ಪ್ರಚಲಿತ

ಬ್ರೇಕಿಂಗ್! ಸಿಎಂ ಅಡ್ಡಾಗೆ ಆಗಮಿಸಿದ ಯೋಗಿ ಬಂಟ! ಸಿದ್ದರಾಮಯ್ಯರನ್ನು ಕಿತ್ತೆಸೆಯಲು ಸಜ್ಜಾಗಿದ್ದಾರೆ ಕಮಲ ಪಡೆಗಳು!

ಅತ್ತ ಕಾಂಗ್ರೆಸ್ ಪ್ರಾಬಲ್ಯವುಳ್ಳ ಶಾಂತಿನಗರಕ್ಕೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಂಟನ ಆಗಮನವಾಗಿದ್ದರೆ ಇತ್ತ
ಮುಖ್ಯಮಂತ್ರಿ ಸಿದ್ದರಾಮಯ್ಯರ ಅಖಾಡಕ್ಕೆ ಉತ್ತರ ಪ್ರದೇಶದ ಯೋಗಿಯ ಬಂಟ ಆಗಮಿಸಿದ್ದಾರೆ. ಮುಖ್ಯಮಂತ್ರಿಯ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ ಸಹಿತ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳನ್ನೂ ತನ್ನ ಹಿಡಿತಕ್ಕೆ ತೆಗದುಕೊಂಡಿದ್ದಾರೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ.

ಮುಖ್ಯಮಂತ್ರಿಗಳನ್ನೇ ನಡುಗಿಸಲಿದ್ದಾರೆ ಯೋಗಿ ಬಂಟ..!

ಹೌದು. ಉತ್ತರ ಪ್ರದೇಶದ ಮುಖ್ಯಮಂತ್ರಿ ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರ ಬಂಟರ ಆಗಮನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿದಿಸುವ ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರಕ್ಕೆ ಬಂದಿಳಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವ ಕ್ಷೇತ್ರ ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಆರಂಭವಾಗಿದ್ದು ಕಾಂಗ್ರೆಸ್ ಹಾಗೂ ಜನತಾದಳ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿಕೊಂಡಿದೆ. ಆದರೂ ಭಾರತೀಯ ಜನತಾ ಪಕ್ಷದ ಪವರ್ ಏನೂ ಕಡಿಮೆಯಾಗಿಲ್ಲ.

ಈ ನಿಮಿತ್ತ ಈ ಬಾರಿ ಶತಾಯ ಗತಾಯ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರ ಕ್ಷೇತ್ರದಿಂದಲೇ ಓಡಿಸಬೇಕೆಂಬ ನಿರ್ಧಾರಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆ ಮೇರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಅವರ ಆಪ್ತ ಸಂಸದ ರಾಜೇಂದ್ರ ಅಗರ್ ವಾಲ್ ಮೈಸೂರಿಗೆ ಆಗಮಿಸಿದ್ದಾರೆ.

ರಾಜೇಂದ್ರ ಅಗರ್‍ವಲ್ ಮೈಸೂರು ಬ್ರಾಂಡ್..!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಪ್ತ ಹಾಗೂ ಅಮಿತ್ ಶಾ ತಂಡದ ಸಂಸದ ರಾಜೇಂದ್ರ ಅಗರ್ ವಾಲ್ ಮೈಸೂರು
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಕಣಕ್ಕಿಳಿದಿದ್ದಾರೆ. ಬಂದ ಕೂಡಲೇ ಅಬ್ಬರಿಸಿದ ರಾಜೇಂದ್ರ ಅಗರ್ ವಲ್ ಮುಖ್ಯಮಂತ್ರಿಗಳನ್ನು ಸೋಲಿಸುತ್ತೇವೆ ಎಂದು ಸಂಕಲ್ಪವನ್ನು ತೊಟ್ಟಿದ್ದಾರೆ. “ಇದು ಮುಖ್ಯಮಂತ್ರಿ ಸಿದ್ದರಾಮಯ್ಯರ ಕೊನೆಯ ಚುನಾವಣೆ. ಈ ಬಾರಿ ಮುಖ್ಯಮಂತ್ರಿಗಳನ್ನು ಸೋಲಿಸಿ ಮನೆಗೆ ಕಳಿಸುವುದು ಖಂಡಿತಾ. ನಾನು ಬಂದಾಗಿದೆ. ಮುಂದಿನ ಎಲ್ಲಾ ಚಟುವಟಿಕೆಗಳನ್ನು ನಾನೇ ಗಮನಿಸುತ್ತಾ ಇರುತ್ತೇನೆ. ಮುಖ್ಯಮಂತ್ರಿಸಿದ್ದರಾಮಯ್ಯರನ್ನು ಸೋಲಿಸೋದೆ ನನ್ನ ಏಕ ಮಾತ್ರ ಗುರಿ” ಎಂದು ರಾಜೇಂದ್ರ ಅಗರ್ ವಾಲ್ ಹೇಳಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಿದ್ದೆಗೆಡುವಂತೆ ಮಾಡಿದೆ.

ತಾನೇ ಮುಖ್ಯಮಂತ್ರಿ ಎನ್ನುತ್ತಿರುವ ಸಿದ್ದರಾಮಯ್ಯ..!

ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ನಿರ್ಧಾರ ಇನ್ನೂ ಆಗಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಇದು ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್‍ಗೆ ಭಾರೀ ಇರಿಸು ಮುರಿಸು ಉಂಟಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕುತಂತ್ರದಿಂದ ಸೋತಿದ್ದ ಪರಂ ಈ ಬಾರಿ ಶತಾಯ ಗತಾಯ ಗೆದ್ದು ಮುಖ್ಯಮಂತ್ರಿ ಗದ್ದುಗೆಯನ್ನು ತನ್ನದಾಗಿಸಿಕೊಳ್ಳಬೇಕೆಂದು ಪಣ ತೊಟ್ಟಿದ್ದಾರೆ.

ಒಂದು ಕಡೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಬರುತ್ತಿದ್ದರೆ ಮತ್ತೊಂದು ಕಡೆ ಪರಂ ನೋ ಎನ್ನುತ್ತಿದ್ದಾರೆ. ಇದರ ಮಧ್ಯೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯ ತಂತ್ರವೂ ಜೋರಾಗಿಯೇ ನಡೆಯುತ್ತಿದೆ. ಇಬ್ಬರನ್ನೂ ಗೆಲ್ಲಲು ಬಿಡೋದಿಲ್ಲ ಎಂದು ಹಠ ಹಿಡಿದಿರುವ ಕಮಲ ಚಾಣಾಕ್ಯ ಆಯಾ ವಿಧಾನ ಸಭಾ ಕ್ಷೇತ್ರಗಳಿಗೆ ಕೇಂದ್ರ ಸಚಿವರನ್ನು ಹಾಗೂ ಸಂಸದರನ್ನು ಕಳುಹಿಸಿ ಪ್ರಬಲ್ಯವನ್ನು ಮೆರೆಯಲು ತಂತ್ರ ಹೂಡುತ್ತಿದ್ದಾರೆ.

ಒಟ್ಟಾರೆ ಶಾ ತಂತ್ರದ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ತಂತ್ರಗಳು ವಿಫಲವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ತುದಿಗಲಲ್ಲಿ ನಿಂತಿರುವ ಅಮಿತ್ ಶಾ ಹಾಗೂ ಅವರ ತಂಡ ಈ ಬಾರಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಲು ಸಕಲ ವ್ಯವಸ್ಥೆಯನ್ನೂ ಮಡುತ್ತಿದೆ. ಚಾಣಾಕ್ಯಣ ತಂತ್ರ ಮುಂದಿನ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ದಕ್ಕಿಸಿಕೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close