ಪ್ರಚಲಿತ

ಬಿಗ್ ಬ್ರೇಕಿಂಗ್: ಪ್ರತ್ಯೇಕ ಧರ್ಮಕ್ಕೆ ಸಿಎಂ ಶಿಫಾರಸ್ಸು.! ಸವಲತ್ತು ಬೇಕಾದರೆ ಹಿಂದೂ ಧರ್ಮ ಬಿಡಬೇಕಂತೆ.! ಹಿಂದೂಗಳನ್ನು ಒಡೆಯಲು ಮುನ್ನುಡಿಯಿಟ್ಟ ಸಿದ್ದರಾಮಯ್ಯ!!

ಕೊನೆಗೂ ಹಲವಾರು ವಿರೋಧಗಳು ನಡುವೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿದ್ದಾರೆ. ಈ ಮೂಲಕ ಹಿಂದೂ ಧರ್ಮವನ್ನು ವಿಭಜಿಸಲು ಹೂಡಿದ್ದ ತಂತ್ರವನ್ನು ಅಕ್ಷರಷಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಸಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ನಡೆದಿದ್ದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿರ್ಧಾರವನ್ನು ಕೈಗೊಂಡಿದ್ದು, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಲಾಗುವುದು ಎಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನ್ಯಾ.ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ಅಂಗೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನು ತಳೆದಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರೀ ಅಲ್ಲೋಲ ಕಲ್ಲೋಲದ ನಡುವೆಯೇ ಮುಖ್ಯಮಂತ್ರಿಗಳು ಈ ನಿಧಾರವನ್ನು ತಳೆದಿದ್ದಾರೆ.

ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ!

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಲು
ನಿರ್ಧರಿಸಲಾಗಿದೆ. ಲಿಂಗಾಯತ ಜಾತಿಯನ್ನು ಪ್ರತ್ಯೇಕ ಧರ್ಮವನ್ನಾಗಿಸುವ ವಿಚಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪುಟ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಲಿಂಗಾಯತ ಜಾತಿಯನ್ನು ಹಿಂದೂ ಧರ್ಮದಿಂದ ಪ್ರತ್ಯೇಕ ಧರ್ಮವನ್ನಾಗಿ ಮಾಡಬೇಕೋ ಬೇಡವೋ ಎಂಬ ವಿಚಾರದ ಮೇಲೆ ಚರ್ಚೆ ನಡೆದಿತ್ತು. ನ್ಯಾ.ನಾಗಮೋಹನ್ ದಾಸ್ ಅವರ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸುವ ವಿಚಾರವಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿತ್ತು. ಕೊನೆಗೂ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಶಿಫಾರಸ್ಸು ಕಳಿಸುವುದಾಗಿ ಹೇಳಿದ್ದಾರೆ.

ಸಂಪುಟದಲ್ಲಿ ಸ್ಪೋಟಗೊಂಡ ಕದನ..!

ಇಬ್ಬರು ಸಚಿವರು ಪ್ರತ್ಯೇಕ ಧರ್ಮದ ಪರವಾಗಿ ನಿಂತಿದ್ರೆ ಮತ್ತಿಬ್ಬರು ಸಚಿವರು ಪ್ರತ್ಯೇಕ ಧರ್ಮದ ವಿರೋಧ ಧ್ವನಿಯನ್ನು ಎತ್ತಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಪರವಾಗಿ ಎಂ.ಬಿ.ಪಾಟೀಲ್ ಹಾಗೂ ಸಚಿವ ವಿನಯ್ ಕುಲಕರ್ಣಿ ಬ್ಯಾಟಿಂಗ್ ಮಾಡಿದ್ರೆ, ಯಾವುದೇ ಕಾರಣಕ್ಕೂ ಧರ್ಮವನ್ನು ಒಡೆಯಲು ನಾವು ಬಿಡೋದಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅಬ್ಬರಿಸಿದ್ದರು. ಈ ಸಚಿವರುಗಳ ಕಿತ್ತಾಟವನ್ನು ಕಂಡ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದಂಗಾಗಿ ಹೋಗಿದ್ದರು. ಯಾಕಪ್ಪಾ ನನಗೆ ಈ ಧರ್ಮದ ವಿಚಾರ ವಿಚಾರ ಬೇಕಿತ್ತು ಎಂದು ತಲೆಬಿಸಿ ಮಾಡಿಕೊಂಡಿದ್ದರು.

ಪಟ್ಟು ಬಿಡದ ಮಲ್ಲಿಕಾರ್ಜುನ..!

ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಲಿಂಗಾಯತ ಪ್ರತ್ಯೇಕ ಧರ್ಮದ ವಿರುದ್ಧವಾಗಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಕೇಂದ್ರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಬಾರದು ಎಂದು ಕಿಡಿಕಾರಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಯಾವುದೇ ಕಾರಣಕ್ಕೂ ಆಗಬಾರದು. ನಾವೆಲ್ಲಾ ಒಂದೇ ಧರ್ಮದಲ್ಲಿ ಇರಬೇಕು. ಧರ್ಮ ಒಡೆಯುವ ವಿಚಾರಕ್ಕೆ ಅಡಿಪಾಯ ಹಾಕಿದವರೇ ನೀವು. ಎಲ್ಲಾ ಹಾಳ್ ಮಾಡಕ್ ಹತ್ತೀರಿ. ಧರ್ಮವನ್ನು ಒಡೆಯುವ ಕೆಲಸಕ್ಕೆ ನಾವು ಬೆಂಬಲ ನೀಡೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಸಚಿವ ಮಲ್ಲಿಕಾರ್ಜುನ ಅವರ ಮಾತಿಗೆ ಧ್ವನಿಗೂಡಿಸಿದ ಈಶ್ವರ್ ಖಂಡ್ರೆ ಪ್ರತ್ಯೇಕ ಧರ್ಮದ ವಿಚಾರ ಬಿಟ್ಟು ಬಿಡಿ. ಇದು ಯಾರಿಗೂ ಒಳ್ಳೆಯದಲ್ಲಿ. ನೀವು ಹೊರಗೆ ಹೋಗಿ ಏನು ಮಾತನಾಡಿಕೊಂಡು ಬಂದಿದ್ದೀರಿ ಎಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

ವಿರೋಧಿ ಬಣದ ಈ ಸಚಿವರ ಮಾತಿಗೆ ಕೆಂಡಾಮಂಡಲವಾದ ಲಿಂಗಾಯತ ಪ್ರತ್ಯೇಕ ಧರ್ಮದ ಪರವಾಗಿರುವ ಎಂಬಿ ಪಾಟೀಲ್ “ನಿಮ್ಮಿಂದ ಆಗದಿದ್ರೆ ಹೇಳಿ ನಾವು ಮಾಡಿ ತೋರಿಸ್ತೇವೆ. ನೀವು ಸುಮ್ಮನೆ ಅಡ್ಡ ಬಂದು ತೊಂದ್ರೆ ನೀಡಬೇಡಿ. ಎಲ್ಲಾ ನಿಮ್ಮಿಂದಾಗೆ ಹಾಳಾಗಿದ್ದು. ನಿಮ್ಮ ಅಗತ್ಯವೇ ಇಲ್ಲ. ಲಿಂಗಾಯತ ಅನ್ನೋದು ಬಸವಣ್ಣನ ಧರ್ಮ. ಅದು ಪ್ರತ್ಯೇಕವಾಗಲೇ ಬೇಕು” ಎಂದು ಆರ್ಭಟಿಸಿದ್ದಾರೆ. ಪಾಟೀಲರ ಈ ಮಾತಿಗೆ ಸಚಿವ ವಿನಯ್ ಕುಲಕರ್ಣಿ ಕೂಡ ಬೆಂಬಲಿಸಿ ಮಾತಿಗಿಳಿದಿದ್ದಾರೆ.

ವೀರಶೈವರ ಹೆಸರೂ ಸೇರ್ಪಡೆ..!

ಇನ್ನು ಎಲ್ಲರನ್ನೂ ಸಮಾಧಾನ ಪಡೆಸಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಲಿಂಗಾಯತ ಧರ್ಮದೊಂದಿಗೆ ವೀರಶೈವರ ಹೆಸರನ್ನೂ
ಸೇರ್ಪಡೆಗೊಳಿಸಿದ್ದಾರೆ. ಲಿಂಗಾಯತ ಧರ್ಮವನ್ನು ಶಿಫಾರಸ್ಸು ಮಾಡಿದರೆ ವೀರಶೈವರು ಸಿಡಿದೇಳುತ್ತಾರೆ. ವೀರಶೈವರ ಪರ ನಿಂತರೆ ಲಿಂಗಾಯತರು
ಸಿಡಿದೇಳುತ್ತಾರೆ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಖತರ್ನಾಕ್ ಐಡಿಯಾವನ್ನು ಪಾಲಿಸಿದ್ದು ಎರಡೂ ಜಾತಿಯ ಹೆಸರನ್ನೂ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಈ ನಿರ್ಧಾರವನ್ನು ನಾವು ಒಪ್ಪಲ್ಲ-ಮಾತೆ ಮಹಾದೇವಿ!

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ನಿರ್ಧಾರವನ್ನು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರ್ತಿ ಮಾತೆ ಮಹಾದೇವಿ ಖಂಡಿಸಿದ್ದಾರೆ.
ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ನಾವು ಒಪ್ಪೋದಿಲ್ಲ ಎಂದು ಕಿಡಿ ಕಾರಿದ್ದಾರೆ. ಕೇವಲ ಲಿಂಗಾಯತ ಧರ್ಮವನ್ನು ನಾವು ಪ್ರತ್ಯೇಕಿಸಲು ನಾವು ಹೇಳಿದ್ದು. ಇದು ಮುಖ್ಯಮಂತ್ರಿಗಳ ಅಪಭ್ರಂಶ ನಿರ್ಧಾರ. ಸರ್ಕಾರ ಅಡ್ಡಗೋಡೆಯಲ್ಲಿ ದೀಪ ಇಟ್ಟು ನಾಟಕ ಆಡುತ್ತಿದೆ. ಮುಖ್ಯಮಂತ್ರಿಗಳು ನಮ್ಮೊಂದಿಗೆ ವೀರಶೈವರನ್ನೂ ಸೇರಿಸಿಕೊಂಡಿದ್ದಾರೆ. ನಾವು ಈ ನಿರ್ಧಾರವನ್ನು ಒಪ್ಪೋದಿಲ್ಲ ಎಂದು ಕಿಡಿಕಾರಿದ್ದಾರೆ.

ಹಿಂದೂಗಳನ್ನು ಒಡೆದು ಹಾಕಿದ ಮುಖ್ಯಮಂತ್ರಿ..!

ತನ್ನ ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದು ಧರ್ಮವನ್ನು ಒಡೆದು ಹಾಕುವ ನೀಚ ಕೆಲಸಕ್ಕೆ ಇಳಿದಿದ್ದು, ಅದರಲ್ಲಿ ಭಾಗಶಃ
ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಬೇಕು, ತಾವು ಮತ್ತೆ ಮುಖ್ಯಮಂತೆಇಗಳಾಗಬೇಕು. ಇದಕ್ಕಾಗಿ ಅಧಿಕ ಸಂಖ್ಯೆಯಲ್ಲಿ ಇರುವಂತಹಾ ಲಿಂಗಾಯತ ವೀರಶೈವರನ್ನು ಒಡೆದು ಹಾಕಲು ಯತ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ತಂತ್ರ ಈಗ ಇಲ್ಲಿಯವರೆಗೆ ತಲುಪಿದೆ.

ನಾಟಕವೆಂದ ಕಮಲ ಪಡೆ..!

ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ನಾಯಕ ಜಗಧೀಶ್ ಶೆಟ್ಟರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಈ ನಡೆ ನಾಟಕ ಎಂದು ಹೇಳಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿಗಳು ನಾಟಕ ಮಾಡುತ್ತಿದ್ದಾರೆ. ಅವರಿಗೆ ನಿಜವಾಗಿಯೂ ಲಿಂಗಾಯತ ವೀರಶೈವರ ಬಗ್ಗೆ ಕಾಳಜಿ ಇಲ್ಲ. ಆದರೆ ಚುನಾವಣಾ ಲಾಭಕ್ಕೋಸ್ಕರ ತರಾತುರಿಯಲ್ಲಿ ಈ ನಿರ್ಧಾರವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ರಾಜಕೀಯ ವಾಂಛೆಗೆ ಹಿಂದೂ ಧರ್ಮ ಬಲಿಯಾಗಿದ್ದು, ಮತ್ತೆ ತಮ್ಮ ನಿರ್ಧಾರವನ್ನು ತಳೆದಿದ್ದಾರೆ. ಈ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಲಿಂಗಾಯತ ಹಾಗೂ ವೀರಶೈವ ಮತಗಳು ನಮ್ಮ ತಮ್ಮ ಪಕ್ಷಕ್ಕೆ ಬೀಳಬೇಕೆಂಬ ದುರಾಸೆಗಾಗಿ ಸಿಎಂ ಮಾಡಿದ್ದ ಪ್ರಯತ್ನ ಸಫಲವಾಗಿದೆ. ಆದರೆ ಇದು ಮುಂದಿನ ದಿನಗಳಲ್ಲಿ ಮತವಾಗಿ ಪರಿವರ್ತನೆ ಆಗೋದು ತುಂಬಾನೆ ಡೌಟು ಎಂದು ಹೇಳಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close