ಪ್ರಚಲಿತ

ಬ್ರೇಕಿಂಗ್! ಲೋಕಸಭಾ ಚುನಾವಣೆಗೆ ಬಿಜೆಪಿ ಚಾಣಕ್ಯನ ಹೊಸ ತಂತ್ರ.! ವಿರೋಧಿಗಳನ್ನು ಕಟ್ಟಿಹಾಕಲು ಷಾ ಹೂಡಿದ ತಂತ್ರವೇನು ಗೊತ್ತಾ..?

೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲುವಂತೆ ಮಾಡಿದ್ದು ಒಂದೆಡೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕಾರಣವಾದರೆ, ಮತ್ತೊಂದೆಡೆ ದೇಶಾದ್ಯಂತ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿ ತಳಮಟ್ಟದಿಂದಲೇ ಕಾರ್ಯಕರ್ತರನ್ನು ಒಗ್ಗೂಡಿಸಿದ ಭಾರತೀಯ ಜನತಾ ಪಕ್ಷದ ಚಾಣಕ್ಯ ಎಂದೇ ಕರೆಯಲ್ಪಡುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ. ಯಾಕೆಂದರೆ ಪಕ್ಷದ ಗೆಲುವಿಗಾಗಿ ಷಾ ಹೂಡಿದ ತಂತ್ರಗಾರಿಕೆಗೆ ಇಡೀ ದೇಶವೇ ನಿಬ್ಬೆರಗಾಗಿತ್ತು. ಯಾರೂ ಊಹಿಸದ ರೀತಿಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿತ್ತು, ವಿರೋಧಿ ಬಣಗಳು ಒಂದಾಗಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಇದೀಗ ಮತ್ತೊಂದು ಲೋಕಸಭಾ ಚುನಾವಣೆಗೆ ದಿನ ಹತ್ತಿರ ಬರುತ್ತಿದೆ, ಇನ್ನು ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ , ಅದಕ್ಕಾಗಿ ಎಲ್ಲಾ ಪಕ್ಷಗಳ ತಯಾರಿ ಈಗಿಂದಲೇ ಆರಂಭವಾಗಿದೆ. ಪ್ರಧಾನಿ ಮೋದಿಯವರನ್ನು ಸೋಲಿಸಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ತೃತೀಯ ರಂಗದ ಪಕ್ಷಗಳೆಲ್ಲಾ ಒಗ್ಗಟ್ಟು ಪ್ರದರ್ಶಿಸಿದ್ದು, ಇದಕ್ಕಾಗಿಯೇ ಬಿಜೆಪಿ ಚಾಣಕ್ಯ ಅಮಿತ್ ಷಾ ಹೊಸ ತಂತ್ರ ಹೂಡಿದ್ದಾರೆ. ಅಮಿತ್ ಷಾ ಅವರು ಒಂದು ರಾಜ್ಯಕ್ಕೆ ಎಂಟ್ರಿ ಕೊಡುತ್ತಾರೆ ಎಂದರೆ ಸಾಕು ಅಲ್ಲಿ ಕಮಲ ಅರಳುವುದು ಗ್ಯಾರಂಟಿ. ಕರ್ನಾಟಕದಲ್ಲೂ ಆಡಳಿತವಿದ್ದ ಕಾಂಗ್ರೆಸ್‌ನ್ನು ಕಿತ್ತು ಬಿಸಾಕಿದ ಚಾಣಕ್ಯನ ತಂತ್ರ, ಅಧಿಕಾರ ವಹಿಸಿಕೊಳ್ಳುವಲ್ಲಿ ಕೊಂಚ ಮಟ್ಟಿಗೆ ಹಿನ್ನಡೆಯಾಗಿತ್ತು. ಆದರೆ ಷಾ ಮಾತ್ರ ಇನ್ನೂ ಸುಮ್ಮನೆ ಕೂತಿಲ್ಲ ಎಂಬುದು ಸ್ಪಷ್ಟ, ಯಾಕೆಂದರೆ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ಇದೀಗ ಷಾ ಹೊಸ ತಂತ್ರಗಾರಿಕೆ ಸಿದ್ಧಪಡಿಸಿ ಅಖಾಡಕ್ಕಿಳಿದಿದ್ದಾರೆ.!

Image result for modi

ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಒಬ್ಬೊಬ್ಬ ಷಾ ಸೈನಿಕ..!

ತ್ರಿಪುರ, ನಾಗಾಲ್ಯಾಂಡ್, ಮೇಘಾಲಯದಂತಹ ಅತೀ ಕಠಿಣ ರಾಜ್ಯವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದ ಬಿಜೆಪಿ ಕರ್ನಾಟಕದಲ್ಲೂ ತನ್ನ ಚಮತ್ಕಾರ ನಡೆಸಿತ್ತು. ಯಾಕೆಂದರೆ ಮೋದಿ-ಷಾ ನಡೆಸಿದ ಒಂದೊಂದು ತಂತ್ರವೂ ಬಿಜೆಪಿ ಪಾಲಿಗೆ ವರದಾನವಾಗಿತ್ತು. ಆದ್ದರಿಂದಲೇ ಇದೀಗ ಅಮಿತ್ ಷಾ ಲೋಕಸಭಾ ಚುನಾವಣೆಗೆ ಪ್ರತೀ ರಾಜ್ಯಕ್ಕೂ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಅರಿತು, ಪಕ್ಷಕ್ಕೆ ಬೇಕಾದ ಬೆಳವಣಿಗೆಗಾಗಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೂ ಒಬ್ಬ ಉಸ್ತುವಾರಿಯನ್ನು ನೇಮಕ ಮಾಡಲು ನಿರ್ಧರಿಸಿದ್ದಾರೆ. ದೇಶದಲ್ಲಿ ಒಟ್ಟು ೫೪೩ ಲೋಕಸಭಾ ಕ್ಷೇತ್ರಗಳಿದ್ದು ,ಬಿಜೆಪಿ ಪ್ರತಿಯೊಂದು ಕ್ಷೇತ್ರದಿಂದಲೂ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಹಿನ್ನಡೆಯಾಗಬಾರದೆಂಬ ನಿಟ್ಟಿನಲ್ಲಿ ಈ ರೀತಿ ಉಸ್ತುವಾರಿಯನ್ನು ನೇಮಕ ಮಾಡಲಾಗುತ್ತಿದೆ. ಇದರ ಜೊತೆಗೆ ೧೧ ಜನರ ಒಂದು ಸಮಿತಿಯನ್ನು ಪ್ರತೀ ರಾಜ್ಯದಲ್ಲೂ ರಚನೆ ಮಾಡಿ , ಚುನಾವಣೆಯ ಸಿದ್ಧತೆಗಾಗಿ ಈ ತಂಡ ಕೆಲಸ ಮಾಡಲಿದೆ.!

 

ವಿಶೇಷವೆಂದರೆ ಉಸ್ತುವಾರಿಯಾಗಿ ನೇಮಕವಾಗುವ ಯಾರೂ ಕೂಡ ಆಯಾ ರಾಜ್ಯದ ವ್ಯಕ್ತಿಯಾಗಿರುವುದಿಲ್ಲ. ಎಲ್ಲಾ ಹೊರಗಿನ ರಾಜ್ಯದ ವ್ಯಕ್ತಿಗಳನ್ನೇ ಪ್ರಭಾರಿಯಾಗಿ ನೇಮಿಸಿ ರಾಜ್ಯದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ. ಉಸ್ತುವಾರಿಯ ಜೊತೆಗೆ ೧೧ ಜನರ ತಂಡವು ಸದಾ ಕೆಲಸ ಮಾಡಲಿದ್ದು, ಇವರಿಗೆ ನಿರ್ದಿಷ್ಟವಾದ ೧೩ ಜವಾಬ್ದಾರಿಗಳನ್ನು ವಹಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯನಿರ್ವಹಿಸುವ ಮೂರು ಜನರ ಒಂದು ತಂಡ ಪ್ರತೀ ಕ್ಷೇತ್ರದಲ್ಲೂ ತಯಾರಾಗಲಿದ್ದು, ಪಕ್ಷದ ಸಂಪೂರ್ಣ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಇವರ ಮೇಲಿರುತ್ತದೆ. ಅದೇ ರೀತಿ ಕಾನೂನು ತಂಡ ಮತ್ತು ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದಕ್ಕಾಗಿ ಇಬ್ಬರ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ.!

Image result for amit shah

ಒಂದೇ ತಿಂಗಳಲ್ಲಿ ದೇಶಾದ್ಯಂತ ಷಾ ಪ್ರವಾಸ..!

ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ನಡೆಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಒಂದೇ ತಿಂಗಳಲ್ಲಿ ದೇಶದ ಎಲ್ಲಾ ರಾಜ್ಯಗಳಿಗೂ ಪ್ರವಾಸ ಕೈಗೊಂಡು ಪಕ್ಷದ ಸ್ಥಿತಿಗತಿಯನ್ನು ಪರಿಶೀಲಿಸಲಿದ್ದಾರೆ. ಛತ್ತೀಸ್‌ಗಡದಿಂದ ಆರಂಭವಾಗುವ ಷಾ ರಾಜ್ಯ ಪ್ರವಾಸ ಒಂದು ತಿಂಗಳಲ್ಲಿ ಪ್ರತೀ ರಾಜ್ಯಗಳಿಗೂ ಭೇಟಿ ನೀಡಲಿದ್ದಾರೆ. ಯಾಕೆಂದರೆ ಈಗಾಗಲೇ ಕಾಂಗ್ರೆಸ್ ಸೇರಿದಂತೆ ಉಳಿದ ಎಲ್ಲಾ ಎಡಪಂಥೀಯ ಪಕ್ಷಗಳು ಬಿಜೆಪಿಗೆ ವಿರುದ್ಧವಾಗಿ ತೊಡೆತಟ್ಟಿದ್ದು,ಭಾರತೀಯ ಜನತಾ ಪಕ್ಷ ಏಕಾಂಗಿಯಾಗಿ ಹೋರಾಟ ನಡೆಸಲಿದೆ. ಆದ್ದರಿಂದಲೇ ೫೪೩ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಆದ್ದರಿಂದ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿ ವಿರೋಧಿಗಳನ್ನು ಮಟ್ಟಹಾಕಲು ಭಾರೀ ತಂತ್ರ ರೂಪಿಸಿದ್ದು, ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದರೆ ಈಗಾಗಲೇ ನರೇಂದ್ರ ಮೋದಿಯವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಪಕ್ಷದ ಗೆಲುವಿಗೆ ಮುಖ್ಯ ಕಾರಣವಾಗಲಿದೆ.!

–ಅರ್ಜುನ್

Tags

Related Articles

Close