ಪ್ರಚಲಿತ

ಬ್ರೇಕಿಂಗ್! ಮತ್ತೆ ವಿಜಯ ಪತಾಕೆ ಹಾರಿಸಿದ ಬಿಜೆಪಿ..! ನಡೆಯಲಿಲ್ಲ ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ..!

ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್‌ ಚುನಾವಣೆ ನಂತರದಲ್ಲಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಕೇವಲ ಅಧಿಕಾರದ ಆಸೆಗಾಗಿ ಮೈತ್ರಿ ಮಾಡಿಕೊಂಡ ಎರಡೂ ಪಕ್ಷಗಳ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಆದರೂ ಜನರ ಅಭಿಪ್ರಾಯಗಳಿಗೆ ಬೆಲೆ ನೀಡದ ಕಾಂಗ್ರೆಸ್ ಮತ್ತು ಜೆಡಿಎಸ್‌ ಕೊನೆಗೂ ತಮ್ಮ ತೀಟೆ ತೀರಿಸಿಕೊಂಡಿದ್ದರು. ಆದರೆ ರಾಜ್ಯದ ಜನರು ಮಾತ್ರ ಈ ಎರಡೂ ಪಕ್ಷಗಳನ್ನು ಇನ್ನೂ ಒಪ್ಪಿಕೊಂಡಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಯಾಕೆಂದರೆ ಈಗಾಗಲೇ ನಡೆದ ವಿಧಾನಪರಿಷತ್ ಚುನಾವಣೆ ರಾಜ್ಯಾದ್ಯಂತ ಮುಗಿದಿದ್ದು, ಫಲಿತಾಂಶವೂ ಹೊರಬಿದ್ದಿದೆ. ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ, ವಿಧಾನಪರಿಷತ್ ಚುನಾವಣೆಗೂ ಮೊದಲೇ ಈ ಎರಡೂ ಪಕ್ಷಗಳು ಬಿಜೆಪಿಯನ್ನು ಸೋಲಿಸುವ ಸಲುವಾಗಿ ಒಳ ಒಪ್ಪಂದ ಮಾಡಿಕೊಂಡಿದ್ದರು. ಆದರೂ ಫಲಿತಾಂಶ ಕಂಡು ಎರಡೂ ಪಕ್ಷಗಳು ಬೆಚ್ಚಿಬಿದ್ದಿವೆ.!

ಆಗ್ನೇಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ಆಗ್ನೇಯ ಪದವೀಧರ, ದಕ್ಷಿಣ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಪದವೀಧರ ಕ್ಷೇತ್ರಗಳಿಗೆ ರಾಜ್ಯಾದ್ಯಂತ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿ ಹೋಗಿದೆ. ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ ಅದು ಮಹತ್ತರವಾದ ಘಟ್ಟವಾಗಿರುತ್ತದೆ. ಯಾಕೆಂದರೆ ಶಿಕ್ಷಕರಿಗೆ ಯಾವುದು ಸರಿ , ಯಾವುದು ತಪ್ಪು ಎಂಬುದು ಇನ್ನೊಬ್ಬರು ಹೇಳಿ ತಿಳಿಯಬೇಕಾಗಿಲ್ಲ. ಆದ್ದರಿಂದಲೇ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌‌ನ್ನು ಜನರೇ ತಿರಸ್ಕರಿಸಿದ್ದಾರೆ..!

Related image

ಯಾವ್ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಯಾರಿಗೆ ಸೋಲು..?

ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ವಿಧಾನಪರಿಷತ್ ಚುನಾವಣೆ ನಡೆದಿದ್ದರಿಂದ ಎಲ್ಲಾ ಪಕ್ಷಗಳ ತಯಾರಿ , ಪ್ರಚಾರ ಬಹಳ ಕಡಿಮೆ ಅವಧಿಯಲ್ಲಿ ಮುಗಿದಿತ್ತು. ಆದರೆ ಬಿಜೆಪಿಯನ್ನು ಸೋಲಿಸಲು ಪಣತೊಟ್ಟ ಕಾಂಗ್ರೆಸ್ ಮತ್ತು ಜೆಡಿಎಸ್‌ ಈ ಚುನಾವಣೆಯಲ್ಲೂ ಒಳ ಒಪ್ಪಂದ ಮಾಡಿಕೊಂಡಿತ್ತು. ಜೆಡಿಎಸ್‌ ಅಭ್ಯರ್ಥಿಯ ಬಗ್ಗೆಯೇ ಹೆಚ್ಚು ಆಸಕ್ತಿ ತೋರಿದ ಎರಡೂ ಪಕ್ಷಗಳ ಮುಖಂಡರು, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿದ್ದರು. ಆದರೆ ಅವರ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಯಾಕೆಂದರೆ ಒಟ್ಟು ೬ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಒಂಟಿಯಾಗಿದ್ದರೂ ಕೂಡ ೩ ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿದೆ. ಉಳಿದ ಮೂರರಲ್ಲಿ ಒಂದು ಕಾಂಗ್ರೆಸ್ ಗೆದ್ದರೆ, ಎರಡು ಸ್ಥಾನಗಳನ್ನು ಜೆಡಿಎಸ್‌ ತನ್ನದಾಗಿಸಿಕೊಂಡಿದೆ. ಎರಡೂ ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಸೋಲಿಸಲು ತಂತ್ರ ರೂಪಿಸಿದರೂ ಕೂಡ ಫಲಿಸಲಿಲ್ಲ. ಕಾರಣ ಬಿಜೆಪಿಯ ಅಭ್ಯರ್ಥಿಗಳ ಪರವಾಗಿ ಜನ ನಿಂತಿದ್ದರು ಎಂಬುದು ಸ್ಪಷ್ಟ.!

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಶಿಕ್ಷಣ ಕ್ಷೇತ್ರದಲ್ಲಿ ಜೆಡಿಎಸ್‌‌ನ ಮರಿತಿಪ್ಪೇಗೌಡ ಅವರು ಗೆಲುವು ಸಾಧಿಸಿದರೆ, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಮತ್ತೊಬ್ಬ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರು ಗೆಲುವು ಸಾಧಿಸಿದ್ದಾರೆ. ಅದೇ ರೀತಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ವಿಜಯ ಪತಾಕೆ ಹಾರಿಸಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಎ.ದೇವೇಗೌಡ ಅವರು ಭರ್ಜರಿ ೩,೮೬೪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚಂದ್ರಶೇಖರ್ ಪಾಟೀಲ್ ಅವರು ಕೇವಲ ೩೨೧ ಮತಗಳ ಅಂತರದಿಂದ ಗೆದ್ದಿದ್ದಾರೆ.!

ಆದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಅದೇ ರೀತಿ ವಿಧಾನಪರಿಷತ್ ಚುನಾವಣೆಯಲ್ಲೂ ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಆದರೆ ಬಿಜೆಪಿಯ ಅಬ್ಬರಕ್ಕೆ ಈ ಎರಡೂ ಪಕ್ಷಗಳು ಮತ್ತೊಮ್ಮೆ ಮಕಾಡೆ ಮಲಗುವಂತಾಗಿದೆ.!

–ಅರ್ಜುನ್

Tags

Related Articles

Close