ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ಮತ್ತೊಬ್ಬ ಕಾಂಗ್ರೆಸ್ ಗೂಂಡಾನ ಉಚ್ಚಾಟನೆ!! ದಿನಕ್ಕೊಬ್ಬರಂತೆ ಅಮಾನತು ಆಗುತ್ತಿರುವ ಕಾಂಗ್ರೆಸ್ ಮುಖಂಡರುಗಳು..! ಇಂದು ಯಾರು..?!

ಕಾಂಗ್ರೆಸ್ ಎಂಬ ಪಕ್ಷಕ್ಕೆ ರಾಜ್ಯದಲ್ಲಿ ಶನಿ ಹೆಗಲೇರಿದ್ದು ಅಂತು ಅಕ್ಷರಷಃ ಸತ್ಯ. ಒಂದಲ್ಲಾ ಒಂದು ಗೂಂಡಾಗಿರಿಯ ಪ್ರಕರಣದಿಂದ ಹೆಸರಾಗುತ್ತಿರುವ ಈ ಕಾಂಗ್ರೆಸ್ ನಾಯಕರು ಅಭಿವೃದ್ಧಿಯ ಹಾಗೂ ಪಕ್ಷದ ಕಾರ್ಯಗಳನ್ನು ಬಿಟ್ಟು ಗೂಂಡಾಗಿರಿಯನ್ನು ಮೆರೆದ ಪಕ್ಷದ ಗೂಂಡಾಗಳನ್ನು ಉಚ್ಚಾಟನೆ ಮಾಡುವುದರಲ್ಲೇ ನಿರತರಾಗಿದ್ದಾರೆ.

ನಾರಾಯಣ ಸ್ವಾಮಿಯನ್ನು ಉಚ್ಛಾಟನೆ ಮಾಡಿದ ಕಾಂಗ್ರೆಸ್…

ಫೆಬ್ರವರಿ 16ರಂದು ಬೆಳಗ್ಗೆ 11 ಗಂಟೆಗೆ ಹೊರಮಾವು ಬಿಬಿಎಂಪಿ ಕಛೇರಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಕೆ.ಆರ್.ಪುರಂ ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಬೈರತಿ ಬಸವರಾಜು ಅವರ ಆಪ್ತನಾಗಿದ್ದ ನಾರಾಯಣ ಸ್ವಾಮಿಯನ್ನು ಕಾಂಗ್ರೆಸ್‍ನಿಂದ 6 ವರ್ಷಗಳ ಉಚ್ಛಾಟನೆ ಮಾಡಲಾಗಿದೆ. ನಾರಾಯಣ ಸ್ವಾಮಿಯ ಈ ರೀತಿಯ ನಡೆಯಿಂದ ಪಕ್ಷ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಭಾರೀ ಮುಜುಗರಕ್ಕೆ ಈಡಾಗಿದ್ದು, ಇದು ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲೂ ಭಾರೀ ಮುಖಭಂಗಕ್ಕೆ ಕಾರಣವಾಗಲಿದೆ ಎಂದೇ ಹೇಳಲಾಗುತ್ತಿದೆ. ಈ ಮಹಾ ಮುಜುಗರದಿಂದ ಪಾರಾಗಲು ಈ ಪ್ಲಾನ್ ಹಾಕಿಕೊಂಡಿರುವ ಕಾಂಗ್ರೆಸ್ ಗೂಂಡಾಗಿರಿ ಮೆರೆದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷನನ್ನೇ 6 ವರ್ಷಗಳ ಕಾಲ ನಿಷೇಧ ಹೇರಿ ಆದೇಶಿಸಿದೆ.

ಬಿಬಿಎಂಪಿಗೆ ಪೆಟ್ರೋಲ್ ಸುರಿದ ಕಾಂಗ್ರೆಸ್ ಗೂಂಡಾ…

ಕೆ.ಆರ್.ಪುರಂನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ನಾರಾಯಣ ಸ್ವಾಮಿಯಿಂದ ಬಿಬಿಎಂಪಿ ಕಛೇರಿಗೆ ಪೆಟ್ರೋಲ್ ದಾಳಿಯಾಗಿದೆ. ಮದವೇರಿದ ಹೋರಿಯಂತೆ ಬಿಬಿಎಂಪಿ ಕಛೇರಿಗೆ ನುಗ್ಗಿದ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ ಬಿಬಿಎಂಪಿ ಕಛೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ತನ್ನನ್ನು ಬೆಳೆಸಿದ ಕಾಂಗ್ರೆಸ್ ಪಕ್ಷದ ಗೂಂಡಾಗಿರಿಯನ್ನು ಮುಂದುವರೆಸಿದ ಈ ಗೂಂಡಾ ಈಗ ಬೆಂಗಳೂರಿನ ಶಕ್ತಿ ಕೇಂದ್ರಕ್ಕೇ ಬೆಂಕಿ ಹಚ್ಚಲು ಮುಂದಾಗುವಷ್ಟು ದರ್ಪವನ್ನು ತೋರಿದ್ದಾನೆ. ಒಂದು ಕೈನಲ್ಲಿ ಪೆಟ್ರೋಲನ್ನು ಹಿಡಿದು, ಇಡೀ ಕಛೇರಿಗೆ ಚೆಲ್ಲುತ್ತಾ, ಕಛೇರಿಯಲ್ಲಿದ್ದ ದಾಖಲೆಗಳಿಗೆ ಚೆಲ್ಲುತ್ತಾ ಬೆಂಕಿ ಹಚ್ಚುತ್ತೇನೆ ಎಂದು ದರ್ಪ ತೋರಿದ್ದಾನೆ.

ಇದು ಫೆಬ್ರವರಿ 16ರಂದು ನಡೆದ. ಬೆಳಗ್ಗೆ 11 ಗಂಟೆಗೆ ಬಿಬಿಎಂಪಿ ಕಛೇರಿಗೆ ನುಗ್ಗಿದ ಕಾಂಗ್ರೆಸ್ ಗೂಂಡಾ ಅಲ್ಲಿದ್ದ ಸಹಾಯಕ ಕಂದಾಯ ಅಧಿಕಾರಿ ಮೇಲೆ ತನ್ನ ದರ್ಪವನ್ನು ಮೆರೆದು ಪಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಕೆಲ ದಿನಗಳ ಹಿಂದೆ ತನ್ನ ಜಮೀನಿ ಬಡಾವಣೆಗೆ ಎನ್.ಆರ್.ಐ. ಜಮೀನು ಖಾತೆ ಮಾಡಿಕೊಡಬೇಕೆಂದು ಬಿಬಿಎಂಪಿಯ ಸಹಾಯಕ ಕಂದಾಯ ಅಧಿಕಾರಿಯಾದ ಚೆಂಗಲ್ ರಾಯಪ್ಪನವರ ಬಳಿ ಕೇಳಿದ್ದಾನೆ.

ಆದರೆ ಖಡಕ್ ಅಧಿಕಾರಿ ಎಂದೇ ಹೆಸರಾಗಿರುವ ಚೆಂಗಲ್ ರಾಯಪ್ಪ ಕಾಂಗ್ರೆಸ್ ಗೂಂಡಾನ ಈ ಮಾತಿಗೆ ಒಲ್ಲೆ ಎನ್ನುತ್ತಾರೆ. ಆಗಲ್ಲ ಸಾರ್. ಆ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಹೀಗಾಗಿ ಇದರ ಖಾತೆಯನ್ನು ಮಾಡಿಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಧಿಕಾರಿಯ ಈ ಮಾತಿಗೆ ಒಪ್ಪದ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ, ಪರವಾಗಿಲ್ಲ ನೀವು ನಕಲಿ ಖಾತೆಯನ್ನು ಮಾಡಿಕೊಡಿ. ಅದು ನಿಜಮ್ಮಿಂದ ಸಾಧ್ಯವಿದೆ ಎಂದಿದ್ದಾನೆ. ಆದರೆ ಕಾಂಗ್ರೆಸ್ ಗೂಂಡಾನ ಈ ಮಾತಿಗೆ ಕೋಪಗೊಂಡ ಖಡಕ್ ಅಧಿಕಾರಿ ಚೆಂಗಲ್ ರಾಯಪ್ಪ ನಕಲಿ ಖಾತೆ ಮಾಡಿ ಕೊಡಲು ಸಾಧ್ಯವಿಲ್ಲ ಸಾರ್ ಎಂದು ಹೇಳಿದ್ದಾರೆ.

ಕೆಂಡಾಮಂಡಲವಾದ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ ಅವರ ಕಛೇರಿಗೆ ಪೆಟ್ರೋಲ್ ಸುರಿಸಿದ್ದಾನೆ. “ನನ್ ಹತ್ತಿರಕ್ಕೆ ಯಾರೂ ಬರಬೇಡಿ. ನಾನು ಯಾರು ಗೊತ್ತಲ್ವಾ. ನಿಮ್ಮನ್ನ ಮಾತ್ರವಲ್ಲ ನಿಮ್ಮ ದಾಖಲೆಗಳನ್ನೂ ಸುಟ್ಟು ಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಸದ್ಯ ಈ ವೀಡಿಯೋ ಈಗ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಕಾಂಗ್ರೆಸ್‍ಗೆ ಇರಿಸು ಮುರಿಸು ತಂದಿದೆ.

ನಿನ್ನೆ ನಲಪಾಡ್ ಅಮಾನತು…

ನಿನ್ನೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ನಲಪಾಡ್‍ನನ್ನೂ ಪಕ್ಷದಿಂದ 6 ವರ್ಷಗಳ ಕಾಲ ಅಮನತು ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷದ ಸಕ್ರಿಯ ಮುಖಂಡನಾಗಿದ್ದ ನಲಪಾಡ್‍ನನ್ನು ನಿನ್ನೆ ಅಮಾನತು ಮಾಡಲಾಗಿತ್ತು. ಈಗ ಮತ್ತೋರ್ವ ಗೂಂಡಾನನ್ನು ಅಮಾನತು ಮಾಡಿದ್ದು ದಿನಕ್ಕೊಬ್ಬರಂತೆ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡುತ್ತಿದ್ದಾರೆ. ಇದು ಕಾಂಗ್ರೆಸ್‍ನ ಹತಾಶ ಮನೋಭಾವನೆಯನ್ನು ಸೂಚಿಸುತ್ತದೆ.

ಫೆಬ್ರವರಿ 17ರಂದು ಕಾಂಗ್ರೆಸ್ ಶಾಸಕ ಹ್ಯಾರಿಸ್ ಎಂಬವರ ಗೂಂಡಾ ಪುತ್ರ ಮಹಮ್ಮದ್ ನಲಪಾಡ್ ಓರ್ವ ದಿವ್ಯಾಂಗನಿಗೆ ಮನಬಂದಂತೆ ಭಾರಿಸಿದ್ದಾನೆ. ಶನಿವಾರ ಬೆಂಗಳೂರಿನ ಪ್ರತಿಷ್ಟಿತ ಹೊಟೇಲ್ ಒಂದರಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ರ ಮಗ ಗೂಂಡ ಮಹಮ್ಮದ್ ನಲಪಾಡ್ ಎಂಬಾತ ತನ್ನ ದರ್ಪದ ಅಮಲಿನಲ್ಲಿ ದುಷ್ಕøತ್ಯವನ್ನು ಮೆರೆದಿದ್ದಾನೆ. ಅದೇ ಹೋಟೆಲ್‍ನಲ್ಲಿದ್ದ ದಿವ್ಯಾಂಗ ವಿದ್ವತ್ ಎಂಬವನೇ ಹಲ್ಲೆಗೊಳಗಾದ ವ್ಯಕ್ತಿ.

ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಎಂಬ ಗೂಂಡಾ ಊಟ ಮಾಡುತ್ತಿರುವ ಸಂದರ್ಭದಲ್ಲಿ ಅದನ್ನು ವಿದ್ವತ್ ಎಂಬ ಅಂಗವಿಕಲ ಬಾಧಿತನೊಬ್ಬ ನೋಡತ್ತಿದ್ದೆಂಬ ಕ್ಷುಲ್ಲಕ ಕಾರಣಕ್ಕಾಗಿ ಆತನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿ ಅಮಾನವೀಯತೆಯನ್ನು ಮೆರೆದಿದ್ದಾನೆ. ಮನಬಂದಂತೆ ಥಳಿಸಿದ ಕಾಂಗ್ರೆಸ್ ಮುಖಂಡ ಮಹಮ್ಮದ್ ನಲಪಾಡ್ ರಕ್ತದ ಜೊತೆಗೆ ಚೆಲ್ಲಾಟವನ್ನೇ ನಡೆಸಿದ್ದಾನೆ. ಆತ ಓರ್ವ ದಿವ್ಯಾಂಗ ಎಂಬ ಕನಿಷ್ಟ ಯೋಚನೆಯನ್ನೂ ಮಾಡದ ಕಾಂಗ್ರೆಸ್ ಗೂಂಡಾ ಆ ವ್ಯಕ್ತಿಯನ್ನು ಮನ ಬಂದಂತೆ ಭಾರಿಸಿ ತನ್ನ ಗೂಂಡಾಗಿರಿಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದಾನೆ.

ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಗೂಂಡಾಗಳನ್ನು ಬೆಳೆಯಲು ಬಿಟ್ಟು, ಆ ಗೂಂಡಾಗಳು ಮಾಡಿದ್ದ ಗೂಂಡಾಗಿರಿಗೆ ಬೆನ್ನೆಲುಬಾಗಿ, ಅವರ ಮೇಲಿದ್ದ ಕೇಸ್‍ಗಳನ್ನೆಲ್ಲಾ ವಾಪಾಸ್ ಪಡೆದು ಅವರನ್ನು ರಕ್ಷಣೆ ಮಾಡಿದ್ದರ ಪರಿಣಾಮವಾಗಿ ಇಂದು ಕಾಂಗ್ರೆಸ್ ಪಕ್ಷ ಈ ರೀತಿಯ ಮುಜುಗರವನ್ನು ಹಾಗೂ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದೆ. ಇಂದು ದಿನಕ್ಕೊಬ್ಬರಂತೆ ಕಾಂಗ್ರೆಸ್ ಪಕ್ಷದಿಂದ ಅಮಾನತು ಆಗುತ್ತಿದ್ದಾರೆ. ಈ ಕೆಲಸವನ್ನು ಆರಂಭದಿಂದಲೇ ಮಾಡಿಕೊಂಡು ಬಂದಿದ್ದರೆ ಚುನಾವಣೆ ಸಮಯದಲ್ಲಿ ಇಂತಹಾ ಮುಜುಗರದಿಂದ ತಪ್ಪಿಸಿಕೊಳ್ಳಬಹುದಿತ್ತಲ್ವಾ..?

-ಸುನಿಲ್ ಪಣಪಿಲ

Tags

Related Articles

Close