ಪ್ರಚಲಿತ

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಗೌರಿ ಸಹೋದರ ಬಿಜೆಪಿಯಲ್ಲಿ ಮಾಸ್ ಕ್ಯಾಂಪೈನರ್!! ಗೌರಿ ಹತ್ಯೆ ತನಿಖೆ ವಿಳಂಬವೇ ಕಾಂಗ್ರೆಸ್‍ಗೆ ಮುಳುವಾಯಿತು!!

ಇನ್ನೇನು ಚುನಾವಣೆ ಬೆರಳೆಣಿಯಷ್ಟು ದಿನಗಳು ಮಾತ್ರ ಬಾಕಿ ಇದ್ದು ಇದಾಗಲೇ ಹಲವಾರು ಕ್ಷೇತ್ರಗಳಲ್ಲಿ ಸ್ಟಾರ್‍ಗಳು ಪ್ರಚಾರ ನಡೆಸುತ್ತಿದ್ದಾರೆ!! ಒಂದು ಕಡೆಯಲ್ಲಿ ಸಿಎಂ ಸಿದ್ದರಾಮಯ್ಯರವರ ಪರ ಪ್ರಚಾರಕ್ಕೆಂದು ಬಂದವರು ಯಾರೂ ಅವರ ಪ್ರಚಾರ ಮಾಡದೆ ಹಿಂದಿರುಗುತ್ತಿದ್ದು ಈ ವಿಷಯವೇ ಸಿಎಂ ಸಿದ್ದರಾಮಯ್ಯನವರಿಗೆ ತೀವ್ರ ಮುಖಭಂಗವಾಗಿತ್ತು!! ಇದೀಗ ಮತ್ತೆ ಸಿಎಂ ಸಿದ್ದರಾಮಯ್ಯನವರು ತೀವ್ರ ಮುಖಭಂಗಕ್ಕೀಡಾಗಿದ್ದಾರೆ!! ಗೌರಿ ಹತ್ಯೆಯನ್ನೇ ಗಾಳವಾಗಿ ಉಪಯೋಗಿಸಿಕೊಂಡು ಸಿಎಂ ಸಿದ್ದರಾಮಯ್ಯನವರು ಓಟುಗಾಗಿ ನಾಟಕವಾಡುತ್ತಿದ್ದರು!! ಇದೀಗ ಆ ನಾಟಕಕ್ಕೆ ತೆರೆ ಎಳೆಯುವಂತೆ ಪತ್ರಕರ್ತೆ ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಬಿಜೆಪಿ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ!!

ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಇಂದ್ರಜಿತ್ ಲಂಕೇಶ್!!

ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ನಡೆದು ಏಳು ತಿಂಗಳೇ ಕಳೆದಿದೆ. ಬಲಪಂಥೀಯರ ವಿರುದ್ಧ ಧ್ವನಿಯೆತ್ತುತ್ತಿದ್ದ ಇವರನ್ನು ರಾಜೇಶ್ವರಿ ನಿವಾಸದಲ್ಲಿರುವ ಇವರ ನಿವಾಸದ ಎದುರೇ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದರು. ಘಟನೆ ನಡೆದು ಏಳು ತಿಂಗಳ ನಂತರವೂ ಇನ್ನೂ ಯಾವುದೇ ತನಿಖೆಯನ್ನು ಮಾಡದೆ ರಾಜ್ಯ ಸರಕಾರ ಮೀನಾಮೇಷಾ ಎನಿಸುತ್ತಿದೆ!! ಹಿಂದೂಗಳು ಸಾಲು ಸಾಲಾಗಿ ಇಷ್ಟು ಜನ ಮರಣವನ್ನಪ್ಪಿದರೂ ಸಹ ಯಾವುದೇ ತಕರಾರನ್ನು ಎತ್ತದೆ ಗೌರಿ ಲಂಕೇಶ್ ಹತ್ಯೆಯನ್ನು ಮಾತ್ರ ಓಟ್ ಗಿಟ್ಟಿಸಿಕೊಳ್ಳಲೆಂದೇ ಆರೋಪಿಯನ್ನು ಪತ್ತೆ ಹಚ್ಚದೆ ಸಿಎಂ ಸಿದ್ದರಾಮಯ್ಯನವರು ನಾಟವಾಡುತ್ತಿದ್ದ ವಿಷಯ ಕೊನೆಗೂ ಲಂಕೇಶ್ ಕುಟುಂಬಕ್ಕೆ ತಿಳಿದೇ ಹೋಯಿತು!! ಇದೀಗ ಸಹೋದರ ಇಂದ್ರಜಿತ್ ಲಂಕೇಶ್ ಬಿಜೆಪಿ ಅಭ್ಯರ್ಥಿ ಡಾ. ಅಶ್ವಥ್‍ ನಾರಾಯಣ್ ಪರ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ!!

ಬಿಜೆಪಿ ಅಭ್ಯರ್ಥಿ ಮಲ್ಲೇಶ್ವರಂನಿಂದ ಕಣಕ್ಕಿಳಿದಿರುವ ಡಾ. ಅಶ್ವಥ್‍ ನಾರಾಯಣ ಪರ ಇಂದ್ರಜಿತ್ ಪ್ರಚಾರ ನಡೆಸುತ್ತಿದ್ದಾರೆ!! ಈ ಕುರಿತು ಮಾತನಾಡಿದ ಇಂದ್ರಜಿತ್ ನಾನು ಯಾವುದೇ ರಾಜಕೀಯ ಸಿದ್ಧಾಂತದೊಂದಿಗಿಲ್ಲ. ನನಗೆ ಯಾರಲ್ಲಿ ವಿಶ್ವಾಸವಿದೆಯೋ ಅಂಥಹ ವ್ಯಕ್ತಿಯ ಪರವಾಗಿ ಪ್ರಚಾರ ನಡೆಸುತ್ತೇನೆ . ಡಾ .ಅಶ್ವತ್ಥನಾರಾಯಣ ನನಗೆ ಒಳ್ಳೆಯ ಸ್ನೇಹಿತರು. ನಾನು ಅವರನ್ನು ವೈಯಕ್ತಿಕವಾಗಿ ತಿಳಿಸಿದ್ದೇನೆ. ವಿದ್ಯಾವಂತರು ಅದಕ್ಕಾಗಿ ಅವರಿಗೋಸ್ಕರ ಪ್ರಚಾರ ನಡೆಸುವುದು ಒಳ್ಳೆಯದೆನಿಸುತ್ತದೆ!! ಈ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಎಂದಿದ್ದಾರೆ!!

ಇಂದ್ರಜಿತ್ ಲಂಕೇಶ್‍ಗೆ ಸಾಥ್ ನೀಡಿರುವ ಕವಿತ ಲಂಕೇಶ್!!

ಸಹೋದರ ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದಕ್ಕೆ ಕವಿತಾ ಲಂಕೇಶ್ ಅವರ ಪ್ರತಿಕ್ರಿಯೆ ನೀಡಿದ್ದು ನನ್ನ ತಂದೆ ಎಡಪಂಥೀಯರು ನನ್ನ ಸಹೋದರಿ ಕೂಡಾ ಅದನ್ನೇ ಆಯ್ಕೆ ಮಾಡಿಕೊಂಡಿದ್ದಳು!! ನನ್ನ ನೈತಿಕ ಬೆಂಬಲ ಯಾವತ್ತೂ  ಅವರಿಗೊಂದಿಗಿತ್ತು!! ಆದರೆ ಪ್ರತೀಯೊಬ್ಬರಿಗೂ ತಮ್ಮದೇ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವಿದೆ!! ಇಂದ್ರಜಿತ್ ಕುರಿತು ತನ್ನದೇನೂ ದೂರಿಲ್ಲ!! ನಾವು ವಿವಿಧ ಚಿಂತನೆಗಳನ್ನು ಹೊಂದಿದ್ದೇವೆ !! ನಮ್ಮ ಮಾರ್ಗ ಕೂಡ ಬೇರೇಯೇ ಆಗಿದೆ ನಾನು ಅವರ ಆಯ್ಕೆಯನ್ನು ಒಪ್ಪಿಕೊಂಡಲ್ಲಿ ಅವರೊಂದಿಗೆ ಜೊತೆಯಾಗಿ ನಿಲ್ಲುತ್ತೇನೆ ಎಂದಿದ್ದಾರೆ!! ಯಾರೂ ಒಳ್ಳೆಯವರೋ ಅದನ್ನೆ ಇಂದ್ರಜಿತ್ ಆಯ್ಕೆ ಮಾಡಿಕೊಂಡಿದ್ದಾರೆ ಹಾಗಾಗಿ ನಾನು ಇಂದ್ರಜಿತ್‍ಗೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ!!

ಬಿಜೆಪಿ ಸೇರ್ಪಡೆಯ ಬಗ್ಗೆ ಈ ಮೊದಲೇ ಸುಳಿವು ನೀಡಿದ್ದ ಇಂದ್ರಜಿತ್!!

ಈ ಮೊದಲೇ ಬೆಂಗಳೂರಿನ ಟೌನ್ ಹಾಲ್‍ನಲ್ಲಿ ಬಸವ ಕ್ರಾಂತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಬಸವಣ್ಣನವರ ಹಾದಿಯಲ್ಲಿ ಜನನಾಯಕರು ಎಂಬ ಚಿಂತನಾ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುಳಿವು ನೀಡಿದ್ದರು!! ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಿವರಾತ್ರಿ ದೇಸಿಕೇಂದ್ರ ಮಹಾಸ್ವಾಮಿಗಳು ಮತ್ತಿತರರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆ ಬಗ್ಗೆ ತಮ್ಮ ಒಲವು ವ್ಯಕ್ತಪಡಿಸಿದ ಇಂದ್ರಜಿತ್ ಲಂಕೇಶ್ ಅವರು, ಬಿಎಸ್ ಯಡಿಯೂರಪ್ಪ ಬಳಿ, ನಾನು ನಿಮ್ಮ ಹಿಂಬಾಲಕನಾಗಿರುತ್ತೇನೆ. ನಿಮ್ಮ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಮನವಿ ಮಾಡಿದ್ದರು. ಜತೆಗೆ ಯಡಿಯೂರಪ್ಪ ಅವರು ಹೇಳಿದಂತೆ ನಡೆಯುವವರು. ಕೊಟ್ಟ ಮಾತನ್ನು ಅವರು ಎಂದೂ ತಪ್ಪಲ್ಲ. ಹೀಗಾಗಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಬಸವಣ್ಣ ಅವರ ಕಾಯಕವೇ ಕೈಲಾಸ ಎಂಬ ಮಾದರಿ ನನಗೆ ಇಷ್ಟ. ಈ ಮಾದರಿಯನ್ನು ರಾಜಕೀಯದಲ್ಲಿ ಆಳವಡಿಸಿಕೊಳ್ಳುವುದು ಕಷ್ಟ. ಅಳವಡಿಸಿಕೊಂಡರೇ ತುಂಬಾ ಒಳ್ಳೆಯದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು!! ಅದಲ್ಲದೆ ಇಂದ್ರಜಿತ್ ಲಂಕೇಶ್‍ರವರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದರು!! ಪ್ರಸಕ್ತ ರಾಜಕೀಯ ಬೆಳವಣಿಗೆ ಮತ್ತು ವಿಧಾನಸಭಾ ಚುನಾವಣೆ ಕುರಿತಂತೆ ಇಂದ್ರಜಿತ್ ಲಂಕೇಶ್ ಅವರು ಚರ್ಚೆ ನಡೆಸಿದ್ದರು!!

ಒಟ್ಟಾರೆಯಾಗೆ ಹೇಳುವುದಾದರೆ ಇಲ್ಲಿಯವರೆಗೆ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಏನಾದರೂ ಕ್ರಮ ಕೈಗೊಳ್ಳುತ್ತಾರೆ ಎಂದು ನಂಬಿದ್ದ ಲಂಕೇಶ್ ಕುಟುಂಬ ಕೊನೆಗೂ ಸಿದ್ದರಾಮಯ್ಯ ಸರಕಾರ ಓಟಿಗಾಗಿ ಮಾಡುವ ತಂತ್ರ ಬಗ್ಗೆ ಅರಿತು ಬಿಜೆಪಿ ಸೇರ್ಪಡೆಯಾಗಿ ಒಳ್ಳೆಯ ನಿರ್ಧಾರವನ್ನೇ ಕೈಗೊಂಡಿದ್ದಾರೆ ಎಂದು ಹೇಳಬಹುದು!! ಈಗಲಾದರೂ ಸಿದ್ದರಾಮಯ್ಯ ಸರಕಾರ ಬುದ್ದಿ ಕಲಿತರೆ ಒಳ್ಳೆಯದೆನಿಸುತ್ತದೆ!! ಈಗಾಗಲೇ ಸಿಎಂ ಸಿದ್ದರಾಮಯ್ಯನವರಿಗೆ ತನ್ನ ಸೋಲಿನ ಸುಳಿವು ಸಿಕ್ಕಿದ್ದು, ಈ ಬಾರಿಯ ಚುನಾವಣೆ ಕಾಂಗ್ರೆಸ್‍ಗೆ ಕಟ್ಟಿಟ್ಟ ಬುತ್ತಿ ಅಂತ ಅನಿಸುತ್ತಿದೆ!!

  • ಪವಿತ್ರ
Tags

Related Articles

Close