ಪ್ರಚಲಿತ

ಬ್ರೇಕಿಂಗ್: ಬಿಡುಗಡೆಯಾಯ್ತು ಬಿಜೆಪಿ ಪ್ರಣಾಳಿಕೆ!! ರಾಜ್ಯದ ಜನತೆಗೆ ಬಂಪರ್ ಕೊಡುಗೆಗಳ ಘೋಷಣೆ!!

ಈಗಾಗಲೇ ಚುನಾವಣೆಗೆ ಬೆರಳಣಿಕೆಯಷ್ಟು ದಿನಗಳು ಮಾತ್ರ ಬಾಕಿಯಿದ್ದು ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದೆ!! ಇಂದು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿಯೂ ಕೂಡ “ನಮ್ಮ ಕರ್ನಾಟಕ ನಮ್ಮ ವಚನ” ಎಂಬ ಶೀರ್ಷಿಕೆಯಡಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ!! ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮುನ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತನ್ನ ಇಡೀ ಜೀವನವನ್ನು ಬಿಜೆಪಿ ಮತ್ತು ಆರ್‍ಎಸ್‍ಎಸ್‍ಗೆ ಮುಡಿಪಾಗಿಟ್ಟಿರುವ ವಿಜಯ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿ ನಂತರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು!!

Image result for bjp manifesto today 2018

ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು

*  ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ

* ನೀರಾವರಿ ಯೋಜನೆಗೆ 1 ಲಕ್ಷ ಕೋಟಿ ರೂ ಅನುದಾನ

* 1 ಲಕ್ಷದವರೆಗೆ ಕೃಷಿಸಾಲ ಮನ್ನಾ

* ಸರಕಾರಿ ಸಂಘಗಳಲ್ಲಿನ 1 ಲಕ್ಷದವರೆಗೆ ಸಾಲ ಮನ್ನಾ

* ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲಾಪ್‍ಟಾಪ್ ವಿತರಣೆ

* ಕೆ.ಎಂಎಫ್ ಮೂಲಕ ಹೈನುಗಾರಿಕೆ, ಪಶುಸಂಗೋಪನೆಗೆ ಹಣ ಮೀಸಲು

* ರೈತ ಬಂಧು ನಿಧಿ ಸ್ಥಾಪನೆ

* ರೈತರಿಗೆ ಚೀನಾ ಇಸ್ರೇಲ್ ಪ್ರವಾಸ

* ಗೋ ಹತ್ಯಾ ನಿಷೇಧಕ್ಕೆ ಮರುಜೀವ- ಗೋ ಸೇವಾ ಆಯೋಗ ಪುನರಾರಂಭ

* ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಂಗಳ ಭಾಗ್ಯ

* ಲೋಕಾಯುಕ್ತ ಸಂಸ್ಥೆ ಬಲವರ್ಧನೆ

* ಜಿಲ್ಲೆಯ ಮೂರು ತಾಲೂಕಿಗೆ ಒಂದು ಮುಖ್ಯಮಂತ್ರಿ ಅನ್ನದಾನ ಕ್ಯಾಂಟೀನ್

* ಒಣ ಭೂಮಿ ರೈತರಿಗೆ 10 ಸಾವಿರ ನಗದು

* ಬಿಪಿಎಲ್ ಕಾರ್ಡ್‍ದಾರರಿಗೆ ಧಾನ್ಯಗಳ ವಿತರಣೆ

* ಎಲ್ಲಾ ತಾಲೂಕಗಳಿಗೆ 108 ಸೇವೆ

* ರೈತ ಹೆಣ್ಣು ಮಕ್ಕಳಿಗೆ ಸ್ಮಾರ್ಟ್‍ಫೋನ್ ವಿತರಣೆ

* 8,9,10 ನೇ ತರಗತಿಯ ಎಸ್‍ಸಿ /ಎಸ್‍ಟಿ ಹೆಣ್ಣು ಮಕ್ಕಗಳಿಗೆ ನಗದು

* ಡಾ.ಬಿ.ಆರ್ ಅಂಬೇಡ್ಕರ್ ಸಂಬಂಧಿಸಿದ ಕ್ಷೇತ್ರಗಳ ತೀರ್ಥಕ್ಷೇತ್ರಗಳಿಗೆ ಹಣ

* ಎಸ್‍ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್

* ಎಸಿಬಿ ರದ್ದು ಮತ್ತೆ ಲೋಕಾಯುಕ್ತಕ್ಕೆ ಪೂರ್ಣಾಧಿಕಾರ

* ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣದ ಭರವಸೆ

* ಪ್ರತೀ ಜಿಲ್ಲೆಗೆ ಮೆಡಿಕಲ್ ಕಾಲೇಜು ಭರವಸೆ

*ಬಿಪಿಎಲ್ ಕಾರ್ಡ್‍ದಾರರಿಗೆ 3 ಗ್ರಾಮ್ ಚಿನ್ನ 25 ಸಾವಿರ ರೂ ಹಣ ವಿತರಣೆ!!

* ಗ್ರಾಮೀಣ ಪ್ರದೇಶದಲ್ಲಿ 24*7 3 ಪೇಸ್ ವಿದ್ಯುತ್ ಪೂರೈಕೆ.

* ಜೆ.ಪಿ.ಸದನ’ ಯೋಜನೆಯಡಿ ಹಿಂದುಳಿದ ವರ್ಗ ಹಾಗೂ ಇತರೆ ವರ್ಗದವರಿಗೆ 2 ಲಕ್ಷ ರೂ. ವಸತಿ ನಿರ್ಮಾಣ.

*ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಅಡಿ ಬಿಪಿಎಲ್ ಕುಟುಂಬಕ್ಕೆ 3 ಲಕ್ಷದವರೆಗೆ ಉಚಿತ ಚಿಕಿತ್ಸೆ ವ್ಯವಸ್ಥೆ.

*1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಪಾಹಾರ ಯೋಜನೆ ಜತೆಗೆ 2 ಜತೆ ಸಮವಸ್ತ್ರ ವಿತರಣೆ.

*ಭಾಗ್ಯ ಲಕ್ಷ್ಮೀ ಯೋಜನೆಯ ಪೆÇ್ರೀತ್ಸಾಹ ಧನ 1 ಲಕ್ಷದಿಂದ 2 ಲಕ್ಷಕ್ಕೆ ಏರಿಕೆ

*ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕ್ರೀಡಾ ಸೌಲಭ್ಯಕ್ಕೆ 100 ಕೋಟಿ ಮೀಸಲು.

* ವಾಲ್ಮೀಕಿ ಯೋಜನೆಯಡಿ 400 ಎಸ್ಟಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಶಿಕ್ಷಣ ಹಾಗೂ ಮದಕರಿನಾಯಕ ಯೋಜನೆಯಡಿ ವಸತಿಗೆ 6000 ಕೋಟಿ ಮೀಸಲು.

* ರಾಜ್ಯಾದ್ಯಂತ 300 ಅನ್ನಪೂರ್ಣ ಕ್ಯಾಂಟೀನ್ ನಿರ್ಮಾಣ.

* ಸೌಭಾಗ್ಯ ಯೋಜನೆಯಡಿ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ. ರಾಜ್ಯದಲ್ಲಿ ಸೌರಶಕ್ತಿ ಉತ್ಪಾದನೆ ಹೆಚ್ಚಿಸಲು ಸಹಾಯಧನ. ಕರ್ನಾಟಕ ಮೂಲ ಹೆದ್ದಾರಿಯ ನಿರ್ಮಾಣ. ಕೈಗಾರಿಕಾ ಅಭಿವೃದ್ಧಿಯ ಪುನಶ್ಚೇತನ ಹಾಗೂ ಶೌಚಗೃಹಗಳ ನಿರ್ಮಾಣ.

* ಬೆಂಗಳೂರನ್ನು ವಿಶ್ವದರ್ಜೆಗೆ ಏರಿಸಲು ಬೆಂಗಳೂರು ಕಾಯ್ದೆ ಎಂಬ ಹೊಸ ಕಾಯ್ದೆ ಜಾರಿ. ಬೆಂಗಳೂರಿನ ಉಪನಗರ ರೈಲ್ವೆ ಕಾಮಗಾರಿ ಪೂರ್ಣಕ್ಕೆ ಕ್ರಮ. ಬೆಂಗಳೂರು ಕೆರೆಗಳನ್ನು ಸ್ವಚ್ಛಗೊಳಿಸಿ ಅಭಿವೃದ್ಧಿ. ಕಸದ ಸಮಸ್ಯೆಯನ್ನು ನಿವಾರಿಸಲು ಕ್ರಮ.

Image result for bjp manifesto today 2018

ಇದಾಗಲೇ ಕಾಂಗ್ರೆಸ್ ತಾವು ತಯಾರಿಸಿದ ಪ್ರಣಾಳಿಕೆಯನ್ನು ಮಂಗಳೂರಿನಲ್ಲಿ ಬಿಡುಗಡೆಗೊಳಿಸಿತ್ತು. ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಅವರು ರಾಜ್ಯದ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲೇ ಪ್ರಣಾಳಿಕೆಯನ್ನು ತೆರೆದಿಟ್ಟರು. ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿವ ಭರದಲ್ಲಿ ಬಿಜೆಪಿಯನ್ನು ಟೀಕಿಸಲು ಹೋಗಿ ಇದೀಗ ಸ್ವತಃ ತಾವೇ ಮುಜುಗರಕ್ಕೀಡಾದ ಘಟನೆ ಕೂಡ ನಡೆದಿತ್ತು!!. ಯಾಕೆಂದರೆ ಜನತೆಗೆ ವಿಶ್ವಾಸ ನೀಡುವಂತಹ ಪ್ರಣಾಳಿಕೆ ಬಿಡುಗಡೆಗೊಳಿಸುವ ಬದಲು ಬಿಜೆಪಿಯ ಮತ್ತು ಸಂಘಪರಿವಾರದ ವಿರುದ್ದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿತ್ತು!! ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಟೀಕಿಸಲು ಹೋದ ಕಾಂಗ್ರೆಸ್ “ಕೋಮುವಾದಿ ಚಡ್ಡಿ ಸರಕಾರ ಬೇಕೇ?” ಎಂಬ ಅಡಿಬರಹದಲ್ಲಿ ಪ್ರಣಾಳಿಕೆಯನ್ನು ತಯಾರಿಸಿದೆ. ನಮ್ಮದು ಪ್ರಗತಿಪರರ ಸರಕಾರ ಆದರೆ ಬಿಜೆಪಿಯದ್ದು ಕೋಮುವಾದಿ ಚಡ್ಡಿ ಸರಕಾರ ಎಂದು ವಿವಾದಾತ್ಮಕವಾಗಿ ಬಳಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ, ಇದರ ಮಧ್ಯೆಯೇ ಒಂದು ಕೋಮುವಿನ ಜನರನ್ನು ಓಲೈಸುವುದಕ್ಕಾಗಿ ಇನ್ನೊಂದು ಧರ್ಮದ ಬಗ್ಗೆ ಈ ರೀತಿ ರಾಜ್ಯ ಸರಕಾರ ಪ್ರಣಾಳಿಕೆ ತಯಾರಿಸಿರುವುದು ಇದೀಗ ಎಲ್ಲೆಡೆ ಆಕ್ರೋಷ ವ್ಯಕ್ತವಾಗಿದೆ!! ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆ ತನ್ನ ಪಕ್ಷದ ಲಾಭಕ್ಕಾಗಿ ಇನ್ನೊಂದು ಪಕ್ಷದ ವಿರುದ್ಧವಾಗಿ ಬರೆಯಲಾಗಿದೆಯೇ ವಿನಃ , ಅಭಿವೃದ್ಧಿಗಾಗಿ ಯಾವುದೇ ಒಂದು ಪ್ರಣಾಳಿಕೆ ನೀಡಿಲ್ಲ. ಇದರಿಂದ ರಾಜ್ಯದ ಜನತೆಯೂ ಅಸಮಧಾನ ಪಡುವಂತಾಗಿದೆ.!

ಏನೇ ಆಗಲಿ ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಡುಗಡೆಯಾದ ಪ್ರಣಾಳಿಕೆಯು ಇಡೀ ಕರ್ನಾಕವೇ ಭೇಶ್ ಅಂದಿದ್ದು ಕಾಂಗ್ರೆಸ್‍ನ ಪ್ರಣಾಳಿಕೆ ಮಕಾಡೆ ಮಲಗುವಂತಾಗಿದೆ!! ಸಿದ್ದರಾಮಯ್ಯನವರ ಪ್ರಣಾಳಿಕೆಯು ಕೇವಲ ಬಿಜೆಪಿಯನ್ನು ಟೀಕಿಸುವ ತರಹವಿದ್ದು ಜನರು ಕಾಂಗ್ರೆಸ್‍ನ ಪ್ರಣಾಳಿಕೆಗೆ ಕೊಂಕುನುಡಿಯುವಂತಾಗಿದೆ!! ಒಟ್ಟಿನಲ್ಲಿ ಪ್ರಣಾಳಿಕೆಯು ಇಡೀ ರಾಜ್ಯದ ಜನತೆಗೆ ಉಪಕಾರಿಯಗಿದ್ದು ಎಲ್ಲಾ ಜನರು ಬಿಜೆಪಿ ಪ್ರಣಾಳಿಕೆಗೆ ಹರ್ಷ ವ್ಯಕ್ತಪಡಿಸಿದ್ದಾರೆ!!

  • ಪವಿತ್ರ
Tags

Related Articles

Close