ಪ್ರಚಲಿತ

ನೀಚ ಬಾಯಿಯ ಕಾಂಗ್ರೆಸ್ ನಾಯಕನಿಂದ ಮತ್ತೆ ದೇಶದ್ರೋಹಿ ಹೇಳಿಕೆ!! ಪಾಕ್ ಬಗ್ಗೆ ಈ ನಾಯಕ ಹೇಳಿದ್ದೇನು ಗೊತ್ತಾ?!

ಅದೇಕೋ ಗೊತ್ತಿಲ್ಲ ಕಾಂಗ್ರೆಸ್ಸಿಗರು ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ.. ಈ ಬಾರಿ ಮತ್ತೆ ವಿವಾದಾತ್ಮಕ ಹೇಳಿಕೆಯನ್ನು ಕೊಡುವ ಮೂಲಕ ಮತ್ತೆ ಸುದ್ಧಿಯಲ್ಲಿ ಪಾಕ್ ಪ್ರೇಮಿ ಯಾರು ಗೊತ್ತೇ?! ಅಂದು ಪ್ರಧಾನಿ ನರೇಂದ್ರ ಮೋದಿಗೆ ಪ್ರಧಾನಿ ಮೋದಿ ಅವರು ನೀಚ್ ಆದ್ಮಿ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.

ಪಾಕ್ ಪ್ರೇಮಿ ಮಣಿಶಂಕರ್ ಅಯ್ಯರ್!!

ಕಾಂಗ್ರೆಸ್‍ಗೆ ಇತ್ತೀಚೆಗೆ ಭಾರತಕ್ಕಿಂತ ಪಾಕಿಸ್ತಾನದ ಮೇಲೇ ಅಗಾಧವಾದ ಪ್ರೀತಿ ಹುಟ್ಟುತ್ತಿದೆ ಎಂಬುವುದು ಎಲ್ಲರಿಗೂ ತಿಳಿದ ವಿಷಯ!! ಈಗ ಮತ್ತೆ ಅದನ್ನು ಸಾಭೀತು ಪಡಿಸಲು ಹೊರಟಿದ್ದಾರೆ ಮಣಿಶಂಕರ್ ಅಯ್ಯರ್!! ಕರಾಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಏಕೆಂದರೆ ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

ಎರಡು ರಾಷ್ಟ್ರಗಳು ಮಾತನಾಡಲು ಸ್ವಲ್ಪ ಸಮಯಾವಕಾಶ ಬೇಕಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಇಸ್ಲಾಮಾಬಾದ್ ದ್ವಿಪಕ್ಷೀಯ ಪ್ರಾಮುಖ್ಯತೆ ಮಾತುಕತೆ ನೀತಿಯನ್ನು ಒಪ್ಪಿಕೊಂಡಿದೆ. ಆದರೆ, ದೆಹಲಿ ಅದನ್ನು ಒಪ್ಪಿಲ್ಲ ಎಂದಿದ್ದಾರೆ. ನಿರಂತರ ಮಾತುಕತೆಯಿಂದಷ್ಟೇ ಭಾರತ ಮತ್ತು ಪಾಕಿಸ್ತಾನದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ನಿನ್ನ ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸು ಎನ್ನುವಂತೆ ಭಾರತವನ್ನು ನಾನು ಪ್ರೀತಿಸುತ್ತೇನೆ. ಅದರಂತೆ ಪಾಕಿಸ್ತಾನವನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.

ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ `ನೀಚ್ ಆದ್ಮಿ’ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಇಡೀ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು…ಅದಲ್ಲದೆ ದೇಶದ ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಮತ್ತು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಇಬ್ಬರೂ ಪಾಕಿಸ್ತಾನಿ ಪದವಿಯಲ್ಲಿರುವ ವ್ಯಕ್ತಿಗಳೊಂದಿಗೆ ನಡೆಸಿದ ಗುಪ್ತ ಮಾತುಕತೆ ನಡೆಸುವ ಮೂಲಕ ಕೂಡಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು…

ತದ ನಂತರ ಪ್ರಧಾನಿ ಮೋದಿಯವರು ಈ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದಾಗ ಈ ವಿಷಯ ಹಸಿ ಸುಳ್ಳು ಎಂದು ಬೊಬ್ಬಿರಿಸಿದ ಕಾಂಗಿಗಳು ನಂತರ ಸಾಕ್ಷ್ಯಾಧಾರದೊಂದಿಗೆ ಭಾಜಪ ಮಂಡಿಸಿದಾಗ ಖಿನ್ನರಾಗಿ ಹೌದು ಹೌದು ಆದರೆ ಇದು ವೈಯಕ್ತಿಕ ಕೂಟ ಎಂದು ಸಂಭಾಳಿಸಲು ಪ್ರಯತ್ನಿಸಿದ್ದರು. ದೇಶದ ಪ್ರಧಾನಿ ಮನ ಮೋಹನ್ ಸಿಂಗ್ ಮತ್ತು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಯಾವುದೇ ವಿದೇಶಿ ಅಧಿಕಾರಿಗಳನ್ನು ಭೇಟಿ ಮಾಡುವ ಮೊದಲು ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆಯ ಬೇಕು ಏಕೆಂದರೆ ಇವರ ಬಳಿ ದೇಶದ ಅನೇಕ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಗಳು ಇವರಲ್ಲಿರುತ್ತದೆ.

ಈ ಕಾರಣದಿಂದ ಕಾಂಗಿಗಳು ಈ ಭೇಟಿಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮನೆಯಲ್ಲಿ ಮಾಡಲಾಗದು ಆದ್ದರಿಂದ ಇದನ್ನು ಮಣಿಶಂಕರ್ ಅಯ್ಯರ್ ನಡೆಸಿದ್ದರು. ಯಾಕೆ ಹೀಗೆ ನಮ್ಮ ದೇಶದ ಶತ್ರು ರಾಷ್ಟ್ರದ ಜೊತೆ ದೇಶದ ಪದವಿಯಲ್ಲಿರುವ ಅಧಿಕಾರಿಗಳೊಂದಿಗೆ ರಹಸ್ಯ ಮಾತುಕತೆ ಇರಬಹುದು ಎಂಬುವುದು ನಿಮ್ಮ ತಿಳುವಳಿಕೆಗೆ ಬಿಟ್ಟಿದ್ದು.. ಅಧಿಕಾರಕ್ಕಾಗಿ ಏನೂ ಮಾಡಲೂ ಸೈ ಎಂಬುವುದಕ್ಕೆ ಇದೊಂದು ಜ್ವಲಂತ ಉದಾಹರಣೆ:

ನವದೆಹಲಿಯ ಜಂಗ್‍ಪುರ ಬಡಾವಣೆಯಲ್ಲಿರುವ ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಡಿಸೆಂಬರ್.6ರಂದು ಸಭೆ ಆಯೋಜನೆಗೊಂಡಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸಭೆಯಲ್ಲಿ ಭಾಗಿಯಾಗಿದ್ದರು. ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಶೀದ್ ಕಸೂರಿ ಒಳಗೊಂಡ ಪಾಕ್ ತಂಡದಲ್ಲಿ ಅಲ್ಲಿನ ಸರ್ಕಾರಿ ಅಧಿಕಾರಿಗಳಿದ್ದರು. ಗುಜರಾತ್ ಮೊದಲ ಹಂತದ ಮತದಾನಕ್ಕೆ ಮೂರು ದಿನ ಮುನ್ನ ಈ ಸಭೆ ನಡೆದಿರುವುದನ್ನು ಪಾಕ್‍ನ ವಿದೇಶಾಂಗ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ಈ ಮಾಹಿತಿಯನ್ನು ಬಹಿರಂಗಪಡಿಸಿದ್ದ ಬಿಜೆಪಿ ಮುಖಂಡ ಹಾಗೂ ಬೋಫೆÇರ್ಸ್ ಪ್ರಕರಣದ ಮುಖ್ಯ ಫಿರ್ಯಾದುದಾರ ಅಜಯ್ ಅಗರ್ವಾಲ್, ಬೇಹುಗಾರಿಕಾ ಸಂಸ್ಥೆ ಮೂಲಗಳು ಕೂಡ ಈ ವಿಚಾರವನ್ನು ಖಚಿತಪಡಿಸಿತ್ತು. ಹಾಗಾದರೆ ಕಾಂಗ್ರೆಸ್‍ಗೆ ಮತ್ತು ಪಾಕ್‍ಗೆ ಈ ಚುನಾವಣೆಯ ಅಥವಾ ಬೇರೆ ಯಾವುದೇ ವಿಚಾರವಾದರೂ ಅವರಲ್ಲಿ ಯಾವ ವಿಚಾರದ ಬಗ್ಗೆಯೂ ಚರ್ಚಿಸುವ ಅಗತ್ಯವೇನು ಇದೆಯೇ?… ಪಾಕ್ ಭಯೋತ್ಪಾದಕರನ್ನು ಭಾರತಕ್ಕೆ ಸ್ವಾಗತಿಸುವ ತಯಾರಿ ಈಗಾಗಲೇ ನಡೆಸುತ್ತಿರುವುದು ಎಲ್ಲರಿಗೂ ಸ್ಪಷ್ಟವಾಗಿ ಗಮನಿಸಬಹುದು.

ಮಣಿಶಂಕರ್ ಅಯ್ಯರ್ ಮನೆಯಲ್ಲಿ ನಡೆದ ಸಭೆಯ ಬಳಿಕ ಗುಜರಾತ್‍ನ ಹಿಂದುಳಿದ ವರ್ಗಗಳು, ಬಡವರನ್ನು ಅವಮಾನಿಸಲಾಗುತ್ತಿದೆ. ಇದೆಲ್ಲವನ್ನು ಗಮನಿಸಿದಾಗ ದೇಶದ ಹಿತಕಾಯುವ ವಿಷಯದಲ್ಲಿ ಕಾಂಗ್ರೆಸ್ ಬದ್ಧತೆ ಬಗ್ಗೆ ಅನುಮಾನ ಮೂಡುತ್ತದೆ. ಮುಂದಿನ ಚುನಾವಣೆಯಲ್ಲಿ ಪಾಕಿಸ್ಥಾನದ ಜೊತೆಗೆ ಕಾಂಗ್ರೆಸ್ ಯಾಕಾದರೂ ಹಸ್ತಕ್ಷೇಪ ಮಾಡುತ್ತಿದೆ ಎಂಬುವುದು ಗುಜರಾತ್ ಮತದಾನಕ್ಕೆ ನೇರವಾಗಿ ಪಾಕಿಸ್ಥಾನದ ಸಂಬಂಧವಿರುವುದು ಕಾಂಗ್ರೆಸ್ ಪಕ್ಷದ ಪ್ರಮುಖರು ಇತ್ತೀಚೆಗಷ್ಟೇ ಪಾಕ್‍ನ ನಾಯಕರನ್ನು ರಹಸ್ಯವಾಗಿ ಭೇಟಿಯಾಗಿರುವ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದಾರೆ.

ಅದರಲ್ಲಿ ಭಾರತದಲ್ಲಿರುವ ಪಾಕ್ ಹೈಕಮಿಷನರ್ ಮತ್ತು ಪಾಕಿಸ್ಥಾನದ ಮಾಜಿ ವಿದೇಶಾಂಗ ಸಚಿವರು ಭಾಗಿಯಾಗಿದ್ದರು. ಅಷ್ಟೇ ಅಲ್ಲ, ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿಯೊಬ್ಬರು ಅಲ್ಲಿದ್ದು, 3 ಗಂಟೆಗಳ ಕಾಲ ನೆರೆರಾಷ್ಟ್ರದ ರಾಯಭಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಇದನ್ನೆಲ್ಲ ನೋಡುವಾಗ ಯಾರಿಗಾದರೂ ಅನುಮಾನ ಬರುವುದಿಲ್ಲವೇ’ ಅಲ್ಲದೆ, ಈ ಸಭೆ ನಡೆದ ಮಾರನೇ ದಿನವೇ ಅಯ್ಯರ್ ನನ್ನನ್ನು ನೀಚ ಎಂದು ಕರೆದರು. ಗುಜರಾತ್‍ನ ಜನತೆಯನ್ನು, ಇಲ್ಲಿನ ಹಿಂದುಳಿದ ವರ್ಗಗಳನ್ನು, ಬಡವರನ್ನು ಮತ್ತು ಮೋದಿಯನ್ನು ಅವಮಾನಿಸಿದರು. ಈ ಕುರಿತು ಕಾಂಗ್ರೆಸ್ ದೇಶದ ಜನರಿಗೆ ವಿವರಣೆ ನೀಡಬೇಕಾಗಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಂದು ಚೀನಾ ರಾಯಭಾರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಹೆಚ್ಚಿನವರು ಕೇಳುತ್ತಿರುವುದು ಅದೇಕೆ ಕಾಂಗ್ರೆಸ್ ಈ ಭೇಟಿಯನ್ನು ಕದ್ದುಮುಚ್ಚಿ ಮಾಡುವುದಕ್ಕೆ ನೋಡಿ ನಂತರ ಸಮರ್ಥನೆಗಿಳಿದಿರುವುದು ಎಲ್ಲರ ಪ್ರಶ್ನೆಯಾಗಿದೆ.

ಚೀನಾ ರಾಯಭಾರ ಕಚೇರಿಗೆ ರಾಹುಲ್ ತೆರಳಿರುವ ವಾರ್ತೆಯನ್ನು ಸುದ್ದಿವಾಹಿನಿಗಳು ಬಿತ್ತರಿಸಿದಾಗ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವಿಟ್ಟರಿನಲ್ಲಿ ಅದನ್ನು ಅಲ್ಲಗಳೆಯುತ್ತ, `ಭಕ್ತ’ ವಾಹಿನಿಗಳು ಸುಳ್ಳು ಸುದ್ದಿ ಹರಡುತ್ತಿವೆ ಎಂದು ಕಿಡಿಕಾರಿದ್ದರು. ಅವರೇ ಪತ್ರಿಕಾಗೋಷ್ಟಿ ನಡೆಸಿ- `ರಾಹುಲ್ ಗಾಂಧಿ ಚೀನಾ ರಾಯಭಾರಿ ಹಾಗೂ ಭೂತಾನ್ ರಾಯಭಾರಿಯನ್ನೂ ಭೇಟಿ ಮಾಡಿದ್ದರು. ಆದರೆ ಮಾಧ್ಯಮದ ಮೂಲಕ ವಿದೇಶಾಂಗ ಸಚಿವಾಲಯವು ಸೃಷ್ಟಿಸುತ್ತಿರುವ ರೀತಿಯಲ್ಲಿ ಅಲ್ಲ’ ಎಂದು ಸಮಜಾಯಿಷಿ ನೀಡಿದ್ದರು. ಇದಕ್ಕೂ ಮೊದಲು, ರಾಹುಲ್ ಗಾಂಧಿ ಭೇಟಿಯ ಬಗ್ಗೆ ಮಾಹಿತಿ ಪ್ರಕಟಿಸಿದ್ದ ಚೀನಾ ರಾಯಭಾರಿ ಕಚೇರಿ ವೆಬ್ಸೈಟು, ಕಾಂಗ್ರೆಸ್ಸಿನ ನಿರಾಕರಣೆ ಬರುತ್ತಲೇ ಅದನ್ನು ತೆಗೆದುಹಾಕಿದ್ದು ಎಲ್ಲರಲ್ಲಿ ಶಂಕೆಯ ಭಾವನೆಯನ್ನು ಬಿತ್ತಿತ್ತು.

ಅಲ್ಲದೇ ನಿರ್ಧಾರ ಜಾರಿಯ ಅಧಿಕಾರ ಇರುವ ಪ್ರಧಾನಿ ಅಥವಾ ಸರ್ಕಾರದ ಹುದ್ದೆಗಳಲ್ಲಿರುವವರು ಚೀನಾ ಸರ್ಕಾರದ ಪ್ರತಿನಿಧಿಗಳನ್ನು ಭೇಟಿ ಮಾಡುವುದಕ್ಕೂ ರಾಹುಲ್ ಭೇಟಿಗೂ ವ್ಯತ್ಯಾಸವಿದೆ. ಪ್ರತಿಪಕ್ಷ ಮುಖಂಡರು ರಾಯಭಾರಿಗಳನ್ನು ಭೇಟಿ ಮಾಡಿರುವುದು ತಪ್ಪು ಕ್ರಮವೂ ಅಲ್ಲ, ಇದೇ ಮೊದಲು ಅಲ್ಲ. ಆದರೆ ಗಡಿಯಲ್ಲಿ ವಿಷಮ ಸ್ಥಿತಿ ಇರುವಾಗ ನಡೆದ ಈ ಭೇಟಿಯನ್ನು ಕಾಂಗ್ರೆಸ್ ಪ್ರಾರಂಭದಲ್ಲಿ ನಿರಾಕರಿಸಿದ್ದೇಕೆ ಹಾಗೂ ಅದು ಈ ವಿದ್ಯಮಾನಕ್ಕೆ ನೀಡುತ್ತಿರುವ ಪರಿಹಾರ ಸೂತ್ರವೇನು ಎಂಬುದು ಇಲ್ಲಿನ ಪ್ರಶ್ನೆ.

ಇಲ್ಲಿರುವುದು ನಿಯಮಾವಳಿಯ ಪ್ರಶ್ನೆಯಲ್ಲ. ಆದರೆ ಗಡಿಯಲ್ಲಿ ಚೀನಾದ ಜತೆ ವೈಷಮ್ಯ ಕದಡಿರುವಾಗ ಇಡೀ ದೇಶ ಒಂದು ಧ್ವನಿಯಲ್ಲಿ ಮಾತನಾಡಬೇಕಿರುವುದು ಅವಶ್ಯ. ಇಂಥ ಸಂದರ್ಭದಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದಿರಬಹುದಾದರೂ, ಈ ವಿಷಯದಲ್ಲಿ ಸರಕಾರ ಸ್ಪಷ್ಟ ವ್ಯಾಖ್ಯಾನ ಏನೆಂಬುದನ್ನು ಆಂತರಿಕ ಮಾತುಕತೆ ಮೂಲಕ ವಿಚಾರಿಸಿಕೊಳ್ಳುವುದಕ್ಕೂ ಮುಂಚೆಯೇ, ಹಳೇ ಸ್ನೇಹ ಮತ್ತು ರಿವಾಜುಗಳ ಹೆಸರಲ್ಲಿ ಚೀನಾ ರಾಯಭಾರಿಯನ್ನು ಭೇಟಿಯಾಗಿರುವುದು ರಾಜಕೀಯ ಅಪ್ರಬುದ್ಧತೆಯ ಉದಾಹರಣೆಯಷ್ಟೆ.

ಯಾಕೆ ಈ ರೀತಿಯಾಗಿ ಶತ್ರು ರಾಷ್ಟ್ರದೊಂದಿಗೆ ಮಿತ್ರರಾಗಲು ಕಾಂಗ್ರೆಸ್ ಪಕ್ಷ ಹೊರಟಿದೆ ಎಂದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕು.. ಯಾಕೆಂದರೆ ಗುಜರಾತ್ ಗಡಿಭಾಗದಿಂದಲೇ ಪಾಕಿಸ್ಥಾನದ ಭಯೋತ್ಪಾದಕರಿಗೆ ಒಳ ನುಸುಳಲು ಸಾಧ್ಯವಾಗುವುದು… ಈ ಹಿಂದೆ ಅನೇಕ ದಂಧೆಗಳನ್ನು ಅಂದರೆ ಡ್ರಗ್ಸ್, ಹೆರಾಯಿನ್ ಇಂತಹ ಕಾರ್ಯ ಚಟುವಟಿಕೆಗಳು ಭಾರತಕ್ಕೆ ಬರುತ್ತಿದ್ದಿದ್ದು ಗುಜರಾತ್ ಗಡಿಭಾಗದಿಂದಲೇ… ಇಲ್ಲಿಯೇ ತಮ್ಮ ವ್ಯಾಪಾರವನ್ನು ಆರಂಭಿಸಿದ್ದರು….ಆದರೆ ಯಾವಾಗ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಚುಕ್ಕಾಣಿ ಹಿಡಿದರೋ ಆವಾಗ ಶುರುವಾಗಿತ್ತು ಕಾಂಗ್ರೆಸ್‍ಗೆ ಭಯ!.. ಯಾಕೆಂದರೆ ಇನ್ಮುಂದೆ ನಕಲಿ ನೋಟು, ಡ್ರಗ್ಸ್, ಹೆರಾಯಿನ್ ಮುಂತಾದ ಕಾರ್ಯ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂಬುವುದು ಮನದಟ್ಟಾಯಿತು. ಯಾವಾಗ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಇಂದಿನವರೆಗೆ ಒಬ್ಬ ಪಾಕ್ ಭಯೋತ್ಪಾಕನಿಗೆ ಭಾರತಕ್ಕೆ ನುಸುಳಲು ಸಾಧ್ಯವಾಗಲಿಲ್ಲ… ಗಡಿಭಾಗದಲ್ಲಿ ಅಷ್ಟೊಂದು ಸೊಕ್ಷ್ಮತೆಯನ್ನು ಕಾಪಾಡಿದ್ದರು.

ಹೀಗೆ ಇನ್ನು ಮುಂದೆಯೂ ಗುಜರಾತ್‍ನಲ್ಲಿ ಏನಾದರೂ ಮೋದಿ ಸರಕಾರ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೆ ಪಾಕ್‍ನೊದಿಗೆ ಮೃದು ಧೋರಣೆಯನ್ನು ತೋರಿಸಿರುವ ಕಾಂಗ್ರೆಸ್ ಪಾಕ್‍ನೊಂದಿಗೆ ಸೇರಿ ಯಾವುದೇ ಕಾರ್ಯಚಟುವಟಿಕೆಯನ್ನು ಮಾಡಲಾಗುವುದಿಲ್ಲ ಎಂಬುವುದು ಕಾಂಗ್ರೆಸ್‍ಗೆ ತಿಳಿದಿರುವ ವಿಚಾರ!! ಹೀಗಾಗಿ ಆಗಾಗ ಕಾಂಗ್ರೆಸ್ಸಿನ ಕೆಲ ರಾಜಕಾರಣಿಗಳು ಪಾಕ್‍ನೊಂದಿಗೆ ಸೇರಿ ಅಥವಾ ಅವರನ್ನು ಹೊಗಳುವ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ವಿವಾದವನ್ನು ಸೃಷ್ಠಿ ಮಾಡುತ್ತಿದ್ದಾರೆ… “ವಿನಾಶ ಕಾಲೇ ವಿಪರೀತ ಬುದ್ಧಿ”!!

ಪವಿತ್ರ

Tags

Related Articles

Close