ಪ್ರಚಲಿತ

ಬ್ರೇಕಿಂಗ್! ಕಾಂಗ್ರೆಸ್ ಬಿಟ್ಟು ಬಿಜೆಪಿ ಕೈ ಹಿಡಿದ ಕಿಚ್ಚ..! ಸಿದ್ದರಾಮಯ್ಯಗೆ ಭಾರೀ ಮುಖಭಂಗ..!

ಚುನಾವಣೆ ಹತ್ತಿರ ಬರುತ್ತಲೇ ರಾಜಕೀಯ ನಾಯಕರಂತೆಯೇ ಸಿನಿಮಾ ನಾಯಕರೂ ತುಂಬಾನೇ ಬ್ಯುಸಿಯಾಗಿದ್ದಾರೆ. ಕೆಲ ಸಿನಿ ನಾಯಕರು ಆ ಮೊದಲೇ ತಮ್ಮ ರಾಜಕೀಯ ಪಕ್ಷವೊಂದನ್ನು ಆಯ್ಕೆ ಮಾಡಿಕೊಂಡಿದ್ದರೆ ಮತ್ತೆ ಕೆಲವು ಸಿನಿ ನಟರು ತಮ್ಮ ಆಪ್ತರಿಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಾರೆ ಇದೀಗ ಚುನಾವಣಾ ಅಖಾಡದಲ್ಲಿ ಅಬ್ಬರಿಸುತ್ತಿರುವುದು ರಾಜಕೀಯ ನಾಯಕರಿಗಿಂತ ಹೆಚ್ಚಾಗಿ ಸಿನಿ ನಟರು ಎಂದರೆ ಉತ್ಪ್ರೇಕ್ಷೆಯಲ್ಲ.

ಕಾಂಗ್ರೆಸ್‍ಗೆ ಕೈ ಕೊಟ್ಟ ಕಿಚ್ಚ..!

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೇನೆ ಎಂದಿದ್ದ ಕಿಚ್ಚ ಸುದೀಪ್ ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅಭಿಮಾನಿಗಳ ಭಾರೀ ಆಕ್ರೋಶದ ನಂತರ ನಟ ಸುದೀಪ್ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೇವೆ ಎಂದಿದ್ದ ಕಿಚ್ಚನ ವಿರುದ್ಧ ಅವರ ಅಭಿಮಾನಗಳೇ ಸಿಡಿದೆದ್ದರು. ರಾಜ್ಯವನ್ನು ಪ್ರಪಾತಕ್ಕೆ ದೂಡಿದ ಆ ಮುಖ್ಯಮಂತ್ರಿ ಸಿದ್ದರಾಮಯ್ಯನ ಪರವಾಗಿ ಪ್ರಚಾರ ಮತಾಡಬೇಡಿ ಎಂದು ಪ್ರತಿಭಟನೆ ಮಾಡಿದ್ದರು.

ಒಂದು ಕಡೆ ಈ ಪ್ರತಿಭಟನೆಯಾದರೆ ಮತ್ತೊಂದು ಕಡೆ ಬಾದಾಮಿ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀರಾಮುಲು ಅವರು ಸುದೀಪ್ ಬಗ್ಗೆ ಅಸಮಧಾನಗೊಂಡರು. ಸುದೀಪ್ ನನ್ನ ಆತ್ಮೀಯ ಸ್ನೇಹಿತ. ಮಾತ್ರವಲ್ಲದೆ ನನ್ನ ಸಮುದಾಯದವರೂ ಕೂಡಾ. ಆದರೆ ಅವರು ನನ್ನ ವಿರುದ್ಧವೇ ಪ್ರಚಾರಕ್ಕೆ ಬರೋದು ತುಂಬಾ ಬೇಸರ ತರಿಸಿದೆ” ಎಂದು ಹೇಳಿದ್ದರು.

ಇದಕ್ಕೆ ಉತ್ತರಿಸಿದ್ದ ಕಿಚ್ಚ ಸುದೀಪ್ ಯಾವುದೇ ಕಾರಣಕ್ಕೂ ತಾನು ಶ್ರೀ ರಾಮುಲು ಅವರ ವಿರುದ್ಧ ಪ್ರಚಾರ ಮಾಡೋದಿಲ್ಲ. ಶ್ರೀ ರಾಮುಲು ನನ್ನ ಆತ್ಮೀಯ ಸ್ನೇಹಿತರು. ಅವರ ವಿರುದ್ಧ ನಾನು ಪ್ರಚಾರ ಮಾಡುತ್ತೇನೆ ಎಂದು ನಾನು ಹೇಳಿಯೇ ಇಲ್ಲ ಎಂದು ಹೇಳಿದ್ದಾರೆ.

ಬಿಜೆಪಿಗೆ ಜೈ ಎಂದ ಕಿಚ್ಚ..!

ಮಹತ್ವದ ಬೆಳವಣಿಗೆಯೊಂದರಲ್ಲಿ ಕಿಚ್ಚ ಸುದೀಪ್ ಕಾಂಗ್ರೆಸ್ ಪರ ಪ್ರಚಾರವನ್ನು ಬಿಟ್ಟು ಭಾರತೀಯ ಜನತಾ ಪಕ್ಷಕ್ಕೆ ಜೈ ಎಂದಿದ್ದಾರೆ. ಕಾಂಗ್ರೆಸ್ ಪರ ಪ್ರಚಾರಕ್ಕೆ ತೆರಳಿದ್ದ ಕಿಚ್ಚ ಸುದೀಪ್ ವಿರುದ್ಧ ಭಾರೀ ಜನಾಕ್ರೋಶ ಭುಗಿಲೆದ್ದ ಕಾರಣ ಸುದೀಪ್ ಕಾಂಗ್ರೆಸ್‍ಗೆ ಕೈಕೊಟ್ಟಿದ್ದಾರೆ.ಬಾದಾಮಿಯಲ್ಲಿ ಶ್ರೀ ರಾಮುಲು ವಿರುದ್ಧ ಪ್ರಚಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಿರುವ ಕಿಚ್ಚ ಸುಧೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೈ ಕೊಟ್ಟಿದ್ದಾರೆ.

ಸುರಪುರ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಜೂಗೌಡ ಅವರ ಪರ ಕಿಚ್ಚ ಸುದೀಪ್ ಪ್ರಚಾರ ನಡೆಸಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕಕ್ಕೇರದಲ್ಲಿ ಇಂದು ನಟ ಸುದೀಪ್ ಭರ್ಜರಿ ಪ್ರಚಾರವನ್ನು ನಡೆಸಿದ್ದು ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಗೆಲ್ಲಿಸಿ ಎಂದು ಮತ ಕೇಳಿದ್ದಾರೆ. ಅಭ್ಯರ್ಥಿ ರಾಜೂಗೌಡ ಪರ ಮತಯಾಚಿಸಲು ಆಗಮಿಸಿದ ಸುಧೀಪ್‍ಗೆ ಹಿರಿಯ ನಟಿ ಹಾಗೂ ಭಾರತೀಯ ಜನತಾ ಪಕ್ಷದ ನಾಯಕಿ ತಾರಾ ಆತ್ಮೀಯವಾಗಿ ಸ್ವಾಗಿತಿಸಿದರು. ಈ ಮೂಲಕ ನಟ ಸುದೀಪ್ರನ್ನು ಭಾರತೀಯ ಜನತಾ ಪಕ್ಷ ಮಾತ್ರ ಒಪ್ಪುತ್ತೆ ಕಾಂಗ್ರೆಸ್ ಪಕ್ಷ ಒಪ್ಪಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಚಾರವನ್ನು ಕೈಗೆತ್ತಿಕೊಂಡ ಸುದೀಪ್ ಆರಂಭದಲ್ಲಿ “ನಾನು ಬಾದಾಮಿಯಲ್ಲಿ ಪ್ರಚಾರಕ್ಕೆ ತೆರಳುತ್ತೇನೆ. ಆದರೆ ನನ್ನ ಪ್ರಚಾರ ಮುಖ್ಯಮಂತ್ರಿಗಳ ಪರವಾಗಿಯೇ ಹೊರತು ಶ್ರೀ ರಾಮುಲು ಅವರ ವಿರುದ್ಧ ಅಲ್ಲ. ಶ್ರೀ ರಾಮುಲು ಕೂಡಾ ನನ್ನ ಸ್ನೇಹಿತರು” ಎಂದು ಹೇಳಿದ್ದರು. ಮಾತ್ರವಲ್ಲದೆ ಕಿಚ್ಚ ಸುದೀಪ್ ವಿರುದ್ಧ ಜನರು ಬೀದಿಗಿಳಿದು ಪ್ರಚಾರ ಮಾಡಿದ್ದರು. ಸುದೀಪ್ ಓರ್ವ ವಾಲ್ಮೀಕಿ ಜನಾಂಗದ ನಾಯಕ, ಶ್ರೀ ರಾಮುಲು ಕೂಡಾ ವಾಲ್ಮೀಕಿ ಜನಾಂಗದ ನಾಯಕ. ಹೀಗಾಗಿ ಶ್ರೀ ರಾಮುಲು ವಿರುದ್ಧ ಪ್ರಚಾರ ನಡೆಸುವುದು ಎಷ್ಟು ಸರಿ ಎಂದು ಬಾದಾಮಿ ಕ್ಷೇತ್ರದ ಜನತೆಯೇ ಸುದೀಪ್ ವಿರುದ್ಧ ಪ್ರತಿಭಟನೆಗೆ ಇಳಿದಿದ್ದರು.

ಇದರಿಂದ ಗಲಿಬಿಲಿಗೊಂಡ ಕಿಚ್ಚ ಸುದೀಪ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಯಾವುದೇ ಕಾರಣಕ್ಕೂ ತಾನು ಶ್ರೀ ರಾಮುಲು ವಿರುದ್ಧ ಪ್ರಚಾರ ಮಾಡೋದಿಲ್ಲ. ನಾನು ಬಾದಾಮಿಯಲ್ಲಿ ಪ್ರಚಾರ ಮಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಕಾಂಗ್ರೆಸ್ ಪರ ಪ್ರಚಾರದಿಂದ ಧಿಡೀರ್ ಭಾರತೀಯ ಜನತಾ ಪಕ್ಷದ ಸುರಪುರ ಕ್ಷೇತ್ರದ ಅಭ್ಯರ್ಥಿ ರಾಜೂಗೌಡ ಅವರ ಪರವಾಗಿ ಮತಯಾಚನೆ ಮಾಡಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close