ಪ್ರಚಲಿತ

ಕೆಂಪು ಕಮ್ಯುನಿಸ್ಟ್ ಚೀನಾದ ಮೇಲೆ ಭಾರತದ ಸನಾತನ ಕೇಸರಿ ರಂಗು!! ಈ ವರ್ಷ ಕೊಲ್ಕೊತ್ತಾದಲ್ಲಿ ನಡೆಯುವ ದುರ್ಗಾ ಪೂಜೆಯನ್ನು ಸಂಪೂರ್ಣವಾಗಿ ಪ್ರಾಯೋಜಿಸಲಿದೆ ಡ್ರಾಗನ್!!

ಈ ಕಮ್ಮಿನಿಷ್ಟರಿಗೂ ದೇವರು-ದಿಂಡರಿಗೂ ಆಗಿ ಬರೋದಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಮೂರ್ತಿ ಪೂಜೆ, ಹಬ್ಬ- ಹರಿದಿನ, ಭಜನೆ-ಮಹೋತ್ಸವ ಎಂದರೆ ಈ ಬುದ್ದಿಜೀವಿ- ಕಮ್ಮಿನಿಷ್ಟರಿಗೆ ಅಲರ್ಜಿ. ಸನಾತನ ಸಂಸ್ಕೃತಿಯನ್ನು ಹಿಗ್ಗಾ ಮುಗ್ಗಾ ಹೀಯಾಳಿಸುವ ಭಾರತದ ಕಮ್ಯೂನಿಷ್ಟರಿಗೆ ಅವರ ಮಾತೃ ದೇಶ ಚೀನಾ ಈ ಬಾರಿ ಕೊಲ್ಕೊತ್ತಾದ ‘ಸಾಲ್ಟ್ ಲೇಕ್’ ನಲ್ಲಿ ಆಯೋಜಿಸಲಾಗುವ ದುರ್ಗಾ ಪೂಜೆಯ ಸಂಪೂರ್ಣ ಖರ್ಚನ್ನು ತಾನೇ ಭರಿಸಲಿದೆ ಎನ್ನುವ ವಿಚಾರ ಗೊತ್ತಿಲ್ಲವೇನೋ? ಅಂತೂ ಚೀನಾದ ಕೆಂಪು ಬಣ್ಣದ ಮೇಲೆ ಭಾರತದ ಕೇಸರಿ ಬಣ್ಣ ಪ್ರಭಾವ ಬೀರಿದೆ ಎಂದಾಯಿತು!!

ಶತಮಾನಗಳ ಹಿಂದೆ ಭಾರತ ತನ್ನ ಛಾಪನ್ನು ಚೀನಾದ ಮೇಲೆ ಬೀರಿತ್ತು. ಹಿಂದಿನಿಂದಲೂ ಚೀನಾದ ಪ್ರವಾಸಿಗರು, ಪರ್ಯಟಕರು, ವಿದ್ಯಾರ್ಥಿಗಳು ಭಾರತಕ್ಕೆ ಭೇಟಿ ನೀಡಿ ಭಾರತದ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಮ್ಮಲ್ಲಿಗೆ ಕೊಂಡು ಹೋಗಿದ್ದರೆನ್ನುವುದಕ್ಕೆ ಪುರಾವೆಗಳಿವೆ. ಚೀನಾದ ಬೌದ್ಧ ಧರ್ಮ ಭಾರತದಲ್ಲಿ ಜನಿಸಿದ್ದು. ಕೇರಳದ ಕಳರಿಪಯಟ್ ಅನ್ನು ಚೀನಾ ಮಾರ್ಶಿಯಲ್ ಆರ್ಟ್ ಮಾಡಿಕೊಂಡ ವಿಚಾರ ಹಲವರಿಗೆ ಗೊತ್ತಿರಬಹುದು. ಸಾಂಸ್ಕೃತಿಕವಾಗಿ-ವ್ಯಾಪಾರ ವಹಿವಾಟಿನಿಂದಾಗಿ ಚೀನಾ ದೇಶ ಭಾರತಕ್ಕೆ ನಿಕಟವರ್ತಿಯಾಗಿತ್ತು. ಯಾವತ್ತು ಚೀನಾ ಕಮ್ಯೂನಿಷ್ಟರ ಕಪಿ ಮುಷ್ಟಿಯಲ್ಲಿ ಸಿಲುಕಿತೋ ಭಾರತದಿಂದ ದೂರವಾಗುತ್ತಾ ಸಾಗಿತು. ಆದರೀಗ ಕಮ್ಯೂನಿಷ್ಟ್ ಚೀನಾ ಸಾಂಸ್ಕೃತಿಕವಾಗಿ ಭಾರತಕ್ಕೆ ಮತ್ತೆ ಹತ್ತಿರವಾಗುವ ಲಕ್ಷಣಗಳು ಕಾಣುತ್ತಿವೆ.

ಬಂಗಾಳದೊಂದಿಗೆ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಾಮೀಪ್ಯದ ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನದಲ್ಲಿ, ಸಾಲ್ಟ್ ಲೇಕಿನ ಬಿ.ಜೆ ಬ್ಲಾಕಿನಲ್ಲಿ ಆಯೋಜಿಸಲಾಗುವ ಅತ್ಯಂತ ಪುರಾತನ ದುರ್ಗಾ ಪೂಜೆಯನ್ನು ಈ ಬಾರಿ ಚೀನಾ ಪ್ರಾಯೋಜಿಸಲಿದೆ. ಬಿ.ಜೆ.ಬ್ಲಾಕ್ ಅನ್ನು ಮಿನಿ ಚೈನಾ ಟೌನ್ ಆಗಿ ಪರಿವರ್ತಿಸಲಿರುವ ಈ ಕಾರ್ಯಕ್ರಮಕ್ಕೆ ಚೀನೀ ದೂತಾವಾಸ ಆರ್ಥಿಕ ಸಹಾಯ ಒದಗಿಸಲಿದೆ ಮಾತ್ರವಲ್ಲ ಚೀನಾದ ವಾಸ್ತುಶೈಲಿಯಿಂದ ಸ್ಫೂರ್ತಿ ಪಡೆದ ವಿನ್ಯಾಸಗಳಲ್ಲಿ ತರಬೇತಿ ಪಡೆಯಲು ಸ್ಥಳೀಯ ಕಲಾವಿದರ ತಂಡವನ್ನು ಚೀನಾಗೆ ಕಳುಹಿಸಲಿದೆ. ದುರ್ಗಾ ಪೂಜೆಯ ಪಂಡಾಲ್ ಅನ್ನು ಪಗೋಡಾದ ಶೈಲಿಯಲ್ಲಿ ನಿರ್ಮಿಸಲಿರುವ ಚೀನಾ ದೂತಾವಾಸ ದೇವಿಯ ಅಲಂಕಾರದಿಂದ ಹಿಡಿದು, ಎಲ್ಲಾ ಕೆಲಸಗಳಲ್ಲಿ ಆಸಕ್ತಿಯಿಂದ ಭಾಗವಹಿಸಲಿದೆ ಎಂದು ಹೇಳಿದೆ.

ಕಳೆದ ಕೆಲವು ವರ್ಷಗಳಿಂದ ಚೀನಾದ ದೂತಾವಾಸವು ಕೊಲ್ಕತ್ತಾದ ಸಾಂಸ್ಕೃತಿಕ ಸನ್ನಿವೇಶದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಡೋಕ್ಲಾಮಿನಲ್ಲಿ ಭಾರತ-ಚೀನಾ ಕತ್ತಿ ಮಸೆಯುತ್ತಿದ್ದ ಸಂಧರ್ಭದಲ್ಲಿಯೂ ಇಲ್ಲಿನ ದೂತಾವಾಸ, ಸಮುದಾಯದ ಪೂಜೆಗಳಲ್ಲಿ ಭಾಗವಹಿಸಿ ಕಲ್ಕತ್ತಾದ ಪೊಲೀಸರ ಸಹಯೋಗದೊಂದಿಗೆ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನಗಳನ್ನು ನೀಡಿದೆ! ತನ್ನ ಸಾಂಸ್ಕೃತಿಕ ವಿನಿಮಯವನ್ನು ಒಂದು ಹೆಜ್ಜೆ ಮುಂದಿಡುವ ನಿಟ್ಟಿನಲ್ಲಿ ಈ ಬಾರಿ ದುರ್ಗಾ ಪೂಜೆಯ ಉಸ್ತುವಾರಿಯನ್ನು ತಾನೇ ಮುಂದೆ ನಿಂತು ನೋಡಿಕೊಳ್ಳಲಿದೆ. ಪ್ರವಾಸಿಗರನ್ನು ಚೀನಾ ಡ್ರಾಗನ್ ನೃತ್ಯ, ಚೀನೀ ಕೊಳಲಿನ ಸಂಗೀತ ಮತ್ತು ಆಕ್ರೋಬಾಟಿಕ್ಸ್ ಗಳು ಆಕರ್ಷಿಸಲಿವೆ. ಕಳೆದ ವರ್ಷದ ಪೂಜಾ ಕಾರ್ಯಕರ್ಮದ ಬಜೆಟ್ 40 ಲಕ್ಷ ರೂಗಳಾಗಿದ್ದರೆ ಈ ಬಾರಿ ಬಜೆಟ್ ಹೆಚ್ಚಾಗುವ ನಿರೀಕ್ಷೆ ಇದೆ. ಹೋದ ವರ್ಷ ದೂತಾವಾಸವು ಪಂಡಾಲಿನೊಳಗೆ ಅತ್ಯುತ್ತಮ ಸುರಕ್ಷಾ ವ್ಯವಸ್ತೆಯನ್ನು ಪ್ರದರ್ಶಿಸಿದ್ದ ಸಂಘಟಕರಿಗೆ ಪ್ರಶಸ್ತಿಯನ್ನು ನೀಡುವ ಜೊತೆಗೆ ಅವರನ್ನು ಚೀನಾ ಪ್ರವಾಸಕ್ಕೂ ಕಳುಹಿಸಿಕೊಟ್ಟಿತ್ತು!!

“ಕೋಲ್ಕೊತ್ತಾದ ದುರ್ಗಾಪೂಜೆಯು ಧಾರ್ಮಿಕ ಮಿತಿಗಳನ್ನು ಮೀರಿ ಎಲ್ಲರನ್ನೂ ಒಟ್ಟು ಗೂಡಿಸುವ ಒಂದು ಅಭೂತ ಪೂರ್ವ ಕಾರ್ಯಕ್ರಮವಾಗಿದೆ. ಚೀನೀ ದೂತಾವಾಸದಲ್ಲಿರುವ ನಾವು ಸಹ ಸಹಜವಾಗಿಯೆ ಉತ್ಸವಗಳಲ್ಲಿ ಭಾಗಿಯಾಗಿದ್ದೇವೆ” ಎಂದು ಸ್ವತಃ ಚೀನೀ ದೂತಾವಸದ ಕಾನ್ಸುಲ್ ಜನರಲ್, ಮಾ ಝಾನುವು ಹೇಳಿದ್ದಾರೆ. ಹಿಂದೂ ಸಂಸ್ಕೃತಿಯನ್ನು ಹೀಯಾಳಿಸುವ ಕಮ್ಮಿನಿಷ್ಟ ಜಾತ್ಯಾತೀತ ಬುದ್ದಿ ಜೀವಿಗಳಿಗೆ ಅರ್ಥವಾಯಿತೋ? ಪೂಜೆ- ಪುನಸ್ಕಾರಗಳಲ್ಲೂ ಸಾಂಪ್ರದಾಯಿಕತೆ ಕಾಣುವ ಭಾರತದ ಜಾತ್ಯಾತೀತರೆಲ್ಲಿ, ಧಾರ್ಮಿಕ ಚೌಕಟ್ಟುಗಳನ್ನು ಮೀರಿ ಎಲ್ಲರೊಂದೊಳಗಾಗುವ ಚೀನಾ ದೂತಾವಾಸವೆಲ್ಲಿ! ಇಂದು ಜಗತ್ತೇ ಸನಾತನ ಧರ್ಮವನ್ನು, ಭಾರತೀಯ ಆಚರಣೆಗಳನ್ನು ಬಿಚ್ಚು ಮನಸ್ಸಿನಿಂದ ಒಪ್ಪಿ, ಅಪ್ಪಿಕೊಳ್ಳುತ್ತಿದೆ. ಪೂಜೆ ಎಂದರೆ ಮಾರು ದೂರ ಸರಿವ ಕಮೂನಿಷ್ಟ್ ಚೀನಾವೆ ದುರ್ಗಾ ಪೂಜೆಗೆ ಮಾರು ಹೋಗಿರಬೇಕಾದರೆ ಸನಾತನದ ಶಕ್ತಿ ಎಂಥ್ಥದ್ದಿರಬೇಕು ಯೋಚಿಸಿ. ಹಸಿರು ಹೊದ್ದ ಭಾರತದ ಜಾತ್ಯಾತೀತ ಪಾಚಿ ಕಣ್ಣುಗಳಿಗೆ ಇವೆಲ್ಲ ಕಾಣುವುದಿಲ್ಲ ಅದೆ ಬೇಸರದ ವಿಚಾರ. ಚೀನಾದ ಕೆಂಗಣ್ಣಿಗೆ ಭಗವಾ ರಂಗು ಮೆತ್ತಿದೆ. ಇನ್ನು ಹಸಿರು ಕಂಗಳಿಗೆ ಮೆತ್ತದಿರುವುದೆ? ಸನಾತನವೆ ಸತ್ಯ….

-ಶಾರ್ವರಿ

Tags

Related Articles

Close