ಪ್ರಚಲಿತ

ಬಿಗ್ ಬ್ರೇಕಿಂಗ್: ಬಹುನಿರೀಕ್ಷಿತ ಕಾವೇರಿ ತೀರ್ಪು ಪ್ರಕಟ. ಐತಿಹಾಸಿಕ ತೀರ್ಪು ಪ್ರಕಟಿಸಿದ ನ್ಯಾಯಾಲಯ. ದೆಹಲಿಯಲ್ಲಿ ಭಾರಿಸಿತು ಕಾವೇರಿ ಡಿಂಡಿಮ..!

ಕಾವೇರಿ, ಕಾವೇರಿ, ಕಾವೇರಿ… ಅದೆಷ್ಟೋ ವರ್ಷಗಳಿಂದ ಕರ್ನಾಟಕ ಈ ಒಂದು ವಿಚಾರಕ್ಕಾಗಿ ಬೆಂದು ಬೇಯುತ್ತಿದೆ. ಕನ್ನಡದ ಜೀವನದಿ ಕಾವೇರಿಗಾಗಿ ಅನೇಕ ವರ್ಷಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಲೇ ಬಂದಿದೆ. ಅದೆಷ್ಟೋ ಜೀವಗಳು ಕಾವೇರಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ್ದಾರೆ. ಪ್ರತಿಭಟನೆಗಳು, ಬಂದ್‍ಗಳು, ಮುಷ್ಕರಗಳು, ಹೋರಾಟಗಳು ಒಂದಲ್ಲಾ ಎರಡಲ್ಲಾ. ಸಾವಿರ ಸಾವಿರ ರೀತಿಯ ಹೋರಾಟಗಳು ಸಾವಿರ ಸಾವಿರ ಬಾರಿ ಆಗಿ ಹೋಗಿದೆ. ಕಾವೇರಿ ನಮ್ಮವಳು, ಅವಳನ್ನು ನಾವು ಕೊಡೋದಿಲ್ಲ ಎಂದು ಕರ್ನಾಟಕದ ಮಂದಿ ಹಠ ಹಿಡಿದು ಕುಂತಿದ್ದರೆ, ನಮಗೆ ನೀರಿಲ್ಲ, ನ್ಯಾಯದ ಪ್ರಕಾರ ಕಾವೇರಿ ನಮಗೆ ಕೂಡಾ ಸೇರಿದವಳು ಎಂದು ತಮಿಳುನಾಡಿನ ಜನತೆ ಆಗ್ರಹಿಸುತ್ತಿದ್ದಾರೆ. ಒಟ್ಟಾರೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಹಲವಾರು ವರ್ಷಗಳಿಂದ ವಾದ ವಿವಾದಗಳಿಂದಲೇ ಮುಂದುವರೆಯುತ್ತಿತ್ತು.

ಹೊರಬಿತ್ತು ಐತಿಹಾಸಿಕ ತೀರ್ಪು…

ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಕಾರಣವಾಗಿದ್ದ ಕಾವೇರಿ ನದಿ ನೀರಿನ ಸಮಸ್ಯೆ ಇಂದು ಕೊಂಚ ಮಟ್ಟಿಗೆ ಬಗೆ ಹರಿದಿದೆ. ಇಂದು ಕಾವೇರಿ ಕೊಳ್ಳದ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ. ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಇದು ಸತ್ಯಕ್ಕೆ ಹಾಗೂ ನ್ಯಾಯಕ್ಕೆ ಸಂದ ಜಯ ಎಂದೇ ಪರಿಗಣಿಸಲಾಗುತ್ತಿದೆ. ಕರ್ನಾಟಕ ಕುಣಿದು ಕುಪ್ಪಳಿಸುತ್ತಿದೆ.

ತೀರ್ಪು ಏನು ಗೊತ್ತಾ..?

ಬಹುನಿರೀಕ್ಷಿತ ಕಾವೇರಿ ಜಲ ವಿವಾದ ತೀರ್ಪು ಪ್ರಕಟವಾಗಿದೆ. ತೀರ್ಪು ನೀಡಿದ ಸುಪ್ರೀಂ ಕೋರ್ಟ್‍ನ ತ್ರಿಸದಸ್ಯ ಪೀಠ ಮಹತ್ವದ ಆದೇಶವನ್ನು ನೀಡಿದೆ. ಇಂದು ಸುಪ್ರೀಂ ಕೋರ್ಟ್‍ನಲ್ಲಿ ನೀಡಿದ ತೀರ್ಪು ಕರ್ನಾಟಕಕ್ಕೆ ಭಾರೀ ಜಯವನ್ನೇ ನೀಡಿದೆ. ಕಾವೇರಿ ಹೋರಾಟಗಾರರು ಸಂಭ್ರಮಿಸುವಂತೆ ಆಗಿದೆ.

ನ್ಯಾಯಾಧೀಶರು ಹೇಳಿದ್ದು…

ಕಾವೇರಿ ಬಗ್ಗೆ ತೀರ್ಪು ಓದಲು ಆರಂಭಿಸಿದ್ದ ನ್ಯಾಯಾಧೀಶರು ಮೊದಲು ಕೆಲ ವಿಚಾರಗಳ ಬಗ್ಗೆ ಉಲ್ಲೇಖಿಸಿದ್ದಾರೆ.

* ನದಿಗಳ ಮೇಲೆ ಪ್ರಭುತ್ವ ಸಾಧಿಸುವ ಅಧಿಕಾರ ಯಾರಿಗೂ ಇಲ್ಲ. ಇದು ಯಾವ ರಾಜ್ಯಕ್ಕೂ ಇಲ್ಲ.

* ನ್ಯಾಯಾಧೀಕರಣ ಅನುಸರಿಸಿದ ಕ್ರಮ ಸರಿಯಾಗಿಯೇ ಇದೆ. ಇದನ್ನು ಪ್ರಶ್ನಿಸುವಂತಿಲ್ಲ.

* ಇದು ರಾಜ್ಯಗಳ ಸ್ವತ್ತಲ್ಲ. ರಾಷ್ಟ್ರದ ಸಂಪತ್ತು.

* ಬ್ರಿಟಿಷ್ ಕಾಲದ ಒಪ್ಪಂದಗಳ ಬಗ್ಗೆ ಉಲ್ಲೇಖ.

* ಪುದುಚೇರಿ ಕೇರಳಕ್ಕೆ ನೀಡಿರುವ ನೀರು ಹಂಚಿಕೆ ಸರಿಯಾಗಿದೆ.

* ಸಂವಿಧಾನದ ಅಡಿ ಕರ್ನಾಟಕಕ್ಕೆ ಚೌಕಾಸಿ ಮಾಡುವ ಅಧಿಕಾರವಿದೆ.

* ಕೇರಳಕ್ಕೆ 30 ಟಿಎಂಸಿ ಹಾಗೂ ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ.

* ಕರ್ನಾಟಕದ ಮೇಲ್ಮನವಿಗೆ ಗೆಲುವು.

* ನೀರು ಹಂಚುವಾಗ ತಮಿಳುನಾಡಿಗೆ 199ರ ಬದಲಿಗೆ 177.25 ಟಿಎಂಸಿ ಮಾತ್ರ ಬಿಡುಗಡೆ ಮಾಡಬೇಕು

* ಬೆಂಗಳೂರಿಗೆ 14.75 ಟಿಎಂಸಿ ನೀರು ಬಿಡುಗಡೆಯಾಗಬೇಕು.

* ಮುಂದಿನ 15 ವರ್ಷಕ್ಕೆ ಟ್ರಿಬ್ಯುನಲ್ ತೀರ್ಪು ಅನ್ವಯ

* ತಮಿಳುನಾಡಿನಲ್ಲಿ ಅಂತರ್ಜಲವನ್ನು ಕಾವೇರಿ ನೀರಿನ ಭಾಗವೆಂದು ಪರಿಗಣನೆ.

* ಕರ್ನಾಟಕ ನೀರಾವರಿ ಪ್ರದೇಶ ವಿಸ್ತರಣೆಗೆ ಸುಪ್ರೀಂ ಕೋರ್ಟ್ ಅಸ್ತು.

* 1892, 1924 ರ ಎರಡೂ ಒಪ್ಪಂದಗಳೂ ಸಿಂಧು. ಅದು ಸಂವಿಧಾನ ಬದ್ಧವಾಗಿದೆ ಎಂದು ತೀರ್ಪು.

* ಕೇಂದ್ರ ಸರ್ಕಾರದ ವಿಮೋಚನೆಗೆ ಬಿಟ್ಟ ಸುಪ್ರೀಂ ಕೋರ್ಟ್.

* ಕಾವೇರಿ ನಿರ್ವಹಣಾ ಮಂಡಳಿ ಕೇಂದ್ರದ ಕೆಲಸ.

* ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಧ್ಯಕ್ಕಿಲ್ಲ.

* ಕುಡಿಯುವ ನೀರಿಗಾಗಿ 4.75 ಟಿಎಂಸಿ ನೀರನ್ನು ಕರ್ನಾಟಕ ಹೆಚ್ಚುವರಿಯಾಗಿ ಬಳಸಿಕೊಳ್ಳಬಹುದು.

* 15 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲಿಸಬಹುದು.

* ಆವರೆಗೆ ಈ ಆದೇಶವನ್ನು ಬದಲಾಯಿಸುವಂತಿಲ್ಲ.

* ಯಾವುದೇ ಒಂದು ರಾಜ್ಯ ನದಿಯ ಮೇಲೆ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ.

* ಕರ್ನಾಟಕಕ್ಕೆ ಹಂಚಿಕೆಯಾಗಿದ್ದ ನೀರಿನ ಪ್ರಮಾಣದಲ್ಲಿ ಭಾರೀ ಹೆಚ್ಚಳ.

* ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ.

* ಸುಪ್ರೀಂ ಕೋರ್ಟ್‍ನ ತ್ರಿಸದಸ್ಯ ಪೀಠ.

ಇಂದಿನ ಕಾವೇರಿ ತೀರ್ಪು ಕರ್ನಾಟಕಕ್ಕೆ ಭಾರೀ ಸಿಹಿಯನ್ನೇ ನೀಡಿದ್ದು ಕರ್ನಾಟಕದ ಜನತೆ ಕುಣಿದು ಕುಪ್ಪಳಿಸುವಂತೆ ಆಗಿದೆ. ಸರ್ವೋಚ್ಛ ನ್ಯಾಯಾಲಯದಲ್ಲಿ ತೀರ್ಪು ಓದುತ್ತಿದ್ದಂತೆ ಮಂಡ್ಯ ಸಹಿತ ಹಲವಾರು ಕಡೆಗಳಲ್ಲಿ ಕಾವೇರಿ ಭಕ್ತರು ಬೀದಿಗಿಳಿದು ಸಂಭ್ರಮಿಸಿ ಪರಸ್ಪರ ಸಿಹಿ ಹಂಚಿಕೊಂಡಿದ್ದಾರೆ. ಕರ್ನಾಟಕ ಪರ ವಕೀಲ ಶ್ರೀ ಬ್ರಿಜೇಶ್ ಕಾಳಪ್ಪ ಮಾತನಾಡಿ ಇದು ಕರ್ನಾಟಕದ ಜನತೆಯ ಹೋರಾಟಕ್ಕೆ ಸಂದ ಜಯ. ಹಿಂದೆ ಹಂಚಿಕೆ ಮಾಡಿದ್ದ ನೀರಿಗಿಂತ ಭಾರೀ ಪ್ರಮಾಣವನ್ನು ಹೆಚ್ಚಿಗೆ ಮಾಡಿದೆ ಸುಪ್ರೀಂ ಕೋರ್ಟ್. ನಾವು ಈ ತೀರ್ಪನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಕರ್ನಾಟಕದ ಹೋರಾಟಕ್ಕೆ ಭರ್ಜರಿ ಜಯ ಸಿಕ್ಕಂತಾಗಿದ್ದು. ಕಾವೇರಿ ಮತ್ತೆ ದಾಸ್ಯಮುಕ್ತಳಾಗಿದ್ದಾಳೆ. ಈ ಮೂಲಕ ಕಾವೇರಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡೋದಿಲ್ಲ ಎಂಬ ಕರ್ನಾಟಕದ ಜನತೆಯ ಹೋರಾಟವೂ ಸುಪ್ರೀಂ ಕೋರ್ಟ್‍ನ ಕದ ತಟ್ಟಿದೆ. ಇದು ಸಮಸ್ತ ಕರ್ನಾಟಕದ ಕಾವೇರಿ ಪರ ಹೋರಾಟಗಾರರ ಹೋರಟಕ್ಕೆ ಸಂದ ಜಯ ಎಂದರೆ ತಪ್ಪಾಗಲಾರದು.

-ಸುನಿಲ್ ಪಣಪಿಲ

Tags

Related Articles

Close