ಪ್ರಚಲಿತ

ಬಿಗ್ ಬ್ರೇಕಿಂಗ್: ರಾಜೀನಾಮೆಗೆ ಮುಂದಾದ ಕಾಂಗ್ರೆಸ್ ಶಾಸಕರು..! ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಪೋಟ..! 

ಕೂಸು ಹುಟ್ಟೋಕ್ಕು ಮುನ್ನವೇ ಕುಲಾಯಿ ಹೊಲಿಸಿದ್ರು ಎನ್ನುವ ಗಾದೆ ಮಾತಿನಂತೆಯೇ ಇದೀಗ ರಾಜ್ಯ ರಾಜಕಾರಣದಲ್ಲಿ ಎಲ್ಲವೂ ನಡೆಯುತ್ತಿದೆ. ಜನತಾ ಆದೇಶದಂತೆ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಸಾಭೀತುಪಡಿಸಲು ಕೇವಲ 8 ಸ್ಥಾನಗಳ ಕೊರತೆ ಇತ್ತು. ಈ ಕೊರತೆಯಿಂದಾಗಿ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿಎಸ್ ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದರು. ಇದೆಲ್ಲವೂ ಈಗ ಇತಿಹಾಸ. 

ಇದರ ನಂತರ ಕಾಂಗ್ರೆಸ್ ಹಾಗೂ ಜನತಾ ದಳದ ಅಕ್ರಮ ಸಂಬಂಧ ಬಯಲಾಗಿತ್ತು. ಕೇವಲ 38ಸ್ಥಾನಗಳನ್ನು ಪಡೆದುಕೊಂಡು ಮುಖ್ಯಮಂತ್ರಿಯಾಗಲು ಹೊರಟಿದ್ದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ 78 ಸ್ಥಾನಗಳನ್ನು ಗಳಿಸಿ ರಾಜ್ಯದ ಜನತೆಯ ಪಾಲಿಗೆ ಫೇಲ್ ಆದ ಕಾಂಗ್ರೆಸ್ ಪಕ್ಷ ಇದೀಗ ಅಕ್ರಮ ಸಂಬಂಧ ಬೆಳೆಸಲು ಹೋಗುತ್ತಿರುವುದು ಗೊತ್ತೇ ಇದೆ. ಆದರೆ ಯಾವಾಗ ಈ ಅಕ್ರಮ ಸಂಬಂಧಕ್ಕೆ ಅಡಿಗಲ್ಲು ಬಿತ್ತೋ ಅಂದಿನಿಂದ ಈ ಪಕ್ಷಗಳಿಗೆ ಕಂಟಕ ಎದುರಾಗಿದೆ.

ಎಂ.ಬಿ ಪಾಟೀಲ್ ವಿರುದ್ಧ ಸಿಡಿದೆದ್ದ ಶಾಸಕರು..!

ಇನ್ನೂ ನಿಯೋಜಿತ ಮುಖ್ಯಮಂತ್ರಿ ಕುಮಾರ ಸ್ವಾಮಿ ಪ್ರಮಾಣ ವಚನವನ್ನೇ ಸ್ವೀಕರಿಸಿಲ್ಲ, ಅಷ್ಟರಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಲಿಸ್ಟ್  ಉದ್ದುದ್ದಾ ಬೆಳೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಘೋಷಣೆ ಮಾಡಿದಾಗಿನಿಂದ ಉಭಯ ಪಕ್ಷಗಳಲ್ಲಿ ಸಚಿವ ಸ್ಥಾನದ ಲಾಬಿಗಳು ಆರಂಭವಾಗಿದೆ.

ಈ ಮಧ್ಯೆ ಮಾಜಿ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಆಕ್ರೋಶವೂ ಭುಗಿಲೆದ್ದಿದೆ. ವಿಜಯಪುರದ ಶಾಸಕರಾಗಿರುವ ಮಾಜಿ ಸಚಿವ ಎಂಬಿ ಪಾಟೀಲ್ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ವಿಜಯಪುರದ ಉಳಿದೆರಡು ಕಾಂಗ್ರೆಸ್ ಶಾಸಕರು ಹೈಕಮಾಂಡ್‍ಗೆ ಒತ್ತಡ ಹೇರುತ್ತಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್‍ಗೆ ಸ್ಪಷ್ಟ ಸಂದೇಶ ರವಾನಿಸಿರುವ ವಿಜಯಪುರ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು “ಎಂ.ಬಿ ಪಾಟೀಲ್ ಹಲವಾರು ಕಾಂಗ್ರೆಸ್ ಶಾಸಕರ ಸೋಲಿಗೆ ತೆರೆಮರೆಯ ಪ್ರಯತ್ನವನ್ನು ಮಾಡಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನವನ್ನು ನೀಡುವುದು ಶೋಭೆಯಲ್ಲ. ಅವರು ಪಕ್ಷದ್ರೋಹದ ಕೆಲಸ ಮಾಡಿದ್ದಾರೆ” ಎಂದು ಕೈಕಮಾಂಡ್‍ಗೆ ಕಟ್ಟಪ್ಪಣೆಯನ್ನು ಸಲ್ಲಿಸಿದ್ದಾರೆ.

ರಾಜೀನಾಮೆ ನೀಡುತ್ತೇವೆಂದ ಶಾಸಕರು..!

“ಈ ಹಿಂದೆ ನೀರಾವರಿ ಸಚಿವ ಸ್ಥಾನವನ್ನು ಅಲಂಕರಿಸಿದ್ದಾಗಲೂ ಎಂ.ಬಿ ಪಾಟೀಲ್ ನಮ್ಮನ್ನು ಕಡೆಗಣಿಸಿದ್ದರು. ಆದರೆ ಈ ಬಾರಿ ಮತ್ತೆ ಅವರಿಗೆ ಸಚಿವ ಸ್ಥಾನವನ್ನು ನೀಡಿದ್ದೇ ಆದಲ್ಲಿ ನಾವು ನಮ್ಮ ಶಾಸಕ ಹುದ್ದೆಗೆ ರಾಜೀನಾಮೆಯನ್ನು ನೀಡುತ್ತೇವೆ. ಇದು ಕಾಂಗ್ರೆಸ್ ನಾಯಕರಿಗೆ ನೀಡುತ್ತಿರುವ ಎಚ್ಚರಿಕೆ” ಎಂದು ಕಾಂಗ್ರೆಸ್‍ನ ಆ ಉಭಯ ಶಾಸಕರು ಹೇಳಿದ್ದಾರೆ

.

ಒಂದು ಕಡೆ ಎಂಬಿ ಪಾಟೀಲ್ ಸಚಿವ ಸ್ಥಾನದ ಲಾಬಿ ನಡೆಸುತ್ತಿದ್ದರೆ  ಮತ್ತೊಂದು ಕಡೆ ಶ್ಯಾಮನೂರು ಶಿವಶಂಕರಪ್ಪನವರು ಕೂಡಾ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ಕಾಂಗ್ರೆಸ್‍ನ 17 ಲಿಂಗಾಯತ ಶಾಸಕರು ಶ್ಯಾಮನೂರು ಶಿವಶಂಕರಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಮಾತ್ರವಲ್ಲದೆ ಶ್ಯಾಮನೂರು ಶಿವಶಂಕರಪ್ಪನವರಿಗೆ ನೀಡದೆ ಎಂಬಿ ಪಾಟೀಲ್‍ಗೆ ಸಚಿ ಸ್ಥಾನ ನೀಡಿದ್ದೇ ಆದಲ್ಲಿ ನಾವು ಕೂಡಾ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಶಾಸಕರು ಹೇಳಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಸರ್ಕಾರ ರಚನೆ ಆಗೋಕ್ಕೂ ಮುನ್ನವೇ ಕಾಂಗ್ರೆಸ್ ಪಾಳಯದಲ್ಲಿ ಸ್ಥಾನಮಾನಕ್ಕಾಗಿ ಭಿನ್ನಮತ ಸ್ಪೋಟಗೊಂಡಿದ್ದು ಇದು ಯಾವ ಹಂತಕ್ಕೆ ತಲುಪುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ. 

-ಏಕಲವ್ಯ

Tags

Related Articles

Close