ಪ್ರಚಲಿತ

ದೇಶದಲ್ಲಿ ಒಡಕು ಬಿತ್ತುವ ಪ್ರಣಾಳಿಕೆ ಕೈ ಪಕ್ಷದ್ದು: ರಾಜನಾಥ್ ಸಿಂಗ್

ಜಾತಿ ರಾಜಕೀಯ, ಒಡೆದು ಆಳುವ ನೀತಿಯ ಮೂಲಕ ಸಮಾಜದಲ್ಲಿ ವಿಭಜನೆ ತರುವ ಪ್ರಯತ್ನ, ಓಟ್‌ ಬ್ಯಾಂಕ್‌ಗಾಗಿ ಇನ್ನಿಲ್ಲದ ನಾಟಕಗಳನ್ನು ಮಾಡುವ ಕಾಂಗ್ರೆಸ್ ಪಕ್ಷವೆಂದರೆ ದೇಶದ ಹೆಚ್ಚಿನ ಜನರಿಗೆ ಅಲರ್ಜಿ ಎನ್ನಬಹುದು.

ಈ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಮರುಳು ಮಾಡಿ ಮತ ಪಡೆಯುವುದು, ಬಳಿಕ ಅವರ ಅಂದರೆ ದೇಶದ ಸಂಪತ್ತನ್ನು ದೋಚುವ ಹುನ್ನಾರವನ್ನು ಸಹ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಪಕ್ಷದ ಇಂತಹ ದುರ್ಬುದ್ಧಿಯ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜ ನಾಥ ಸಿಂಗ್ ಅವರು ವಾಗ್ದಾಳಿ ನಡೆಸಿದ್ದಾರೆ.

ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಸಂಪತ್ತು ಪುನರ್ ವಿಂಗಡಣಾ ವಿವಾದ ಗಗನಕ್ಕೇರಿದೆ. ಇದರ ಜೊತೆಗೆ ರಾಜನಾಥ್ ಸಿಂಗ್ ಅವರು ಕೈ ಪಕ್ಷದ ವಿರುದ್ಧ ಮತ್ತೊಂದು ಬಾಂಬ್ ಹಾಕಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ದೇಶವನ್ನು ಆಗಿದ್ದ ಕಾಂಗ್ರೆಸ್ ಪಕ್ಷ ಧರ್ಮದ ಆಧಾರದಲ್ಲಿ ಧಾರ್ಮಿಕ ಜನಗಣತಿ ನಡೆಸಲು ಮುಂದಾಗಿತ್ತು. ಆ ಮೂಲಕ ಸಶಸ್ತ್ರ ಪಡೆಗಳನ್ನು ವಿಭಜನೆ ಮಾಡಲು ಹುನ್ನಾರ ನಡೆಸಿತ್ತು ಎಂದು ಅವರು ಕೈ ಪಕ್ಷದ ವಿರುದ್ಧ ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವು 2006 ರಲ್ಲಿ ಸಾಚಾರ್ ಸಮಿತಿ ಎನ್ನುವ ಸಮಿತಿಯೊಂದನ್ನು ರಚನೆ ಮಾಡಿತ್ತು. ಈ ಸಮಿತಿಯ ಮೂಲಕ ಸಶಸ್ತ್ರ ಪಡೆಗಳಲ್ಲಿಯೂ ಧರ್ಮದ ಆಧಾರದಲ್ಲಿ ಜನಗಣತಿ ನಡೆಸಲು ಶಿಫಾರಸು ಮಾಡಿತ್ತು. ಹಾಗೆಯೇ ಈ ಲೋಕಸಭಾ ಚುನಾವಣೆಯಲ್ಲಿ ಜಯ ಸಿಕ್ಕಲ್ಲಿ ಅಲ್ಪಸಂಖ್ಯಾತ ವರ್ಗಗಳಿಗೆ ಮೀಸಲಾತಿ‌‌ ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಅದರಂತೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದಲ್ಲಿ ಮತ್ತು ಸಶಸ್ತ್ರ ಪಡೆಗಳಲ್ಲಿ ಧರ್ಮಾಧಾರಿತ ಜಾತಿ ಗಣತಿ ಕೈಗೊಂಡರೆ ಅದು ದೇಶದ ಏಕತೆ ಮತ್ತು ಸಮಗ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ನುಡಿದಿದ್ದಾರೆ.

ಕೈ ಪಕ್ಷ ಧರ್ಮದ ಆಧಾರದಲ್ಲಿ ಮೀಸಲಾತಿ ತರಲು ಯತ್ನಿಸುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿ,‌ ನಿಜ ಬಣ್ಣ ಬಯಲು ಮಾಡುತ್ತಿದೆ. ಇದು ಅವರ ತುಷ್ಟೀಕರಣ ರಾಜಕೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಒಡಕು ಮೂಡಿಸುವ ಹಾಗಿರುವ ಪ್ರಣಾಳಿಕೆಯನ್ನು ಕಾಂಗ್ರೆಸ್ ದೇಶದ ಜನರ ಮುಂದೆ ಇರಿಸಿದೆ. ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದಿದ್ದು ಸಹ ಕಾಂಗ್ರೆಸ್ ಪಕ್ಷವೇ. ತುಷ್ಟೀಕರಣ ಎನ್ನುವುದು ಕಾಂಗ್ರೆಸ್ ಪಕ್ಷದ ಡಿಎನ್‌ಎಯಲ್ಲೇ ಇದೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close