ಪ್ರಚಲಿತ

ಕಾಂಗ್ರೆಸ್ ದಿಗ್ಗಜರಿಗೇ ಕಾಂಗ್ರೆಸ್ ನಿಂದ ಶಾಕ್! ಬಿಜೆಪಿ ಮೇಲೆ ಗೂಬೆ ಕೂರಿಸಿದ್ದ ಪರಮೇಶ್ವರ್ ಉಲ್ಟಾ ಹೊಡೆದದ್ಯಾಕೆ?

ಕಾಂಗ್ರೆಸ್ ಪಕ್ಷದಲ್ಲಿ ನಾಯಕರನ್ನು ಪ್ರಶ್ನೆಮಾಡುವಂತಿಲ್ಲ ಎಂಬುವುದು ಮತ್ತೆ ಸಾಭೀತಾಗಿದೆ. ದಿನೇ ದಿನೇ ಕಾಂಗ್ರೆಸ್ ಪಕ್ಷದ ಒಳಜಗಳ ತಾರಕಕ್ಕೇರುತ್ತಿರುವುದು ಇದಕ್ಕೆ ಕಾರಣ ಆಗಿದೆ. ಅದರಲ್ಲೂ ಈಗ ಟಿಕೆಟ್ ಗಾಗಿ ಗುದ್ದಾಟ ಆರಂಭವಾಗಿದ್ದು ಮತ್ತೆ ಕದನ ಭುಗಿಲೇಳುವ ಸಾಧ್ಯತೆಗಳು ಗೋಚರಿಸುತ್ತಿದೆ.

ಸ್ವಪಕ್ಷದ ವಿರುದ್ಧವೇ ಸಿಡಿದೆದ್ದಿರು ಮಾಜಿ ಸಿಎಂ…

ಹೌದು. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪ ಮೂಯ್ಲಿ ಮತ್ತು ಅವರ ಮಗ ಹರ್ಷ ಮೊಯ್ಲಿ ಇತ್ತೀಚೆಗೆ ಹೂಸ ವಿವಾದದ ಸುಳಿಯಲ್ಲಿ ಸಿಕ್ಕಿ ವಿಲ ವಿಲ ಒದ್ದಾಡಿದ್ದರು. ತನ್ನದೇ ಪಕ್ಷದ ವಿರುದ್ಧ ಈ ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದರು. ಪಕ್ಷದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿ ಟ್ವೀಟ್ ಮಾಡಿದ್ದರು.

‘ಕಾಂಗ್ರೆಸ್ಸಿನಲ್ಲಿ ಕಂಟ್ರಾಕ್ಟರ್ ಗಳಿಗೆ ಟಿಕೆಟ್ ನೀಡಲಾಗುತ್ತಿದೆ. ಸಚಿವ ಮಹದೇವಪ್ಪ ಹೇಳಿದಂತೆಯೇ ಕಾಂಟ್ರಾಕ್ಟರ್ ಗಳು ಕೇಳಿದಂತೆ ಟಿಕೆಟ್ ಹಂಚಲಾಗುತ್ತಿದೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ’ ಎಂದು ಟ್ವೀಟ್ ಮಾಡಿದ್ದರು.

ಸಂಸದ ವೀರಪ್ಪ ಮೂಯ್ಲಿ ಹಾಗೂ ಅವರ ಮಗ ಹರ್ಷ ಮೂಯ್ಲಿ ಮಾಡಿದ್ದ ಈ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕರು ಈ ಅಪ್ಪ ಮಗನ ಮೇಲೆ ಮುಗಿ ಬಿದ್ದಿದ್ದರು. ನೋಡ ನೋಡುತ್ತಲೇ ರಾಷ್ಟ್ರದಾದ್ಯಂತ ಸುದ್ಧಿಯಾಗಿತ್ತು. ಕಾಂಗ್ರೆಸ್ ಅಕ್ಷರಃ ಬೆಚ್ಚಿ ಬಿದ್ದಿತ್ತು.

ಮೋದಿ ಪಾಸ್ ಎಂದ ಕಮಲ ಪಡೆಗಳು..!

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ಥ ಮೋದಿಯವರು ರಾಜ್ಯಕ್ಕೆ ಆಗಮಿಸಿದ್ದರು. ಮೋದಿ ಎರಡು ಬಾರಿ ಪಕ್ಷದ ಪ್ರಚಾರಕ್ಕೆ ಆಗಮಿಸಿದಾಗಲೂ ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ 10% ಮುಖ್ಯಮಂತ್ರಿ ಎಂದು ನಾನು ಹೇಳಿದ್ದೆ. ಆದರೆ ಇದು ಕೆಲ ಯುವಕರಿಗೆ ಬೇಜಾರಾಗಿತ್ತು. ಸಿಎಂ ಬಹಳ ಭ್ರಷ್ಟಾಚಾರವನ್ನು ನಡೆಸಿದ್ದಾರೆ, ಈ ಸರ್ಟಿಫಿಕೇಟ್ ಸಾಕಾಗಲ್ಲ ಎಂದು ಹೇಳಿದ್ದರು. ಹೀಗಾಗಿ ಈ ಬಾರಿ ನಾನು ಹೇಳ್ತಾ ಇದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ 10% ಮಾತ್ರ ಅಲ್ಲ ಅದು ಅದಕ್ಕಿಂತಲೂ ಹೆಚ್ಚು ಲೂಟಿ ಮಾಡುವ ಸರ್ಕಾರ. ಅವರು ಸಿದ್ದರಾಮಯ್ಯ ಅಲ್ಲ, ಅವರು ಸೀದಾರೂಪಾಯ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದರು.

ಇದು ಮೂಯ್ಲಿ ಹಾಗೂ ಅವರ ಪುತ್ರನ ಟ್ವೀಟಿನಿಂದ ಬಯಲಾಗಿದ್ದು ಮೋದಿ ಹೇಳಿದ್ದು ಸತ್ಯವಾಗಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ
ಕಮಿಷನ್ ಕೋರ ಮುಖ್ಯಮಂತ್ರಿ ಎಂದು ಮೋದಿ ಹೇಳಿದ್ದು ಸತ್ಯವಾಗಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕರು ಹೇಳಿದ್ದರು. ಇದು ಕಾಂಗ್ರೆಸ್ ನಾಯಕರಿಗೆ ಭಾರೀ ಮುಜುಗರವನ್ನೇ ತಂದಿಟ್ಟಿತ್ತು.

ನಾನವನಲ್ಲ ನಾನವನಲ್ಲ ಎಂದ ಅಪ್ಪ ಮಗ…

ಈ ಸುದ್ಧಿ ಭಾರೀ ಆಕ್ರೋಷಕ್ಕೆ ಕಾರಣವಾಗುತ್ತಿದ್ದಂತೆ ಟ್ವೀಟ್ ಮಾಡಿದ್ದು ನಾವಲ್ಲ ಎದು ಹೇಳಿದ್ದಾರೆ. ನಮ್ಮ ಟ್ವಟರ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಇಂತಹಾ ಟ್ವೀಟನ್ನು ನಾವು ಮಾಡೋದಿಲ್ಲ. ಪಕ್ಷದ ಆಂತರಿಕ ಭದ್ರತೆಗೆ ಭಿನ್ನತೆ ತರುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದರು.

ಕೆಪಿಸಿಸಿ ಅಧ್ಯಕ್ಷರೂ ಈ ಬಗ್ಗೆ ಸಮಜಾಯಿಷಿ ನೀಡಿದ್ದು ಇದು ಬಿಜೆಪಿಗರು ಹ್ಯಾಕ್ ಮಾಡಿದ್ದು ಎಂದು ನೇರವಾಗಿ ಭಾರತೀಯ ಜನತಾ ಪಕ್ಷದ ಮೇಲೆ ಆರೋಪ ಮಾಡಿದ್ದರು.

ನೋಟೀಸ್ ಜಾರಿ ಮಾಡಿದ ಕೆಪಿಸಿಸಿ..!

ಮೂಯ್ಲಿ ಹಾಗೂ ಅವರ ಪುತ್ರ ಇಂತಹ ಟ್ವೀಟನ್ನು ಮಾಡಿಲ್ಲ. ಅದನ್ನು ಬಿಜೆಪಿಗರು ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಈಗ ಧಿಢೀರ್ ನೋಟೀಸ್ ಜಾರಿ ಮಾಡಿದ್ದಾರೆ. ಪಕ್ಷದ ಆಂತರಿಕ ಧಕ್ಕೆ ಆಗಿದೆ ಎಂದಿರುವ ಕೆಪಿಸಿಸಿ ಮೂಯ್ಲಿ ಪುತ್ರ ಹರ್ಷ ಮೂಯ್ಲಿಗೆ ನೋಟೀಸ್ ಜಾರಿ ಮಾಡಿದೆ. ‘ನೀವು ಮಾಡಿರುವ ಟ್ವೀಟ್ ಪಕ್ಷದ ಆಂತರಿಕ ಬಿನ್ನತೆಗೆ ದಕ್ಕೆಯಾಗಿದೆ. ನೀವು ಈ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ನೋಟೀಸ್ ಜಾರಿ ಮಾಡಿದೆ.

ಮೂಯ್ಲಿಗಿಲ್ಲ ನೋಟೀಸ್…

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪ ಮೂಯ್ಲಿ ಅವರ ಪುತ್ರ ಹರ್ಷ ಮೂಯ್ಲಿಗೆ ನೋಟೀಸ್ ಜಾರಿ ಮಾಡಿರುವ ಕಾಂಗ್ರೆಸ್ ವೀರಪ್ಪ ಮೂಯ್ಲಿಗೆ ನೋಟೀಸ್ ಜಾರಿ ಮಾಡಿಲ್ಲ. ಅವರು ಮಾಜಿ ಮುಖ್ಯಮುಂತ್ರಿ ಅಥವಾ ಕಾಂಗ್ರೆಸ್ ಹೈಕಮಾಂಡ್ ಎಂಬ ಭಯವೋ ಅಥವಾ ಮುಂದೆ ಸರ್ಕಾರ ರಚಿಸಲು ಮೂಯ್ಲಿಯ ಸಹಕಾರ ಬೇಕಾಗಬಹುದು ಎಂಬ ಗೊಂದಲವೋ ಗೊತ್ತಿಲ್ಲ.

ಒಟ್ಟಾರೆ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಈಗ ಸ್ಪೋಟಗೊಂಡಿದ್ದು ಕಮಿಷನ್ ವ್ಯವಹಾರವೂ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇಂತಹ ಅನೇಕ ವಿಚಾರಗಳು ಕಾಂಗ್ರೆಸ್ಸಿನಲ್ಲಿ ಉಳಿದುಕೊಂಡಿದ್ದು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಒಂದೊಂದೇ ಸ್ಪೋಟಗೊಳ್ಳುವ ಲಕ್ಷಣಗಳೂ ಗೋಚರಿಸುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close