ಪ್ರಚಲಿತ

ಬಿಗ್ ಬ್ರೇಕಿಂಗ್: ಡಿಕೆ ಶಿವಕುಮಾರ್ ಓರ್ವ ಸುಪಾರಿ ಕಿಲ್ಲರ್ ಎಂದ ಸೈನಿಕ.! ಕಪ್ಪು ಹಣ ಖರ್ಚು ಮಾಡಿದ್ದಾರಂತೆ ಡಿಕೆಶಿ..!

ಚುನಾವಣೆ ಮುಗಿದರೂ ರಾಜಕೀಯ ನಾಯಕೆ ಕೆಸರೆರೆಚಾಟ ಮಾತ್ರ ಇನ್ನೂ ಮುಗಿದಿಲ್ಲ. ಭಾರತೀಯ ಜನತಾ ಪಕ್ಷ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗು ಜನತಾ ದಳದ ಸಹಿತ ಕೆಲ ರಾಜಕೀಯ ಪಕ್ಷಗಳು ರಾಜಕೀಯ ಟೀಕೆಗಳಲ್ಲೇ ಮುಳುಗಿದ್ದಾರೆ. ಈ ಮಧ್ಯೆ ಕೆಲ ರಾಜಕಾರಣಿಗಳು ತಮ್ಮ ಹಿಂದಿನ ನಡೆ ಹಾಗೂ ಸೋಲು ಗೆಲುವಿನ ಲೆಕ್ಕಾಚಾರಗಳನ್ನು ಮುಂದಿಡುತ್ತಿದ್ದಾರೆ. ಚುನಾವಣೆ ನಂತರ ತಾನು ಸೋಲುತ್ತೇನೋ ಅಥವಾ ಗೆಲ್ಲುತ್ತೇನೋ ಎಂಬ ನೈಜ ಮುಖದ ಅನಾವರಣವನ್ನು ಮಾಡುತ್ತಿದ್ದಾರೆ.

ಡಿಕೆಶಿ ವಿರುದ್ಧ ಸಿಡಿದೆದ್ದ ಸೈನಿಕ..!

ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಚೆನ್ನಪಟ್ಟಣ ವಿಧಾನ ಸಭಾ ಕ್ಷೇತ್ರ ತುಂಬಾನೆ ರಂಗು ಹಾಗೂ ಕುತೂಹಲವನ್ನು ಕೆರಳಿಸಿತು. ಸೋಲಿಲ್ಲದ ಸರದಾರನಾಗಿದ್ದ ಸೈನಿಕ ಖ್ಯಾತಿಯ ಶಾಸಕ ಸಿಪಿ ಯೋಗೇಶ್ವರ್ ಕಾಂಗ್ರೆಸ್ ವಿರುದ್ಧ ಬಂಡೆದ್ದು ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದರು. ಈ ಹಿಂದೆಯೂ ಸಿಪಿ ಯೋಗೇಶ್ವರ್ ಭಾರತೀಯ ಜನತಾ ಪಕ್ಷದಲ್ಲೇ ಇದ್ದಿದ್ದು, ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಆದರೆ ಈ ಬಾರಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡು ಚುನಾವಣೆಯನ್ನು ಎದುರಿಸಿದ್ದಾರೆ.

Image result for c.p yogeshwar

ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡೊಡನೆ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದರು. ಕಾಂಗ್ರೆಸ್ ಪಕ್ಷದ ಒಳಗಿನ ರಾಜಕೀಯವನ್ನು ಜನೆತೆಯ ಮುಂದಿಟ್ಟು ಗ್ರಹಚಾರ ಬಿಡಿಸಿದ್ದರು. ಅದರಲ್ಲೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ವಿರುದ್ಧ ವಾಕ್ ಪ್ರಹಾರವನ್ನೇ ನಡೆಸಿದ್ದರು. ಇದು ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿಕೆ ಶಿವಕುಮಾರ್‍ಗೆ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

ಇದರ ಬೆನ್ನಲ್ಲೇ ಏನೇ ಆಗಲಿ ಈ ಬಾರಿ ಸಿಪಿ ಯೋಗೇಶ್ವರ್ ಅವರಮನ್ನು ಸೋಲಿಸಲೇ ಬೇಕು ಎಂದು ಪಣತೊಟ್ಟಿದ್ದರು. ಇದಕ್ಕಾಗಿ ಜನತಾದಳದ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಕುಮಾರ ಸ್ವಾಮಿ ಅವರೊಂದಿಗೆ ಕೈಜೋಡಿಸಿ ಯೋಗೇಶ್ವರ್ ಸೋಲಿಗೆ ತಂತ್ರ ಹೂಡಿದ್ದರು. ರಾಮನಗರದಲ್ಲಿ ಸ್ಪರ್ಧಿಸಿದ್ದ ಕುಮಾರ ಸ್ವಾಮಿ ತನ್ನ 2ನೇ ಕ್ಷೇತ್ರವನ್ನಾಗಿ ಚೆನ್ನಪಟ್ಟಣವನ್ನು ಆಯ್ಕೆ ಮಾಡಿಕೊಂಡರು. ಅಲ್ಲಿಗೆ ಶಿವಕುಮಾರ್ ಹಾಗೂ ಕುಮಾರ ಸ್ವಾಮಿಯವರ ರಾಜಕೀಯ ಆಟ ಆರಂಭವಾಗಿತ್ತು.

ಈ ಮಧ್ಯೆ ಕಾಂಗ್ರೆಸ್ ಪಕ್ಷ ಹೆಚ್.ಎಂ.ರೇವಣ್ಣನವರನ್ನು ಕಣಕ್ಕಿಳಿಸಿತ್ತು. ದಲಿತ ಮತಗಳನ್ನು ರೇವಣ್ಣ ಕಸಿದುಕೊಂಡರೆ ಒಕ್ಕಲಿಗರ ಮತಗಳನ್ನು ಕುಮಾರ ಸ್ವಾಮಿ ಕಸಿದುಕೊಂಡಿದ್ದಾರೆ. ಹೀಗಾಗಿ ಸಿಪಿ ಯೋಗೀಶ್ವರ್ ಗೆಲ್ಲೋದು ಕಷ್ಟ ಎಂದು ಸ್ವತಃ ಸಿಪಿ ಯೋಗೀಶ್ವರ್ ಹೇಳಿಕೊಂಡಿದ್ದಾರೆ.

ಡಿಕೆಶಿ ಸಹೋದರರು ಸುಪಾರಿ ಕಿಲ್ಲರ್ಸ್..!

ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಸುಪಾರಿ ಕಿಲ್ಲರ್ಸ್ ಎಂದು ಚೆನ್ನಪಟ್ಟಣ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಿಪಿ ಯೋಗೇಶ್ವರ್ ಕೆಂಡ ಕಾರಿದ್ದಾರೆ. “ನಾನು ಗೆಲ್ಲೋದು ಕಷ್ಟದ ಮಾತು. ಯಾಕೆಂದರೆ ನನ್ನ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿಕೊಂಡು ರಾಜಕೀಯ ದಾಳವನ್ನೇ ಉರುಳಿಸಿದೆ. ತಾನು ಗೆಲ್ಲುತ್ತಿದ್ದೆ. ಆದರೆ ಕುಮಾರ ಸ್ವಾಮಿ ಹಾಗೂ ಡಿಕೆಶಿವಕುಮಾರ್ ಸೇರಿಕೊಂಡು ನನ್ನ ವಿರುದ್ಧ ಭಾರೀ ಅಪಪ್ರಚಾರವನ್ನು ಮಾಡಿ ನಾನು ಸೋಲುವಂತೆ ಮಾಡಿದ್ದಾರ. ದಲಿತರ ಮತಗಳನ್ನು ಕಾಂಗ್ರೆಸ್‍ನ ರೇವಣ್ಣ ಬಾಚಿಕೊಂಡಿದ್ದಾರೆ. ಅವರು ಎಷ್ಟು ಮತಗಳನ್ನು ಬಾಚಿಕೊಂಡರೋ ಅಷ್ಟು ಕುಮಾರ ಸ್ವಾಮಿಗೆ ಲಾಭವಾಗುತ್ತದೆ.ಹೀಗಾಗಿ ನಾನು ಸೋತರೂ ಗೆದ್ದರೂ ಕೇವಲ ಒಂದು ಸಾವಿರ ಮತಗಳ ಅಂತರದಲ್ಲಿ” ಎಂದು ಹೇಳಿದ್ದಾರೆ.

Image result for d.k shiva kumar

“ರೇವಣ್ಣ ಓರ್ವ ಸುಪಾರಿ ಕಿಲ್ಲರ್ ಹಾಗೂ ಡಿಕೆಶಿ ಸಹೋದರರು ಸುಪಾರಿ ಕಿಲ್ಲರ್ಸ್. ಅವರಿಗೆ ಮತ್ತೊಬ್ಬರನ್ನು ಹಣ ಕೊಟ್ಟು ಕಿಲ್ ಮಾಡೋದೇ ಹವ್ಯಾಸವಾಗಿ ಹೋಗಿದೆ. ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಮತ್ತೊಬ್ಬರನ್ನು ಮುಗಿಸಲು ಯಾವ ತಂತ್ರಕ್ಕೂ ಹಿಂದೇಟು ಹಾಕೋದಿಲ್ಲ. ಡಿಕೆ ಶಿವಕುಮಾರ್ ಅವರ ಕಪ್ಪು ಹಣ ಕೆಲಸ ಮಾಡಿದ್ದರೆ ನಾನು ಗೆಲ್ಲೋದು ಕಷ್ಟ” ಎಂದು ಸೈನಿಕ ಹೇಳಿದ್ದಾರೆ.

ಒಟ್ಟಾರೆ ಈ ಬಾರಿ ಚೆನ್ನಪಟ್ಟಣ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡಿದ್ದ ಸಿಪಿ ಯೋಗೇಶ್ವರ್ ಅವರನ್ನು ಸೋಲಿಸಲು ತಂತ್ರಹೂಡಿದ್ದ ಕಾಂಗ್ರೆಸ್ ಹಾಗೂ ಜನತಾದಳ ಬಹುತೇಕ ಯಶಸ್ವಿಯಾದಂತಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಉರುಳಿಸಿದ ದಾಳಕ್ಕೆ ಯೋಗೀಶ್ವರ್ ಅತಂತ್ರವಾಗುವ ಲಕ್ಷಣವನ್ನು ಸ್ವತಃ ಯೋಗೇಶ್ವರ್ ಅವರೇ ಹೊರಹಾಕಿದ್ದಾರೆ.

source : public tv

-ಸುನಿಲ್ ಪಣಪಿಲ

Tags

Related Articles

Close