ಪ್ರಚಲಿತ

ಬಿಗ್ ಬ್ರೇಕಿಂಗ್! ಮೋದಿ ಬಂಧನಕ್ಕೆ ನೋಟೀಸ್ ರಿಲೀಸ್.! ಲೂಟಿಕೋರರ ಮಟ್ಟಹಾಕಲು ಮೋದಿ ಸರಕಾರದ ಸರ್ಜಿಕಲ್ ಸ್ಟ್ರೈಕ್.!

ದೇಶದಲ್ಲಿ ಯಾವಾಗ ನರೇಂದ್ರ ಮೋದಿಯವರು ಪ್ರಧಾನಿಯಾದರೋ ಅಂದಿನಿಂದ ಅಕ್ರಮಗಳಿಗೆ, ಲೂಟಿಕೋರರಿಗೆ ಉಳಿಗಾಲ ಇಲ್ಲದಂತಾಗಿದೆ. ಈ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ದೇಶದ ಸಂಪತ್ತನ್ನು ಲೂಟಿ ಮಾಡಿ ರಾಜಾರೋಷವಾಗಿ ತಿರುಗಾಡುತ್ತಿದ್ದ ಎಲ್ಲಾ ಲೂಟಿಕೋರರನ್ನೂ ಮೋದಿ ಸರಕಾರ ಮಟ್ಟಹಾಕುತ್ತಲೇ ಬಂದಿದ್ದು, ಮಧ್ಯದ ದೊರೆ ವಿಜಯ್ ಮಲ್ಯ, ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ವಂಚಿಸಿದ ನೀರವ್ ಮೋದಿ ಸೇರಿದಂತೆ ಎಲ್ಲಾ ಅಕ್ರಮಕಾರರನ್ನೂ ಬೆಂಬಿಡದೆ ಕಾಡುತ್ತಿರುವ ಕೇಂದ್ರ ಸರಕಾರ ಇದೀಗ ನೀರವ್ ಮೋದಿಯನ್ನು ಬಂಧಿಸಲು ನೋಟೀಸ್ ಜಾರಿಗೊಳಿಸಿದೆ. ನೀರವ್ ಮೋದಿ ಈಗಾಗಲೇ ಭಾರತೀಯ ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ಹಣ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದು, ಮೋದಿ ಸರಕಾರದ ದಿಟ್ಟ ಕ್ರಮದಿಂದಾಗಿ ಇದೀಗ ಮತ್ತೊಮ್ಮೆ ನೀರವ್ ಮೋದಿಗೆ ಬಂಧನದ ಭೀತಿ ಉಂಟಾಗಿದೆ. ದೇಶದ ಸಂಪತ್ತನ್ನು ಲೂಟಿ ಮಾಡಿದವರನ್ನು ರಸ್ತೆಗೆ ತಂದು ನಿಲ್ಲಿಸುತ್ತೇನೆ ಎಂದಿರುವ ಪ್ರಧಾನಿ ಮೋದಿ, ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.!

ರೆಡ್ ಕಾರ್ನರ್ ನೋಟಿಸ್ ಜಾರಿ..!

ನೀರವ್ ಮೋದಿ ಅವರು ಭಾರತೀಯ ಬ್ಯಾಂಕ್‌ಗಳಲ್ಲಿ ಸುಮಾರು ೧೧,೪೦೦ ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಇರುವುದರಿಂದ ಈ ಬಗ್ಗೆ ನಿರಂತರ ತನಿಖೆಗಳು ನಡೆಯುತ್ತಲೇ ಇದೆ. ಈ ಬಗ್ಗೆ ಈಗಾಗಲೇ ನೀರವ್ ಮೋದಿಯ ಸೋದರ ಮಾವ ಮೆಹುನ್ ಚೋಕ್ಸಿಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿರುವ ಅಧಿಕಾರಿಗಳು ಅಕ್ರಮವಾಗಿ ಇರುವ ಎಲ್ಲಾ ಆಸ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈ ವಿಚಾರದಲ್ಲಿ ನೀರವ್ ಮೋದಿಯ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಿಕೊಂಡಿದ್ದ ಅಧಿಕಾರಿಗಳು ತನಿಖೆ ಮುಂದುವರಿಸಿದ್ದರು. ಆದರೆ ಇದೀಗ ಇಂಟರ್‌ಪೋಲ್‌ನಿಂದ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದು, ಸೂಕ್ತ ಪ್ರತಿಕ್ರಿಯೆ ನೀಡದೇ ಇದ್ದರೆ ಜೈಲು ಶಿಕ್ಷೆ ಗ್ಯಾರಂಟಿ. ಇತ್ತ ಕೇಂದ್ರ ಸರಕಾರ ನೀರವ್ ಮೋದಿ ವಿರುದ್ಧದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಕ್ಷಣದಲ್ಲೂ ಬಂಧಿಸುವ ಸಾಧ್ಯತೆ ಇದೆ.!

ದೇಶದಲ್ಲಿ ವಂಚಿಸಿ ರಾಜಾರೋಷವಾಗಿ ಸುತ್ತಾಡುತ್ತಿದ್ದವರೆಲ್ಲ ಇದೀಗ ಮೋದಿ ಆಡಳಿತದಲ್ಲಿ ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ. ಆದರೆ ವಂಚಕರನ್ನು ಯಾವುದೇ ಕಾರಣಕ್ಕೂ ಸುಖವಾಗಿರಲು ಬಿಡದ ಮೋದಿ ಸರಕಾರ ಎಲ್ಲರನ್ನೂ ಮಟ್ಟಹಾಕಿ ಅವರ ಆಸ್ತಿ ಪಾಸ್ತಿಗಳನ್ನು ಸರಕಾರದ ಸುಪರ್ದಿಗೆ ಪಡೆದುಕೊಳ್ಳುತ್ತಿದೆ. ಆದ್ದರಿಂದ ಮೋದಿ ಸರಕಾರ ಉದ್ಯಮಿಗಳನ್ನು ಸಾಕುತ್ತಿದೆ ಎಂದು ಪದೇ ಪದೇ ಬೊಬ್ಬೆ ಹೊಡೆಯುತ್ತಿದ್ದ ಎಲ್ಲಾ ವಿರೋಧಿಗಳು ಕೂಡ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ದಿಟ್ಟ ನಿರ್ಧಾರದಿಂದ ಬಾಯಿ ಮುಚ್ಚಿ ಕೊಳ್ಳುವಂತಾಗಿದೆ..!

–ಅರ್ಜುನ್

Tags

Related Articles

Close