ಪ್ರಚಲಿತ

ಹನುಮಾನ್ ಚಾಲೀಸಾ ಸಹ ಕಾಂಗ್ರೆಸ್ ಪಕ್ಷಕ್ಕೆ ಅಲರ್ಜಿ

ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಪಕ್ಷ ಎನ್ನುವುದಕ್ಕೆ ಸಾಕ್ಷ್ಯಗಳು ಆಗಾಗ್ಗೆ ಲಭ್ಯವಾಗುತ್ತಿವೆ. ಹಿಂದೂಗಳ ಮೇಲಿನ ದೌರ್ಜನ್ಯ, ಕಾಂಗ್ರೆಸ್ ಹಿಂದೂಗಳಿಗೆ ಮಾಡುವ ಅನ್ಯಾಯ ಹೀಗೆ ಹತ್ತು ಹಲವು ಕಾರಣಗಳಿಂದ ಕೈ ಪಕ್ಷ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಒಳಗಾಗುತ್ತಲೇ ಇರುತ್ತದೆ.

ಇಂತಹ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ಗೆ ಹನುಮಾನ್ ಚಾಲೀಸಾ ಸಹ ಆಗಿ ಬರುವುದಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾವನ್ನು ಕೇಳುವುದೂ ಅಪರಾಧ. ಕಳೆದ ಎರಡು – ಮೂರು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ, ತುಷ್ಟೀಕರಣದ ಮುಖವನ್ನು ನಾನು ಬಹಿರಂಗ ಮಾಡಿದ್ದೇನೆ ಎಂದು ಅವರು ಹೇಳುತ್ತಾರೆ.

ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿ, ವೋಟ್ ಬ್ಯಾಂಕ್ ರಾಜಕಾರಣ ಸಾರ್ವಜನಿಕರ ಮುಂದಿಟ್ಟಿದ್ದೇನೆ. ಇದು ನನ್ನ ವಿರುದ್ಧ ಅವರನ್ನು ಮತ್ತಷ್ಟು ಕೆರಳಿಸಿದೆ. ಅವರು ನನ್ನನ್ನು ಎಲ್ಲಾ ಕಡೆಗಳಲ್ಲಿಯೂ ನಿಂದಿಸಲು ಆರಂಭ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಬಿಜೆಪಿಗೆ ಏಕೆ ಹೆದರುತ್ತಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸಂಪತ್ತಿನ ಸಮೀಕ್ಷೆ ಮಾಡುತ್ತೇವೆ ಎಂದು ಘೋಷಿಸಿದೆ. ಸಂಪತ್ತಿನ ಎಕ್ಸ್ ರೇ ಮಾಡುವುದಾಗಿ ಕೈ ಪಕ್ಷದ ನಾಯಕ ಭಾಷಣ ಮಾಡಿದ್ದಾರೆ. ಅವರ ನೈಜ ರಹಸ್ಯ ಬಯಲಾಗಿದ್ದು, ಅವರ ಈ ಘೋಷಣೆಯ ಹಿಂದಿನ ಹಿಡನ್ ಅಜೆಂಡಾ ಬಯಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಈಗ ನಡುಕ ಆರಂಭವಾಗಿದೆ ಎಂದು ಪ್ರಧಾನಿ ವ್ಯಂಗ್ಯ ಮಾಡಿದ್ದಾರೆ.

ಕಳೆದ ಹತ್ತು ವರ್ಷಗಳ ಕಾಲ ನನಗೆ ದೆಹಲಿಯಲ್ಲಿ ದೇಶಕ್ಕಾಗಿ ದುಡಿಯಲು ಅವಕಾಶ ಮಾಡಿ ಕೊಟ್ಚಿದ್ದೀರಿ. ಈ ದೇಶದ ವಿಷಯದಲ್ಲಿ ಯಾರ ಊಹೆಗೂ ನಿಲುಕದಂತಹ ಅನೇಕ ನಿರ್ಧಾರಗಳನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಈ ಹತ್ತು ವರ್ಷಗಳ ಅವಧಿಯಲ್ಲಿಯೂ ದೇಶವನ್ನು ಕಾಂಗ್ರೆಸ್ ಪಕ್ಷೇವೇ ಆಳುತ್ತಿದ್ದರೆ ‌ಸ್ಥಿತಿ ಏನಾಗಿರುತ್ತಿತ್ತು ಆಲೋಚಿಸಿ. ನಮ್ಮ ಮೇಲೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಇಂದಿಗೂ ಕಲ್ಲು ತೂರಾಟ ನಡೆಯುತ್ತಿತ್ತು. ನಮ್ಮ ಸೈನಿಕರಿಗೆ ಒನ್ ರ್ಯಾಂಕ್ ಪಿಂಚಣಿ ವ್ಯವಸ್ಥೆ ಇರುತ್ತಿರಲಿಲ್ಲ. ಈಗ ನಮ್ಮ ದೇಶದ ನಿವೃತ್ತ ಸೈನಿಕರು ಒಂದು ಲಕ್ಷ ಕೋಟಿ ಪಿಂಚಣಿ ಪಡೆದಿದ್ದಾರೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದರೆ ಒಬ್ಬರ ಮೇಲೆ ನಂಬಿಕೆ ಇಡುವುದು ಸಹ ಕಷ್ಟ ಎಂದು ಪಿ ಎಂ ಮೋದಿ ವಾಗ್ದಾಳಿ ನಡೆಸಿದ್ದಾರೆ.

Tags

Related Articles

Close