ಪ್ರಚಲಿತ

ಈ ಬಾರಿ ಬಿಜೆಪಿ ಬಂದರೆ ಕರುನಾಡ ರೈತರಿಗೆ ಲಾಭವೇನು ಗೊತ್ತಾ?! ಅನ್ನದಾತನ ಬೆನ್ನಿಗೆ ನಿಂತ ಬಿಜೆಪಿ!!

ದೇಶದ ರಕ್ಷಣೆಗೆ ಸೈನಿಕರ ಅವಶ್ಯಕತೆ ಎಷ್ಟು ಇದೆಯೋ, ಅದೇ ರೀತಿ ರೈತರ ಅವಶ್ಯಕತೆ ದೇಶಕ್ಕೆ ಇದೆ!!  ರೈತರು ದೇಶದ ಬೆನ್ನೆಲುಬು ಎಂಬ ಮಾತು ಬಾಯಿ ಮಾತಿಗೆ ಮಾತ್ರ ಸೀಮಿತ ಅಲ್ಲ!! ಸ್ವಾತಂತ್ರ್ಯ ಪೂರ್ವದಿಂದಲೂ ರೈತರು ತಮಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಕಷ್ಟಪಟ್ಟು ದುಡಿಯುವ ರೈತರ ಬವಣೆ ಮಾತ್ರ ಹೇಳತೀರದಾಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಜನ ಇನ್ನಾದರೂ ನಮ್ಮ ಬದುಕು ಹಸನಾಗಬಹುದು ಎಂದು ಕನಸು ಕಂಡಿದ್ದರು. ಆದರೆ ಅಲ್ಲಿಯೂ ರೈತರಿಗೆ ಸಿಕ್ಕಿದ್ದು ಲಾಠಿಯ ಹೊಡೆತ, ತುಪಾಕಿಯ ಗುಂಡೇಟು.!! ರೈತರಿಗೆ ಸಾಲಮನ್ನಾ ಮಾಡುತ್ತೇವೆ ಅವರು ಬೆಳೆದ ಬೆಳೆಗೆ ತಕ್ಕ ಪ್ರತಿಫಲ ಸಿಗುವಂತೆ ಮಾಡುತ್ತೇವೆ ಎಂದು ಕಾಂಗ್ರೆಸ್‍ನವರು ಬಾಯಿಯಲ್ಲಿ ಬೊಗಳೆ ಬಿಟ್ಟಿದ್ದಲ್ಲದೆ ಯಾವುದೇ ಕಾರ್ಯರೂಪವನ್ನು ಮಾಡಿಲ್ಲ!! ಯಡಿಯೂರಪ್ಪ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲೂ ರೈತರಿಗೆ ಮೊದಲ ಆಧ್ಯತೆ ನೀಡಿದ್ದರು!! ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ರೈತರಿಗೆ ಪ್ರಮುಖ ಆಧ್ಯತೆಯನ್ನು ನೀಡುವ ಮೂಲಕ ಹೊಸ ದಾಖಲೆಯನ್ನೇ ಸೃಷ್ಠಿಸಲು ತಯಾರಾಗಿದ್ದಾರೆ!!  

* ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ ರೂ. 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡಿದ್ದಾರೆಯಾದರೂ ರೈತರಿಗೇನೂ ಮಾಡಿದ್ದಾರೆ ಎಂದರೆ ಸಾಲ ಮನ್ನಾ ಎನ್ನುವ ಪೊಳ್ಳು ಭರವಸೆಯನ್ನಷ್ಟೇ ಎನ್ನಬಹುದು!! ಯಾಕೆಂದರೆ ರೈತರು ತಾವು ಬೆಳೆಯುವ ಬೆಳೆಗೋಸ್ಕರ, ಅದರಿಂದ ಒಂದಷ್ಟು ಲಾಭವನ್ನು ಪಡೆಯುವುದಕ್ಕೋಸ್ಕರ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಷ್ಟಪಟ್ಟು ಬೇಸಾಯವನ್ನು ಮಾಡುತ್ತಾರೆ. ಅಷ್ಟೇ ಅಲ್ಲದೇ, ಬೆಳೆ ಕೈ ಕೊಟ್ಟಾಗ ರೈತರು ಸರ್ಕಾರದ ಸಾಲಮನ್ನಾ ಗೋಸ್ಕರ ಕಾದು ಕಾದು, ಇದರಿಂದ ಬೇಸತ್ತು ರೈತರು ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ತಿಳಿದೇ ಇದೆ!! ರೈತರ ಬವಣೆಯನ್ನು ತಿಳಿದು ಈ ಬಾರಿಯ ಚುನಾವಣೆಯಲ್ಲಿ ಏನಾದರೂ ಬಿಜೆಪಿ ಅಧಿಕಾರವಹಿಸಿಕೊಂಡರೆ ರಾಷ್ಟ್ರೀಕೃತ ಬ್ಯಾಂಕು ಮತ್ತು ಸರಕಾರಿ ಸಂಘಗಳಲ್ಲಿ ಇರುವ ರೂ 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು!!

* ನೇಗಿಲ ಯೋಗಿ ಯೋಜನೆ ಮೂಲಕ 20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರಿಗೆ ತಲಾ 10 ಸಾವಿರ ರೂ ಆರ್ಥಿಕ ನೆರವು.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೇಗಿಲ ಯೋಜನೆಯ ಮೂಲಕ 20 ಲಕ್ಷ ಸಣ್ಣ ಮತ್ತು ಅತೀ ಸಣ್ಣ ಒಣ ಭೂಮಿ ರೈತರಿಗೆ ತಲಾ 10 ಸಾವಿರ ರೂ ಆರ್ಥಿಕ ನೆರವು ನಿಡಲು ಮುಂದಾಗಿದ್ದಾರೆ!!

* ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ, ಬೆಳೆಯ ಒಂದೂವರೆ ಪಟ್ಟು ಆದಾಯ!!

ಈಗಾಗಲೇ ರೈತರಿಗೆ ತಾನು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಜೀವನ ನಿರ್ವಹಿಸಲು ಸಾಧ್ಯವಾಗದೆ ಅದೆಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೆಷ್ಟೋ!! ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ಇನ್ನೂ ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುವಂತೆ ಮಾಡದೆ ರೈತರನ್ನು ಯಾಮಾರಿಸಿದ್ದೇ ಜಾಸ್ತಿ!! ಹೀಗಾಗಿ ರೈತರು ಕಾಂಗ್ರೆಸ್ ಸರಕಾರದ ಅಧಿಕಾರಕ್ಕೆ ಬೇಸತ್ತು ಹೋಗಿದ್ದಾರೆ!! ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡರೆ ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಗೆ ಬೆಳೆಯ ಒಂದೂವರೆ ಪಟ್ಟು ಆದಾಯ ದೊರಕಲಿದೆ!!

* ಭೂರಹಿತ ಕೃಷಿ ಕಾರ್ಮಿಕರಿಗೆ ಉಚಿತ 2 ಲಕ್ಷ ರೂ ಅಪಘಾತ ವಿಮೆ.

ಯಾರೆಲ್ಲಾ ಭೂರಹಿತ ಕೃಷಿ ಕಾರ್ಮಿಕರಿದ್ದಾರೆಯೋ ಅವರಿಗೆ  ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಯಾದರೆ ಉಚಿತ 2 ಲಕ್ಷ ರೂ ಅಪಘಾತ ವಿಮೆಯನ್ನು ನೀಡಲಿದ್ದಾರೆ!!

* ಎಲ್ಲಾ ನೀರಾವರಿ ಯೋಜನೆಗಳನ್ನು 2023ರ ಒಳಗೆ ಪೂರ್ಣಗೊಳಿಸಲು ರೂ 1.5 ಲಕ್ಷ ಕೋಟಿಯ “ಸುಜಲಾಂ ಸುಫಲಾಂ ಕರ್ನಾಟಕ”

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇಡೀ ಕರ್ನಾಟಕದ ರೈತರ ಭವಿಷ್ಯವೇ ಬದಲಾಗಲಿದೆ!! 2023 ರ ಒಳಗೆ ಸುಜಲಾಂ ಸುಫಲಾಂ ಕರ್ನಾಟಕ ಎಂಬ ಯೋಜನೆಯಡಿ ಎಲ್ಲಾ ನೀರಾವರಿ ಯೋಜನೆಗಳನ್ನು 2023ರ ಒಳಗೆ ಪೂರ್ಣಗೊಳಿಸಲು ರೂ. 1.5 ಲಕ್ಷ ಲಕ್ಷ ಕೋಟಿಯನ್ನು ಮೀಸಿಡಲಾಗಿದೆ!!

* ರಾಜ್ಯದಲ್ಲಿರುವ ಎಲ್ಲಾ ಕೆರೆಗಳ ಪುನಶ್ಚೇತನಕ್ಕಾಗಿ “ಮಿಶನ್ ಕಲ್ಯಾಣಿ” ಯೋಜನೆ.

ಇಲ್ಲಿಯವರೆಗೆ ಕಾಂಗ್ರೆಸ್ ರಾಜ್ಯದಲ್ಲಿರುವ ಕೆರೆಗಳ ಪುನಶ್ಚೇತನಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಆದರೆ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣವೇ ರಾಜ್ಯದಲ್ಲಿರುವ ಎಲ್ಲಾ ಕೆರೆಗಳ ಪುನಶ್ಚೇತನಕ್ಕಾಗಿ ಮಿಶನ್ ಕಲ್ಯಾಣಿ ಯೋಜನೆಯನ್ನು ಜಾರಿಗೊಳಿಸುತ್ತದೆ!!

* ರೈತರ ಪಂಪ್‍ಸೆಟ್‍ಗೆ ಪ್ರತಿ ದಿನ 10 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ

ರೈತರ ಪಂಪ್‍ಸೆಟ್‍ಗಳಿಗೆ ಪ್ರತೀ ದಿನ 10 ಘಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡುವಂತಹ ಬಿಜೆಪಿಯ ಪ್ಲಾನ್ ಆಗಿದ್ದು ಪ್ರತೀ ರೈತರಿಗೂ ಇದರಿಂದ ಉಪಯುಕ್ತವಾಗಲಿದೆ!!

* ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ 2012ಕ್ಕೆ ಮರು ಚಾಲನೆ.

ಭಾರತದಲ್ಲಿ ಗೋವನ್ನು ಅನಾದಿ ಕಾಲದಿಂದಲು ನಾವು ಪೂಜಿಸುತ್ತಾ ಬಂದಿದ್ದೇವೆ!! ಕಾಂಗ್ರೆಸ್ ಗೋಹತ್ಯೆಗೆ ಪ್ರೋತ್ಸಾಹ ನೀಡುತ್ತನೇ ಬರುತ್ತಿದೆ!! ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲವಾದರೂ ಗೋಹತ್ಯೆ ನಿಷೇಧಕ್ಕೆ ಧ್ವನಿಯೆತ್ತಿಕೊಂಡೇ ಬರುತ್ತಿದೆ!! ಆದರೂ ಇದಕ್ಕೆ ಕಾಂಗ್ರೆಸ್ ಸರಕಾರ ಯಾವುದೇ ಕಿವಿಗೊಡದೆ ಗೋಹತ್ಯೆಗೆ ಪ್ರೋತ್ಸಾಹ ನೀಡುತ್ತಿದೆ!! ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ 2012ಕ್ಕೆ ಮರು ಚಾಲನೆ ನೀಡಲಿದೆ!!

* ಹಾಲು ಉತ್ಪಾದನೆಯನ್ನು ಪ್ರಸ್ತುತ 77 ಲಕ್ಷ ಲೀಟರ್ಗಳಿಂದ 1 ಕೋಟಿ ಲೀಟರ್ಗೆ ಏರಿಕೆ.

ಹಾಲು ಉತ್ಪಾದನೆಯನ್ನು ಪ್ರಸ್ತುತ 77 ಲಕ್ಷ ಲೀಟರ್‍ಗಳಿಂದ 1 ಕೋಟಿ ಲೀಟರ್‍ಗೆ ಏರಿಕೆ ಮಾಡುವ ಬೃಹತ್ ಯೋಜನೆಯನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದೆ!!

ಪ್ರತೀಯೊಂದು ಕ್ಷೇತ್ರಕ್ಕೂ  ಬಿಜೆಪಿ ಪ್ರಣಾಳಿಕೆಯಲ್ಲಿ ರಾಜ್ಯಕ್ಕೆ ಉಪಯೋಗಕಾರಿಯಾಗುವಂತಹ ರೀತಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ!! ರೈತರಿಗೆ ಮಾತ್ರ ಇಷ್ಟು ವರ್ಷಗಳ ಕಾಲ ಯಾವ ಪಕ್ಷವೂ ನೀಡದ ಬೃಹತ್ ಆಶ್ವಾಸನೆಯನ್ನು ನೀಡಿದ್ದಾರೆ!! ಒಂದು ವೇಳೆ ಬಿಜೆಪಿ ಅಧಿಕಾರವಹಿಸಿಕೊಂಡರೆ ರೈತರ ಭವಿಷ್ಯವೇ ಬದಲಾಗುತ್ತದೆ!! ಹೀಗಾಗಿ ಈ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು ರೈತರ ಬವಣೆಗೆ ತಕ್ಕ ಪ್ರತಿಫಲ ದೊರಕಬೇಕು ಎಂಬುವುದೇ ಎಲ್ಲರ ಆಶಯ!!

ಪವಿತ್ರ

Tags

Related Articles

Close