ಪ್ರಚಲಿತ

ಕಾಂಗ್ರೆಸ್ ಗೂಂಡಾಗಿರಿ ನಂಬರ್ 5.!! ಮತ್ತೆ ಕೈ ಮುಖಂಡರಿಂದ ತಲವಾರು ದಾಳಿ!! ಈ ಬಾರಿ ಅಟ್ಟಹಾಸ ಮೆರೆದ ರಾಕ್ಷಸರು ಯಾರು ಗೊತ್ತಾ..?!

ಪಾಪದ ಕೊಡ ತುಂಬಿದೆ ಅನ್ನುತ್ತಾರಲ್ಲಾ, ಬಹುಷಃ ಇದಕ್ಕೆ ಆಗಿರಬೇಕು. ಅಧಿಕಾರಕ್ಕೆ ಬಂದು 5 ವರ್ಷಗಳು ತುಂಬುತ್ತಲೇ ಇಷ್ಟು ವರ್ಷಗಳು ಮಾಡಿದ ಪಾಪಗಳು ಒಂದೊಂದೇ ಬಯಲಾಗುತ್ತಿದೆ. ಒಂದಲ್ಲಾ ಎರಡಲ್ಲಾ, ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಅದೆಷ್ಟೋ ಚಟುವಟಿಕೆಗಳನ್ನು ಮಾಡಿ ಮಾಡಿ ಈ ಸರ್ಕಾರ ಯಾರೂ ಮಾಡದಷ್ಟು ಪಾಪವನ್ನು ಕಟ್ಟಿಕೊಂಡು ಈಗ ಆ ಪಾಪದ ಕರ್ಮಗಳನ್ನು ಒಂದೊಂದಾಗಿಯೇ ಅನುಭವಿಸುತ್ತಿದೆ.

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಒಂದೇ ಒಂದು ಸದ್ದು. ಅದು ಕಾಂಗ್ರೆಸ್ ಗೂಂಡಾಗಳ ಗೂಂಡಾಗಿರಿ. ಪ್ರಮುಖ ಕಾಂಗ್ರೆಸ್ ಮುಖಂಡರೇ ಗೂಂಡಾಗಿರಿಯಲ್ಲಿ ಭಾಗಿಯಾಗಿ ಸರ್ಕಾರದ ಮಾನ ಮರ್ಯಾದೆಯನ್ನು 3 ಕಾಸಿಗೆ ಹರಾಜು ಹಾಕುತ್ತಿದ್ದಾರೆ. ಒಂದೇ ವಾರದಲ್ಲಿ 5 ಕಾಂಗ್ರೆಸ್ ಶಾಸಕರ ಗೂಂಡಾಗಿರಿ ಬಯಲಾಗಿದೆ. ತನ್ನ ಛೇಲಾಗಳನ್ನು ಛೂಬಿಟ್ಟು ತಮಗೆ ಬೇಕಾದ ಹಾಗೆ ಕೆಲಸ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಶಾಸಕರಿಗೆ ಈಗ ಅದೇ ಗೂಂಡಾ ಛೇಲಗಳು ಕಗ್ಗಂಟಾಗಿ ಪರಿಣಮಿಸಿದೆ. ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್, ಕಾಂಗ್ರೆಸ್ ಶಾಸಕ ಬೈರತಿ ಬಸವರಾಜು ಛೇಲಾ ನಾರಾಯಣ ಸ್ವಾಮೀ, ಕೃಷಿ ಸಚಿವ ಕೃಷ್ಣ ಬೈರೇಗೌಡರ ಛೇಲಾಗಳ ಗೂಂಡಾಗಿರಿಯ ನಂತರ ಈಗ ಮತ್ತೊಂದು ಗೂಂಡಗಿರಿಯ ಪ್ರಕರಣ ಬೆಳಕಿಗೆ ಬಂದಿದೆ.

ಬಯಲಾಯ್ತು ಮತ್ತೊಬ್ಬ ಕಾಂಗ್ರೆಸ್ ಶಾಸಕನ ಛೇಲಾಗಳ ಪುಂಡಾಟಿಕೆ…

ಬೆಂಗಳೂರಿನ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಈಗ ಪುಂಡಾಟಿಕೆ ಮೆರೆದ ಮತ್ತೊಬ್ಬ ಕಾಂಗ್ರೆಸ್ ಶಾಸಕ. ಬೆಂಗಳೂರಿನ ಯಶವಂತಪುರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಅವರ ಆಪ್ತ ಗೂಂಡಾಗಳು ತಮ್ಮ ಗೂಂಡಾ ಮನಸ್ಥಿತಿಯನ್ನು ಹೊರಹಾಕಿದ್ದು ಈಗ ಮತ್ತೆ ರಾಜ್ಯದಲ್ಲಿ ಭಾರೀ ಸುದ್ಧಿಯಾಗುತ್ತಿದೆ. ಒಂದರ ಬೆನ್ನಲ್ಲಿ ಮತ್ತೊಂದು ಪ್ರಕರಣ ಬಯಲಾಗುತ್ತಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಜುಗರವನ್ನು ತಂದೊಡ್ಡಿದೆ.

ಪ್ರಕರಣ ಏನು ಗೊತ್ತಾ..?

ಬೆಂಗಳೂರಿನ ಯಶವಂತಪುರ ವಿಧಾನ ಸಭಾ ಕ್ಷೇತ್ರದ ತಿಗಳರ ಪಾಳ್ಯದಲ್ಲಿ ಮನೆ ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಿತ್ತು. ಇದಕ್ಕಾಗಿ ತಿಗಳರ ಪಾಳ್ಯದ ಪುಟ್ಟರಾಜು ಎಂಬವರ 4 ಎಕರೆ ಜಮೀನನ್ನು ಗೊತ್ತು ಮಾಡಿತ್ತು. ಆದರೆ ಈ ಜಮೀನನ್ನು ಕಾಂಗ್ರೆಸ್ ಸಮಾವೇಶಕ್ಕೆ ನೀಡಲು ಪುಟ್ಟರಾಜು ಒಪ್ಪೋದಿಲ್ಲ. ಆ ಜಮೀನಿನಲ್ಲಿ ಕಾಮಗಾರಿ ನಡೆಸುತ್ತಿದ್ದೇವೆ. ಹೀಗಾಗಿ ಈ ಜಮೀನನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಆ 4 ಎಕರೆ ಜಾಗದಲ್ಲಿ ಕಾಮಗಾರಿಯನ್ನೂ ಆರಂಭಿಸಿದ್ದರು.

ಫೆಬ್ರವರಿ 18ಕ್ಕೆ ಈ ಜಾಗದಲ್ಲಿ ಮನೆ ಮನೆಗೆ ಕಾಂಗ್ರೆಸ್ ಎಂಬ ಸಮಾವೇಶವನ್ನು ನಡೆಸಲು ಚಿಂತನೆ ನಡೆಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಜಾಗವನ್ನು ಕಾಂಗ್ರೆಸ್ ಶಾಸಕರ ಛೇಲಾಗಳು ಕೇಳಿದ್ದರು. ಆದರೆ ಈ ಜಾಗವನ್ನು ನೀಡುವಲ್ಲಿ ಮಾಲೀಕ ಪುಟ್ಟರಾಜು ಒಲವು ತೋರೋದಿಲ್ಲ. ಜಮೀನು ಮಾಲೀಕ ಆ ಜಾಗದಲ್ಲಿ ಬೇಕಂತಲೇ ಕಂಪೌಂಟ್ ಕಟ್ಟಿದ್ದಾರೆ ಎನ್ನುವ ಆರೋಪವನ್ನು ಕಾಂಗ್ರೆಸ್ ಶಾಸಕರ ಛೇಲಾಗಳು ಮಡುತ್ತಲೇ ಇದ್ದರು.

ಆದರೆ ಇದರಿಂದ ಕೋಪಗೊಂಡ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಕರ್ ಛೇಲಾಗಳು ಕಾಮಗಾರಿ ನಡೆಸುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಭಾರೀ ದಾಳಿಯನ್ನೇ ನಡೆಸಿವೆ. ರಾತ್ರಿ ಹೊತ್ತು ಆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್, ಚಿಕ್ಕಣ್ಣ, ಮಹೇಶ್ ಹಾಗೂ ಜೋಗಣ್ಣ ಗೌಡ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಲವಾರು, ದೊಣ್ಣೆ, ಕಲ್ಲುಗಳಿಂದ ದಾಳಿ ಮಾಡಿದ್ದ ಕಾಂಗ್ರೆಸ್ ಶಾಸಕ ಎಸ್,ಟಿ.ಸೋಮಶೇಕರ್ ಬೆಂಬಲಿಗ ಗೂಂಡಾಗಳು ಮನಬಂದಂತೆ ಹಲ್ಲೆ ಮಾಡಿದ್ದಾರೆ. ರಾತ್ರಿ ಹೊತ್ತು ಕೆಲಸ ಮಾಡುತ್ತಿದ್ದ ಈ ಕೂಲಿ ಕಾರ್ಮಿಕರ ಬಳಿಗೆ ತೆರಳಿದ್ದ 20ಕ್ಕೂ ಅಧಿಕ ತಂಡದ ಗೂಂಡಾ ಬೆಂಬಲಿಗರು ಈ ದುಷ್ಕøತ್ಯಗಳಲ್ಲಿ ಭಾಗಿಯಾಗಿದ್ದಾರೆ.

18ನೇ ತಾರೀಕಿನಂದು ನಡೆಯಬೇಕಾಗಿದ್ದ ಕಾಂಗ್ರೆಸ್‍ನ ಮನೆ ಮನೆಗೆ ಕಾರ್ಯಕ್ರಮದ ಸಮಾವೇಶಕ್ಕೆ ಜಮೀನು ನೀಡಲಿಲ್ಲ ಎನ್ನುವ ಕಾರಣಕ್ಕೆ ಜಮೀನು ಮಾಲೀಕನ ಮೇಲೆ ಸೇಡು ಇಟ್ಟುಕೊಂಡಿದ್ದರು. ಆದರೆ ಜಮೀನು ಮಾಲೀಕ ಪುಟ್ಟರಾಜು ಅವರ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲಾಗದ ಈ ಗೂಂಡಾಗಳು ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ದಾಳಿ ನಡೆಸಿ ತಮ್ಮ ಧ್ವೇಷವನ್ನು ತೀರಿಸಿಕೊಂಡಿದ್ದಾರೆ.

ಖಾಲಿ ಜಮೀನಿಗೆ ಕಂಪೌಂಡ್ ಕಟ್ಟುತ್ತಿರುವಾಗ ರಾತ್ರಿ ಹೊತ್ತು ಏಕಾಏಕಿ ದಾಳಿ ಮಾಡಿದ ಕಾಂಗ್ರೆಸ್ ಛೇಲಾಗಳು ಕೆಲಸಗಾರರನ್ನು ಮನಬಂದಂತೆ ಅಟ್ಟಾಡಿಸಿಕೊಂಡು ದಾಳಿ ಮಾಡಿವೆ. 20ಕ್ಕೂ ಅಧಿಕ ಗೂಂಡಾಗಳಿದ್ದ ತಂಡದಿಂದ 4 ಜನ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣವನ್ನು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಭಯಭೀತವಾದ ಕಾಂಗ್ರೆಸ್…!

ಕಳೆದ ಒಂದು ವಾರದಿಂದ ಕಾಂಗ್ರೆಸ್ ಮೇಲೆ ಒಂದಲ್ಲಾ ಒಂದು ಪ್ರಕರಣದಿಂದ ಭಾರೀ ಮುಜುಗರ ಅನುಭವಿಸುತ್ತಿದ್ದು, ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈ ವೇಳೆ ಇಂತಹಾ ಪ್ರಕರಣ ಮರುಕಳಿಸುತ್ತಿರುವು ಭಾರೀ ಹಿನ್ನೆಡೆಗೂ ಕಾರಣವಾಗಿದೆ. ಬಹತೇಕ ಈ ಎಲ್ಲಾ ಪ್ರಕರಣಗಳೂ ಬೆಂಗಳೂರು ವಿಧಾನ ಸಭಾ ಕ್ಷೇತ್ರದಲ್ಲೇ ನಡೆಯುತ್ತಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ತುಂಬಾನೆ ಕಷ್ಟ ಎಂದೂ ಹೇಳಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close