ಪ್ರಚಲಿತ

ಬಿಗ್ ಬ್ರೇಕಿಂಗ್!! ತುಂಬು ಗರ್ಭಿಣಿಯನ್ನೂ ಬಿಡದ ಉಗ್ರರು!! ಜಮ್ಮುವಿನಲ್ಲಿ ನಿರಂತರ ದಾಳಿ ನಡೆಸಿದ ಉಗ್ರರು ಮಾಡಿದ ಅಮಾನವೀಯ ಕೃತ್ಯವೇನು ಗೊತ್ತೇ?

ಉಗ್ರರ ಅಟ್ಟಹಾಸಕ್ಕೆ ಕಣಿವೆ ರಾಜ್ಯ ಕಾಶ್ಮೀರವು ಮತ್ತೊಮ್ಮೆ ಬೆಚ್ಚಿಬಿದ್ದಿದ್ದು, ಸುಂಜ್ವಾನ್ ನಲ್ಲಿರುವ ಜಮ್ಮು- ಕಾಶ್ಮೀರ ಲೈಟ್ ಇನ್ಪೆಂಟ್ರಿಯ ಸೇನಾ ಶಿಬಿರದ ಮೇಲೆ ಪಾಕ್ ಮೂಲದ ಜೈಷ್ ಎ ಮೊಹಮ್ಮದ್ ಸಂಘಟನೆಯ ಶಂಕಿತ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಸೇನಾ ಪಡೆಯ ಪ್ರತಿದಾಳಿಗೆ ಮೂವರು ಉಗ್ರರು ಸಾವನ್ನಪ್ಪಿದ್ದು, ತಡರಾತ್ರಿವರೆಗೂ ಕಾರ್ಯಾಚರಣೆ ಮುಂದುವರಿಯುತ್ತಿದ್ದರೂ ಕೂಡ ಇತ್ತ ಪವಾಡ ಸದೃಶ್ಯವಾದ ಸುದ್ದಿಯೊಂದು ಹೊರ ಬಿದ್ದಿದೆ.

ಶನಿವಾರ ಮುಂಜಾನೆ 4.55ರಲ್ಲಿ ಶಿಬಿರದ ಹಿಂಬದಿಯಿಂದ ಒಳ ನುಸುಳಿದ ಉಗ್ರರ ತಂಡ ಸೆಂಟ್ರಿಗಳ ಟೆಂಟ್ ಮೇಲೆ ಗ್ರನೇಡ್ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಉಗ್ರರು ವಸತಿ ಸಮುಚ್ಚಯ ಹೊಕ್ಕಿ ಗುಂಡಿನ ದಾಳಿ ನಡೆಸಿದ್ದರಿಂದಾಗಿ ಸುಬೇದಾರ್‍ಗಳಾದ ಮದನ್ ಲಾಲ್, ಮೊಹಮ್ಮದ್ ಅಶ್ರಫ್ ಹುತಾತ್ಮರಾದರೆ, ಸೇನಾಧಿಕಾರಿಯೊಬ್ಬರ ಪುತ್ರಿ, ಮೂವರು ಮಹಿಳೆಯರು ಸೇರಿ 6ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಆದರೆ ಜಮ್ಮು ಕಾಶ್ಮೀರದ ಹೊರವಲಯದ ಸುಂಜ್ವಾನ್‍ನಲ್ಲಿರುವ ಸೇನಾ ಸಿಬ್ಬಂದಿ ವಸತಿ ನಿಲಯದ ಮೇಲೆ ಶನಿವಾರ ಜೈಷ್ ಎ ಮೊಹಮ್ಮದ್ ಉಗ್ರರು ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತುಂಬು ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿ ಇದೀಗ ಹೊರ ಬಿದ್ದಿದೆ.

ಹೌದು…… ಬೆನ್ನಿನ ಕೆಳ ಭಾಗಕ್ಕೆ ಗುಂಡು ಹೊಕ್ಕಿ ಪವಾಡ ಸದೃಶವಾಗಿ ಪಾರಾಗಿದ್ದ 9 ತಿಂಗಳ ತುಂಬು ಗರ್ಭಿಣಿಯನ್ನು ದಾಳಿ ನಡೆದ ಕೂಡಲೆ ಸೇನಾ ಪಡೆಗಳು ಹೆಲಿಕ್ಯಾಪ್ಟರ್ ಬಳಸಿ ಸೇನಾ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯಲಾಗಿದ್ದು, ಹೆಣ್ಣು ಮಗು 2.5 ಕೆ.ಜಿ ತೂಕವಿದ್ದು ಆರೋಗ್ಯವಾಗಿದೆ ಎಂದು ವರದಿಯಾಗಿದೆ. ತಾಯಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಉಗ್ರರ ದಾಳಿಯ ವೇಳೆ ಐವರು ಯೋಧರು ಹುತಾತ್ಮರಾದರು….!!

ಹೌದು… ಉಗ್ರರು ಹೊಕ್ಕಿದ್ದ ವಸತಿ ಸಮುಚ್ಚಯವನ್ನು ಸುತ್ತುವರಿದ ಸೇನಾಪಡೆ ಬಳಿಕ ಅವರೆಲ್ಲರನ್ನು ಸಮುಚ್ಚಯದ ಒಂದು ಭಾಗಕ್ಕೆ ಸೀಮಿತಗೊಳಿಸಿ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಮೂವರು ಉಗ್ರರು ಮೃತಪಟ್ಟಿದ್ದಾರೆ. ಕಾರ್ಯಾಚರಣೆ ಬಳಿಕ ಶೋಧ ಕಾರ್ಯ ನಡೆಯುತ್ತಿದ್ದು ಉಗ್ರರು ಸ್ಥಳದಲ್ಲೇ ಅವಿತಿದ್ದಾರಾ ಅಥವಾ ಪರಾರಿಯಾಗಿದ್ದಾರಾ ಎಂಬುದು ತಿಳಿದು ಬಂದಿಲ್ಲ. ಸದ್ಯ ಕಟ್ಟಡದಲ್ಲಿದ್ದ ಯೋಧರ ಎಲ್ಲ ಕುಟುಂಬಗಳನ್ನು ಸುರಕ್ಷಿತವಾಗಿ ಹೊರತರಲಾಗಿದೆ. ತೆರವುಗೊಳಿಸಲಾಗಿರುವ ಮನೆಗಳ ಪ್ರತಿಯೊಂದು ಕೋಣೆಯನ್ನೂ ಶೋಧಿಸಲಾಗುತ್ತಿದೆ.

ಅಷ್ಟೇ ಅಲ್ಲದೇ, ಹತ ಉಗ್ರರ ಬಳಿಯಿಂದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಧ್ವಜಗಳು ಮತ್ತು ಎಕೆ 56 ರೈಫಲ್‍ಗಳು ಸೇರಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ಯಾಂಪ್‍ನಲ್ಲಿ ಇನ್ನೂ ಕೆಲ ಉಗ್ರರು ಅಡಗಿರುವ ಸಾಧ್ಯತೆ ಹಿನ್ನಲೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.

ಆದರೆ ಈ ಉಗ್ರರ ದಾಳಿಯಲ್ಲಿ 5 ಯೋಧರು ಸೇರಿ ಇಬ್ಬರು ಜ್ಯೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಹುತಾತ್ಮರಾಗಿದ್ದು, ಇತರ 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಸೇನಾ ಮೇಜರ್ ಹಾಗೂ ಸೇನಾ ಸಿಬ್ಬಂದಿ ಪುತ್ರಿಯೂ ಸೇರಿದ್ದಾರೆ. ಅಷ್ಟೇ ಅಲ್ಲದೇ, ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎನ್ನುವ ವಿಚಾರವೂ ತಿಳಿದು ಬಂದಿದೆ.

ಸುಂಜ್ವಾನ್ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ನಡೆಸುವ ಸಾಧ್ಯತೆ ಬಗ್ಗೆ ಬೇಹುಗಾರಿಕಾ ದಳ ಹಿಂದೆಯೇ ಎಚ್ಚರಿಕೆ ನೀಡಿತ್ತು. ಸಂಸತ್ ಭವನದ ಮೇಲಿನ ದಾಳಿಯ ಸಂಚುಕೋರ ಅಫ್ಜಲ್ ಗೆ 2013ರ ಫೆ. 9ರಂದು ಗಲ್ಲುಶಿಕ್ಷೆ ಜಾರಿಮಾಡಲಾಗಿದ್ದು, ಇದರ ವಾರ್ಷಿಕೋತ್ಸವದ ನಿಮಿತ್ತ ಫೆ.9ರಂದು ಸುಂಜ್ವಾನ್ ಸೇರಿ ಯಾವುದಾದರೂ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಬೇಹುಗಾರಿಕಾ ದಳ ಹೇಳಿತ್ತು.

ರೋಹಿಂಗ್ಯಾಗಳ ಬಗ್ಗೆ ಅನುಮಾನ……………….!!

ಆದರೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸಭಾಧ್ಯಕ್ಷ ಕವಿಂದರ್ ಗುಪ್ತಾ ಸುಂಜ್ವಾನ್ ಸೇನಾ ಶಿಬಿರದ ಬಳಿ ವಾಸವಾಗಿದ್ದಾರೆ. ಸೇನಾ ಶಿಬಿರದ ಅನತಿ ದೂರದಲ್ಲೇ ಮ್ಯಾನ್ಮಾರ್ ನ ರೋಹಿಂಗ್ಯಾ ನಿರಾಶ್ರಿತರು ಭಾರಿ ಸಂಖ್ಯೆ ಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇವರೆಲ್ಲರೂ ಹಲವು ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಇವರನ್ನು ಬಳಸಿಕೊಂಡು ಉಗ್ರರು ಸುಂಜ್ವಾನ್ ಸೇನಾ ಶಿಬಿರದ ಮೇಲೆ ದಾಳೆ ಸಂಘಟಿಸಿರುವ ಸಾಧ್ಯತೆ ಇದೆ ಎಂದು ಸಭಾಧ್ಯಕ್ಷ ಕವಿಂದರ್ ಗುಪ್ತಾ ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನು….. ರೋಹಿಂಗ್ಯಾಗಳು ಆಶ್ರಯ ಪಡೆದಿರುವ ಕಟ್ಟಡಗಳ ಮೇಲೆ ನಿಂತು ನೋಡಿದರೆ, ಸುಂಜ್ವಾನ್ ಸೇನಾ ಶಿಬಿರದ ಸಮಗ್ರ ನೋಟ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಪಾಕ್ ಮೂಲದ ಉಗ್ರ ಸಂಘಟನೆ, ರೋಹಿಂಗ್ಯಾಗಳಿಗೆ ಹಣದಾಸೆ ತೋರಿಸಿ, ಈ ದಾಳಿ ಸಂಘಟಿಸಿರಬಹುದು ಎಂದು ಶನಿವಾರ ನಡೆದ ವಿಧಾನಸಭೆ ಕಲಾಪದಲ್ಲಿ ಅನುಮಾನ ವ್ಯಕ್ತಪಡಿಸಿದರು.

ಈಗಾಗಲೇ ಸುಂಜ್ವಾನ್ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿರುವ 2ನೇ ದಾಳಿ ಇದಾಗಿದೆ. ಆದರೆ ಇದಕ್ಕೂ ಮುನ್ನ 2006ರಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರರು ದಾಳಿ ಮಾಡಿದ್ದು, ಈ ಘಟನೆಯಲ್ಲಿ 12 ಯೋಧರು ಹುತಾತ್ಮರಾಗಿದ್ದರೆ!!

“ಸುಂಜ್ವಾನ್ ಸೇನಾ ಶಿಬಿರದ ಮೇಲಿನ ಉಗ್ರರ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ, ಎಲ್ಲ ಉಗ್ರರನ್ನು ಹತ್ಯೆ ಮಾಡುವ ಮೂಲಕ ಯೋಧರು ರಾಷ್ಟ್ರದ ಗೌರವ ಕಾಪಾಡುತ್ತಾರೆ” ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಘಟನೆಯ ಕುರಿತು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್.ಪಿ. ವೈದ್ ಅವರೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಗೃಹ ಸಚಿವಾಲಯದ ಅಧಿಕಾರಿಗಳಿಗೂ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

– ಅಲೋಖಾ

Tags

Related Articles

Close