆಟ್ ಮಂಡಿಸಿ ವಾಪಾಸಾಗುತ್ತಲೇ ವಿಧಾನ ಸೌಧಾದ ಹೊರಗಡೆ ಮುಖ್ಯಮಂತ್ರಿಗಳಿಗೆ ಪ್ರತಿಭಟನೆಯ ಸ್ವಾಗತ ಕಾದಿತ್ತು. ಬಜೆಟ್ ಮುಗಿಸಿ ಹೊರಗಡೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಉತ್ತಮ ಸ್ಪಂಧನೆ ಸಿಗುತ್ತದೆ ಎಂದು ನಿರೀಕ್ಷಿಸುತ್ತಿದ್ದ ಮುಖ್ಯಮಂತ್ರಿಗಳು ಭಾರೀ ಪ್ರತಿಭಟನೆಯನ್ನು ಎದುರಿಸುವಂತಾಯಿತು.

ತೇರದಾಳ ತಾಲೂಕು ಆಗದ್ದಕ್ಕೆ ಕಿಡಿ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರತೀಯ ಜನತಾ ಪಕ್ಷದ ಸರ್ಕಾರ ಇರುವಾಗ ಘೋಷಿಸಿದ್ದ ತಾಲೂಕುಗಳನ್ನು ರದ್ದುಪಡಿಸಿ ಅದೇ ಬೇರೆನೇ ತಾಲೂಕುಗಳನ್ನು ಘೋಷಿಸಿದ್ದರು. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕೇವಲ ಅದರ ಉಧ್ಘಾಟನೆ ಮಾತ್ರವೇ ಆಗಿದೆ. ಈ ಮಧ್ಯೆ ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕು ರಚನೆ ಮಾಡಬೇಕು ಎಂಬ ಕೂಗು ಅನೇಕ ವರ್ಷಗಳಿಂದಲೂ ಕೇಳಿ ಬರುತ್ತಿತ್ತು.

ಆದರೆ ಈ ಬಗ್ಗೆ ಮುಖ್ಯಮಂತ್ರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈ ಬಜೆಟ್‍ನಲ್ಲಿ ಘೋಷಿಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದರು. ಆದರೆ ಈ ಬಜೆಟ್‍ನಲ್ಲಿಯೂ ಅವರು ಈ ಬಗ್ಗೆ ಘೋಷಣೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿ ಹೊರಗೆ ಬರುತ್ತಲೇ ತೇರದಾಳ ತಾಲೂಕು ಹೋರಾಟ ಸಮಿತಿಯ ಸದಸ್ಯರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರ ಕಾರಿಗೆ ಮುತ್ತಿಗೆ ಹಾಕುವ ಪ್ರಯತ್ನವೂ ನಡೆಯಿತು.

 

ಶಾಸಕರ ಉದಾಸೀನ…!

ಇಂದು ತನ್ನದೇ ಪಕ್ಷದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಜೆಟ್ ಮಂಡಿಸುತ್ತಾರೆ ಎಂಬ ಮಾಹಿತಿ ತಿಳಿದಿದ್ದರೂ ಬಹುತೇಕ ಕಾಂಗ್ರೆಸ್ ಶಾಸಕರು ಇಂದಿನ ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದರು. ತನ್ನ ಸರ್ಕಾರದ ಮುಖ್ಯಮಂತ್ರಿಯೋರ್ವ ತನ್ನ ಕಡೇಯ ಬಜೆಟ್‍ನ್ನು ಮಂಡಿಸುತ್ತಿದ್ದರೂ ಕೇವಲ ಕಾಂಗ್ರೆಸ್‍ನ 85 ಶಾಸಕರನ್ನು ಹೊರತುಪಡಿಸಿದರೆ ಉಳಿದ ಯಾವೊಬ್ಬ ಶಾಸಕನೂ ವಿಧಾನ ಸೌಧಕ್ಕೂ ಕಾಲಿಟ್ಟಿಲ್ಲ ಎನ್ನುವುದು ದುರಂತವೇ ಸರಿ.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಕಟ್ಟ ಕಡೇಯ ಬಜೆಟ್. ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಮಯ್ಯನವರ ಮೇಲೆ ಭಾರೀ ನಿರೀಕ್ಷೆಗಳೇ ಏರ್ಪಟ್ಟಿದ್ದವು. ಮುಖ್ಯಮಂತ್ರಿಗಳ ಕಡೇಯ ಬಜೆಟ್ ಆಗಿದ್ದ ಕಾರಣ ಹಲವಾರು ಜನಪರ ಯೋಜನೆಗಳನ್ನು ಕೈಗೊಳ್ಳಬಹುದು ಎಂದೂ ಹೇಳಲಾಗುತ್ತಿತ್ತು. ಆದರೆ ಕೋಟ್ಯಾಂತರ ಜನರ ನಿರೀಕ್ಷೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಳ್ಳುನೀರು ಬಿಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಬಾರಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪ್ರತಿಭಟನೆಯ ಬೆದರಿಕೆಗೆ 50000 ಸಾಲವನ್ನು ಮನ್ನಾ ಮಾಡಿದ್ದರು. ಕೋಟ್ಯಾಂತರ ರೈತರು ಮಾಡಿದ್ದ ಲಕ್ಷಾಂತರ ಸಾಲದಲ್ಲಿ ಕೇವಲ 50 ಸಾವಿರ ಸಾಲವನ್ನು ಮನ್ನಾ ಮಾಡಿ ರೈತರ ಮೂಗಿಗೆ ಬೆಣ್ಣೆ ಸವರುವ ಕೆಲಸವನ್ನು ಮಾಡಿದ್ದರು. ಇದು ಸ್ವಲ್ಪನೂ ಸಾಕಾಗಲ್ಲ ಎಂದು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಹಲವಾರು ಸಹಕಾರಿ ಸಂಘಗಳಲ್ಲಿ ಮಾಡಿಟ್ಟಿದ್ದ ಸಾಲವನ್ನು ಮನ್ನಾ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ರೈತರು ಕೇವಲ 50 ಸಾವಿರ ರೂಗಳಿಗೆ ತೃಪ್ತಿ ಪಡಬೇಕಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಬಜೆಟ್ ಮಂಡನೆ ಮಡೋದನ್ನು ಬಿಟ್ಟು ಮದುವೆ ವಿಚಾರಕ್ಕೆಲ್ಲಾ ಕೈಹಾಕಿದ್ದಾರೆ. ಪರಿಶಿಷ್ಟ ಜಾತಿಯ ಮದುವೆಗಳ ವಿಚಾರದಲ್ಲಿ ರಾಜಕೀಯ ಮಾಡಿ ದಲಿತರ ಓಟ್ ಬ್ಯಾಂಕ್ ಮಾಡಲು ಮುಂದಾಗಿದ್ದರೆ. ಪರಿಶಿಷ್ಟ ಜಾತಿಯ ಹುಡುಗಿಯನ್ನು ಬೇರೆ ಜಾತಿಯ ಹುಡುಗ ಮದುವೆಯಾದರೆ ಅದಕ್ಕೆ 5 ಲಕ್ಷ ರೂ ಹಾಗೂ ಪರಿಶಿಷ್ಟ ಜಾತಿಯ ಹುಡುಗ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದರೆ ಅವರಿಗೆ 3 ಲಕ್ಷ ರೂಪಾಯಿ ನೀಡಲು ಮುಂದಾಗಿದ್ದಾರೆ. ಈ ಮೂಲಕ ಅಂತರ್ ಜಾತಿಯ ಮದುವೆಗಳಿಗೆ ಪ್ರೋತ್ಸಾಹ ಎಂಬ ನೆಪವೊಡ್ಡಿ ಪರೋಕ್ಷವಾಗಿ ಹಣದ ಆಸೆಯ ಮದುವೆಗೆ ಪ್ರೋತ್ಸಾಹಿಸಿದ್ದಾರೆ.

ಒಟ್ಟಿನಲ್ಲಿ ಇಂದಿನ ಬಜೆಟ್ ಅಧಿವೇಶನ ಮುಖ್ಯಮಂತ್ರಿ ಸಿದ್ದರಮಯ್ಯರಿಗೆ ಕಡೆಯ ಬಜೆಟ್ ಆಗಿದ್ದರೂ ಕೂಡಾ ತನ್ನ ಸರ್ಕಾರದ ಶಾಸಕರೂ ಹಾಗೂ ಸಚಿವರುಗಳು ಯಾವುದೇ ಆಸಕ್ತಿ ತೋರದೇ ಇರುವುದು ಕಂಡು ಬಂದಿತ್ತು. ಮಾತ್ರವಲ್ಲದೆ ತೇರದಾಳ ತಾಲೂಕು ಹೋರಟಗಾರರಿಂದ ಭಾರೀ ಪ್ರತಿಭಟನೆಯನ್ನೂ ಎದುರಿಸುವಂತಾಯಿತು.

-ಸುನಿಲ್ ಪಣಪಿಲ

Tags

Related Articles

Close