ಪ್ರಚಲಿತ

ಧರ್ಮ ವಿಭಜನೆಗೆ ಸಚಿವ ಸಂಪುಟದಲ್ಲೇ ಭುಗಿಲೆದ್ದ ಭಿನ್ನಮತ! ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು!

ಸಿದ್ದರಾಮಯ್ಯನವರ ಆಡಳಿತದಲ್ಲಿ ಕರ್ನಾಟಕ ನಾಶವಾಗುವ ಎಲ್ಲಾ ಘಟನೆಗಳು ನಡೆದು ಹೋಯಿತು. ಇಡೀ ಕರ್ನಾಟಕವೇ ಹೊತ್ತಿ ಉರಿಯುವಂತೆ ಮಾಡುವ ಸಿದ್ದರಾಮಯ್ಯನವರ ತಂತ್ರವೂ ಸದ್ಯ ಫಲಿಸಿದಂತಿದೆ‌. ಯಾಕೆಂದರೆ ಇಡೀ ರಾಜ್ಯವೇ ವಿರೋಧ ವ್ಯಕ್ತಪಡಿಸಿದರು , ತಮ್ಮ ರಾಜಕೀಯ ಲಾಭಕ್ಕಾಗಿ ಹಿಂದೂ ಧರ್ಮವನ್ನು ಒಡೆದು ಇಬ್ಬಾಗ ಮಾಡಿದ ಸಿದ್ದರಾಮಯ್ಯನವರು, ಲಿಂಗಾಯತ ಮತ್ತು ವೀರಶೈವ ಧರ್ಮ ಎಂದು ಕೊನೆಗೂ ಪ್ರತ್ಯೇಕಿಸಿಬಿಟ್ಟರು.

ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಬಿಟ್ಟರೆ ಮಾತ್ರ ಸರಕಾರದ ವತಿಯಿಂದ ವಿಶೇಷ ಸವಲತ್ತುಗಳನ್ನು ನೀಡಲು ಸಾಧ್ಯ ಎಂದು ಕಡ್ಡಿ ಮುರಿದಂತೆ ಹೇಳಿದ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ಕಿಚ್ಚು ಹಚ್ಚಿ ತಾವು ಖುಷಿ ಪಡುತ್ತಿದ್ದಾರೆ.

ಈಗಾಗಲೇ ಮುಸ್ಲೀಮರ ಹಿಂದೆ ಬಿದ್ದಿರುವ ಸಿದ್ದರಾಮಯ್ಯನವರು ಸಂಪೂರ್ಣವಾಗಿ ಹಿಂದೂಗಳನ್ನು ಕಡೆಗಣಿಸಿದ್ದಾರೆ ಎಂಬುವುದು ರಾಜ್ಯದ ಜನತೆಗೆ ತಿಳಿದ ವಿಚಾರ. ಆದರೆ ಇದೀಗ ನೇರವಾಗಿ ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ಹಿಂದೂ ಧರ್ಮವನ್ನು ಒಡೆದು ಹಾಕಿ , ಚುನಾವಣಾ ಹೊಸ್ತಿಲಲ್ಲೇ ಹಿಂದೂಗಳ ವಿರುದ್ಧ ನಡೆದುಕೊಂಡಿದ್ದಾರೆ‌.

ಪ್ರತ್ಯೇಕಗೊಂಡ ಧರ್ಮಗಳಿಗೆ ಅಲ್ಪಸಂಖ್ಯಾತ ಮಾನ್ಯತೆ..!

ಕೇವಲ ಸರಕಾರದ ಸವಲತ್ತು ಪಡೆಯುವ ದೃಷ್ಟಿಯಿಂದ ಹಿಂದೂ ಧರ್ಮದಿಂದ ವಿಭಜನೆಗೊಂಡ ಲಿಂಗಾಯತ ಮತ್ತು ವೀರಶೈವ ಸಮುದಾಯ ಸದ್ಯ ಅಲ್ಪಸಂಖ್ಯಾತ ಮಾನ್ಯತೆ ಪಡೆದಿದೆ. ಅದರಲ್ಲೂ ಹಲವಾರು ನಿಬಂಧನೆಗಳನ್ನು ಹಾಕಿರುವ ರಾಜ್ಯ ಸರಕಾರ, ಸಂಪೂರ್ಣವಾಗಿ ಹಿಂದೂ ಧರ್ಮದ ಆಚರಣೆಗಳನ್ನು ಬಿಟ್ಟು ಬಿಡಬೇಕೆಂದು ಸೂಚನೆ ನೀಡಿದೆ. ಅಲ್ಪಸಂಖ್ಯಾತರ ಮಾನ್ಯತೆ ಪಡೆಯಬೇಕಾದರೆ ಹಿಂದೂ ಧರ್ಮದಿಂದ ಹೊರ ಬರಬೇಕು. ಹಿಂದೂ ಧರ್ಮದಿಂದ ಹೊರ ಬಂದರೆ ಮಾತ್ರ ಸರಕಾರದ ಸವಲತ್ತುಗಳನ್ನು ಪಡೆಯಬಹುದು ಎಂಬ ಸಂದೇಶ ನೀಡಿದ್ದಾರೆ.

ಸಿಎಂ ಗೆ ಕಾಗೋಡು ಪ್ರಶ್ನೆ..!

ಧರ್ಮ ವಿಭಜನೆ ಮಾಡುವ ಮೂಲಕ ರಾಜ್ಯದಲ್ಲಿ ಕಿಚ್ಚು ಹಚ್ಚಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಸಚಿವ ಸಂಪುಟದಲ್ಲೇ ಭಾರೀ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ , ‘ಈಡಿಗ ಸಮಾಜವನ್ನೂ ಪ್ರತ್ಯೇಕ ಧರ್ಮ ಎಂದು ವಿಭಜನೆ ಮಾಡುತ್ತೀರಾ? ಹಿಂದೂ ಧರ್ಮವನ್ನು ವಿಭಜಿಸುವ ಮೂರ್ಖತನದ ಕೆಲಸ ನಿಮಗೇಕೆ ಬೇಕಿತ್ತು.? ಎಂದು ನೇರವಾಗಿ ಸಿದ್ದರಾಮಯ್ಯನವರಿಗೆ ಪ್ರಶ್ನಿಸಿದ್ದಾರೆ. ಈ ಮೂಲಕ ತಮ್ಮ ಲಾಭ ಗಳಿಸುವ ತಂತ್ರ ಹೂಡಿದ್ದ ಸಿದ್ದರಾಮಯ್ಯನವರಿಗೆ ತಮ್ಮ ಸಂಪುಟದಲ್ಲೇ ವಿರೋಧ ವ್ಯಕ್ತವಾಗಿದ್ದು , ಈ ವಿಚಾರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.!

ಮುಖ್ಯಮಂತ್ರಿಗಳಿಗೆ ಎಚ್ಚರಿಸಿದ ಮುಸ್ಲಿಂಮರು..!

ಅಲ್ಪಸಂಖ್ಯಾತರ ಸವಲತ್ತುಗಳನ್ನು ಪಡೆಯುವ ದೃಷ್ಟಿಯಿಂದ ಲಿಂಗಾಯತ ಮತ್ತು ವೀರಶೈವ ಧರ್ಮಗಳನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿ ರಾಜಕೀಯ ಲಾಭ ಗಳಿಸುವ ಹುನ್ನಾರ ನಡೆಸಿರುವ ಸಿದ್ದರಾಮಯ್ಯನವರಿಗೆ ಇದೀಗ ರಾಜ್ಯ ಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಹಾಗೂ ಶಾಸಕ ರೋಷಣ್ ಬೇಗ್ ಎಚ್ಚರಿಕೆ ನೀಡಿದ್ದಾರೆ. ಅಲ್ಪಸಂಖ್ಯಾತ ಎಂಬ ವಿಚಾರಕ್ಕಾಗಿ ರಾಜ್ಯದಲ್ಲಿ ಗಲಾಟೆಗಳು ನಡೆಯುತ್ತಿದೆ. ಈ ಘಟನೆಯಿಂದ ಮುಸ್ಲೀಮರಿಗೆ ತೊಂದರೆ ಉಂಟಾಗದಂತೆ ಸರಕಾರವೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ತಂತ್ರ ಹೂಡಿದ ಸಿದ್ದರಾಮಯ್ಯ, ಹಿಂದೂ ವಿರೋಧಿ ಎಂಬುವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ. ಆದರೆ ಇದು ಕೇವಲ ರಾಜಕೀಯ ಲಾಭ ಗಳಿಸುವ ಹುನ್ನಾರವೇ ಆಗಿದ್ದರೂ , ಸಿದ್ದರಾಮಯ್ಯನವರಿಗೆ ಮುಸ್ಲಿಂ ನಾಯಕರು ನೀಡಿದ
ಎಚ್ಚರಿಕೆ ಸದ್ಯ ಸಿದ್ದರಾಮಯ್ಯನವರಿಗೆ ಭಾರೀ ತಲೆನೋವಾಗಿದೆ.!

-ಅರ್ಜುನ್

Tags

Related Articles

Close