ಪ್ರಚಲಿತ

ಬ್ರೇಕಿಂಗ್! ರಾಹುಲ್ ಎದುರೇ ಇಟಲಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ! ಹಿಂದುತ್ವದ ಬಗ್ಗೆ ಸಿಎಂ ಹೇಳಿದ್ದೇನು ಗೊತ್ತಾ..?

ಚುನಾವಣೆ ಬಂದಾವಾಗ ಹಿಂದುತ್ವದ ಮಂತ್ರವನ್ನು ಜಪಿಸುತ್ತಿದ್ದ ಕಾಂಗ್ರೆಸ್ ಪಕ್ಷ ಇಂದು ಮತ್ತೆ ಹಳೆ ವರಸೆಯನ್ನು ಮುಂದಿಟ್ಟಿದೆ. ದೆಹಲಿಯಲ್ಲಿ ನಡೆಯುತ್ತಿರುವ ಎಐಸಿಸಿ ಅಧಿವೇಶನದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ನಾಲಗೆಯನ್ನು ಹರಿಯ ಬಿಟ್ಟು ಮತ್ತೊಮ್ಮೆ ಹಿಂದೂಗಳ ಆಕ್ರೋಷಕ್ಕೆ ಕಾರಣವಾಗಿದ್ದಾರೆ.

ಕರುನಾಡಿಗೆ ಅವಮಾನ ಮಾಡಿದ್ರಾ ಸಿದ್ದರಾಮಯ್ಯ..?

ಕರ್ನಾಟಕದ ರೈಲ್ವೇ ಅಥವಾ ವಿಮಾನ ನಿಲ್ದಾಣದಲ್ಲಿ ಕನ್ನಡ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಹೆಸರನ್ನು ಹಾಕಿಕೊಂಡಿದ್ದರೆ ಅದರ ಬಗ್ಗೆ ಕಿಡಿ ಕಾರುವ
ಮುಖ್ಯಮಂತ್ರಿಗಳು ನಮಗೆ ಹಿಂದಿ ಹೇರಿಕೆ ಬೇಡ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುತ್ತಾರೆ. ಪಶ್ಚಾತ್ಯ ಇಂಗ್ಲಿಂಷ್ ಭಾಷೆಯ ಬಗ್ಗೆ ಸೊಲ್ಲೆತ್ತದ
ಮುಖ್ಯಮಂತ್ರಿಗಳು ಹಿಂದಿ ಬಗ್ಗೆ ಗಂಟಲು ಹರಿಯುವಂತೆ ಬಾಯಿ ಬಿಡುತ್ತಾರೆ. ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಹಿಂದಿ ಹೇರಿಕೆಯನ್ನು ಮಾಡುತ್ತಿದೆ. ಇದು ಒಳ್ಳೆಯದಲ್ಲ ಎಂದು ಕೇಂದ್ರದ ವಿರುದ್ಧ ಮಾತಿಗಿಳಿಯುತ್ತಾರೆ. ಕಾನೂನು ಬದ್ಧವಾಗಿಯೇ ರಾಷ್ಟ್ರೀಯ ಭಾಷೆ ಹಿಂದಿಯಲ್ಲಿ ಬರೆದಿದ್ದರೂ ಅದನ್ನು ವಿರೋಧಿಸುವಂತ ದುಷ್ಟ ಕೆಲಸಕ್ಕೆ ಕೈ ಹಾಕುತ್ತಾರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು.

ಆದರೆ ಇಂದು ದೆಹಲಿಯಲ್ಲಿ ನಡೆದ ಎಐಸಿಸಿ ರಾಷ್ಟ್ರೀಯ ಅಧಿವೇಶನದಲ್ಲಿ ಕಾಂಗ್ರೆಸ್ ಹೈಕಮಾಂಡ್‍ನ್ನು ಓಲೈಸಲು ಸಿದ್ದು ಕರ್ನಾಟಕವನ್ನು ಮರೆತಿದ್ದಾರೆ.
ಕಾಂಗ್ರೆಸ್‍ನ ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಭಾಷೆ ಮಾತ್ರ ಮುಖ್ಯವಲ್ಲದೆ ಎಲ್ಲಾ ಭಾಷೆಗಳಿಗೂ ಸಮಾನ ಆದ್ಯತೆ ಇರಬೇಕು. ಹಾಗಾದರೆ ಮಾತ್ರ ದೇಶ ಉಳಿಯುತ್ತೆ ಎಂದರು. ಹಾಗಾದರೆ ಕರ್ನಾಟಕದಲ್ಲಿ ಹಿಂದಿಯಲ್ಲಿ ಬರಹಗಳನ್ನು ಬರೆಯುವಾಗ ಯಾಕೆ ವಿರೋಧಿಸಬೇಕು ಎಂದು ಕೇಳಿದರೆ ಅದಕ್ಕೆ ಮುಖ್ಯಮಂತ್ರಿಗಳ ಬಳಿ ಉತ್ತರವೇ ಇಲ್ಲ.

ಮತ್ತೆ ಹಿಂದೂಗಳ ಮೇಲೆ ಆಕ್ರೋಶ..!

ಸಿದ್ದರಾಮಯ್ಯ ಎಂದರೆ ಬಿಡಿ. ಅವರೊಬ್ಬ ಹಿಂದೂ ವಿರೋಧಿ ಸಿಎಂ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅಂತೆಯೇ ಇಂದು ಕೂಡಾ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಯ ಕಾಂಗ್ರೆಸ್ ಅಧಿವೇಶನದಲ್ಲಿ ಹಿಂದೂ ಪಡೆಗಳ ಮೇಲೆ ಕಿಡಿ ಕಾರಿದ್ದಾರೆ. ದೇಶದಲ್ಲಿ ಒಂದು ಧರ್ಮ ಅಥವಾ ಒಂದು ಭಾಷೆ ಇರಬಾರದು. ದೇಶದಲ್ಲಿ ಹಲವು ಧರ್ಮ ಹಾಗೂ ಹಲವು ಭಾಷೆಗಳು ಇರಬೇಕು. ಇಂದು ದೇಶದಲ್ಲಿ ಹಿಂದೂಗಳು ಯುರೋಪ್ ಪದ್ದತಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ರಾಷ್ಟ್ರಕ್ಕೆ ಕೇಡು ಗಾಲ ಬರಬಹುದು ಎಂದು ಹೇಳಿದ್ದರು.

ಇಟಲಿಯನ್ನು ನಿಂದಿಸಿದ ಸಿಎಂ ರಾಹುಲ್ ಕಾಣಲಿಲ್ಲವೇ..?

ತುಂಬಾ ತಮಾಷೆಯ ವಿಚಾರವೇನೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಯಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡುತ್ತಲೇ ಇಟಲಿಯ ಬಗ್ಗೆ ಮಾತನಾಡುತ್ತಾರೆ. ಭಾರತದ ಹಿಂದೂಗಳನ್ನು ತೆಗಳುವ ಭರದಲ್ಲಿ ಇಟಲಿಗೆ ಹೋಲಿಸುತ್ತಾರೆ. ಇಟಲಿ ಹಾಗೂ ಜರ್ಮನ್ ತರಹದ ಪ್ಯಾಸಿಸ್ಟರ ರೀತಿಯಲ್ಲಿ ಹಿಂದೂ ಪಡೆಗಳು ವರ್ತಿಸುತ್ತಿದ್ದಾರೆ. ಆದರೆ ನಮಗೆ ಅಂತಹಾ ಸಂಸ್ಕøತಿ ಬೇಡ. ನಮಗೆ ಭಾರತೀಯ ಸಂಸ್ಕøತಿ ಬೇಕು ಎಂದು ಹೇಳಿದರು. ಮುಖ್ಯಮಂತ್ರಿಗಳು ಹೀಗೆ ಹೇಳುತ್ತಿರುವಾಗ ಎದುರಲ್ಲಿ ಕುಳಿತಿದ್ದ ಇಟಲಿ ಪ್ರಜೆಗಳಾದ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು. ಮುಖ್ಯಮಂತ್ರಿಗಳು ನಮ್ಮನ್ನು ತೆಗಳುತ್ತಿದ್ದಾರೋ ಅಥವಾ ಇಟಲಿಯನ್ನು ತೆಗಳುತ್ತಿದ್ದಾರೋ ಎಂಬ ಕನ್ಫ್ಯೂಶನ್‍ಗೆ ಒಳಗಾಗಿದ್ದರು. ಅಂತೂ ಹಿಂದೂಗಳನ್ನು ತೆಗಳುವ ನೆಪದಲ್ಲಾದರೂ ಮುಖ್ಯಮಂತ್ರಿಗಳ ಬಾಯಿಯಿಂದ ಇಟಲಿ ಹಾಗೂ ಅಲ್ಲಿರುವ ಪ್ರಜೆಗಳು ಕೆಟ್ಟವರು ಎಂದು ಹೇಳಿದ್ದಾರಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.

ಸದಾ ಹಿಂದೂಗಳನ್ನು ತೆಗಳುತ್ತಲೇ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೂ ಕೂಡಾ ಬುದ್ಧಿಯನ್ನು ಕಲಿತಿಲ್ಲ. ಹಿಂದೂಗಳನ್ನು ಪ್ಯಾಸಿಸ್ಟರಿಗೆ
ಹೋಲಿಸಿರುವ ಮುಖ್ಯಮಂತ್ರಿ ಸಿದ್ದರಮಯ್ಯನವರು ಮತ್ತೆ ಹಿಂದೂಗಳ ಆಕ್ರೋಷಕ್ಕೆ ಕಾರಣರಾಗಿದ್ದಾರೆ. ಇದು ಮುಖ್ಯಮಂತ್ರಿಗಳ ಕಾಂಗ್ರೆಸ್ ಹೈಕಮಾಂಡ್‍ಗಳನ್ನು ಓಲೈಸುವ ತಂತ್ರವಲ್ಲದೆ ಮತ್ತೇನು ಅಲ್ಲ. ಇದೂ ಒಂದು ಕಾಂಗ್ರೆಸ್‍ನ ತುಷ್ಟೀಕರಣದ ಒಂದು ಭಾಗ ಎಂಬುದನ್ನು ಮುಖ್ಯಮಂತ್ರಿ ಸಿದ್ದರಮಯ್ಯ ಮತ್ತೆ ದೆಹಲಿಯಲ್ಲಿ ನಿರೂಪಿಸಿದ್ದರೆ.

-ಸುನಿಲ್ ಪಣಪಿಲ

Tags

Related Articles

Close