ಪ್ರಚಲಿತ

ಬಿಗ್ ಬ್ರೇಕಿಂಗ್!! ಪಠಾಣ್ ಕೋಟ್ ಮೇಲೆ ಮತ್ತೆ ಉಗ್ರ ದಾಳಿ!! ಮತ್ತೊಮ್ಮೆ ನಡೆಯುತ್ತಾ ಸರ್ಜಿಕಲ್ ಸ್ಟ್ರೈಕ್!! ಪಾಠ ಕಲಿಯದ ಪಾಕ್!!

ಪಾಕ್ ಜತೆ ಶಾಂತಿಮಂತ್ರ ಪಠಿಸುತ್ತಿರುವ ಹೊತ್ತಲೇ ಭಾರತ ಮತ್ತೊಮ್ಮೆ ಪಾಕ್ ಪ್ರೇರಿತ ಉಗ್ರರ ದಾಳಿಗೆ ತುತ್ತಾಗಿದೆ. ಅಷ್ಟೇ ಅಲ್ಲದೇ, ಪ್ರತಿಬಾರಿಯೂ ಭಾರತವನ್ನು ಕಂಡರೆ ಸಾಕು ಉರಿದೇಳುತ್ತಿದ್ದ ಪಾಕ್ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸನ್ನು ಸಹಿಸಲಾಗದೇ ಒಂದಲ್ಲಾ ಒಂದು ಕಿರಿಕ್ ಮಾಡುತ್ತಲೇ ಸಾಗುತ್ತಿದ್ದು, ಇಂದು ಮತ್ತೊಮ್ಮೆ ಜಮ್ಮು ಪಠಾಣ್ ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

ಈಗಾಗಲೇ ಪಂಜಾಬ್‍ನ ಪಠಾಣ್ ಕೋಟ್ ವಾಯುನೆಲೆಗೆ ನುಗ್ಗಲು ಜೈಷೆ ಮೊಹಮದ್ ಉಗ್ರರು ಇನ್ನಿಲ್ಲದ ಪ್ರಯತ್ನ ನಡೆಸಿ ಭಾರತೀಯ ಯೋಧರಿಂದ ಹತರಾಗಿಸಿದ್ದರು. ಈ ಉಗ್ರ ದಮನ ಕಾರ್ಯಾಚರಣೆಯ ವೇಳೆ 12 ಭಾರತೀಯ ಯೋಧರು ಹುತಾತ್ಮರಾಗಿದ್ದಲ್ಲದೇ, ಉಗ್ರರ ದಾಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿತ್ತು!! ಆದರೆ ಇಂದು ಬೆಳಗ್ಗೆ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ಉಗ್ರರು ಜಮ್ಮು ಕಾಶ್ಮೀರದ ಸುಂಜ್ವಾನ ಪ್ರದೇಶದಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದು, ಏಳು ಮಂದಿ ಯೋಧರು ಹಾಗೂ ಒರ್ವ ಯೋಧನ ಮಗಳು ಗಾಯಗೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು.

ಆದರೆ ಜಮ್ಮು ಪಠಾಣ್ ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿಬಿರದ ಮೇಲೆ ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದರು. ಆ ವೇಳೆ ಶಸ್ತ್ರಾಸ್ತ್ರಧಾರಿ ಉಗ್ರರು ಸೇನಾ ಪ್ರದೇಶದ ಒಳನುಗ್ಗಲು ಗುಂಡಿನ ದಾಳಿ ನಡೆಸಿದ್ದು, ಗ್ರೆನೇಡ್‍ಗಳನ್ನ ಎಸೆದಿದ್ದಾರೆ. ಉಗ್ರರ ಗುಂಡಿನ ದಾಳಿಯಿಂದ ಏಳುಮಂದಿ ಗಾಯಗೊಂಡಿದ್ದರೆ, 3 ಯೋಧರು ಹುತಾತ್ಮರಾಗಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಯೋಧನ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ಗುಂಡಿನ ದಾಳಿ ನಿಂತಿದ್ದು, ಸೇನೆ ಹಾಗೂ ಪೆÇಲೀಸರ ಜಂಟಿ ಕಾರ್ಯಾಚರಣೆ ಇದೀಗ ಮುಂದುವರೆದಿದ್ದು, ಈ ಪ್ರದೇಶದ 500 ಮೀಟರ್ ಒಳಗಿರುವ ಶಾಲೆಗಳನ್ನು ತೆರೆಯದಂತೆ ಜಿಲ್ಲಾಡಳಿತ ಸೂಚಿಸಿದೆ. ಜಮ್ಮು ಐಜಿಪಿ ಎಸ್‍ಡಿ ಸಿಂಗ್ ಜಮ್ವಾಲ್ ಹೇಳಿದಂತೆ, “ಇಂದು ಬೆಳಗ್ಗೆ 4.55ರ ಸುಮಾರಿಗೆ ಅನುಮಾನಾಸ್ಪದ ಓಡಾಟ ಕಂಡುಬಂದಿತ್ತು. ಈ ವೇಳೆ ಸೆಂಟ್ರಿ ಬಂಕರ್ ಫೈರ್ ಮಾಡಿದಾಗ ಅವರು ಪ್ರತಿದಾಳಿ ನಡೆಸಿದ್ದು, ತದನಂತರ ಕಟ್ಟಡದೊಳಗೆ ಉಗ್ರರು ಅಡಗಿದ್ದಾರೆ. ಹಾಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ಉಗ್ರರು ಜೈಷ್- ಎ- ಮಹಮ್ಮದ್ ಉಗ್ರ ಸಂಘಟನೆಯವರು ಎಂದು ಹೇಳಲಾಗಿದ್ದು, ಸದ್ಯ ಈ ಪ್ರದೇಶವನ್ನು ಪೆÇಲೀಸರು ಸುತ್ತುವರಿದಿದ್ದಾರೆ. ಹಾಗಾಗಿ ಭದ್ರತಾ ಪಡೆಯು ಉಗ್ರರನ್ನು ಪತ್ತೆ ಮಾಡಲು ಡ್ರೋನ್ ಮತ್ತು ಹೆಲಿಕಾಪ್ಟರ್ ಗಳನ್ನು ಬಳಸಿದೆ. ಆದರೆ ಉಗ್ರರ ದಾಳಿ ವೇಳೆ ಯೋಧರ ಸಂಖ್ಯೆ 3ಕ್ಕೆ ಏರಿದ್ದು, ಏಳು ಯೋಧರಿಗೆ ತೀವ್ರ ಗಾಯಗಳಾಗಿದೆ. ಆದರೆ ದಾಳಿ ಸಂಧರ್ಭದಲ್ಲಿ ಗಾಯಗೊಂಡಿದ್ದ ಯೋಧನ ಮಗಳು ಇದೀಗ ಸಾವನ್ನಪ್ಪಿದ್ದಾಳೆ ಎನ್ನುವ ವಿಚಾರವೂ ತಿಳಿದು ಬಂದಿದೆ.

2006ರಲ್ಲಿ ಕೂಡ ಇದೇ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆಗ 12 ಯೋಧರು ಹುತಾತ್ಮರಾಗಿ, 7 ಯೋಧರು ಗಾಯಗೊಂಡಿದ್ದರು. ಆತ್ಮಾಹುತಿ ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.

“ಸರ್ಜಿಕಲ್ ಸ್ಟ್ರೈಕ್ ಪಾಕಿಸ್ತಾನಕ್ಕೆ ಒಂದು ಸಂದೇಶವಷ್ಚೇ…ಅಗತ್ಯಬಿದ್ದರೆ ಭಾರತ ಅದಕ್ಕಿಂತಲೂ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸುತ್ತದೆ” ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಈ ಹಿಂದೆ ಹೇಳಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದರೆ ಮತ್ತೆ ಅಂತಹ ದಾಳಿಗಳನ್ನು ನಡೆಸಲು ಭಾರತ ಹಿಂದೇಟು ಹಾಕುವುದಿಲ್ಲ. ಅಗತ್ಯ ಬಿದ್ದರೆ ಭಾರತೀಯ ಸೇನೆ ನಿಯಂತ್ರಣ ರೇಖೆಯಾಚೆ ಮತ್ತೆ ಸರ್ಜಿಕಲ್ ದಾಳಿಗಳನ್ನು ನಡೆಸಬಹುದು ಎಂದು ಎಚ್ಚರಿಕೆ ನೀಡಿದ್ದರು.

ಅಷ್ಟೇ ಅಲ್ಲದೇ, ಭಯೋತ್ಪಾದನೆಗೆ ಪ್ರಚೋದನೆ ನೀಡುವ ತನ್ನ ವರ್ತನೆಯನ್ನು ಪಾಕಿಸ್ತಾನ ಬದಲಿಸಿಕೊಳ್ಳಲೇ ಬೇಕು.. ಒಂದು ವೇಳೆ ಪಾಕ್ ತನ್ನ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಯಬಹುದು. ಆದರೆ ಮುಂದಿನ ಸಂಭಾವ್ಯ ದಾಳಿ ಹಿಂದಿನ ರೂಪದಲ್ಲಿಯೇ ಇರಬಹುದು ಎಂದು ಹೇಳಲಾಗದು. ಅದಕ್ಕಿಂತಲೂ ಹೆಚ್ಚಿನ ಪರಿಣಾಮ ಅದು ಬೀರಬಹುದು ಎಂದು ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದರೂ ಕೂಡ ಪಾಕ್ ತನ್ನ ಕುತಂತ್ರ ಬುದ್ದಿಯನ್ನು ಮಾತ್ರ ಬಿಟ್ಟಿಲ್ಲ!!

ಪಠಾಣ್‍ಕೋಟ್ ಮೇಲೇಕೆ ಉಗ್ರರ ವಕ್ರದೃಷ್ಟಿ?

2016ರಲ್ಲಿ ಪಂಜಾಬಿನ ಗುರುದಾಸ್‍ಪುರ-ಪಠಾಣ್‍ಕೋಟ್ ವಲಯದಲ್ಲಿ ಉಗ್ರರು ನಡೆಸಿದ ಎರಡನೇ ದಾಳಿ ಇದಾಗಿದ್ದು, ಪಾಕ್ ಮೂಲದ ಲಷ್ಕರೆ ತಯ್ಬಾ ಸಂಘಟನೆಯ ಉಗ್ರರು ಜಿಲ್ಲೆಯ ದೀನಾನಗರ ಪೆÇಲೀಸ್ ಠಾಣೆ ಮೇಲೆ ದಾಳಿ ನಡೆಸಿ ಗುರುದಾಸ್‍ಪುರ ಎಸ್ಪಿ ಸೇರಿದಂತೆ 12 ಜನರನ್ನು ಕೊಂದುಹಾಕಿದ್ದರು. ಹೀಗೆ ಉಗ್ರರು ಈ ವಲಯವನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿರುವುದಕ್ಕೂ ಅನೇಕ ಕಾರಣಗಳಿವೆ.

ಗುರುದಾಸ್‍ಪುರ ಜಿಲ್ಲೆಯು ಪಠಾಣ್‍ಕೋಟ್ ನಗರದಲ್ಲಿರುವ ವಾಯುನೆಲೆಯು ದೇಶದ ವಾಯುವ್ಯ ಭಾಗದ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿದೆ. ಈ ವಾಯುನೆಲೆಯು ಪಾಕ್ ಗಡಿಯಿಂದ ಕೇವಲ 35 ಕಿ.ಮೀ.ದೂರದಲ್ಲಿದೆ. ಪಠಾಣ್‍ಕೋಟ್ ನಗರವು ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ರಾಜ್ಯಗಳ ಸಂಪರ್ಕಕ್ಕೂ ಸನಿಹದಲ್ಲಿದೆ. ಹೀಗಾಗಿಯೇ ಇಲ್ಲಿ ಭೂಸೇನೆ ಹಾಗೂ ವಾಯುಪಡೆಯ ನೆಲೆಗಳು ದೊಟ್ಟಮಟ್ಟದಲ್ಲಿವೆ. ಹೀಗಾಗಿ ಇವನ್ನು ಧ್ವಂಸಗೊಳಿಸುವ ಮೂಲಕ ದೇಶದ ರಕ್ಷಣಾ ವ್ಯವಸ್ಥೆಯ ಜಂಗಾಬಲವನ್ನೇ ಉಡುಗಿಸುವಂತೆ ಪಾಕ್ ಗುಪ್ತಚರ ಇಲಾಖೆ ಐಎಸ್‍ಐ ಉಗ್ರ ಸಂಘಟನೆಗಳಿಗೆ ಮೇಲಿಂದ ಮೇಲೆ ಆದೇಶ ನೀಡುತ್ತಲೇ ಬರುತ್ತಿದೆ ಎಂದು ಮೂಲಗಳು ಹೇಳಿವೆ.

ಅಷ್ಟೇ ಅಲ್ಲದೇ, ಪಾಕ್ ಗಡಿಯ ಸಮೀಪವೇ ಜಮ್ಮು-ಪಠಾಣ್‍ಕೋಟ್ ರಾಷ್ಟ್ರೀಯ ಹೆದ್ದಾರಿ 44 ಹಾದು ಹೋಗುತ್ತದೆ. ಹೆದ್ದಾರಿ ಹಾದುಹೋಗುವ ಅನೇಕ ಪ್ರದೇಶಗಳಲ್ಲಿ ಸೇನಾ ಶಿಬಿರಗಳು, ಶಸ್ತ್ರಾಸ್ತ್ರ ಸಂಗ್ರಹಾರಗಳಿವೆ. ಹೆದ್ದಾರಿಯ ಅಕ್ಕಪಕ್ಕ ದಟ್ಟ ಅರಣ್ಯ ಪ್ರದೇಶವಿರುವುದರಿಂದ ಉಗ್ರರಿಗೆ ಅದು ವರದಾನವಾಗಿ ಪರಿಣಮಿಸಿದೆ. ಎಷ್ಟೇ ಬಿಗಿಭದ್ರತೆ, ವಾಹನಗಳ ತಪಾಸಣೆ ಇದ್ದರೂ ಗಡಿ ನುಸುಳುವ ಉಗ್ರರು ಹೆದ್ದಾರಿ ಮೂಲಕ ಭಾರತದ ಪ್ರಮುಖ ನಗರಗಳತ್ತ ಪ್ರಯಾಣ ಬೆಳೆಸುವುದು ಹಾಗೂ ಮಾರ್ಗಮಧ್ಯೆ ಸಂಚರಿಸುವ ಸೇನಾ ವಾಹನಗಳ ಮೇಲೆ ದಾಳಿ ನಡೆಸಿ, ಅರಣ್ಯ ಪ್ರದೇಶದ ನುಗ್ಗಿ ಪರಾರಿಯಾಗುವುದು ಅವರಿಗೆ ಸುಲಭವಾಗಿದೆ.

ಗಡಿ ನುಸಳಲು ಏಕೆ ಸುಲಭ?

ಜಮ್ಮು-ಗುರುದಾಸ್‍ಪುರ ವಲಯದ 553 ಕಿ.ಮೀ. ಉದ್ದದ ಭೂಪ್ರದೇಶವು ಪಾಕ್ ಗಡಿಯನ್ನು ಹೊಂದಿಕೊಂಡಿದೆ. ಈ ಗಡಿಯು ಜಿಗ್‍ಜಾಗ್ ಮಾದರಿಯಲ್ಲಿದ್ದು, ತಂತಿ ಬೇಲಿಯನ್ನು ಹೊಂದಿದೆ. ಆದರೆ ಕೆಲವು ಕಡೆ ರಾವಿ ನದಿ ಹಾಗೂ ಹಳ್ಳ ತೊರೆಗಳು ಹರಿಯುತ್ತಿದ್ದು ಇದು ಉಭಯ ದೇಶಗಳ ನಡುವಿನ ಗಡಿಯನ್ನು ತಂತಿ ಬೇಲಿಯನ್ನು ತೊಡೆದುಹಾಕಿವೆ. ಇನ್ನು ಚಳಿಗಾಲದ ಅವಧಿಯಲ್ಲಂತೂ ದಟ್ಟ ಮಂಜು ಮುಸುಕಿದ ವಾತಾವರಣವಿರುತ್ತದೆ. ಹೀಗಾಗಿ ಹಗಲು-ರಾತ್ರಿ ಯೋಧರು ಗಡಿಯಲ್ಲಿ ಕಣ್ಗಾವಲು ಇರಿಸಿದರೂ, ನೈಟ್ ವಿಷನ್ ಕ್ಯಾಮೆರಾಗಳ ಮೂಲಕ ಹದ್ದಿನ ಕಣ್ಣಿಟ್ಟರೂ ಉಗ್ರರು ನದಿ ಮಾರ್ಗದ ಮುಖಾಂತರ ಗಡಿ ನುಸುಳುವುದು ಸುಲಭವಾಗುತ್ತಿದೆ ಎಂದು ವಿಶ್ಲೇಷಿಸುತ್ತಾರೆ ರಕ್ಷಣಾ ತಜ್ಞರು.

ಆದರೆ ಇಂದು ಬೆಳಗ್ಗೆ ನಡೆದ ದಾಳಿಯ ಕಾರ್ಯಸಂಚು ರೂಪಿಸಿದವರು ಜೈಷ್- ಎ- ಮಹಮ್ಮದ್ ಉಗ್ರ ಸಂಘಟನೆಯವರು ಎಂದು ಹೇಳಲಾಗಿದೆ. ಸದ್ಯ ಈ ಪ್ರದೇಶವನ್ನು ಪೆÇಲೀಸರು ಸುತ್ತುವರಿದಿದ್ದು, ಭದ್ರತಾ ಪಡೆ ಉಗ್ರರನ್ನು ಪತ್ತೆ ಮಾಡಲು ಡ್ರೋನ್ ಮತ್ತು ಹೆಲಿಕಾಪ್ಟರ್‍ಳನ್ನು ಬಳಸಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.

– ಅಲೋಖಾ

Tags

Related Articles

Close