ಪ್ರಚಲಿತ

ಅಲ್ಪ ಸಂಖ್ಯಾತರಿಗೆ ಸಾಲ ಮನ್ನಾ ಭಾಗ್ಯ ಘೋಷಿಸಿದ ಕಾಂಗ್ರೆಸ್ ಅಧ್ಯಕ್ಷ! ಮುಸ್ಲಿಂರಿಗೆ ಸರಕಾರವೇ ಸಾಲ ನೀಡಬೇಕಂತೆ!

ಕಾಂಗ್ರೆಸ್ ಗೆ ಅದ್ಯಾವ ರೀತಿಯಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯಾಮೋಹವೋ ತಿಳಿಯುತ್ತಿಲ್ಲ. ಯಾಕೆಂದರೆ ದಿನದಿಂದ ದಿನಕ್ಕೆ ಒಂದೊಂದು ಹೊಸ ನಿರ್ಧಾರಗಳಿಂದ ಮುಸ್ಲೀಮರನ್ನು ಓಲೈಸುತ್ತಿರುವ ಕಾಂಗ್ರೆಸ್ ಗೆ ವೋಟ್ ಬ್ಯಾಂಕ್ ಒಂದೇ ಕಾರಣ. ಕೇವಲ ಚುನಾವಣೆಯಲ್ಲಿ ಮುಸ್ಲೀಮರ ಮತ ಗಳಿಸುವ ನಿಟ್ಟಿನಲ್ಲಿ ಓಲೈಕೆಮಾಡುತ್ತಿದ್ದು, ಸಂಪೂರ್ಣವಾಗಿ ಹಿಂದೂಗಳನ್ನು ಕಡೆಗಣಿಸಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಒಂದಲ್ಲ ಒಂದು ರೀತಿಯಲ್ಲಿ ಅಲ್ಪಸಂಖ್ಯಾತರನ್ನು ಓಲೈಸುತ್ತಲೇ ಇದೆ. ಈ ಹಿಂದೆ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರಿಗಾಗಿ ಶಾದಿ ಭಾಗ್ಯ ನಂತರದಲ್ಲಿ ಮತಾಂಧ ಟಿಪ್ಪು ಸುಲ್ತಾನ್ ನ ಜಯಂತಿ ಇದಾದ ಬಳಿಕ ಅಪರಾಧ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮುಸ್ಲೀಮರನ್ನು “ಮುಗ್ದ ಅಲ್ಪಸಂಖ್ಯಾತರು” ಎಂಬ ಒಕ್ಕಣೆ ನೀಡಿ ಜೈಲಿನಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ್ದರು. ಒಟ್ಟಾರೆಯಾಗಿ ಪ್ರತೀ ಬಾರಿಯೂ ಕೇವಲ ಮುಸ್ಲಿಂ ಎಂಬ ಕಾರಣಕ್ಕಾಗಿ ಅವರ ಪರವಾಗಿಯೇ ನಿಲ್ಲುವ ಸಿದ್ದರಾಮಯ್ಯ ಮತ್ತು
ಕಾಂಗ್ರೆಸ್ ಇದೀಗ ಮತ್ತೊಂದು ನಿರ್ಧಾರಕ್ಕೆ ಬಂದಿದೆ.

ಅಲ್ಪಸಂಖ್ಯಾತರ ಸಾಲ ಮನ್ನಾ..!

ರಾಜ್ಯದಲ್ಲಿ ಸಾಲ ಮಾಡಿ ತೀರಿಸಲಾಗದೆ ಅದೆಷ್ಟೋ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡು ಜೀವ ತೆತ್ತರು, ಆದರೆ ಸರಕಾರ ಯಾವುದೇ ಸ್ಪಂದನೆ ನೀಡಲಿಲ್ಲ. ರೈತರ ಸಾಲ ಮನ್ನಾ ಮಾಡುವಂತೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆಗಳು ನಡೆದವು. ಆದರೆ ಅದ್ಯಾವುದಕ್ಕೂ ಕ್ಯಾರೇ ಅನ್ನದ ಸಿಎಂ ಸಿದ್ದರಾಮಯ್ಯನವರು ಕೇವಲ ಅಲ್ಪಸಂಖ್ಯಾತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಾ ಇದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿ ಪರಮೇಶ್ವರ್ ಇದೀಗ ಅಲ್ಪಸಂಖ್ಯಾತರ ಓಲೈಕೆಗೆ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದು, ‘ರಾಜ್ಯದ ಅಲ್ಪಸಂಖ್ಯಾತರು ತೆಗೆದುಕೊಂಡ ಸಾಲವನ್ನು ಮರು ಪಾವತಿಸದಿದ್ದರೂ ಪರವಾಗಿಲ್ಲ, ಸರಕಾರವೇ ಎಲ್ಲವನ್ನೂ ನೋಡಿಕೊಳ್ಳುತ್ತದೆ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಹೌದು, ಇತ್ತೀಚೆಗೆ ಬೆಂಗಳೂರಿನಲ್ಲಿ ಕೇವಲ ಅಲ್ಪಸಂಖ್ಯಾತರಿಗಾಗಿ ಯೋಜನೆ ರೂಪಿಸಲು ನಡೆಸಿದ ಕಾರ್ಯಾಗಾರವೊಂದರಲ್ಲಿ ಮಾತನಾಡಿದ ಜಿ
ಪರಮೇಶ್ವರ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಪೋರೇಷನ್ ಇದುವರೆಗೂ ಸಣ್ಣ ಪ್ರಮಾಣದಲ್ಲಿ ಸಾಲ ನೀಡುತ್ತಿತ್ತು. ಆದರೆ ಇನ್ನು ಮುಂದೆ ಸಾಲದ ಪ್ರಮಾಣ ೫೦ ಲಕ್ಷದವರೆಗೆ ಆಗುತ್ತದೆ. ಒಂದು ವೇಳೆ ಈ ಸಾಲ ಮರುಪಾವತಿ ಆಗದಿದ್ದರೆ ರಾಜ್ಯ ಸರಕಾರವೇ ಸಾಲ ಮನ್ನಾ ಮಾಡುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಯಾರ್ದೋ ದುಡ್ಡು – ಎಲ್ಲಮ್ಮನ ಜಾತ್ರೆ ಎಂಬ ಮಾತಿನಂತೆ ಈ ಕಾಂಗ್ರೆಸ್ ಸರಕಾರ ರಾಜ್ಯದ ಜನತೆಯ ಹಣದಲ್ಲಿ ಕೇವಲ ಅಲ್ಪಸಂಖ್ಯಾತರನ್ನು ಸಾಕುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರ ನಾಟಕ ಜೋರಾಗಿದ್ದು, ಸರಕಾರಕ್ಕೆ ಸಾಲಗಾರರು ಟೋಪಿ ಹಾಕಲಿ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ನ ಈ ಎಲ್ಲಾ ಓಲೈಕೆ ರಾಜಕಾರಣಕ್ಕೂ ಮುಂದಿನ ಚುನಾವಣೆ ಪಾಠವಾಗುವುದು ಖಂಡಿತ.!

–ಅರ್ಜುನ್

Tags

Related Articles

Close